MCC Bank Celebrates Deepavali with a Message of Unity, Compassion and Togetherness


ಎಂಸಿಸಿ ಬ್ಯಾಂಕಿನ ವತಿಯಿಂದ ದೀಪಾವಳಿ ಹಬ್ಬವನ್ನು 2026ರ ನವೆಂಬರ್ 9ರಂದು ಬ್ಯಾಂಕಿನ ಆಡಳಿತ ಕಚೇರಿಯ ಆವರಣದಲ್ಲಿ ಅತ್ಯಂತ ಸಂಭ್ರಮ, ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಆಡಳಿತ ಕಚೇರಿಯ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು. ಬ್ಯಾಂಕಿನ ಆಡಳಿತ ಮಂಡಳಿಯ ನೇತೃತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಹಕರು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದರು. ಈ ಆಚರಣೆಯು ಏಕತೆ, ಸಾಂಸ್ಕೃತಿಕ ಸಾಮರಸ್ಯ, ಪರಸ್ಪರ ಬಾಂಧವ್ಯ ಮತ್ತು ಸೌಹಾರ್ದತೆಯ ಪ್ರತೀಕವಾಗಿ ಮೂಡಿಬಂದಿತು.
ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆಯ ಶ್ರೀ ಕ್ಷೇತ್ರ ಕೆಮಾರು ಮಠದ ಶ್ರೀ ಸಾಂದೀಪನಿ ಸಾಧನಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗಣ್ಯ ಅತಿಥಿಗಳಾಗಿ ಎಸ್.ಎಸ್. ನಾಯಕ್ ಅಸೋಸಿಯೇಟ್ಸ್ನ ಸಂಸ್ಥಾಪಕರಾದ ಸಿಎ ಶ್ರೀ ಎಸ್.ಎಸ್. ನಾಯಕ್, ತುಳುನಾಡಿನ ಮಾಣಿಕ್ಯ ಎಂದೇ ಖ್ಯಾತರಾದ ತುಳು ಚಿತ್ರರಂಗದ ಹೆಸರಾಂತ ನಟ ಶ್ರೀ ಅರವಿಂದ ಬೋಳಾರ್, ಮಂಗಳೂರಿನ ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ಶ್ರೀ ವಾಲ್ಟರ್ ನಂದಳಿಕೆ, ಸಮಾಜ ಸೇವಕರಾದ ಶ್ರೀ ಮೈಕಲ್ ಡಿಸೋಜಾ ಹಾಗೂ ಮಂಗಳೂರಿನ ರೋಹನ್ ಕಾರ್ಪೊರೇಶನ್ನ ಆಡಳಿತ ನಿರ್ದೇಶಕರಾದ ಶ್ರೀ ರೋಹನ್ ಮೊಂತೆರೊ ಅವರು ಉಪಸ್ಥಿತರಿದ್ದರು.
ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಹರಡುವ ಹಾಗೂ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಸಂಕೇತವಾಗಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸ್ವಾಗತ ಭಾಷಣ ಮಾಡಿದ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಹಾಗೂ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ತಮ್ಮೊಂದಿಗೆ ದೀಪಾವಳಿ ಸಂಭ್ರಮವನ್ನು ಹಂಚಿಕೊಳ್ಳಲು ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ದೀಪಾವಳಿ ಎಂದರೆ ಕೇವಲ ಮನೆ ಹಾಗೂ ಪರಿಸರವನ್ನು ದೀಪಗಳಿಂದ ಬೆಳಗಿಸುವ ಹಬ್ಬವಲ್ಲ; ಅದು ಸಂಬಂಧಗಳನ್ನು ನವೀಕರಿಸುವ, ಕೃತಜ್ಞತೆಯನ್ನು ವ್ಯಕ್ತಪಡಿಸುವ ಹಾಗೂ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಪವಿತ್ರ ಸಂದರ್ಭವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಬ್ಯಾಂಕಿನ ಪ್ರಗತಿಯಲ್ಲಿ ಸಿಬ್ಬಂದಿಯ ಸಮರ್ಪಣೆ, ಪರಿಶ್ರಮ ಮತ್ತು ಬದ್ಧತೆಯ ಮಹತ್ವವನ್ನು ಶ್ಲಾಘಿಸಿದ ಅವರು, ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ನಿರಂತರ ವಿಶ್ವಾಸ ಮತ್ತು ಬೆಂಬಲವೇ ಬ್ಯಾಂಕಿನ ಬೆಳವಣಿಗೆಯ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿಸಿದರು.
ಕಳೆದ ವರ್ಷದಿಂದ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ಏಕಕಾಲದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಆರಂಭಿಸಲಾಗಿದ್ದು, ಈ ವರ್ಷವೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಎಲ್ಲಾ ಶಾಖೆಗಳಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಎಲ್ಲಾ ಶಾಖೆಗಳು ತಮ್ಮ ತಮ್ಮ ಗ್ರಾಹಕರು ಹಾಗೂ ಹಿತೈಷಿಗಳೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದರೆ, ಮಂಗಳೂರಿನ ಐದು ನಗರ ಶಾಖೆಗಳು ಒಟ್ಟಾಗಿ ಆಡಳಿತ ಕಚೇರಿಯ ಆವರಣದಲ್ಲಿ ಗ್ರಾಹಕರು, ಹಿತೈಷಿಗಳು ಹಾಗೂ ಗಣ್ಯರೊಂದಿಗೆ ದೀಪಾವಳಿ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಎಂಸಿಸಿ ಬ್ಯಾಂಕಿನ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತಿದೆ ಎಂದು ತಿಳಿಸಿದರು. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾತನಾಡಿದ ಅವರು, ಹಬ್ಬಗಳ ಹಿಂದಿರುವ ನೈಜ ಮೌಲ್ಯಗಳು ಮತ್ತು ಅವುಗಳ ಮಹತ್ವವನ್ನು ಇಂದಿನ ಯುವ ಪೀಳಿಗೆ ಕೆಲವೊಮ್ಮೆ ಮರೆಯುತ್ತಿರುವುದು ವಿಷಾದನೀಯ ಎಂದರು. ವಿಶೇಷವಾಗಿ ಸಮಾಜದ ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರೊಂದಿಗೆ ವ್ಯವಹರಿಸುವಾಗ ಕರುಣೆ, ಮಾನವೀಯತೆ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ನೈಜ ಜೀವನದ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಇತರರ ಕಷ್ಟಗಳಿಗೆ ಸ್ಪಂದಿಸುವಾಗ ಪ್ರಾಮಾಣಿಕತೆ, ಧೈರ್ಯ ಮತ್ತು ಮಾನವೀಯ ಸ್ಪರ್ಶ ಅತ್ಯಂತ ಅಗತ್ಯವೆಂದು ತಿಳಿಸಿದರು. ಹಬ್ಬಗಳ ನೈಜ ಸಾರ್ಥಕತೆ ಕೇವಲ ಆಚರಣೆಗಳಲ್ಲಿ ಅಲ್ಲ, ಬದಲಾಗಿ ಸಹಜೀವಿಗಳ ಮೇಲಿನ ಪ್ರೀತಿ, ಕಾಳಜಿ ಮತ್ತು ಸಹಾಯ ಮಾಡುವ ಮನೋಭಾವದಲ್ಲಿ ಅಡಗಿದೆ ಎಂಬ ಸಂದೇಶವನ್ನು ನೀಡಿದರು.
ತಮ್ಮ ದೀಪಾವಳಿ ಸಂದೇಶದಲ್ಲಿ ಸಿಎ ಶ್ರೀ ಎಸ್.ಎಸ್. ನಾಯಕ್ ಅವರು ಬ್ಯಾಂಕಿನ ಗ್ರಾಹಕರು, ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ನೈತಿಕ ಬ್ಯಾಂಕಿಂಗ್, ಸಮಾಜಮುಖಿ ಸೇವೆ ಹಾಗೂ ಆರ್ಥಿಕ ಪ್ರಾಮಾಣಿಕತೆಗೆ ಎಂಸಿಸಿ ಬ್ಯಾಂಕ್ ನೀಡುತ್ತಿರುವ ಆದ್ಯತೆಯನ್ನು ಅವರು ಶ್ಲಾಘಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು ಬ್ಯಾಂಕಿನ ನಿರಂತರ ಬೆಳವಣಿಗೆ ಮತ್ತು ಪ್ರಗತಿಗಾಗಿ ಪ್ರಾಮಾಣಿಕವಾಗಿ ಹಾಗೂ ದೃಢಸಂಕಲ್ಪದಿಂದ ಶ್ರಮಿಸುತ್ತಿರುವುದನ್ನು ಪ್ರಶಂಸಿಸಿದರು. ಮಂಗಳೂರಿನ ಜನಜೀವನದಲ್ಲಿ ಎಂಸಿಸಿ ಬ್ಯಾಂಕ್ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ದು, ಜನರ ವಿಶ್ವಾಸಾರ್ಹ ಬ್ಯಾಂಕಿಂಗ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅಸಾಧಾರಣವಾದ ಹೆಚ್ಚಿನ ಬಡ್ಡಿದರಗಳ ಆಮಿಷಗಳಿಗೆ ಸಾರ್ವಜನಿಕರು ಮರುಳಾಗದೆ, ತಮ್ಮ ಹಣಕಾಸಿನ ನಿರ್ಧಾರಗಳಲ್ಲಿ ವಿವೇಚನೆ ಮತ್ತು ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರಬೇಕು ಎಂದು ಎಚ್ಚರಿಸಿದರು.
ತುಳುನಾಡಿನ ಮಾಣಿಕ್ಯ ಎಂದೇ ಖ್ಯಾತರಾದ ಹೆಸರಾಂತ ತುಳು ಚಲನಚಿತ್ರ ನಟ ಶ್ರೀ ಅರವಿಂದ ಬೋಳಾರ್ ಅವರು ಮಾತನಾಡಿ, ಎಂಸಿಸಿ ಬ್ಯಾಂಕಿನ ಶಕ್ತಿ ಕೇವಲ ಅದು ಒದಗಿಸುವ ಹಣಕಾಸು ಸೇವೆಗಳಲ್ಲಿ ಮಾತ್ರವಲ್ಲ, ಗ್ರಾಹಕರಿಗೆ ನೀಡುವ ಆತ್ಮೀಯತೆ, ವೈಯಕ್ತಿಕ ಕಾಳಜಿ ಮತ್ತು ಸೇವೆಯಿಂದ ದೊರೆಯುವ ತೃಪ್ತಿಯಲ್ಲಿಯೂ ಅಡಗಿದೆ ಎಂದು ಅಭಿಪ್ರಾಯಪಟ್ಟರು. ಬ್ಯಾಂಕಿನ ಮಾನವೀಯ ಸೇವಾ ಮನೋಭಾವವೇ ಅದರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ ಅವರು, ಬ್ಯಾಂಕ್ ಮತ್ತು ಸಮಾಜದ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಇಂತಹ ದೀಪಾವಳಿ ಆಚರಣೆಯು ವಿಶಿಷ್ಟವಾದ ಪ್ರಯತ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕರಾದ ಶ್ರೀ ವಾಲ್ಟರ್ ನಂದಳಿಕೆ ಅವರು ಮಾತನಾಡಿ, ವಿವಿಧ ಸಮುದಾಯಗಳ ಜನರ ಸೇವೆ ಸಲ್ಲಿಸುವ ಸಂಸ್ಥೆಯಾಗಿ ಎಂಸಿಸಿ ಬ್ಯಾಂಕ್ ರೂಪುಗೊಳ್ಳುವಲ್ಲಿ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರ ನಾಯಕತ್ವವನ್ನು ಅಭಿನಂದಿಸಿದರು. ಎಲ್ಲರನ್ನೂ ಒಳಗೊಳ್ಳುವ ಬ್ಯಾಂಕಿನ ವಿಶಾಲ ಮನೋಭಾವ ಮತ್ತು ಸರ್ವರ ಬ್ಯಾಂಕ್ ಎಂಬ ಅದರ ಗುರುತನ್ನು ದೀಪಾವಳಿ ಆಚರಣೆಯು ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದರು. ಹಬ್ಬದ ನೈಜ ಸಾರವನ್ನು ವಿವರಿಸುತ್ತಾ, ಇತರರ ಭಾವನೆಗಳಿಗೆ ಗೌರವ ನೀಡುವುದು ಮಾನವೀಯ ಮೌಲ್ಯಗಳ ಪ್ರಮುಖ ಅಭಿವ್ಯಕ್ತಿಯಾಗಿದ್ದು, ಅದರಿಂದಲೇ ನಿಜವಾದ ಸಂತೋಷ ದೊರೆಯುತ್ತದೆ ಎಂದು ತಿಳಿಸಿದರು.
ಸಮಾಜ ಸೇವಕರಾದ ಶ್ರೀ ಮೈಕಲ್ ಡಿಸೋಜಾ ಹಾಗೂ ರೋಹನ್ ಕಾರ್ಪೊರೇಶನ್ನ ಆಡಳಿತ ನಿರ್ದೇಶಕರಾದ ಶ್ರೀ ರೋಹನ್ ಮೊಂತೆರೊ ಅವರು ಸಹ ಬ್ಯಾಂಕಿನ ಈ ಉತ್ತಮ ಉಪಕ್ರಮವನ್ನು ಶ್ಲಾಘಿಸಿ, ವಿವಿಧ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಇಂತಹ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಬಾಂಧವ್ಯವನ್ನು ವೃದ್ಧಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಬ್ಯಾಂಕಿನ ಮುಂದಿನ ಬೆಳವಣಿಗೆ ಹಾಗೂ ಭವಿಷ್ಯದ ಕಾರ್ಯಯೋಜನೆಗಳಿಗೆ ಶುಭ ಹಾರೈಸಿದರು.
ಬ್ಯಾಂಕಿನ ಗ್ರಾಹಕರ ಮೂವರು ಮಕ್ಕಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಪ್ರಧಾನ ವ್ಯವಸ್ಥಾಪಕರು, ಉಪ ಪ್ರಧಾನ ವ್ಯವಸ್ಥಾಪಕರು, ಸಲಹೆಗಾರರು, ಸಿಬ್ಬಂದಿ ವರ್ಗ, ಗ್ರಾಹಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಈ ಸಂಭ್ರಮಾಚರಣೆಯು ಬ್ಯಾಂಕ್, ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ವಿಶ್ವಾಸ, ಸೇವೆ ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಪುನರುಚ್ಚರಿಸುವ ವೇದಿಕೆಯಾಯಿತು.
ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ದೀಪಾವಳಿ ಹಬ್ಬವನ್ನು ಏಕಕಾಲದಲ್ಲಿ ಆಚರಿಸುವ ಮೂಲಕ ಸಾಮೂಹಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ ನಡೆದ ಈ ಆಚರಣೆಗಳು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ಏಕತೆ, ಒಗ್ಗಟ್ಟು ಮತ್ತು ಸಂಭ್ರಮದ ವಾತಾವರಣವನ್ನು ಮೂಡಿಸಿದವು.
ಮೂರು ಸದಸ್ಯರನ್ನೊಳಗೊಂಡ ಸಂಗೀತ ತಂಡವಾದ ಬ್ಯಾಂಡ್ ಎಕ್ಸ್ಟಸಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಶರ್ಮಿಳಾ ಅಮೀನ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ರೆಮೋನಾ ಪಿರೇರಾ ಮತ್ತು ತಂಡದವರ ಆಕರ್ಷಕ ನೃತ್ಯ ಪ್ರದರ್ಶನ ಹಾಗೂ ಬ್ಯಾಂಡ್ ಎಕ್ಸ್ಟಸಿ ತಂಡದ ಸಂಗೀತ ಕಾರ್ಯಕ್ರಮವು ನೆರೆದಿದ್ದವರನ್ನು ರಂಜಿಸಿತು. ಶ್ರೀಮತಿ ಶರ್ಮಿಳಾ ಅಮೀನ್ ಅವರು ವಿವಿಧ ಮನೊರಂಜನಾ ಆಟಗಳನ್ನು ಆಯೋಜಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತುಂಬಿದರು. ಆಟಗಳಲ್ಲಿ ವಿಜೇತರಾದವರಿಗೆ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಬಹುಮಾನ ವಿತರಿಸಿದರು.
MCC Bank Celebrates Deepavali with a Message of Unity, Compassion and Togetherness

MCC Bank celebrated Deepavali 2026 with great enthusiasm and festive spirit on 9th November 2026 at the Bank’s Administrative Office Campus in Mangaluru. The premises were adorned with festive lights, creating a warm and welcoming atmosphere as members of the Bank family came together to mark the festival. Organised by the Bank’s management, the celebration brought together distinguished guests, members of the Board, staff, customers and their families in an occasion that reflected the spirit of togetherness, cultural harmony and shared goodwill.
The programme was presided over by Sahakara Ratna Shri Anil Lobo, Chairman of MCC Bank. His Holiness Shri Shri Shri Ishavitaldas Swamiji of Shri Sandeepani Sadhanasharam, Shri Kshetra Kemaru Matt, Moodbidri, graced the occasion and blessed the gathering. The distinguished guests included CA S.S. Nayak, Founder of S.S. Nayak Associates; renowned Tulu film actor Mr Aravind Bolar, popularly known as ‘Tulunada Maanikya’; Mr Walter Nandalike, Managing Director of Daijiworld Media Private Ltd., Mangaluru; philanthropist Mr Michael D’Souza; and Mr Rohan Monteiro, Managing Director of Rohan Corporation, Mangaluru.
The celebrations commenced with the traditional lighting of the lamp, symbolising the triumph of light over darkness and the victory of good over evil. His Holiness Shri Shri Shri Ishavitaldas Swamiji, along with the dignitaries on the dais, lit the ceremonial lamp and formally inaugurated the programme.
In his welcome address, Chairman Sahakara Ratna Shri Anil Lobo expressed his gratitude to the dignitaries and all those who had gathered to celebrate the occasion with the Bank. He observed that Deepavali signifies more than the illumination of homes and surroundings; it is also an occasion to renew relationships, express gratitude and strengthen the bonds that unite people. He appreciated the dedication and commitment of the Bank’s employees and acknowledged the continued trust and support extended by its customers, which remain the foundation of the Bank’s progress.
He further stated that the Bank had initiated the practice of celebrating Deepavali across all its branches last year, and the tradition was continued this year as well, with all branches across Dakshina Kannada and Udupi districts celebrating the festival simultaneously. He highlighted that, while all branches were celebrating Deepavali with their respective customers and well-wishers, the five city branches had come together to celebrate the occasion at the Administrative Office campus, providing an opportunity to share the festive spirit with customers, well-wishers and other guests.
Blessing the gathering, His Holiness Shri Shri Shri Ishavitaldas Swamiji expressed his happiness at being part of the celebration at MCC Bank. Reflecting on changes in society, he observed that the deeper values and meaning associated with festivals can sometimes be overlooked by the younger generation. He urged everyone to cultivate compassion and humanity, particularly in their dealings with underprivileged and vulnerable people. Drawing on real-life examples, he highlighted the importance of sincerity, courage and a human touch when responding to the difficulties faced by others. His message reminded the gathering that the true spirit of a festival is best reflected through kindness and concern for fellow human beings.
Delivering his address, CA S.S. Nayak extended his Deepavali greetings to the customers, staff members and their families. He appreciated MCC Bank’s commitment to ethical banking, community service and financial integrity. He also commended Chairman Shri Anil Lobo for his sincere and determined efforts in steering the Bank towards sustained growth and progress. Observing that MCC Bank has earned a place in the lives of people across Mangaluru and become a familiar and trusted banking institution, he said that this recognition itself reflected the Bank’s standing in the community. He further cautioned the public against being carried away by promises of unusually high interest rates, stressing the importance of prudence and realistic expectations in financial decisions.
Renowned Tulu film actor Mr Aravind Bolar, popularly known as ‘Tulunada Maanikya’, observed that MCC Bank’s strength lies not merely in the financial services it offers, but also in the sense of satisfaction and personal care it extends to its customers. He remarked that the Bank’s humanitarian approach to service has contributed to its success and described the Deepavali celebration as a distinctive initiative that brings the Bank and the wider community together.
Mr. Walter Nandalike, Managing Director of Daijiworld Media Private Ltd., congratulated Chairman Shri Anil Lobo for guiding MCC Bank towards becoming an institution that serves people across communities. He appreciated the initiative of organising the Deepavali celebration as a reflection of the Bank’s inclusive outlook and its identity as a bank for all. Emphasising the essence of festivity, he observed that respecting the feelings of others is an important expression of human values and a source of genuine happiness.
Philanthropist Mr Michael D’Souza and Mr Rohan Monteiro, Managing Director of Rohan Corporation, also appreciated the Bank’s initiative in bringing people together through the celebration and conveyed their best wishes for the Bank’s continued growth and future endeavours.
3 children of the customers of the Bank were honoured and felicitated for their achievements in various fields.
The programme was attended by members of the Board of Directors, the General Manager, Deputy General Manager, staff members, Advisors, customers and well wishers. Their participation added to the warmth and vibrancy of the occasion. The celebration served as an opportunity to strengthen the relationship between the Bank, its employees and customers, while reaffirming the values of trust, service and togetherness that the institution seeks to uphold.
Adding to the collective spirit of the occasion, all branches of MCC Bank in Dakshina Kannada and Udupi districts also celebrated Deepavali simultaneously. The celebrations across the branches reflected a shared sense of participation and unity throughout the Bank’s operational network.
The programme commenced with a prayer by Band Ecstasy, a three-member musical band. Ms Sharmila Amin compered the programme and also proposed the vote of thanks. The cultural programme, featuring captivating dance performances by Remona Pereira and her team, along with musical performances by Band Ecstasy, enthralled the gathering. Fun games were organised by Ms Sharmila Amin, adding to the festive spirit, and the prizes were distributed to the winners by the Chairman, Sahakara Ratna Shri Anil Lobo.































































