

ಬೆಂಗಳೂರು : ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ ಹಾಗೂ ಸುಲಭ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.) ತನ್ನ ಆಯ್ದ ಪ್ರತಿಷ್ಠಿತ ಸಾರಿಗೆಗಳ ಪ್ರಯಾಣದರಗಳಲ್ಲಿ ಶೇಕಡಾ 5ರಿಂದ 15ರವರೆಗೆ ರಿಯಾಯಿತಿ ಘೋಷಿಸಿದೆ ಎಂದು ನಿಗಮದ ವ್ಯವಸ್ಥಾಪಕರು ಅಕ್ರಂ ಪಾಷ ತಿಳಿಸಿದ್ದಾರೆ.
ಬೆಂಗಳೂರು–ಮಂಗಳೂರು, ಬೆಂಗಳೂರು–ಕುಂದಾಪುರ, ಬೆಂಗಳೂರು–ಉಡುಪಿ, ಬೆಂಗಳೂರು–ಧರ್ಮಸ್ಥಳ, ಬೆಂಗಳೂರು–ಕುಕ್ಕೆ ಸುಬ್ರಮಣ್ಯ, ಬೆಂಗಳೂರು–ಪುತ್ತೂರು, ಬೆಂಗಳೂರು–ಮಡಿಕೇರಿ/ವಿರಾಜಪೇಟೆ, ಬೆಂಗಳೂರು–ದಾವಣಗೆರೆ, ಬೆಂಗಳೂರು–ಶಿವಮೊಗ್ಗ/ಸಾಗರ, ಬೆಂಗಳೂರು–ಚೆನ್ನೈ, ಬೆಂಗಳೂರು–ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು–ತಿರುಪತಿ, ಬೆಂಗಳೂರು–ಮಂತ್ರಾಲಯ, ಬೆಂಗಳೂರು–ಪುಣೆ/ಮುಂಬೈ, ಬೆಂಗಳೂರು–ವಿಜಯವಾಡ, ಬೆಂಗಳೂರು–ಎರ್ನಾಕುಲಂ, ಬೆಂಗಳೂರು–ಮದುರೈ, ಬೆಂಗಳೂರು–ಕೋಯಿಮತ್ತೂರು ಹಾಗೂ ಬೆಂಗಳೂರು–ತಿಶ್ರೂರು ಸೇರಿದಂತೆ ಇತರೆ ಆಯ್ದ ಮಾರ್ಗಗಳಲ್ಲಿ ಈ ರಿಯಾಯಿತಿ ಅನ್ವಯವಾಗಲಿದೆ.
ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಹಾಗೂ ಮಲ್ಟಿ ಆಕ್ಸಲ್ ಎಸಿ ಸ್ಲೀಪರ್ ಬಸ್ಗಳ ಪ್ರಯಾಣದರಗಳಿಗೆ ಈ ರಿಯಾಯಿತಿ ಲಭ್ಯವಿದ್ದು, ಜನವರಿ 5, 2026ರಿಂದ ಜಾರಿಗೆ ಬರಲಿದೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್ಸೈಟ್ www.ksrtc.in ಗೆ ಭೇಟಿ ನೀಡುವಂತೆ ಕೋರಲಾಗಿದ್ದು, ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕ.ರಾ.ರ.ಸಾ. ವ್ಯವಸ್ಥಾಪಕರು ಅಕ್ರಂ ಪಾಷ ಮನವಿ ಮಾಡಿದ್ದಾರೆ.

