

ಶ್ರೀನಿವಾಸಪುರ : ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು, ರಾಸು ವಿಮಾ ಪರಿಹಾರ ಚೆಕ್ ಪಡೆದಿರುವ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಿ, ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಮತ್ತು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಲು ಯಲ್ದೂರು ಕ್ಷೇತ್ರದ ಕೋಮುಲ್ ನಿರ್ದೇಶಕ ಎನ್.ಹನುಮೇಶ್ ತಿಳಿಸಿದರು.
ಪಟ್ಟಣದ ಕೋಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ರಾಸು ವಿಮಾ ಪರಿಹಾರದ 10 ಚೆಕ್ಗಳು ಮೊತ್ತ 6,20,000 ಚೆಕ್ ವಿತರಿಸಿ ಮಾತನಾಡಿದರು.
ಕೋಮುಲ್ ಹಾಲು ಒಕ್ಕೂಟದ ಅಡ್ಡಗಲ್ ಕ್ಷೇತ್ರದ ನಿರ್ದೇಶಕ ಕೆ.ಕೆ ಮಂಜುನಾಥ ಮಾತನಾಡಿ ಪ್ರಸ್ತುತ ವರ್ಷಕ್ಕೆ 2 ಬಾರಿ ರಾಸುವಿಮೆ ನೋಂದಣಿ ಮಾಡಲಾಗುತ್ತಿದ್ದು, ಇನ್ನು ಮುಂದೆ ವರ್ಷಕ್ಕೆ 3 ಬಾರಿ ರಾಸು ವಿಮೆ ನೋಂದಣಿ ಮಾಡಿಸಲು ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕ ಕೆ.ಎಂ.ಮುನಿರಾಜು , ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಕೆ.ಎಂ.ಮುನಿಸ್ವಾಮಿರೆಡ್ಡಿ, ಎನ್ ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಅಣ್ಣಪ್ಪ ತಡಕೋಡ, ಗೋಪಾಲ ಕೃಷ್ಣ, ಕೆ.ಪಿ.ಶ್ವೇತ ಹಾಗೂ ಶಿಬಿರದ ಸಿಬ್ಬಂದಿಯವರು ಮತ್ತು ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು, ಫಲಾನುಭವಿಗಳು ಹಾಜರಿದ್ದರು.

