

ಅಮ್ಮೆಂಬಳ; ಕಥೊಲಿಕ್ ಸಭಾ ,ಅಮ್ಮೆಂಬಳ ಘಟಕ ಹಾಗೂ ಸ್ಪಂದನಾ ಸ್ತ್ರೀ ಸಂಘಟನೆ ಅಮ್ಮೆಂಬಳ ಘಟಕ ಗಳ ಜಂಟಿ ಆಶ್ರಯದಲ್ಲಿ ನೇಜಿ ನೆಡುವ ಕಾರ್ಯಕ್ರಮ ದಿನಾಂಕ 3/07/2025 ರಂದು ಚೇಳೂರಿನ ಶ್ರೀಮತಿ ಸೆಲಿನ್ ಸಿಕ್ವೇರಾ ರವರ ಗದ್ದೆಯಲ್ಲಿ ನಡೆಸಲಾಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಆಲ್ಬರ್ಟ್ ಡಿ ಸೋಜಾರವರು ಸ್ವಾಗತಿಸಿದರು.
ಅಮ್ಮೆಂಬಳ ಚರ್ಚಿನ ಧರ್ಮ್ಮಗುರುಗಳಾದ ವಂ! ಫಾ! ಮೈಕೆಲ್ ಡಿ ಸಿಲ್ವ ರವರು ಉದ್ಘಾಟನೆ ನೆರವೇರಿಸುತ್ತಾ ಭತ್ತದ ಬೇಸಾಯ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಭತ್ತದ ಬೇಸಾಯಕ್ಕೆ ಒಗ್ಗಟ್ಟಿನಿಂದ ಸೇವೆ ನೀಡುವುದರೊಂದಿಗೆ ಪ್ರೋತ್ಸಾಹ ನೀಡುವುದು ಒಳ್ಳೆಯ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು. ಚರ್ಚಿನ ಪಾಲನಾ ಪರಿಷದ್ ಉಪಾಧ್ಯಕ್ಷರಾದ ರೋಬರ್ಟ್ ಡಿ ಸೋಜಾ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಆನಂತರ ಎರಡೂ ಸಂಘಟನೆಯ ಸದಸ್ಯರು ಗದ್ದೆಗಳಲ್ಲಿ ನೇಜಿ ನೆಟ್ಟರು. ಈ ಮಧ್ಯೆ ಕೆಸರುಗದ್ದೆಯಲ್ಲಿ ವಿವಿಧ ಮನರಂಜನಾ ಆಟಗಳನ್ನು ಆಡಿಸಲಾಯಿತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸ್ಪಂದನಾ ಸ್ತ್ರೀ ಸಂಘಟನೆಯ ಅಧ್ಯಕ್ಷರಾದ ಜೆಸಿಂತಾ ಡಿ ಕುನ್ಹಾ ರವರು ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ಕಥೊಲಿಕ್ ಸಭಾ ಘಟಕದ ಖಜಾಂಚಿ ಫೆಲಿಕ್ಸ್ ಡಿ ಸೋಜಾ ರವರು ಕಾರ್ಯಕ್ರಮ ನಿರೂಪಿಸಿದರು.


















