
ಕುಂದಾಪುರ, ಜು.06 ರoದು, ಹಂಗಳೂರು ಸಂತ ಪಿಯುಸ್ 10 ನೇ ಚರ್ಚಿನಲ್ಲಿ ಕಥೋಲಿಕ ಸಭಾ ಘಟಕದ ವತಿಯಿಂದ ವನಮೋಹೋತ್ಸವ ದಿನಾಚರಣೆ ಮಾಡಲಾಯಿತು. ಸುಮಾರು 185 ಗಿಡ ಗಳ್ನನು, ವಿತರಿಸಲಾಯಿತು. ಚರ್ಚಿನ ಧರ್ಮಗುರು ವಂದನಿಯ ಆಲ್ಬರ್ಟ್ ಕ್ರಾಸ್ಥಾ ಗಿಡ ನೆಟ್ಟು ವನಮೋಹೋತ್ಸವಕ್ಕೆ ಚಾಲನೆ ನೀಡಿದರು. ಕಥೊಲಿಕ್ ಸಭಾ ಅಧ್ಯಕ್ಷ ಅಲೆಕ್ಸಾoಡರ್ ಲುವಿಸ್, ಕಾರ್ಯದರ್ಶಿ ಸಿಂತಿಯಾ ಫೆರ್ನಾಂಡಿಸ್, ವಾರಡೋ ಅಧ್ಯಕ್ಷ ರೆಮಿ ಫೆರ್ನಾಂಡಿಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೇಮ್ಸ್ ಡಿಮೆಲ್ಲೋ, ಪಾಲನ ಮಂಡಳಿಯ ಕಾರ್ಯದರ್ಶಿ ರೇಷ್ಮಾ ಡಿಸೋಜಾ, ಕಥೋಲಿಕ್ ಸಭೆಯ ಸರ್ವ ಸದ್ಸ್ಯರು, ಹಾಗೂ ಚರ್ಚಿನ ಕುಟುಂಬದ ಸದ್ಸ್ಯರು ಹಾಜರಿದರು.





