

ಕೋಟ ಸಂತ ಜೋಸೆಫರ ಇಗರ್ಜಿಯಲಿ ಪವಿತ್ರ ಗುರುವಾರ ಆಚರಣೆ. ಈ ದಿನ ಕ್ರೈಸ್ತರು ಏಸುಕ್ರಿಸ್ತನು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನ (Last Supper) ಮಾಡಿದ ಮತ್ತು ಶಿಷ್ಯರ ಪಾದಗಳನ್ನು ತೊಳೆದ ದಿನವನ್ನು ನೆನಪಿಸಿಕೊಳ್ಳುತ್ತಾರೆ. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಸ್ಟಾನಿ ತಾವ್ರೊ ಪವಿತ್ರ ಬಲಿಪೊಜೆ ನೆರವೇರಿಸಿದರು. ಅತಿಥಿ ಧರ್ಮ ಗುರುಗಳಾದ ವಂದನೀಯ ಸ್ಟೀವನ್ ಫೆರ್ನಾಂಡಿಸ್ ಅವರು ಪ್ರವಚನ ನೀಡಿದರು. ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಭಾಗವಹಿಸಿದರು.















