

ಕುಂದಾಪುರ, ಅ.4; ಕುಂದಾಪುರ ರೋಜರಿ ಚರ್ಚಿನಲ್ಲಿ ಕುಟುಂಬ ಆಯೋಗದಿಂದ ಹಿರಿಯವರ ದಿನಾಚರಣೆ ಆಚರಿಸಲಾಯಿತು. ಅ. 3 ರಂದು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಹಿರಿಯವರ ಜೊತೆ ಬಲಿದಾನವನ್ನು ಅರ್ಪಿಸುವ ಮೂಲಕ ಆರಂಭಿಸಲಾಯಿತು.
ಬಳಿಕ ಸಭಾಭವನದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಅ।ವಂ। ಪೌಲ್ ರೇಗೊ ಹಿರಿಯವರಿಗಾಗಿ ಕಿರು ಸ್ಫರ್ಧೆಗಳನ್ನು ನಡೆಸಿಕೊಟ್ಟು ಬಹುಮಾನಗಳನ್ನು ನೀಡಿ “ನಮ್ಮ ಹಿರಿಯವರ ನಂಬಿಕೆ ಮತ್ತು ಪ್ರೀತಿ ನಮಗೆ ಮತ್ತು ಲೋಕಕ್ಕೆ ಬೆಲೆ ಬಾಳುವಂತಹ ಕೊಡುಗೆಯಾಗಿದೆ, ನಮ್ಮ ಹಿರಿಯವರ ಅನುಭವ, ನಂಬಿಕೆ ಬಲವಾದ ದೇವರ ವರಗಳಾಗಿವೆ ಇದನ್ನು ಹಿರಿಯವರು ಇಂದಿನ ಯುವ ಜನರಿಗೆ ರವಾನಿಸಬೇಕೆಂದು ಈಗಿನ ಪೋಪ್ ಹೇಳುತ್ತಾರೆ. ಇದನ್ನು ನಾವು ಅನುಕರಿಸಬೇಕು’ ಎಂದು ಹೇಳಿದರು.
ನಿವ್ರತ್ತ ಅಧ್ಯಾಪಕ ಎಲ್.ಜೆ ಫೆರ್ನಾಂಡಿಸ್ ಹಿರಿಯವರಿಗೆ ಇಂದಿನ ಹಿರಿಯವರು ಅಧ್ಯಾತ್ಮಿಕತೆ, ಮಾನಸಿಕ, ಆರೋಗ್ಯಕರ ಜೀವನ ಪಾಲಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನೆ ಸುಪ್ರಿಯಾ, ಪಾಲನ ಮಂಡಳಿ ಉಪಾಧ್ಯಕ್ಷೆ, ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದ ಈ ಉತ್ಸವದಲ್ಲಿ 110 ಜನ ಹಿರಿಯರು ಭಾಗವಹಿಸಿದ್ದರು. ಕುಟುಂಬ ಆಯೋಗದ ಸಂಚಾಲಕಿ ಜೂಲಿಯಾನ ಮಿನೇಜೆಸ್ ಸ್ವಾಗತಿಸಿದರು, ಜ್ಯೋತಿ ಕ್ರಾಸ್ತಾ ವಂದಿಸಿದರು. ಕಿರಣ್ ಕ್ರಾಸ್ತಾ ನಿರೂಪಿಸಿದರು.



























































