

ಶ್ರೀನಿವಾಸಪುರ : ತಾಲೂಕಿನ ಕಸಬಾ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿಮಾನಿಗಳಾದವರು ಬುಧವಾರ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ರವರ ೭೮ ನೇ ವರ್ಷದ ಹುಟ್ಟುಹಬ್ಬವನ್ನು ೭೮ ಕೆಜಿಯ ಕೇಕ್ ಕತ್ತರಿಸುವ ಮುಖಾಂತರ ಅದ್ದೂರಿಯಾಗಿ ಆಚರಣೆ ಮಾಡಿದರು.
ಈ ಕಾರ್ಯಕ್ರಮವನ್ನ ಆಯೋಜನೆ ಮಾಡಿರುವ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ನಾನು ಸದಾ ಚಿರುಋಣಿಯಾಗಿ ಇರುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ , ತಾ.ಪಂ ಮಾಜಿ ಸದಸ್ಯ ಹಳೆಪೇಟೆ ಮಂಜುನಾಥರೆಡ್ಡಿ, ಮುಖಂಡರಾದ ಪೂಲ್ ಶಿವಾರೆಡ್ಡಿ, ಶಂಕರರೆಡ್ಡಿ, ಸುರೇಶ್, ಗಾಯತ್ರಿಮುತ್ತಪ್ಪ, ಶಿವಪುರಗಣೇಶ್, ಶಂಕರ, ಕುಮ್ಮಗುಂಟೆ ಮನು, ದೊಡ್ಡಮಲದೊಡ್ಡಿ ಶ್ರೀನಾಥರೆಡ್ಡಿ, ರವಿ ಹಾಗೂ ಕಾರ್ಯಕರ್ತರು ಇದ್ದರು

