

ಶ್ರೀನಿವಾಸಪುರ : ಕ್ಷೇತ್ರ ಅಭಿವೃದ್ಧಿಗಾಗಿ ಕೈಗಾರಿಕಾ ವಲಯವನ್ನು ಸ್ಥಾಪನೆ ಬೇಕಾದ ರೂಪರೇಷಗಳನ್ನು ಹಮ್ಮಿಕೊಂಡಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು. ಪಟ್ಟಣದ ಶ್ರೀ ಮಾರುತಿ ಸಮುದಾಯ ಭವನದಲ್ಲಿ ಸೋಮವಾರ ಮಾವು ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಇಂದು ಮಾವು ಬೆಳೆಗಾರರು ಮಾವು ಬೆಳೆಗೆ ರೋಗರುಜನಗಳಿಂದ ಕಂಗಾಲಾಗಿದ್ದು, ವಿಜ್ಞಾನಿಗಳು ರೈತರಿಗೆ ಮಾವು ಬೆಳೆಗೆ ರೋಗರುಜನಗಳನ್ನು ತಡೆಗಟ್ಟಲು ಬೇಕಾದ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಮಾವು ಮಂಡಲಿ ರಾಜ್ಯಾಧ್ಯಕ್ಷ ಮುದ್ದುಗಂಗಾಧರ್ ಮಾತನಾಡಿ ರಾಜ್ಯಕ್ಕೆ ಬೆಂಗಳೂರು ಯಾವ ರೀತಿಯಲ್ಲಿ ರಾಜದಾನಿಯಾಗಿದೆಯೊ ಅದೇ ರೀತಿಯಾಗಿ ಮಾವು ಬೆಳೆಗೆ ಶ್ರೀನಿವಾಸಪುರ ರಾಜದಾನಿ ಅಂದ್ರೆ ತಪ್ಪಾಗಲಿಕ್ಕಿಲ್ಲ.
ನಾನು ಈಗಾಗಲೇ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಭೆಗಳನ್ನು ಆಯೋಜಿಸಿ, ಅಲ್ಲಿನ ಮಾವು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಬೇಕಾಗಿರುವ ಪರಿಹಾರವನ್ನು ವ್ಯವಸ್ಥೆ ಮಾಡಿದ್ದೇನೆ. ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಸ ನಡೆಸಿ ಅಲ್ಲಿನ ಮಾವು ಬೆಳೆಗಾರರ ಕಷ್ಟ ನಷ್ಟಗಳ ಬಗ್ಗೆ ಮಾಹಿತಿ ಪಡೆಯಲಾಗುವುದು.
ರಾಜ್ಯದಲ್ಲಿ ಉತ್ಪತ್ತಿಯಾಗುವ ಶೇ.೧೫% ರಲ್ಲಿ ನಮ್ಮ ಕೋಲಾರ ಜಿಲ್ಲೆ ಅದರಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ೫% ಉತ್ಪಾದನೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರಿಗೆ ಬೇಕಾದ ಸರ್ಕಾರ ಸೌಲಭ್ಯಗಳ ಬಗ್ಗೆ ಮುಖ್ಯಮಂತ್ರಿ ಹಾಗು ಸಚಿವರೊಂದಿಗೆ ಸಮಲೋಚನೆ ನಡೆಸಿ ಇಲ್ಲಿನ ಮಾವು ಬೆಳೆಗಾರರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಮಾವು ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ೨೦೧೯ ರಲ್ಲಿ ಹಾಗು ೨೦೨೫ ರಲ್ಲಿ ಮಾವು ಬೆಳೆಗಾರರು ಅನುಭವಿಸಿದ್ದ ಕಷ್ಟ , ನಷ್ಟಗಳ ಬಗ್ಗೆ ವಿವರಿಸಿದರು.
ಮಾವು ಮಂಡಲಿ ವ್ಯವಸ್ಥಾಪಕ ಟಿ.ಆರ್.ವೇಧಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಎಸ್.ಆರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ಅಶೋಕ್, ತೋಟಗಾರಿಕೆ ಹಿರಿಯ ತಾಲೂಕು ನಿರ್ದೇಶಕ ಎಂ.ಶ್ರೀನಿವಾಸನ್, ಎಎಚ್ಒಗಳಾದ ಎನ್.ಹರೀಶ್, ಮಂಜುನಾಥ್, ರಮ್ಯರಾಣಿ, ಶ್ರೀನಿವಾಸ್, ಹೊಗಳಗೆರೆ ತೋಟಗಾರಿಕೆ ನಿರ್ದೇಶಕ ಮಂಜುನಾಥ್, ಮಾವು ಮಂಡಲಿ ಉಪನಿರ್ದೇಶಕಿ ಅಸ್ಮನಾಜ್, ಮಾವು ಬೆಳೆಗಾರರ ತಾಲೂಕು ಅಧ್ಯಕ್ಷ ಸೀತರಾಮರೆಡ್ಡಿ, ವಿಜ್ಞಾನಿಗಳಾದ ನಟರಾಜ್,ಗಂಗಾಧರ್, ಆಂಜನೇಯರೆಡ್ಡಿ, ಶಿವಾರೆಡ್ಡಿ, ಶ್ರೀನಿವಾಸಗೌಡ, ಕೃಷಿ ಅಧಿಕಾರಿ ಮಹೇಶ್ಬಾಬು ಇದ್ದರು.


