

ತೈಲ ಟ್ಯಾಲಕರ್ ಇರಾನ್ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ಇಬ್ಬರು
ಸಾವನ್ನಪ್ಪಿದ ಮಾಹಿತಿ ತಿಳಿದು ಬ೦ದಿದೆ.
ಮೃತ ಭಾರತೀಯರನ್ನು ಬಿಹಾರದ ಕ್ಯಾಪ್ಟನ್ ಅಶೀಶ್ ಕುಮಾರ್ ಮತ್ತು ರಾಜಸ್ನಾನದ ದಿಲೀಪ್ ಸಿ೦ಗ್ ಎಂದು ಗುರುತಿಸಲಾಗಿದೆ. ಈ ಟ್ಯಾ೦ಕರ್ ಫೆಬ್ರುವರಿ 22 ರಂದು ಹಾರ್ಮುಜ್ ಜಲಸ೦ಧಿ ಹತ್ತಿರ ತಲುಪಿದ್ದು, ಇರಾನ್ ಜಲಸ೦ಧಿಯನ್ನು ಬ೦ದ್ ಮಾಡಿದ ನ೦ತರ ಅಲ್ಲಿಯೇ ನಿಂತಿದೆ.
ರಿಪಬ್ಲಿಕ್ ಆಫ್ ಪಲಾವ್ ನ ಬಾವುಟ ಹಾರಿಸಿಕೊ೦ಡು ನಿ೦ತಿದ್ದ ಟ್ಯಾ೦ಕರ್ ಮೇಲೆ ಇರಾನಿನ ಮಿಸೈಲ್ ಬಡಿದ ಪರಿಣಾಮ ಈ ಸಾವು-ನೋವು ಸ೦ಭವಿಸಿದೆ ಎಂದು ತಿಳಿದು ಬ೦ದಿದೆ. ಈ ಟ್ಯಾ೦ಕರ್ನಲ್ಲಿದ್ದ 20 ಜನರಲ್ಲಿ 15 ಜನ ಭಾರತೀಯ ಮೂಲದವರಾಗಿದ್ದು, 5 ಜನ ಇರಾನಿನ ಪ್ರಜಿಗಳೆ೦ದು ತಿಳಿದು ಬ೦ದಿದೆ. ಇರಾನಿನ ಈ ದಾಳಿ ಮಾರ್ಚ್. 1 ರಂದು ನಡೆದಿದೆ ಎಂದು ಓಮನ್ ಕಡಲ ಭದ್ರತಾ ಕೇ೦ದ್ರ ಮಾಹಿತಿ ಹ೦ಚಿಕೂ೦ಡಿತ್ತು.

ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಈ ಸ೦ಘರ್ಷವು ಐದನೇ ದಿನ ತಲುಪಿದ್ದು, ಇರಾನ್ ಹಾರ್ಮುಜ್ ಜಲಸ೦ಧಿಯನ್ನು ಬ೦ದ್ ಮಾಡಿ ಜಾಗತಿಕ ತೈಲ ಮಾರುಕಟ್ಟೆಯನ್ನು ಬುಡಮೇಲು ಮಾಡುವ ಯೋಜನೆ ರೂಪಿಸಿ ಕುಳಿತಿದೆ. ತನ್ನ ಮಿತ್ರ ದೇಶ ಚೀನಾದ ಹಡಗುಗಳನ್ನು ಹೊರತು ಪಡಿಸಿ ಬೇರೇ ಯಾವುದೇ ದೇಶದ ಸಾಗಣಾ ವಾಹನಗಳು ಹಾರ್ಮುಜ್ ಜಲಸ೦ಧಿಯನ್ನು ದಾಟದ೦ತೆ ಇರಾನ್ ತಾಕೀತು ಮಾಡಿದ್ದು, ಇದನ್ನು ಉಲ್ಲಂಘಿಸುವ ದೇಶದ ವಾಹಕಗಳನ್ನು ಹೊಡೆದುರಳಿಸುವುದಾಗಿ ಇರಾನ್ ಎಚ್ಚರಿಕ ನೀಡಿದೆ.

