

ಶ್ರೀನಿವಾಸಪುರ : ವಾಲ್ಮೀಕಿ ಮಹರ್ಷಿರವರ ಜ್ಞಾನವು ಸಂಪತ್ತು ಆನಂತವಾಗಿದ್ದು, ಅವರು ತಮ್ಮ ತಪಸ್ಸಿ ಫಲದಿಂದ ಭೂತ, ಭವಿಷತ್ ಕಾಲನ್ನು ಅರಿಯುತ್ತಿದ್ದರು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾಗ ಮಂಗಳವಾರ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಸಭೆಯನ್ನು ಉದ್ಗಾಟಿಸಿದರು.
ಸ್ವತಃ ವಾಲ್ಮೀಕಿ ಮಹರ್ಷಿ ಪೂರ್ವಾಶ್ರಮದಲ್ಲಿ ಸ್ವಯಂ ಕಾಡಿನಲ್ಲಿ ಕಷ್ಟಗಳನ್ನ ಅನುಭವಿಸಿದ್ದರು. ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ ಇತ್ತು .ರಾಮಾಯಣ ಎಂಬ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ಅವರು ನೀಡಿರುವ ಆದರ್ಶ ವಿಚಾರಗಳನ್ನು ನಮ್ಮ ಜೀವನಕ್ಕೆ ಆಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ನಮ್ಮನ್ನು ನಾವೇ ಬೆಳಸಿಕೊಂಡಾಗ ಸಮಾಜವು ನಮ್ಮನ್ನು ಗುರ್ತಿಸಲು ಸಾಧ್ಯ ಎಂದರು.
ಇದೇ ಸಮಯದಲ್ಲಿ ಸಮುದಾಯದಲ್ಲಿನ ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ರಾಜೇಶ್, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಾಲಾ, ಪಶು ಇಲಾಖೆ ಸಹಾಯಕ ನಿರ್ದೇಶಕ ನಿವೃತ್ತ ಅಧಿಕಾರಿ ರಮಾನಂದ್, ಮುಖಂಡರಾದ ರಾಮಮೋಹನ್, ಚಲ್ದಿಗಾನಹಳ್ಳಿ ಈರಪ್ಪ, ರಾಮಾಂಜಮ್ಮ, ಕೊರ್ನಹಳ್ಳಿ ಆಂಜಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ಯಮ್ಮನೂರು ನಾಗರಾಜ್, ಗುಮ್ಮಿರೆಡ್ಡಿಪುರ ವೆಂಕಟೇಶ್ ಇದ್ದರು.

