

ಶ್ರೀನಿವಾಸಪುರ : ಕಚೇರಿಯಲ್ಲಿ ಮಾಡುವ ಸಿಬ್ಬಂದಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ನೆಮ್ಮದಿ ಇಲ್ಲದೆ ಇರುತ್ತದೆ. ಆ ಸಮಯದಲ್ಲಿ ದೇವರ ಧ್ಯಾನ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗುಳ್ಳುವುದರಿಂದ ಒಂದಿಷ್ಟು ನೆಮ್ಮದಿ ಸಿಗುತ್ತದೆ ಎಂದು ಆಗಮಿಕ ಕುರುಮಾಕಲಪಲ್ಲಿ ಪ್ರಕಾಶ್ ತಿಳಿಸಿದರು.
ಪಟ್ಟಣ ಬೆಸ್ಕಾಂ ಕಚೇರಿ ಆವರಣದಲ್ಲಿ ಇರುವ ಮಹಾ ಗಣಪತಿ ದೇವಾಲಯದಲ್ಲಿ ಮಂಗಳವಾರ 41 ನೇ ವಾರ್ಷಿಕೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕವಾಗಿ ಏಕವಾರ ರುದ್ರಾಭಿಷೇಕ, ಅಲಂಕಾರ , ಅರ್ಚನೆ, ಗಣಪತಿ, ನವಗ್ರಹ, ಲಲಿತಾ ತ್ರಿಪುರ ಸುಂದರಿ , ಭ್ಯರವೇಶ್ವರ ಹೋಮ ಹಾಗು ಪೂರ್ಣಾಹುತಿ , ಮಹಾಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ಪೂಜಾ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಕಳ್ಳೆ ರಘುನಾಥ್ ಶಾಸ್ತ್ರಿ ನಡೆಸಿಕೊಟ್ಟರು . ಬೆಸ್ಕಾಂ ಸಿಬ್ಬಂದಿ ಮಮತ ಕಾಂತರಾಜ್ ಶೇಠ್ ದಂಪತಿಗಳು ಪೂಜಾ ಕಾರ್ಯಕ್ರಮಗಳ ಸೇವಾಕಾರ್ಯಕರ್ತರಾಗಿ ಭಾಗವಹಿಸಿದ್ದರು.
ಜಿಲ್ಲಾ ಕಾರ್ಯನಿರ್ವಾಹಕ ಇಂಜಿನೀಯರ್ ಶ್ರೀನಾಥ್, ಎಇಇ ಜರ್ನಾಧನ್, ಜೆಇ ಗಳಾದ ಆರ್.ಕೆ.ಬಾಬು, ನಂಜುಂಡೇಶ್ವರ , ಟಿ.ಶ್ರೀನಿವಾಸ್, ಆನಂದ್, ನೌಕರರ ಸಂಘದ ಅಧ್ಯಕ್ಷರಾದ ಎಲ್.ವಿ.ಶ್ರೀನಿವಾಸ್, ಎಸ್.ರಾಮಾಂಜನೇಯಪ್ಪ, ಮುಖಂಡರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಲಕ್ಷ್ಮಣರೆಡ್ಡಿ ಆರ್.ಚಂದ್ರು ದೇವರ ದರ್ಶನ ಪಡೆದರು. ಕಾರ್ಯಕ್ರಮದಲ್ಲಿ ಬೆಸ್ಕಾಂ ಇಲಾಖೆ ಸಿಬ್ಬಂದಿಗಳಾದ ಇದ್ದರು.


