

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ ಮೋಸ್ಚೇನಿ ಆರ್ಟ್ ಫೆಸ್ಟ್ 2026ರ ಅಂಗವಾಗಿ ಮಿರಾಡಾ ವಿಭಿನ್ನವಾಗಿ ನೋಡಲು ಕಲಿಕೆ ಎಂಬ ಶೀರ್ಷಿಕೆಯಡಿ ವಿಶೇಷ ಕಲಾ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಯನ್ನು ಸಂತ ಅಲೋಶಿಯಸ್ ಗೊನ್ಜಾಗ ಸಭಾಂಗಣದಲ್ಲಿ ನಡೆಸಲಾಯಿತು ಈ ಕಾರ್ಯಾಗಾರವನ್ನು ಧರ್ಮಗುರು, ಕಲಾಕಾರರು ಹಾಗೂ ಸಮಕಾಲೀನ ಶಿಲ್ಪಿಯೂ ಆಗಿರುವ ವಂ. ಫಾ. ಆರ್. ಎಸ್ ಪ್ರದೀಪ್ ಎಸ್.ಜೆ ಅವರು ನಡೆಸಿಕೊಟ್ಟರು. ಮಕ್ಕಳಲ್ಲಿ ವಿಶಾಲವಾದ ದೃಷ್ಟಿಕೋನ ಬೆಳೆಸಲು ಮತ್ತು ಕಲೆಯನ್ನು ಸಾಂಪ್ರದಾಯಿಕ ಮೇರೆಯನ್ನು ದಾಟಿ ಅರ್ಥೈಸಲು ಸದರಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಂ. ಫಾ ಪ್ರದೀಪ್ ಆರ್.ಎಸ್ ಅವರು ತಮ್ಮ ಕಲಾ ಪಯಣದ ಅನುಭವವನ್ನು ಹ೦ಚಿಕೊ೦ಡು ಸಂವಾದ ನಡೆಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಮಕ್ಕಳೊಂದಿಗೆ ನಿಜಜೀವನದಲ್ಲಿ ಕಲೆಯನ್ನು ಪ್ರಾಯೋಗಿಕ ನೆಲೆಯಲ್ಲಿ ನೋಡುವ, ವೀಕ್ಷಿಸುವ ಮತ್ತು ವ್ಯಾಖ್ಯಾನಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದರು .ಕಲೆ ಕೇವಲ ಒಂದು ತಂತ್ರವಲ್ಲ ಸಂವೇದನೆಯನ್ನು ಅರಿವನ್ನು ಮತ್ತು ಕಾಲ್ಪನಿಕ ಶಕ್ತಿಯನ್ನು ಬೆಳೆಸುವ ಒಂದು ಸಾಧನ ಎಂದು ವಿವರಿಸಿದರು .ಹಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಅಪೂರ್ವವಾದ ಅನುಭವವನ್ನು ಗಳಿಸಿದರು .ಮಕ್ಕಳಲ್ಲಿ ಸೃಜನಶೀಲತೆಯನ್ನು ಮತ್ತು ಹೊಸ ದೃಷ್ಟಿಕೋನವನ್ನು ಬೆಳೆಸುವಲ್ಲಿ ಇದು ಪೂರಕವಾಗಿತ್ತು.






















