

ಶ್ರೀನಿವಾಸಪುರ : ಯುವಕರು ಪೋನ್ ಬಳಕೆಯಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದ್ದು, ಯುವಕರು ದುಶ್ಟಗಳಿಂದ ದೂರ ಇದ್ದು ನಿಮ್ಮ ತಂದೆತಾಯಿಯ ಆಶಯದಂತೆ ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆದು ಅವರ ಕನಸು ನನಸು ಮಾಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಕರೆ ನೀಡಿದರು.
ತಾಲೂಕಿನ ರೋಣೂರು ಕ್ರಾಸ್ನ ವಿಐಪಿ ಶಾಲೆಯಲ್ಲಿ ಗುರುವಾರ ಮಾದಕ ದ್ರವ್ಯ ವಸ್ತು ವಿರೋಧಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
112ಗೆ ಪೋನ್ ಮಾಡಿದರೆ ನೀವು ಯಾವ ಜಾಗದಲ್ಲಿ ತೊಂದರೆ ಒಳಪಟ್ಟಿದ್ದೀರಿ ಅಲ್ಲಿನ ಲೊಕೇಶನ್ ಪತ್ತೆ ಹಚ್ಚಿ ನಿಮಗೆ ನಮ್ಮ ಇಲಾಖೆಯಿಂದ ಸಹಾಯ ಮಾಡುತ್ತದೆ. ಗಾಂಜ ವೆಸನೆಗಳು ಕಂಡು ಬಂದರೆ ತಕ್ಷಣವೇ ನಮಗೆ ತಿಳಿಸಿದಾಗ ನಾವು ಕಾರ್ಯಪ್ರವತ್ತರಾಗುತ್ತೇವೆ. ನೀವು ಒಂದಲ್ಲ ಒಂದು ರೀತಿಯಲ್ಲಿ ಪೊಲೀಸರೆ. ಸಿವಿಲ್ ಡ್ರಸ್ ಹಾಕಿಕೊಂಡಿರುವ ಪೊಲೀಸರೆ.
ಶಾಲಾ ಕಾಲೇಜಿನ ಆಡಳಿತ ಮಂಡಲಿ ಕಾರ್ಯದರ್ಶಿ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ ದೇಶದ 140 ಕೋಟಿಯಲ್ಲಿ ಅಂದಾಜು ಪ್ರಕಾರ 16 ಕೋಟಿ ಹೆಚ್ಚು ಜನ ಮಧ್ಯವೆಸಿನಗಳು ಆಗಿದ್ದಾರೆ. ಕೊಕೇನ್ ನಂತಹ ಡ್ರಗ್ಸ್ ಗೆ 3 ಕೋಟಿ ಬಲಿಯಾಗುತ್ತಿದ್ದಾರೆ. ಒಪಿಎಂ ಡ್ರಗ್ಸ್ಗೆ 2 ಕೋಟಿ ಹೆಚ್ಚು ಜನ ಅಡಿಟ್ ಆಗಿದ್ದಾರೆ ಒಂದು ಕೋಟಿಗೂ ಅದಿಕ ಜನ ನಿಶೆಗೆ ಬಲಿಯಾಗುತ್ತಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 28 ಕೋಟಿ ಹೆಚ್ಚು ಜನ ಈ ಒಂದು ಡ್ರಗ್ಸ್ಗೆ ಒಳಪಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಎಸ್.ವೆಂಕಟಸ್ವಾಮಿ, ಉಪಪ್ರಾಂಶುಪಾಲ ರಾಜಕುಮಾರ್, ಕಾಲೇಜು ಆಡಳಿತ ಅಧಿಕಾರಿ ಬಿ.ಎಸ್.ಗಗನಕುಮಾರ್, ಶಾಲೆಯ ಪ್ರಾಂಶುಪಾಲೆ ಅಸ್ಸಮಾತಬ್ಸಮ್, ಉಪಪ್ರಾಂಶುಪಾಲೆ ದೀಪ, ಶಾಲಾ ಆಡಳಿತ ಅಧಿಕಾರಿ ರಮೇಶ್ ಇದ್ದರು.


