

ಕುಂದಾಪುರ;ಜೂ.೨೧; ಯೋಗವು ಒಂದು ಮೂಲಭೂತವಾದ ಒಂದು ಆಧ್ಯಾತ್ಮಿಕ ಶಿಸ್ತುಯಾಗಿದ್ದು,ಅದು ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದೆ.ಅದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ತರುವ ಸಾಧನವಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಹೇಳಿದರು. ಅವರು ಶನಿವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಸಂಭ್ರಮದಿಂದ ಭಾಗವಹಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಾನು ಸುಳ್ಳು ಹೇಳುವುದಿಲ್ಲ, ಬೇರೆಯವರಿಗೆ ವಿನಾ ಕಾರಣ ತೊಂದರೆ ಕೊಡೋದಿಲ್ಲ, ಸಮಾಜ ಮತ್ತು ಕುಟುಂಬದ ನೆಮ್ಮದಿ ಹಾಳು ಮಾಡೋದಿಲ್ಲ, ಬೇರೆಯವರ ವಸ್ತುವಿಗೆ ಆಸೆ ಪಡೋದಿಲ್ಲ ಮತ್ತು ನನ್ನನ್ನು ನಾನು ಕಲುಷಿತಗೊಳಿಸುವುದಿಲ್ಲ ಎನ್ನುವ ಪಂಚ ಪ್ರತಿಜ್ಞೆಯನ್ನು ಭೋದಿಸಲಾಯಿತು. ಶಿಕ್ಷಕಿಯರಾದ ಸಿಸ್ಟರ್ ಚೇತನ, ಪ್ರೀತಿ ಪಾಯಸ್, ಸ್ಮಿತಾ ಡಿಸೋಜಾ, ಸುಶೀಲಾ ಖಾರ್ವಿ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ಸಂಯೋಜಿಸಿದರು.

