

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳೂರು ಕಂದಾವರ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಜೂನಿಯರ್ ಕಾಲೇಜು ,ಕುಂದಾಪುರದಲ್ಲಿ 08-02- 2026ರಂದು ನಡೆದ KDF Cup season – ಕರಾಟೆ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳೂರು ಕಂದಾವರ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಗೆ ಹೆಮ್ಮೆ ತಂದಿದ್ದಾರೆ .ವಿದ್ಯಾರ್ಥಿಗಳು ಶ್ರೇಷ್ಠ ಪ್ರದರ್ಶನ ನೀಡಿ ಕೆಳಗಿನಂತೆ ಸ್ಥಾನಗಳನ್ನು ಪಡೆದಿದ್ದಾರೆ ಮನ್ವಿತ್ -3 ಸ್ಥಾನ ,ಅಶ್ವಿಕ್ -3ನೇ ಸ್ಥಾನ ,ಚಿರಾಯು -3ನೇ ಸ್ಥಾನ ,ಪ್ರತ್ಯುಷ್ -2ನೇ ಸ್ಥಾನ, ಸಾತ್ವಿಕ್ -3ನೇ ಸ್ಥಾನ , ಸುದರ್ಶ್-2 ನೇ ಸ್ಥಾನ ,ಪ್ರಣತಿ ಎಸ್ -2ನೇ ಸ್ಥಾನ ,ಮಾನ್ಯ -3ನೇ ಸ್ಥಾನ ,ರಕ್ಷಾ -3ನೇ ಸ್ಥಾನ ಹಾಗೂ ಪ್ರಥ್ವಿಕ್-2ನೇ ಸ್ಥಾನ . ಈ ಸಾಧನೆಗೆ ಕರಾಟೆ ತರಬೇತಿದಾರರಾದ ಸಿಹಾನ್ ಶೇಖ್ ಬಸ್ರೂರು ಅವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ . ಈ ಸಾಧನೆಯನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಅಡಿಗ ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಶೇರಿಗಾರ್ ಮತ್ತು ಪ್ರಭಾರ ಮುಖ್ಯ ಶಿಕ್ಷಕಿಯಾದ ಮರಿಯಮ್ಮ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ,ಶಿಕ್ಷಕರು ,ಹಾಗೂ ಪೋಷಕರು ವಿಜೇತ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆಗಳನ್ನು ಮಾಡಲು ಶುಭ ಹಾರೈಸಿದರು.

