

ಮುದರ೦ಗಡಿಯಲ್ಲಿ ಡೇವಿಡ್ ಮೇಲೆ ಶೂಟೌಟ್ ನಡೆಸಿದ್ದ ರಾಜು ಹಾಗೂ ಆತನ ಸಹಚರರ ತ೦ಡವನ್ನು ಕಳುಹಿಸಿಕೊಟ್ಟಿದ್ದ ಪ್ರಮುಖ ಆರೋಪಿ ಅನೂಜ್ ಎ೦ಬಾತನನ್ನು ಪೊಲೀಸರು ಹೆಬ್ರಿ ಸಮೀಪ ವಶಕ್ಕೆ ಪಡೆದಿದ್ದರು.

ಡೇವಿಡ್ ಅವರನ್ನು ಹತ್ಯೆಗೈಯಲು ಮೂವರು ಶೂಟರ್ಗಳನ್ನು ಕಳುಹಿಸಿದ ಆರೋಪಿ ಮುಂಬೈನ ನಟೋರಿಯಸ್ ಗ್ಯಾಂಗ್ ಸ್ಟಾರ್, ಬಿಹಾರ ನಳಂದ ಅನುಜ್ ಪಾಟೀಲ್(35) ಯನ್ನು ಬಂಧಿಸಿ ಕರೆದುಕೊಂಡು ಬರುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಅವರ ಆಯುಧವನ್ನು ಕಸಿದು, ಫೈಯರ್ ಮಾಡಿದ್ದಾನೆ. ಈ ಸಮಯದಲ್ಲಿ ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜ ನಾಯ್ಕ್ ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿದ್ದಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಾಲಿಗೆ ಗು೦ಡೇಟು ಬಿದ್ದು ಗಾಯಗೊಂಡಿರುವ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ನೀಡಲಾಗುತಿದ. ಗುಂಡೇಟು ತಿಂದ ಆರೋಪಿ ಅನೂಜ್ ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಸೇರಿದ೦ತೆ
ನಾಲ್ಕು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾ೦ಟಿಡ್ ಕ್ರಿಮಿನಲ್ ಆಗಿದ್ದಾನೆ. ಕೊಲೆಗೆ ಸುಪಾರಿ
ಪಡೆಯುವುದು ಹಾಗೂ ಅಕ್ರಮ ಶಸ್ತಾಸ್ತ, ಸರಬರಾಜು ಮಾಡುವ ದಂಧೆಯಲ್ಲಿ ತೊಡಗಿದ್ದ ಈತನ ಪತ್ತೆಗೆ
ಉಡುಪಿ ಜಿಲ್ಲಾ ಪೊಲೀಸರ ತ೦ಡ ಬರೋಬ್ಬರಿ 2,471 ಕಿ.ಮೀ.ಗೂ ಹೆಚ್ಚು ದೂರ ಕಾರ್ಯಾಚರಣೆ ನಡೆಸಿ
ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

