

ಶ್ರೀನಿವಾಸಪುರ : ಈಗಾಗಲೇ ಕೇಂದ್ರ, ರಾಜ್ಯ ಸರ್ಕಾರದ ಸಹಮತದೊಂದಿಗೆ 4 ರೂ ಬೆಂಬಲ ಬೆಲೆ ನೀಡಿದ್ದು, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಮಾರುಕಟ್ಟೆಯಲ್ಲಿ ಮಾವಿನ ಬೆಲೆಯು ಏತಕ್ಕಾಗಿ ಕುಸಿದಿದೆ ಎಷ್ಟು ಉತ್ಪಾದನೆ ಆಗಿದೆ, ಎಷ್ಟು ಪೂರೈಕೆ ಆಗಿದೆ ಎಂಬುದನ್ನ ಕುಲಂಕುಶವಾಗಿ ಪರಿಶೀಲಿಸಬೇಕಾಗಿತ್ತು. ಎಂದು ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮರಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೆಪಿಆರ್ಎಸ್ವತಿಯಿಂದ ಮಾವು ಬೆಳೆಯ ವಿಚಾರವಾಗಿ ನಡೆದ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಬೇಡಿಕೆ, ಉತ್ಪಾದನೆಯ ಬಗ್ಗೆ ವ್ಯಾಪಾರಸ್ಥರು ಪರಿಶೀಲಿಸಬೇಕಿದೆ. ಈ ಭಾಗದಲ್ಲಿ ಅಕಾಲಿಕ ಮಳೆಯಿಂದ ಉತ್ಪಾದನೆ ಕಡಿಮೆಯಾಗಿದೆ. ಹೆಚ್ಚಾಗಿ ತೋತಾಪುರಿ ಮಾವಿನ ಹಣ್ಣು ಪಲ್ಪುಗೆ ಹೋಗುತ್ತದೆ . ಪಲ್ಪುಗೆ ಬೇರೆ ದೇಶಗಳಲ್ಲಿ ಬೇಡಿಕೆ ಕಡಿಮೆಯಾಗಿದೆಯೇ ಎಂಬುದನ್ನು ಅವಲೋಕಿಸಬೇಕಿದೆ.
ಈ ಸಮಸ್ಯೆ ನಮ್ಮ ರಾಜ್ಯ ಸೇರಿದಂತೆ ಆಂದ್ರ, ತಮಿಳುನಾಡಯ ರಾಜ್ಯಗಳಲ್ಲಿ ಇದ್ದು. ದೇಶದಲ್ಲಿನ ಮಾವು ಒಮ್ಮೆಲೆ ಮಾರುಕಟ್ಟೆಗೆ ಬಂದಿದೆ. ಇದರಿಂದ ಸಮಸ್ಯೆ ಉಂಟಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಹವಮಾನ ವೈರೀತ್ಯದಿಂದ ಮಾವು ಬೆಳೆಗಳಿಗೆ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಕೇವಲ ನಾಲ್ಕೈದು ಪಲ್ಪು ಕೈಗಾರಿಕೆಗಳು ಇದೆ ಆದರೆ ನೆರೆಯ ಚಿತ್ತೂರಿನಲ್ಲಿ 40 ಪಲ್ಪು ಕೈಗಾರಿಕೆಗಳು ಇವೆಯಂತೆ ಯಾವುದೇ ಏನೆಂದರೆ ಸರ್ಕಾರ ಮಾವು ಬೆಳೆಗಾರರಿಗೆ ಶಾಶ್ವತ ಪರಿಹಾರವಾಗಿ ಕಂಡುಕೊಳ್ಳಬೇಕಿದೆ.
ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ನವೀನ್ಕುಮಾರ್, ಸಂಚಾಲಕರಾದ ಬೈರಾರೆಡ್ಡಿ, ಈರಪ್ಪರೆಡ್ಡಿ, ಶ್ರೀರಾಮರೆಡ್ಡಿ, ಚಂಗಪ್ಪ, ಆರ್.ವೆಂಕಟೇಶ್ ಇದ್ದರು.

