


ಮಂಗಳೂರು; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ಅಕ್ಟೋಬರ್ 10, 2026 ರಂದು ಸಂಜೆ 4.00 ಗಂಟೆಗೆ ʼಕಾವ್ಯಾಂ ವ್ಹಾಳೊ-19ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ವಹಿಸಿಕೊಳ್ಳಲಿದ್ದಾರೆ. ಕೊಂಕಣಿ ಲೇಖಕ ಸಂಘ ಕರ್ನಾಟಕ ಇದರ ಸಂಚಾಲಕರಾದ ರಿಚ್ಚರ್ಡ್ ಮೊರಾಸ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಂಕಣಿಯ ಜಾನಪದ ಕಲಾವಿದ ಹಾಗೂ ಸಂಗೀತಗಾರರಾಗಿರುವಂತಹ ಮುಕುಂದ್ ಖಾರ್ವಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಯಿತ್ರಿಯಾದ ಐರಿನ್ ರೆಬೆಲ್ಲೊರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಪ್ರಭಾ ರೇಗೊ, ವಿನ್ಸೆಂಟ್ ಪಿಂಟೊ ಆಂಜೆಲೊರ್, ಶ್ಯಾಮಲಾ ವಸಂತ್ ಕೊಂಪದವು, ಸ್ಟ್ಯಾನಿಸ್ಲವ್ಸ್ ಡಿಸೋಜ ಕಿರೆಂ, ಸಲೊಮಿ ಮೊಗರ್ನಾಡ್, ಮ್ಯಾಕ್ಸಿಂ ಲುದ್ರಿಗ್ ಬೊಂದೆಲ್, ಸತ್ಯವತಿ ಕಾಮತ್, ಆಲ್ವಿನ್ ದಾಂತಿ ಮತ್ತು ರೊಬರ್ಟ್ ಡಿಸೋಜ ಇವರು ತಮ್ಮ ಕವಿತೆಗಳನ್ನು ವಾಚಿಸುವರು.
ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

