

ಕುಂದಾಪುರ: ಪ್ರತಿದಿನ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ಮೌಲ್ಯಗಳಾದ ಶ್ರೇಷ್ಟತೆ, ಗೌರವ ಮತ್ತು ಸ್ನೇಹವನ್ನು ಪ್ರತಿಯೊಬ್ಬರಲ್ಲೂ ಬೆಳಸಬೇಕು. ಹಾಕಿ ಮಾಂತ್ರಿಕ ಧ್ಯಾನಚಂದರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಈ ಮೂಲಕ ಹಾಕಿ ದಿಗ್ಗಜನ ನೆನಪು ಕ್ರೀಡಾಪ್ರೇಮಿಗಳ ಮನದಲ್ಲಿ ಸದಾ ಮೂಡುತ್ತದೆ ಎಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಹೇಳಿದರು.
ಅವರು ಶುಕ್ರವಾರ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಂಭ್ರಮದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ಮಾನಸಿಕವಾಗಿ ಬಲಿಷ್ಟಗೊಳ್ಳುವುದರ ಮೂಲಕ ದೈಹಿಕ, ಭಾವನಾತ್ಮಕವಾಗಿ ನಾವು ಫಿಟ್ ಆಗಿರಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಲಾ ಸರಕಾರದ ಕ್ರೀಡಾ ಸಚಿವ ವಿಘ್ನೇಶ ಆಚಾರ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ವಿದ್ಯಾರ್ಥಿನಿಯರಾದ ವೀಣಾ ವಿ ಸ್ವಾಗತಿಸಿ, ರೆಲಿಶಾ ರೋಚ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

