

ಶ್ರೀನಿವಾಸಪುರ : ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಸರ್ಕಾರ ಇಡಬೇಕಾದ ಹೆಜ್ಜೆಗಳನ್ನು ಈ ಸಮೀಕ್ಷೆ ಗುರ್ತಿಸಲಿದೆ . ಒಟ್ಟಿನಲ್ಲಿ ರಾಜ್ಯದ ಮುಂದಿನ ಪೀಳಿಗೆಗೆ ಅನುಕೂಲಕರವಾದ ಈ ಸಮೀಕ್ಷೆಯನ್ನು ಎಲ್ಲಾ ಜನರು ಸ್ವಾಗತಿಸಿ ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಮನವಿ ಮಾಡಿದರು.
ಪುರಸಭೆ ವ್ಯಾಪ್ತಿಯ 18 ನೇ ವಾರ್ಡ್ನ ಬೈರಪಲ್ಲಿ ಗ್ರಾಮದಲ್ಲಿ ಭಾನುವಾರ ಸಮೀಕ್ಷೆ ಪರಿಶೀಲಿಸಿ ಮಾತನಾಡಿದರು.
ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ನಿಖರವಾಗಿ ದಾಖಲಿಸುವ ಸಲುವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ ಎಂದರು.
ಕಂದಾಯ ಅಧಿಕಾರಿ ಎನ್.ಶಂಕರ್, ಆರೋಗ್ಯ ನಿರೀಕ್ಷಕ ಟಿ.ವಿ.ಸುರೇಶ್, ಸಿಬ್ಬಂದಿಗಳಾದ ಪ್ರತಾಪ್, ಶಿವಪ್ರಸಾದ್, ಶ್ರೀನಾಥ್, ಸೀತರಾಮರೆಡ್ಡಿ ಇದ್ದರು.

