

ಕುಂದಾಪುರ, ಜೂ.20; ಶಿಲ್ಪ ಕಲಾಕೃತಿ:- ಮಾನಸಿಕ ಮತ್ತು ದೈಹಿಕವಾದ ಸದೃಢ ಆರೋಗ್ಯಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಚರಿಸಲ್ಪಡುವ ‘ಯೋಗ ದಿನಾಚರಣೆ’ 21.6.2025 ರ ಪ್ರಯುಕ್ತ ಹಳೆಅಳಿವೆ ಕಡಲ ತೀರ ಕೋಟೇಶ್ವರ, ಕುಂದಾಪುರದಲ್ಲಿ ಮರಳು ಶಿಲ್ಪದ ಮೂಲಕ ಜನಜಾಗೃತಿಯನ್ನು ಸಾರುವ ಕಲಾಕೃತಿಯನ್ನು 20.6.2025 ರಂದು ರಚಿಸಲಾಗಿದೆ.
ಈ ಕಲಾಕೃತಿಯಲ್ಲಿ ಯೋಗಪಟುವನ್ನು ಕೇಂದ್ರವಾಗಿಸಿ, ಉತ್ತಮ ಆರೋಗ್ಯಕ್ಕಾಗಿ ಎಂಬ ಧ್ಯೇಯದೊಂದಿಗೆ 3 ಅಡಿ ಮತ್ತು 7 ಅಡಿ ಎತ್ತರ ಅಗಲಗಳುಳ್ಳ ಮರಳು ಕಲಾಕೃತಿಯನ್ನು ರಚಿಸಲಾಗಿದೆ.
ಮರಳು ಶಿಲ್ಪದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ‘ಸ್ಯಾಂಡ್ ಥೀಂ’ ಉಡುಪಿ ತಂಡ ರಚಿಸಿದೆ.




