

ಪಡುಕೋಣೆ; ದಿನಾಂಕ 3 /8/ 25 ಆದಿತ್ಯವಾರ ಬೆಳಿಗ್ಗೆ ಪಡುಕೋಣೆ ಚರ್ಚ್ ವಠಾರದಲ್ಲಿ ಪಡುಕೋಣೆ ಕಥೋಲಿಕ್ ಸಭಾದಿಂದ ಆಯೋಜಿಸಲ್ಪಟ್ಟ ಉಚಿತ ರಕ್ತ ಪರಿಕ್ಷೆ ಮತ್ತು ಥೈರಾಯ್ಡ್ ಪರೀಕ್ಷಾ ಶಿಬಿರ ನಡೆಯಿತು. ಈ ಶಿಬಿರಕ್ಕೆ ಬಯೋಲಿನ್ ಸಂಸ್ಥೆ ಕುಂದಾಪುರ ಮತ್ತು ರೋಟರಿ ಕುಂದಾಪುರ, ಮತ್ತು ಚರ್ಚಿನ ಆರೋಗ್ಯ ಆಯೋಗ,ಸ್ತ್ರೀ ಸಂಘಟನೆ, ವಿನ್ಸೆಂಟ್ ಪಾಲ್ ಸಭೆ ಇವರು ಸಹಕಾರ ನೀಡಿದರು. ಇದರ ಉದ್ಘಾಟನೆಯನ್ನು ಪಡುಕೋಣೆ ಚರ್ಚಿನ ಧರ್ಮ ಗುರುಗಳಾದ ಫಾದರ್ ಫ್ರಾನ್ಸಿಸ್ ಕರ್ನೆಲಿಯೋ ಮಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ರೋಟರಿ ಕುಂದಾಪುರ ಇದರ ಅಧ್ಯಕ್ಷರಾದ ಗುರುರಾಜ್ ಕೊತ್ವಾಲ್ ಹಾಗೂ ಬಯೊಲಿನ್ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವ ಸೋಮನಾಥ್ ರವರು ಹಾಜರಿದ್ದರು. ಸ್ತ್ರೀ ಸಂಘಟನೆ ಅಧ್ಯಕ್ಷರಾದ ಕವಿತಾ ವಿನ್ಸೆಂಟ್ ಪಾಲ್ ಸಂಘಟನೆಯ ವಾಲ್ಟರ್,ಚರ್ಚಿನ ಪಾಲನೆ ಮಂಡಳಿಯ ಉಪಾಧ್ಯಕ್ಷರಾದ ಕೆನಡಿ ಪಿರೇರಾ, ಕಾರ್ಯಕ್ರಮದ ಸಂಯೋಜಕರಾದ ವಿನ್ಸೆಂಟ್ ಡಿಸೋಜಾ, ಕಾನ್ವೆಂಟಿನಾ ಸುಪಿರಿಯರ್ ಸಿಸ್ಟರ್ ಪಾವನ ರವರು ವೇದಿಕೆ ಮೇಲೆ ಹಾಜರಿದ್ದರು. ಸುಮಾರು 140 ಜನರು ರಕ್ತ ಮತ್ತು ಥೈರೊಯ್ಡ್ ಪರೀಕ್ಷೆಯನ್ನು ಮಾಡಿಸಿಕೊಂಡರು
ಕಥೋಲಿಕ್ ಸಭಾ ಇದರ ಅಧ್ಯಕ್ಷರಾದ ನೋರ್ಬರ್ಟ್ ಡಿ ಅಲ್ಮೇಡ ಸ್ವಾಗತಿಸಿದರು. ವಿನಯ್ ಅಲ್ಮೇಡ ರವರು ನಿರೂಪಿಸಿದರು,ಆರೋಗ್ಯ ಆಯೋಗದ ಸಂಚಾಲಕರಾದ ಶಾಂತಿ ಅಲ್ಮೆಡ ಧನ್ಯವಾದ ನೀಡಿದರು.

















