JANANUDI.COM NETWORK
ಇನ್ನೆರೆಡು ದಿನ ಮಳೆಯಾಗುವ ಸಾಧ್ಯತೆ ಹವಾಮಾನ ಇಲಾಖೆ: ಮಳೆ ಕಾರಣ ಕೊರೊನಾ ಭೀತಿ ಹೆಚ್ಚಾಗಿದೆ

ಕುಂದಾಪುರ:: ಎ.8: ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದಲ್ಲಿ ಇನ್ನೆರೆಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆಯೆಂದು ಹವನಾನ ಇಲಾಖೆ ಮಾಹಿತಿ ನೀಡಿದೆ.
ಮಂಗಳವಾರ ರಾಜ್ಯದ ಹಲವೆಡೆ, ಕರಾವಳಿ ಸಮೇತ ಗುಡುಗು ಸಹಿತ ಮಳೆಯಾಗಿದೆ. ಬುಧವಾರ ಮತ್ತು ಗುರುವಾರ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಇದ್ದು ಎಲ್ಲೊ ಅಲರ್ಟ್ ಘೋಷಿಸಲಾಗಿದೆಯೆಂದು ಹವಾಮಾನ ಇಲಾಖೆಯ ಮಾಹಿತಿ ನೀಡಿದೆ
ಮಳೆಯ ಕಾರಣದಿಂದ ಕೊರೊನಾ ಮಹಾಮಾರಿ ಹೆಚ್ಚಾಗುವ ಭೀತಿ ಕಾಡಲಾಗಿದೆ.. ತಂಪಾದ ವಾತಾವರಣದಲ್ಲಿ ಕೊರೊನಾ ವೈರಸ್ ಬೇಗ ಹರಡುತ್ತಿರುವುದರಿಂದ. ಮನೆಯಿಂದ ಹೊರ ಬಾರದೆ, ಮನೆಯಲ್ಲೇ ಉಳಿಯಿರು ಎನ್ನುವ ಸಲಹೆಯನ್ನು ನೀಡಲಾಗಿದೆ.


