Recognised as the No. 1 Bank among Public and Private Sector Banks for loan disbursements under the scheme


ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ಪೈಕಿ ಸಾಲ ವಿತರಣೆಯಲ್ಲಿ ನಂ. 1 ಸ್ಥಾನ ಪಡೆದಿರುವುದಕ್ಕಾಗಿ ಗುರುತಿಸಲ್ಪಟ್ಟಿದೆ.
ಮಂಗಳೂರು, 23 ನವೆಂಬರ್ 2026: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್), ಭಾರತ ಸರ್ಕಾರದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯಡಿ ಸಾಲ ವಿತರಣೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳ ಪೈಕಿ ನಂ. 1 ಸ್ಥಾನವನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಸ್ವನಿಧಿ ಸಮ್ಮಾನ್ ಪ್ರಶಸ್ತಿ 2026ನ್ನು ತನ್ನದಾಗಿಸಿಕೊಂಡಿದೆ. ದೇಶದಾದ್ಯಂತ ಬೀದಿ ವ್ಯಾಪಾರಿಗಳಿಗೆ ಔಪಚಾರಿಕ ಸಾಲ ಸೌಲಭ್ಯ ಒದಗಿಸುವ ಮೂಲಕ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಬ್ಯಾಂಕ್ ನಿರಂತರವಾಗಿ ಕೈಗೊಂಡಿರುವ ಪ್ರಯತ್ನಗಳಿಗೆ ಈ ಮಾನ್ಯತೆ ಸಾಕ್ಷಿಯಾಗಿದೆ.
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಾನ್ಯ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ತೋಖನ್ ಸಾಹು, ಸಚಿವಾಲಯದ ಕಾರ್ಯದರ್ಶಿ ಶ್ರೀ ಸತೇಂದ್ರ ಸಿಂಗ್ ಹಾಗೂ ಪಿಎಂ ಸ್ವನಿಧಿ ಮಿಷನ್ ನಿರ್ದೇಶಕಿ ಶ್ರೀಮತಿ ಇಶಾ ಕಾಲಿಯಾ ಉಪಸ್ಥಿತರಿದ್ದರು. ಬ್ಯಾಂಕ್ ಆಫ್ ಬರೋಡಾ ಪರವಾಗಿ ಸರ್ಕಾರಿ ಯೋಜನೆಗಳು ಮತ್ತು ಸಹ-ಸಾಲ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ರಾಜ್ ಕುಮಾರ್ ಗೋಯಲ್, ಎಂಎಸ್ಎಂಇ ಬ್ಯಾಂಕಿಂಗ್ ವಿಭಾಗದ ಸಹಾಯಕ ಮಹಾಪ್ರಬಂಧಕ
(ಎಜಿಎಂ) ಶ್ರೀ ರಾಕೇಶ್ ಸಿಂಗ್ ಮತ್ತು ಎಂಎಸ್ಎಂಇ ಬ್ಯಾಂಕಿಂಗ್ ವಿಭಾಗದ ಮುಖ್ಯ ವ್ಯವಸ್ಥಾಪಕ ಶ್ರೀ ನ್ಯೂಟನ್ ಕುಮಾರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಾಧನೆಯ ಕುರಿತು ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ದೇಬದತ್ತ ಚಂದ್ ಅವರು, “ಸಮಾಜದ ತಳಮಟ್ಟದ ಜನರಿಗೆ ಔಪಚಾರಿಕ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಸಬಲೀಕರಣಗೊಳಿಸುವ ಬ್ಯಾಂಕ್ ಆಫ್ ಬರೋಡಾದ ನಿರಂತರ ಬದ್ಧತೆಯನ್ನು ಈ ಗೌರವ ಪ್ರತಿಬಿಂಬಿಸುತ್ತದೆ. ಬೀದಿ ವ್ಯಾಪಾರಿಗಳು ಭಾರತದ ಉದ್ಯಮಶೀಲತಾ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅವರಿಗೆ ಸಮಯೋಚಿತವಾಗಿ ಕೈಗೆಟುಕುವ ಸಾಲ ಸೌಲಭ್ಯ ದೊರೆತರೆ ಅವರ ಜೀವನೋಪಾಯ ಮತ್ತು ವ್ಯಾಪಾರದ ಬೆಳವಣಿಗೆಗೆ ಗಣನೀಯ ಬೆಂಬಲ ದೊರೆಯುತ್ತದೆ. ಈ ಸಾಧನೆಯು ಹಣಕಾಸು ಒಳಗೊಳ್ಳುವಿಕೆಯನ್ನು ಮತ್ತಷ್ಟು ಆಳಗೊಳಿಸುವ, ಸೂಕ್ಷ್ಮ ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಹೆಚ್ಚು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.
ಪಿಎಂ ಸ್ವನಿಧಿ ಯೋಜನೆಯಲ್ಲಿ ಭಾಗವಹಿಸುವ ಮೂಲಕ ಬ್ಯಾಂಕ್ ಆಫ್ ಬರೋಡಾ ಬೀದಿ ವ್ಯಾಪಾರಿಗಳಿಗೆ ಯಾವುದೇ ಭದ್ರತೆ/ಜಾಮೀನು ಇಲ್ಲದ ಕಾರ್ಯನಿರತ ಬಂಡವಾಳ ಸಾಲಗಳನ್ನು ಒದಗಿಸುತ್ತಿದೆ. ಇದರಿಂದ ಅವರು ತಮ್ಮ ವ್ಯಾಪಾರವನ್ನು ಮುಂದುವರಿಸಲು ಮತ್ತು ವಿಸ್ತರಿಸಲು ಸಾಧ್ಯವಾಗುವುದರ ಜೊತೆಗೆ ಔಪಚಾರಿಕ ಸಾಲ ಇತಿಹಾಸವನ್ನೂ ನಿರ್ಮಿಸಿಕೊಳ್ಳಲು ಸಹಾಯವಾಗುತ್ತದೆ. ಸಮಗ್ರ ಆರ್ಥಿಕ ಬೆಳವಣಿಗೆ ಮತ್ತು ತಳಮಟ್ಟದ ಉದ್ಯಮಶೀಲತೆಯನ್ನು ಬಲಪಡಿಸುವ ಭಾರತ ಸರ್ಕಾರದ ದೃಷ್ಟಿಕೋನಕ್ಕೆ ಬೆಂಬಲ ನೀಡಲು ಬ್ಯಾಂಕ್ ಬದ್ಧವಾಗಿದೆ.
Recognised as the No. 1 Bank among Public and Private Sector Banks for loan disbursements under the scheme
Mangalore, 23 November 2026: Bank of Baroda (Bank), one of India’s leading public sector banks, has been conferred the Svanidhi Samman Award 2026 for securing the No. 1 position among Public and Private Sector Banks in loan disbursements under the Government of India’s Pradhan Mantri Street Vendor’s AtmaNirbhar Nidhi (PM SVANidhi) Scheme. The recognition highlights the Bank’s continued efforts towards advancing financial inclusion and facilitating access to formal credit for street vendors across the country.
The award was presented by Shri Manohar Lal, Hon’ble Minister of Housing and Urban Affairs, Government of India, in the presence of Shri Tokhan Sahu, Hon’ble Minister of State, MoHUA; Shri Satendra Singh, Secretary, MoHUA; and Smt. Isha Kalia, Mission Director, PM SVANidhi. The award was received on behalf of Bank of Baroda by Shri Raj Kumar Goel, General Manager – Government Schemes & Co-Lending; Shri Rakesh Singh, AGM – MSME Banking; and Shri Newton Kumar, Chief Manager – MSME Banking.
Commenting on the achievement, Shri Debadatta Chand, Managing Director & CEO, Bank of Baroda, said, “This recognition reflects Bank of Baroda’s continued commitment to extending formal banking services to the grassroots and empowering underserved segments of the economy. Street vendors play an important role in India’s entrepreneurial ecosystem, and timely access to affordable credit can significantly support their livelihoods and growth. This achievement further strengthens our resolve to deepen financial inclusion, promote micro-entrepreneurship and contribute to a more self-reliant India.”
Through its participation in the PM SVANidhi Scheme, Bank of Baroda continues to facilitate collateral free working capital loans for street vendors, enabling them to sustain and expand their businesses while building a formal credit history. The Bank remains committed to supporting the Government of India’s vision of inclusive economic growth and strengthening grassroots entrepreneurship.
***
About Bank of Baroda
Founded on 20th July, 1908 by Sir Maharaja Sayajirao Gaekwad III, Bank of Baroda is one of the leading commercial banks in India. At 63.97% stake, it is majorly owned by the Government of India. The Bank serves its global customer base of over ~180 million through around 65,000 touch points spread across 15 countries in five continents and through its various digital banking platforms, which provide all banking products and services in a seamless and hassle-free manner. The Bank’s vision matches the aspirations of its diverse clientele base and seeks to instill a sense of trust and security in all their dealings with the Bank.
- Visit us at https://bankofbaroda.bank.in/
- Facebook https://www.facebook.com/bankofbaroda/

