

ಕೋಲಾರ: ಮಕ್ಕಳ ಶೈಕ್ಷಣಿಕ ಬೆಳವಣಿಗೆ ಪೋಷಕರೊಂದಿಗೆ ಶಿಕ್ಷಕರ ಭಾಂಧವ್ಯ ಮುಖ್ಯವಾಗಿದೆ, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು ಪೆÇೀಷಕರು ಕಾಲೇಜಿನ ಉಪನ್ಯಾಸಕರೊಂದಿಗೆ ಸಂಪರ್ಕದಲ್ಲಿರಬೇಕು. ತಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರಿಗೆ ಪೆÇೀಷಕರು ಸಹಕಾರ ನೀಡುವಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪರಶುರಾಮ್ ಎನ್ ಉಂಕಿ ರವರು ಮನವಿ ಮಾಡಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮೊದಲ ಪೋಷಕರ ಸಭೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ಉತ್ತಮ ಅನುಭವಿ, ಗುಣಮಟ್ಟದ ಉಪನ್ಯಾಸಕರಿದ್ದು, ಬೋಧನೆಗಿಂತ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ. ಮಾಸಿಕ ಪರೀಕ್ಷೆಗಳು, ಮಧ್ಯಂತರ ಪರೀಕ್ಷೆಗಳ ನಂತರ ಪೋಷಕರ ಸಭೆಯನ್ನು ನಡೆಸಲಾಗುವುದು ಪೋಷಕರು ಮಕ್ಕಳ ಪ್ರಗತಿಯ ಬಗ್ಗೆ ಚರ್ಚಿಸಲು ತಪ್ಪದೇ ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡುವಂತೆ ಕೋರಿದರು.
ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ಸಿಇಟಿ ಹಾಗೂ ನೀಟ್, ಕೌಶಲ್ಯ ಪರೀಕ್ಷೆಗಳ ಬಗ್ಗೆ ವಿಶೇಷ ತರಗತಿಗಳು ನಡೆಯುತಿವೆ ಹಾಗೂ ಪ್ರತಿ ಶನಿವಾರ ಒಂದು ಗಂಟೆಕಾಲ ಕಾಲೇಜಿನ ಮಕ್ಕಳೊಂದಿಗೆ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು ಸಂವಾದ ಇತರೆ ಚಟುವಟಿಕೆಗಳನ್ನು ನಡೆಸಲಾಗುತಿದೆ ಎಂದು ಪೋಷಕರಿಗೆ ಮಾಹಿತಿ ನೀಡಿದರು.
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ದಿನಕ್ಕೆ ಒಂದು ಗಂಟೆ ಸಮಯವಾದರು ಮೀಸಲಿಡಿ, ಮಕ್ಕಳು ಕಾಲೇಜಿಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಇತರೆ ವ್ಯಸನಗಳಿಂದ ಮಕ್ಕಳನ್ನು ದೂರವಿಡಿ ಎಂದು ಪೋಷಕರಿಗೆ ತಿಳಿಸಿದರು. ನಿಮ್ಮ ಮಕ್ಕಳ ಶೈಕ್ಷಣಿಕ ಸಾಧನೆಗಳು, ಸಾಮಥ್ರ್ಯಗಳು ಮತ್ತು ಸುಧಾರಣೆಯ ಬಗ್ಗೆ ಮಾಹಿತಿ ಬೇಕಾದರೇ ತರಗತಿ ಶಿಕ್ಷಕರ ಮೊಬೈಲ್ ಸಂಖ್ಯೆಗೆ ಕರೆಮಾಡಿ ಅಥವಾ ನೇರವಾಗಿ ಕಾಲೇಜಿಗೆ ಬಂದು ಪಡೆಯಬಹುದು ಎಂದರು. ಉಪನ್ಯಾಸಕರಾದ ಪಾರ್ವತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರು, ಶಿಕ್ಷಕರು ಮತ್ತು ಮಕ್ಕಳು ತ್ರಿಕೋನ ಇದ್ದಂತೆ, ಮಕ್ಕಳ ಪ್ರಗತಿಗೆ ಮನೆಯಲ್ಲಿ ಪೋಷಕರು ಆರೋಗ್ಯಕರವಾದ ವಾತವರಣವನ್ನು ನಿರ್ಮಾಣಮಾಡಿ, ಮಕ್ಕಳು ಪಠ್ಯ ಪುಸ್ತಕಗನ್ನು ಹೆಚ್ಚಾಗಿ ಓದುವ ಹವ್ಯಾಸವನ್ನು ಬೆಳಸಿ, ಅವರು ಓದುವ ಸಮಯದಲ್ಲಿ ನೀವೂ ಟಿವಿ. ಮೊಬೈಲ್ ಅನ್ನು ಹೆಚ್ಚಾಗಿ ಬಳಸಬೇಡಿ, ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುವಂತೆ ಮಾಡಿ ಎಂದು ಕಿವಿಮಾತು ಹೇಳಿದರು. ನಿಮ್ಮ ಮಕ್ಕಳು ಕಾಲೇಜಿಗೆ ಸರಿಯಾಗಿ ಬರುತ್ತಿದ್ದಾರೆ ಇಲ್ಲವೂ ಎಂದು ಆಗಾಗೇ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ, ನಿಮ್ಮ ಮಕ್ಕಳ ಶೈಕ್ಷಣಿಕ ಜವಬ್ದಾರಿ ನಮ್ಮ ಮೇಲಿದೆ ಇದಕ್ಕೆ ಪೋಷಕರ ಸಹಕಾರ ತುಂಬಾ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಪೋಷಕರು ತಮ್ಮ ಸಲಹೆ ಸೂಚನೆಯನ್ನು ನೀಡಿದರು. ನಂತರ ಮಕ್ಕಳ ತರಗತಿಗಳಿಗೆ ಭೇಟಿ ನೀಡಿ ಹಾಜರಾತಿ ಹಾಗೂ ಮಾಸಿಕ ಪರೀಕ್ಷೆಯ ಫಲಿತಾಂಶ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಉಪನ್ಯಾಸಕರಾದ ರುಕ್ಮಣಿ, ಪದ್ಮ, ಕೃಷ್ಣಪ್ಪ, ಆನಂದ್ ಕುಮಾರ್, ಲತಾ, ಶ್ರೀನಾಥ್, ಗೋವಿಂದ, ಭಾನು, ತಜಮುಲ್ ಅಹಮದ್, ಶೋಭ, ರೂಪ, ಭಾರತಿ, ಶಾಹನಾಜ್, ನೇತ್ರಾವತಿ, ಅಶ್ವಿನಿ, ಸೌಂದರ್ಯ, ಅನಸೂಯ ಪೋಷಕರು ಉಪಸ್ಥಿತರಿದ್ದರು.

