

ಬ್ರಹ್ಮಾವರ, ಜೂ.20; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಅನುದಾನಿತ ಶಾಲೆಗಳಿಗೆ ಶಾಲೋಪಕರರಣಗಳನ್ನು ನೀಡಿ ಸಹಾಯ ಹಸ್ತ ನೀಡುವ ಎಂ.ಸಿ.ಸಿ. ಬ್ಯಾಂಕ್ ಜೂನ್ 19 ರಂದು ಬ್ರಹ್ಮಾವರ ಕಾಸ್ಮೋಪಾಲಿಟನ್ ಹೈಯರ್ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿತು.
ಬ್ಯಾಗ್ ವಿತರಣೆ ಮಾಡಿ ಮಾತನಾಡಿದ ಬ್ಯಾಂಕಿನ ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ 113 ವರ್ಷಗಳ ಇತಿಹಾಸ ಇರುವ ಎಂ.ಸಿ.ಸಿ. ಬ್ಯಾಂಕ್ ಇವತ್ತು ನಮ್ಮ ಬ್ಯಾಂಕ್ ಲಾಭದ ಒಂದಿಷ್ಟು ಭಾಗ ಸಮಾಜದ ಕಟ್ಟಕಡೆಯಲ್ಲಿರುವರಿಗೆ ಸಹಾಯ ಹಸ್ತ ನೀಡಲು ತೆಗೆದಿಡುತ್ತದೆ, ಇದೇ ಉದ್ದೇಶದಿಂದ ಇಂದು, 109 ವರ್ಷದಿಂದ ಒರ್ಥೆಡೆಕ್ಸ್ ಸಿರಿಯನ್ ಸಂಸ್ಥೆ ಸಮಾಜದಲ್ಲಿ ಶಿಕ್ಷಣ ನೀಡುವಲ್ಲಿ ಶ್ರಮವಹಿಸುತ್ತಾ ಬಂದಿರುವ ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ನೀಡಿ ಸಹಾಯ ಮಾಡಲು ಮುಂದೆ ಬಂದಿರುವುದು, ವಿದ್ಯಾರ್ಥಿಗಳೆ, ನಿಮಗೆ ಈ ರೀತಿ ಸಹಾಯ ನೀಡಲು ತುಂಬಾ ಸಂತೋಷವಾಗುತ್ತದೆ, ನಮ್ಮ ಬ್ಯಾಂಕಿನ ಶ್ರೇಯಸಿಗಾಗಿ ನೀವು ಪ್ರಾಥಿಸಬೇಕು, ಹಾಗೇ ಇಂದಿನ ಮಕ್ಕಳಾದ ನೀವು ಚೆನ್ನಾಗಿ ಕಲಿತು, ಮುಂದೆ ಇದೇ ರೀತಿ ಸಮಾಜಕ್ಕೆ ಸಹಾಯ ಮಾಡುವಂತಾರಾಗಬೇಕು” ಎಂದು ಹೇಳಿದರು.
ಶಾಲೆಯ ಸಂಚಾಲಕರಾದ ಧರ್ಮಗುರು ವಂ।ಎಂ.ಸಿ. ಮಥಾಯಿ ಮಾತನಾಡಿ “ಕಶ್ಟದಲ್ಲಿರುವ ಮಕ್ಕಳಿಗೆ ಎಂ.ಸಿ.ಸಿ. ಬ್ಯಾಂಕ್ ಶಾಲಾ ಬ್ಯಾಗುಗಳನ್ನು ವಿತರಣೆ ಮಾಡಿ ಸಹಾಯ ಮಾಡಿದಕ್ಕೆ ಅತೀವ ಸಂತೋಷವಾಗುತ್ತೆ. ಎಂ.ಸಿ.ಸಿ. ಬ್ಯಾಂಕ್ ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿ, ಎಲ್ಲಾ ಮಕ್ಕಳು ಬ್ಯಾಂಕಿನ ಒಳಿತಿಗಾಗಿ ಪ್ರಾರ್ಥಿಸಬೇಕು” ಎಂದು ಹೇಳುತ್ತಾ ಬ್ಯಾಂಕಿಗೆ ಕ್ರತಜ್ಞತೆ ಸಲ್ಲಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಎಂ.ಸಿ.ಸಿ. ಬ್ಯಾಂಕ್ ಬ್ರಹ್ಮಾವರ ಶಾಖೆಯ ವ್ಯವಸ್ಥಾಕರರಾದ ಒವಿನ್ ರೆಬೆಲ್ಲೊ, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಯಿನಿ ಸುಜಾತಾ ಸ್ವಾಗತಿಸಿದರು. ಶಿಕ್ಷಕಿ ರಂಜಿತ ವಂದಿಸಿದರು. ಶಿಕ್ಷಕಿ ಹೇಮಾ ನಿರೂಪಿಸಿದರು.







