

ಶ್ರೀನಿವಾಸಪುರ : ಮಗುವಿಗೆ ತಾಯಿಯ ಒಡಿಲೇ ಮೊದಲನೇ ಗುರು, ಎರಡನೇಯದು ಶಾಲೆ ಈ ಒಂದು ದೃಷ್ಟಿಯಲ್ಲಿ ಮೊದಲ ಅಕ್ಷರವನ್ನು ಕಲಿಸುವ ಉದ್ದೇಶದಿಂದ ಅಂತಹ ಮಕ್ಕಳಿಗೆ ಶಾಲೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥಸ್ವಾಮಿ ಹೇಳಿದರು.
ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತ ಶಾಲೆಯಲ್ಲಿ ಸೋಮವಾರ ಜ್ಞಾನಾಂಕುರ ಕಾರ್ಯಕ್ರಮದಡಿಯಲ್ಲಿ ಎಲ್ಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಕೇವಲ ಪುಸ್ತಕದ ಅಕ್ಷರ ಕಲಿಸಿದರೆ ಸಾಲದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕøತಿ, ಸಂಸ್ಕಾರ ಬೆಳಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖೀಯಾಗಿ ಬದುಕಲು ಸಾಧ್ಯ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದರ ಮೂಲಕ ಸಾಕ್ಷರನ್ನಾಗಿ ಮಾಡುವುದರ ಮೂಲಕ ದೇಶದ ಅಭಿವೃದ್ದಿಗೆ ಶ್ರಮಿಸಬೇಕು . ಸಮಾಜದಲ್ಲಿ ಪ್ರಗತಿ ಹೊಂದಬೇಕಾದರೆ ಶಿಕ್ಷಣವೇ ಮೂಲಧಾರ ಎಂದರು.
ಬಿಜಿಎಸ್ ಶಾಲಾಕಾಲೇಜುಗಳ ಆಡಳಿತಾಧಿಕಾರಿ ಎನ್.ಶಿವರಾಘವರೆಡ್ಡಿ ಮಾತನಾಡಿ ಮಗುವಿನ ಪ್ರಗತಿಗೆ ಮೊದಲನೇ ಆಧಾರ ಸ್ತಂಬ ಮಗುವಿನ ತಂದೆತಾಯಿ. ಮಗುವಿನಲ್ಲಿನ ಜ್ಞಾನವನ್ನು ಗುರ್ತಿಸುವುದು ಮಗುವಿನ ತಾಯಿ. ಮಗುವಿನ ಜ್ಞಾನವನ್ನು ಗಮನಿಸುವುದು ತಂದೆತಾಯಿ ನಂತರ ಶಾಲೆಯಲ್ಲಿನ ಶಿಕ್ಷಕ. ಮಗುವಿನಲ್ಲಿನ ಸಾಮಾಥ್ರ್ಯಕ್ಕೆ ಶಿಕ್ಷಕರೊಂದಿಗೆ ಮನೆಯಲ್ಲಿ ತಂದೆತಾಯಿ ಕೈಜೋಡಿಸಿದಾಗ ಆ ಮಗುವಿನಲ್ಲಿನ ಪ್ರಗತಿಗೆ ಕಾರಣರಾಗಬಹುದಾಗಿದೆ ಎಂದರು.
ಶ್ರೀ ಮಠ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸಲು ಅನೇಕ ಕಾರ್ಯಕ್ರಮಗಳು ಪೂಜ್ಯ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು .
ಡಾ|| ವೈ.ವಿ.ವೆಂಕಟಾಚಲ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ದೃಷ್ಟಿಯಲ್ಲಿ ಇಂದು ನಾವೆಲ್ಲರೂ ಸೇರಿ ಆರೋಗ್ಯವಂತ ಸಮಾಜವನ್ನು ಸೃಷ್ಟಿ ಮಾಡಬೇಕಿದೆ. ಈ ಶಾಲೆಯಲ್ಲಿನ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕøತಿಯ ಬಗ್ಗೆ ತಿಳಿಹೇಳುತ್ತಿರುವುದು ಶ್ಲಾಘನೀಯ ವಿಚಾರ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕøತಿಯ ಬಗ್ಗೆ ತಿಳಿಸಿಕೊಡುತ್ತಿರುಬೇಕು ಎಂದರು.
ಮಾಲೂರು ಶಾಲಾಕಾಲೇಜು ನಿರ್ದೇಶಕ ಬಯಣ್ಣ, ನಿರ್ದೇಶಕ ಎ.ವೆಂಕಟರೆಡ್ಡಿ, ಒಡ್ಡಿಪಲ್ಲಿ ಟಿವಿಎಸ್ ಟಮೋಟೋ ಮಂಡಿ ಮಾಲೀಕ ವೆಂಕಟರಮಣಪ್ಪ , ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಗಂಗಾಧರ್, ವೆಂಕಟರಾಮರೆಡ್ಡಿ ಇದ್ದರು.

