

ಕುಂದಾಪುರ; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕುಂದಾಪುರ ವತಿಯಿಂದ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇಲ್ಲಿ ಕಡಲೊತ್ಸವ ಹಾಗೂ ಗಾಳಿಪಟ ಉತ್ಸವ ಜರಗಿತು ಇತ್ತೀಚೆ ಜರುಗಿತು. ಕಾರ್ಯಕ್ರಮವನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಗುಣರತ್ನ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ರೇಸನ್ಸ್ ವಹಿಸಿದ್ದರು ಅತಿಥಿಗಳಾಗಿ ಜಂಟಿ ಕಾರ್ಯದರ್ಶಿ ಸಿಸ್ಟರ್ ಗ್ರೇಸ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ವಿಜಯ ಸಂಸ್ಥೆಯ ಉಪಾಧ್ಯಕ್ಷರಾದ ಉಷಾ ಹಾಗೂ ಜಯಶೀಲ ಪೈ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪಿಯುಸ್ ಡಿಸೋಜಾ ಉಪಸ್ಥಿತರಿದ್ದರು ಗೈಡ್ ಶಿಕ್ಷಕಿ ಜುನಿತ ಮಚಾದೊ ಸ್ವಾಗತಿಸಿದರು ಸ್ಕೌಟ್ ಶಿಕ್ಷಕಿ ದಿವ್ಯಾ ಭಾರತಿ ಕಾರ್ಯಕ್ರಮ ನಿರೂಪಿಸಿ ಗೈಡ್ ಶಿಕ್ಷಕಿ ಪೂರ್ಣಿಮಾ ವಂದಿಸಿದರು ಸ್ಥಳೀಯ ಶಾಲೆಗಳ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.






