

ಉಡುಪಿ; ಪೂರ್ಣಪ್ರಜ್ಞ (ಸ್ವಾಯತ್ತ)ಕಾಲೇಜು, ಉಡುಪಿ ಇಲ್ಲಿ ಮೇ 20 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಐಬಿಎಂ, ಎಕ್ಸೆಂಚರ್, ಅಮೆಜಾನ್, ವಿನ್ ಮನ್, ಮಣಿಪಾಲ್ ಟೆಕ್ನಾಲಜಿಸ್, ವಿನಸ್, ಯಝಕಿ, ಪೋಡ್ ಮಾರ್ಕ್ ದಿಯಾ ಸಿಸ್ಟಮ್ಸ್, ಯಝಕಿ, ಎಚ್. ಡಿ. ಎಫ್. ಸಿ, ಎಕ್ಸಿಸ್ ಬ್ಯಾಂಕ್, ರೈನೆಕ್ಸ್ ಟೆಕ್ನಾಲಜೀಸ್, ಗ್ರೋ ಸ್ಫೈಯರ್, ಕೋಜೆಂಟ್ ಮುಂತಾದ 25ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಪ್ರಸ್ತುತ ಅಂತಿಮ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡು, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮಾ ಪದವೀಧರರಿಗೆ ವಿವಿಧ ಹುದ್ದೆಗಳಿಗೆ ಹುದ್ದೆಗಳಿಗೆ ಉದ್ಯೋಗದ ಆಯ್ಕೆಗೆ ಅವಕಾಶ ಇದೆ. ಸ್ಥಳದಲ್ಲಿಯೇ ನೋಂದಾವಣೆ ಲಭ್ಯವಿದ್ದು ಎಲ್ಲಾ ಅಭ್ಯರ್ಥಿಗಳಿಗೂ ಮುಕ್ತ ಅವಕಾಶವಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Phone: 08202521286 Mob: 9880922626

