

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಣ್ ಎಸ್.ಜೆ. ಅವರು ಮಂಡಿಸಿದ “ವಸಾಹತುಕಾಲೀನ ಬುಡಕಟ್ಟು ಅಧ್ಯಯನಗಳ ಸ್ವರೂಪ (ವಸಾಹತುಕಾಲೀನ ದಕ್ಷಿಣ ಭಾರತದ ಆಯ್ದ ಅಧ್ಯಯನಕಾರರನ್ನು ಪರಿಗಣಿಸಿ)” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಇವರು ಹಂಪಿಯ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎ.ಎಸ್.ಪ್ರಭಾಕರ ಹಾಗೂ ಧಾರವಾಡ ಸ್ನಾತಕೋತ್ತರ ವಿಭಾಗದ ಆಂಗ್ಲ ಭಾಷಾ ವಿಭಾಗ ಪ್ರಾಚಾರ್ಯರು ಹಾಗೂ ವಿಭಾಗ ಮುಖ್ಯಸ್ಥರು ಆದ ಡಾ.ಗುರುನಾಧ ಬಡಿಗೇರರವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡಿದ್ದರು.
ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ, ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ತಿಳಿಸಿದ್ದಾರೆ.

