

ಶ್ರೀನಿವಾಸಪುರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ಸರಬರಾಜು ಮಾಡುತ್ತಿರುವ ಕೆಸಿ ವ್ಯಾಲಿ ಮತ್ತು ಎಚ್ಚೆನ್ ವ್ಯಾಲಿ ನೀರು ಕಲುಷಿತವಾಗಿದೆ.ಕೊಳಚೆ ನೀರನ್ನು ಸಂಸ್ಕರಿಸಿ ಕುಡಿಯುವ ಶುದ್ಧ ನೀರಾಗಿ ಮಾಡಿಸುವ ತಂತ್ರಜ್ಞಾನ ಇಂಡಿಯಾ ಅಲ್ಲಾ ವಿಶ್ವದ ಯಾವ ದೇಶದಲ್ಲೂ ಇಲ್ಲ.ಆದರೂ ನಮ್ಮ ರಾಜ್ಯ ಸರ್ಕಾರ-ಅದನ್ನು ಶುದ್ಧ ನೀರು ಎಂದು ಕೆರೆಗಳಿಗೆ ಸರಬರಾಜು ಮಾಡುವ ಮೂಲಕ ರೈತರಿಗೆ ಮಂಕು ಬೂದಿ ಎರಚುತ್ತಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ತಾಲ್ಲೂಕಿನ ಪುಂಗನೂರು ಕ್ರಾಸ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಡಿಜಿಟಲ್ ಸದಸ್ಯತ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಕೊಳಚೆ ನೀರನ್ನು ಬಳಸಿ ಬೆಳೆದೆ ಅವಿಭಜಿತ ಕೋಲಾರ ಜಿಲ್ಲೆಯ ಹಣ್ಣು ಮತ್ತು ತರಕಾರಿಯನ್ನು ಬೆಂಗಳೂರಿಗರು ಖರೀದಿ ಮಾಡುತ್ತಿಲ್ಲ.ಇವು ತಿರಸ್ಕೃತವಾಗುತ್ತಿರುವುದರಿಂದಲೇ ಈ ಭಾಗದ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ನುಡಿದರು.
ಇಂತಹ ದುಸ್ಥಿತಿಯನ್ನು ಹೋಗಲಾಡಿಸಲು ಜೆಡಿಎಸ್ ಗಂಭೀರ ಚಿಂತನೆಯನ್ನು ಮಾಡಿ ಮುಂದಿನ ದಿನಗಳಲ್ಲಿ ಶಾಶ್ವತವಾದ ನೀರಾವರಿ ಸೌಲಭ್ಯವನ್ನು ಒದಗಿಸಿಕೊಡಲಿದೆ. ಜೆಡಿಎಸ್ ಕೇವಲ ವೇದಿಕೆ ಭರವಸೆ ನೀಡದೆ,ನೀಡಿದ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರವನ್ನು ಒದಗಿಸಿಕೊಡುತ್ತದೆ ಎಂಬುದಕ್ಕೆ ಕುಮಾರಣ್ಣ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದೇ ಸಾಕ್ಷಿ ಎಂದರು.
2028ಕ್ಕೆ ಎನ್ಡಿಎ ಮೈತ್ರಿಕೂಟದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ.ಆದ್ದರಿಂದ ದೇಶಕ್ಕೆ ಮೋದಿ ರಾಜ್ಯಕ್ಕೆ ಕುಮಾರಣ್ಣ ಎಂಬ ಘೋಷ ವಾಕ್ಯದೊಂದಿಗೆ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ನಿಷ್ಠೆಯಿಂದ ಮಾಡಬೇಕೆಂದರು.ಹಳ್ಳಿಗಳಿಗೆ ತೆರಳಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಹಗರಣಗಳ ಬಗ್ಗೆ ತಿಳಿಸಬೇಕು.ಸಂಘಟನೆ ಸುಲಭದ ಮಾತಲ್ಲ.ಬದ್ಧತೆ ಮತ್ತು ಸಾಮಾಜಿಕ ಕಾಳಜಿಬೇಕು. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಕಿವಿಮಾತು ಹೇಳಿದರು.
ಶಾಸಕ ಜಿ ಕೆ ವೆಂಕಟಶಿವಾರೆಡ್ಡಿ ರವರು ಮಾತನಾಡಿ ರಾಜ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಪ್ರವಾಸಕೈಗೊಂಡು ಗ್ರಾಮ.ಪಂಚಾಯತಿ,ತಾಲೂಕು ಪಂಚಾಯಿತಿ,ಜಿಲ್ಲಾ ಪಂಚಾಯತಿ ಚುನಾವಣೆ ವೇಳೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಾಡಿರುವ ಕೆಲಸಗಳನ್ನು ತಲುಪಿಸಬೇಕು.ಅವರ ಕೆಲಸ ಕಾರ್ಯ ನಮಗೆ ಶ್ರೀರಕ್ಷೆಯಾಗಿದೆ.ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಯಾವುದೇ ಅನುದಾನಗಳು ನೀಡುತ್ತಿಲ್ಲಾ ಬರುವ ಶಾಸಕರ ಅನುದಾನ ಗ್ರಾಮೀಣ ಬಾಗದ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಗಳ ಕಾಲೋನಿಗಳ ಅಭಿರುದ್ದಿಗೆ ಮೂಲಭೂತ ಸೌಲಭ್ಯಗಳಿಗೆ ಅನುದಾನ ನೀಡಿದ್ದೇನೆ. ಈ ಕ್ಷೇತ್ರದ ಮಾಜಿ ಶಾಸಕರ ಮಾತು ಕೇಳಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಎಲ್ಲಾ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ರಸ್ತೆಗಳಿಗೆ ಸ್ಟೇ ತಂದಿದ್ದಾರೆ ದಯವಿಟ್ಟು ನಾನು ಈ ರೀತಿ ಯಾವಾಗಲೂ ಯಾರಿಗೂ ತೊಂದರೆ ಮಾಡಿಲ್ಲಾ ವೆಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ರಾಜಕೀಯ ಭವಿಷ್ಯದ ಕುರಿತು ಮಾತನಾಡಿ ನನ್ನ ಕಂಠದಲ್ಲಿ ಉಸಿರಿರುವ ತನಕ ನಾನು ರಾಜಕೀಯ ನಿವೃತ್ತಿ ಪಡೆಯುವುದಿಲ್ಲವೆಂದು ತಿಳಿಸಿದರು.
ಇನ್ನೂ ಕಾರ್ಯಕ್ರಮಕ್ಕೆ ಮುನ್ನ ಚಿಂತಾಮಣಿ ಮೂಲಕ ಶ್ರೀನಿವಾಸಪುರ ತಾಲ್ಲೂಕಿನ ಕೊಲ್ಲೂರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಕ್ರೇನ್ ಮೂಲಕ ಹೂವಿನ ಹಾರ ಹಾಕಿ, ಹೂವಿನ ಮಳೆ ಸುರಿಸಿ ಬೈಕ್ ರ್ಯಾಲಿ ಹಿಂಭಾಗದಲ್ಲಿ ತೆರೆದ ವಾಹನದಲ್ಲಿ ಪಟ್ಟಣದ ಎಂ ಜಿ ರಸ್ತೆಯ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್ ಮಲ್ಲೇಶ್ ಬಾಬು, .ಇಂಚರ ಗೋವಿಂದರಾಜು,ಚಿಂತಾಮಣಿ ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ,ತೂಪಲ್ಲಿ ಚೌಡರೆಡ್ಡಿ,ಸಿ ಎಂ ಆರ್
ಶ್ರೀನಾಥ್,ತೂಪಲ್ಲಿ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣರೆಡ್ಡಿ, ಸದ್ಯಸ ಗೊಟ್ಟುಗುಂಟೆ ಕೃಷ್ಣಾರೆಡ್ಡಿ, ಆರಿಕುಂಟೆಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ರೆಡ್ಡಿ. ಎಸ್ಎಲ್ ಎನ್ ಮಂಜು, ಗಾಯತ್ರಿಮುತ್ತಪ್ಪ, ಬಿ ವಿ ಶಿವಾರೆಡ್ಡಿ,ತೂಪಲ್ಲಿ ಮಧು ಸೇರಿ ಹಲವು ಮುಖಂಡರು ಹಾಜರಿದ್ದರು.

