

ಗಂಗೊಳ್ಳಿ ಕೊಸೆಸಾಂವ್ (ಅಮಲೋದ್ಭವಿ) ಮಾತೆ ಚರ್ಚ್ ನಲ್ಲಿ ಮಕ್ಕಳಿಂದ ” ಶಿಲುಬೆಯ ದಾರಿ” ಯ ನೈಜ ಯಾತನೆಯ ಪ್ರದರ್ಶನ ಗೊಳ್ಳಲಿದೆ
2025 ನೇ ವರ್ಷದಲ್ಲಿ, ಜುಬಿಲಿ ವರ್ಷದ ಪ್ರಯುಕ್ತ ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ಶ್ರೀಸಾಮಾನ್ಯರಿಂದ “ಶುಭ ಶುಕ್ರವಾರ”ದಂದು ಬಹು ಯಶಸ್ವಿಯಾಗಿ , ಜನರ ಹೃದಯವನ್ನು ತಟ್ಟಿ, ಅಪಾರ ಪ್ರಶಂಸೆಯೊಂದಿಗೆ “ಶಿಲುಬೆಯ ದಾರಿ”ಯ ಯೇಸು ಕ್ರಿಸ್ತರ ಯಾತನೆ ಯ ಪ್ರದರ್ಶನಗೊಂಡಿತ್ತು.
ಹಿಂದಿನ ವರ್ಷದ ಪ್ರದರ್ಶನ ಹಾಗೂ ಕಳೆದ ನೂರಾರು ವರ್ಷಗಳಿಂದ ಗಂಗೊಳ್ಳಿ ಚರ್ಚ್ ನಲ್ಲಿ ಪ್ರದರ್ಶನ ಗೊಳ್ಳುತ್ತಿರುವಂತಹ ಯೇಸು ಕ್ರಿಸ್ತರ ಕಷ್ಟಗಳ ಯಾತನೆ (ಪಾಶಾಂವ್) ದ ಪ್ರೇರಣೆ ಪಡೆದು,
ಪ್ರಸ್ತುತ ವರ್ಷ (2026) ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ದಿನಾಂಕ 03 ಏಪ್ರಿಲ್ 2026 ರ ಶುಭ ಶುಕ್ರವಾರ ( ಗುಡ್ ಫ್ರೈಡೆ) ದಂದು ಬೆಳಿಗ್ಗೆ 8.00 ಗಂಟೆಗೆ “ಮಕ್ಕಳಿಂದ ನೈಜ ಶಿಲುಬೆಯ ದಾರಿ”ಯ ಯಾತನೆ ಪ್ರದರ್ಶನಗೊಳ್ಳಲಿರುವುದು.
ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂ। ತೋಮಸ್ ರೋಶನ್ ಡಿಸೋಜ ರವರ ಮಾರ್ಗದರ್ಶನದಲ್ಲಿ 6 ರಿಂದ 12 ನೇ ವಯಸ್ಸಿನ 60 ಮಕ್ಕಳು ದಿವಂಗತ ಧರ್ಮಗುರು ವಂ। ವಲೇರಿಯನ್ ಮೆಂಡೊನ್ಸಾರವರು ಬರೆದ “ಶಿಲುಬೆಯ ದಾರಿ” ಯ ಯಾತನೆಯ ನೈಜ ಪ್ರದರ್ಶನವನ್ನು ಶ್ರೀ ಎಲ್ರೋಯ್ ಕಿರಣ್ ಕ್ರಾಸ್ಟೊ, ಶ್ರೀ ಓವಿನ್ ರೆಬೆಲ್ಲೊ ಹಾಗೂ ಶ್ರೀ ರೋಶನ್ ಲೋಬೊರವರ ನಿರ್ದೇಶನದಲ್ಲಿ ನೀಡಲಿದ್ದಾರೆ.
ಅದ್ಭುತ ನಟನಾ ಕೌಶಲ್ಯದೊಂದಿಗೆ ರೂಪುಗೊಂಡಿರುವ ಈ ಶಿಲುಬೆಯ ದಾರಿಯ ಪ್ರದರ್ಶನವು ಗಂಗೊಳ್ಳಿ ಕಾರ್ಮೆಲ್ ಕಾನ್ವೆಂಟಿನ ಧರ್ಮ ಭಗಿನಿಯರು, ಚರ್ಚಿನ ಗಾಯನ ಮಂಡಳಿ, ಚರ್ಚಿನ ಪಾಶಾಂವ್ (ಯಾತನ) ಸಮಿತಿ ಹಾಗೂ ಶ್ರೀಸಾಮಾನ್ಯರ ಸಹಕಾರ ದೊಂದಿಗೆ ನೇರವೇರಲಿದೆ ಎಂದು ಚರ್ಚಿನವರು ತಿಳಿಸಿದ್ದಾರೆ.
ಕೆಳಗಿನ ಚಿತ್ರಗಳು ಶುಭ ಶುಕ್ರವಾರ ಪ್ರದರ್ಶನಗೊಳ್ಳಲಿರುವ ಯೇಸುವಿನ ಕಶ್ಟ ಮರಣದ ಯಾತನೆಯ ನಟನ ಅಭ್ಯಾಸವನ್ನು ಮಾಡುತ್ತೀರುವುದಾಗಿವೆ. >










