

ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಕೃತಜ್ಞತೆಯನ್ನು ಸಲ್ಲಿಸುವ ಅರ್ಥಪೂರ್ಣವಾದ “ವ್ಯಾಸಪೂರ್ಣಿಮೆ” (ಗುರುಪೂರ್ಣಿಮೆ) ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟರಾಮ್ ಭಟ್ ರವರು ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮಾತನಾಡುತ್ತಾ, ಮಕ್ಕಳು ಸರಿಯಾದ ವ್ಯಕ್ತಿಗಳ ಜೊತೆ ಇರಬೇಕು. ಅವರು ಬೇರೆ ಯಾರೂ ಅಲ್ಲಾ ನಮ್ಮ ಗುರುಗಳು, ಹಾಗೂ ತಂದೆತಾಯಿಗಳು. ಮಕ್ಕಳಲ್ಲಿ ಸಂಸ್ಕತಿ ಬಹಳ ಮುಖ್ಯ. ಈಗ ನಾವು ಸಂಸ್ಕೃತಿಯನ್ನು ಮೊಬೈಲ್ ನಿಂದ ಕಲಿಯುವ ಕಾಲ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತುಳಸಿ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀಯುತ ಕೃಷ್ಣರಾಯ ಶಾನುಬಾಗ್ ರವರು ಮಾತನಾಡಿ ಜ್ಞಾನವನ್ನು ಕೊಡುವವರು ಗುರುಗಳು. ಗುರುವಿನ ಗುಣವನ್ನು ಹೊಂದಿದವನೇ ನಿಜವಾದ ಗುರು ಎಂದು ಮಕ್ಕಳಿಗೆ ಗುರುವಿನ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ರೇಷ್ಮ ಪ್ರದೀಪ್ ಉಪಸ್ಥಿತರಿದ್ದರು.
ತದನಂತರ ಶಾಲಾ ವಿದ್ಯಾರ್ಥಿಗಳು ಗುರುಸ್ತುತಿ ಹಾಗು ಗುರುವಿನ ಮಹತ್ವ ಸಾರುವ ಹಾಡನ್ನು ಹಾಡಿ ಗುರು ನಮನವನ್ನು ಸಲ್ಲಿಸಿದರು.
ಹಿರಿಯ ಶಿಕ್ಷಕಿ ಶ್ರೀಮತಿ ಜಯಶೀಲ ಸ್ವಾಗತಿಸಿದರು. ಎಂಟನೇ ತರಗತಿ ವಿದ್ಯಾರ್ಥಿನಿ ಪ್ರಣೀತ ಕೇಶವ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಕ್ಷರ್ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕವೃಂದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





