HOLY ROSARY CHURCH, KUNDAPUR – 450 th JUBILEE SOUVENIR 2021

ಮೌಂಟ್ ರೋಜರಿ ಚರ್ಚ್ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆಯಾಗಿ ರೋಜಿ ಕ್ವಾಡ್ರಸ್, ಕಾರ್ಯದರ್ಶಿಯಾಗಿ ಜೋರ್ಜ್ ಡಿಸೋಜ

JANANUDI.COM NETWORK

ಕಲ್ಯಾಣಪುರ, ಇತ್ತಿಚೆಗೆ ನಡೆದ ಮೌಂಟ್ ರೋಜರಿ ಚರ್ಚ್ ಕಥೊಲಿಕ್ ಸಭಾ ಘಟಕದ 2022 – 2023 ಸಾಲೀನ ಚುನಾವಣೆಯಲ್ಲಿ, ಅಧ್ಯಕ್ಷೆಯಾಗಿ ರೋಜಿ ಕ್ವಾಡ್ರಸ್ ಮತ್ತು. ಕಾರ್ಯದರ್ಶಿಯಾಗಿ ಜೋರ್ಜ್ ಡಿಸೋಜ ಆಯ್ಕೆಯಾದರು.


ಹಾಗೇ ನಿಕಟ್ ಪೂರ್ವ್ ಅಧ್ಯಕ್ಷೆಯಾಗಿ ಜ್ಯೊತಿ ಲುವಿಸ್, ನಿಯೋಜಿತ್ ಅಧ್ಯಕ್ಷರಾಗಿ ಆರ್ಚಿಬಾಲ್ಡ್ ಫುರ್ಟಾಡೊ.ಉಪಾಧ್ಯಕ್ಷರಾಗಿ ಮೈಕಲ್ ಮೆಂಡೋನ್ಸ, ಸಹಕಾರ್ಯದರ್ಶಿಯಾಗಿ ಝೀನ ಡಿಸೋಜ, ಖಜಾಂಚಿಯಾಗಿ ಮೇವಿಸ್ ಕರ್ನೆಲಿಯೊ,ಸಹ ಖಜಾಂಚಿಯಾಗಿ ರೂಬೆನ್ ರೆಬೆಲ್ಲೊ ಆಮ್ಚೊ ಸಂದೇಶ್ ಪ್ರತಿನಿದಿಯಾಗಿ ಲೂಕ್ ಡಿಸೋಜ, ರಾಜಕೀಯ್ ಸಂಚಾಲಕರಾಗಿ ಲವೀನ ಮಿನೇಜಸ್. ಸರ್ಕಾರಿ ಸೌಲತ್ತು ಸಂಚಾಲಕರಾಗಿ ಅಜಯ್ ಡಿಸೋಜ, ಆಂತರೀಕ ಲೆಕ್ಕ ತಪಾಸಣಾರಾಗಿ ಬ್ರೂನೊ ಲುವಿಸ್
ಪ್ರತಿನಿಧಿಗಳಾಗಿ ಎವರ್ಲಿನ್ ರೆಬೆಲ್ಲೊ, ಪ್ರಮಿಳಾ ಡಿಸೋಜ ಮೀನ ಪಿಂಟೊ, ಪೀಟರ್ ಲುವಿಸ್ ಮತ್ತು ಆಶಾ ಡಿಸೋಜ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ರೋಜಿ ಬಾರೆಟ್ಟೊ, ವೀಕ್ಷಕರಾಗಿ ಜೋನ್ ಪಿಕಾರ್ಡೊ , ಬಾರ್ಕೂರ್ ಇವರು ನಡೆಸಿಕೊಟ್ಟರು. .

ಭಾರತೀಯ ಜನೌಷಧ ಸಪ್ತಾಹ ವಿದ್ಯಾರ್ಥಿಗಳ ಸಾಥ್ : ಇಂದು ಭಂಡಾರ್ಕಾರ್ಸ್ ಕಾಲೇಜ್ನಲ್ಲಿ ಆಚರಣೆ

JANANUDII.COM NETWORK


ಕುಂದಾಪುರ, ಫೆ. 3: ಭಾರತೀಯ ಜನೌಷಧ ಸಪ್ತಾಹದ ಅಂಗವಾಗಿ ಮಾರ್ಚ್ ೨ ರಂದು ಭಂಡಾರ್ ಕರ್ಸ್ ಕಾಲೇಜ್ ನಲ್ಲಿ ಸುಮಾರು ಐನೂರು ಮಂದಿ ವಿದ್ಯಾರ್ಥಿಗಳಿಗೆಗಾಗಿ ಈ ಕಾರ್ಯವನ್ನು ಆಯೋಜಿಸ ಲಾಯಿತು.
ಕಾಲೇಜು ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಉದ್ಘಾಟಿಸಿದರು. ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ. ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಯಾಗಿ ಡಾ. ಸೋನಿ ಜನ ಔಷಧಿ ಉತ್ಪನ್ನ ಗಳ ಕುರಿತು ಮಾಹಿತಿ ನೀಡಿದರು. ಇದರ ಗುಣಮಟ್ಟ ಮತ್ತು ಬೆಲೆಯ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ ಮತ್ತು ಕಾಲೇಜಿನ ಸ್ಟೂಡೆಂಟ್ಸ್ ವೆಲ್ ಫೇರ್ ಆಫೀಸರ್ ಆದ ಡಾ. ಶುಭಾಕರ್ ಆಚಾರ ಉಪಸ್ಥಿತ ರಿದ್ದರು.

ಟಿ.ಕುರುಬರಹಳ್ಳಿ ಕುರಿಗಾಯಿಗಳಿಗೆ ಮೀಸಲಿಟ್ಟಿರುವ ಗೋಮಾಳ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಮಂಜೂರು ಮಾಡಬಾರದು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಮುಳಬಾಗಿಲು,ಮಾ.03: ಟಿ.ಕುರುಬರಹಳ್ಳಿ ಕುರಿಗಾಯಿಗಳಿಗೆ ಮೀಸಲಿಟ್ಟಿರುವ ಗೋಮಾಳ ಸ.ನಂ. 37, 36 ರ 65 ಎಕರೆ ಜಮೀನನ್ನು ಕುರಿಗಾಯಿಗಳಿಗೆ ಮೀಸಲಿಟ್ಟಿರುವ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಬೇರೆ ಯಾರಿಗೂ ಮಂಜೂರು ಮಾಡಬಾರದೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹರವರಿಗೆ ಮನವಿ ನಿಡಿ ಅಗ್ರಹಿಸಲಾಯಿತು
ಟಿ.ಕುರುಬರಹಳ್ಳಿ ಗ್ರಾಮಸ್ಥರು ರಾಮಕೃಷ್ಣಪ್ಪ ಬಲಾಡ್ಯರ ವಿರುದ್ದ ಹತ್ತಾರು ವರ್ಷಗಳಿಂದ ಹೋರಾಟ ಮಾಡಿ ಜೈಲಿನ ವನವಾಸ ಮಾಡಿ ಸತತ ಹೋರಾಟದ ಪ್ರತಿಪಲವಾಗಿ 65 ಎಕರೆ ಸರ್ಕಾರಿ ಗೋಮಾಳ ಕುರಿಗಾಯಿಗಳಿಗಾಗಿ ಹಿಂದಿನ ತಹಸೀಲ್ದಾರ್ ಪ್ರಮೀಣ್ ರವರು ನಾಮಫಲಕ ಅಳವಡಿಸಿದರೂ ಊರಿನ ಕೆಲವು ಬಲಾಡ್ಯರು ತಮ್ಮ ಪ್ರಾಭಲ್ಯವನ್ನು ಉಪಯೋಗಿಸಿ ಕುರಿಗಾಯಿಗಳಿಗಾಗಿ ಮೀಸಲಿಟ್ಟಿರುವ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅದಿಕಾರಿಗಳು ಹಾಗೂ ದರಕಾಸ್ತು ಕಮಿಟಿ ಮುಖಾಂತರ ಕುರಿಗಾಯಿಗಳ ಜಮೀನನ್ನು ಕಬಳಿಸಲು ಮುಂದಾದರೆ ಕುರಿಗಳ ಸಮೇತ ಸಾವಿರಾರು ಬಡ ಕೂಲಿಕಾರ್ಮಿಕರು ಸಾಮೂಹಿಕ ಆತ್ಮಹತ್ಯ ಜಿಲ್ಲಾಡಳಿತದ ಮುಂದೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಭೂಮಿಗೆ ಬಂಗಾರ ಬೆಲೆ ಬಂದಿದ್ದೇ ಸರ್ಕಾರಿ ಸಾವಿರಾರು ಎಕರೆ ಜಮೀನು ರಾತ್ರೋರಾತ್ರಿ ಕಂದಾಯ ಸರ್ವೆ ನೋಂದಣಿ ಅಧಿಕಾರಿಗಳ ಭ್ರಷ್ಟಾಚಾರದಿಂದ ಭೂ ಮಾಪಿಯ ಪಾಲಾಗಿದೆ. ಪ್ರತಿ ಹಳ್ಳಿಯಲ್ಲೂ ಕುರಿಗಾಯಿಗಳಿಗೆ ಹಾಗೂ ಅಭಿವೃದ್ದಿಕಾರಿಗಳಿಗೆ ವರ್ಷಾನುಘಟ್ಟಲೆ ಹುಡುಕಿದರೂ ಅಂಗೈ ಅಗಲ ಜಮೀನು ಅಧಿಕಾರಿಗಳಿಗೆ ಸಿಗುವುದಿಲ್ಲ. ಆದರೆ ರಾತ್ರೋರಾತ್ರಿ ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಭೂ ಮಾಪಿಯರವರು ಮಂಜೂರು ಮಾಡುತ್ತಿರುವ ಅವ್ಯಸ್ಥೆಯಲ್ಲಿ 65 ಎಕರೆ ಕುರಿಗಾಯಿಗಳಿಗಾಗಿ ಮೀಸಲಿಟ್ಟಿರುವ ಗ್ರಾಮದ ಕುರಿಗಾಯಿಗಳ ಹೋರಾಟಕ್ಕೆ ನಾವು ಸಹ ಬೆಂಬಲವಾಗಿ ನಿಂತು ಮೀಸಲಿಟ್ಟಿರುವ ಜಮೀನನ್ನು ಬೇರೆ ಯಾರಿಗೂ ಮಂಜೂರು ಮಾಡಬಾgದೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹರವರು ಸದರಿ ಜಮೀನನ್ನು ಮಂಜೂರು ಮಾಡದಂತೆ ಯಾವುದೇ ಅರ್ಜಿ ಬಂದರೂ ತಿರಸೃತ ಮಾಡುವಂತೆ ತಹಶೀಲ್ದಾರ್‍ರವರಿಗೆ ಸೂಚನೆ ನೀಡುವ ಭರವಸೆ ನೀಡಿದರು

ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ನಳಿನಿಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ ರಾಮಮೂರ್ತಿ ಪದ್ಮಘಟ್ಟ ಧರ್ಮ ನಂಗಲಿ ನಾಗೇಶ್, ಹಸಿರುಸೇನೆ ತಾ.ಅ.ವೇಣು, ಕೇಶವ, ನವೀನ್ ಪುತ್ತೇರಿರಾಜು, ಅಣ್ಣಹಳ್ಳಿ ನಾಗರಾಜ್, ಕೋಲಾರ ತಾಲ್ಲೂಕು ಅದ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಸಂಚಾಲಕ, ಬಂಗವಾದಿ ನಾಗರಾಜಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ಆಂಜಿನಪ್ಪ, ಹರೀಶ್, ರಾಮಸಾಗರ ವೇಣುಗೋಪಾಲ್, ಪಾರಂಡಹಳ್ಳಿ ಮಂಜುನಾಥ, ಸುರೇಶ್‍ಬಾಬು, ಚಂದ್ರಪ್ಪ, ಮರಗಲ್ ಮುನಿಯಪ್ಪ, ಟಿ.ಕುರುಬರಹಳ್ಳಿ ಗ್ರಾಮಸ್ಥರು ಇದ್ದರು

ಮೂಡ್ಲಕಟ್ಟೆ ಎಂ ಐ ಟಿ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾಯ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮ.

JANANUDI.COM NETWORK

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ಮಾದರಿ ಸ್ಪರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮವು ಕಾಲೇಜಿನ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿ ತಂಡಗಳು ತಮ್ಮ ತಮ್ಮ ವಿಶೇಷ ವಿಜ್ಞಾನ ಮಾದರಿಗಳ ಜೊತೆ ಭಾಗವಹಿಸಿ ಸಂಬ್ರಮಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ ಕೋಟೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ದೆನ್ನೀಸ್ ಬಂಜಿ ಇವರು ಮಾತನಾಡಿ ವಿದ್ಯಾರ್ಥಿ ಸಮುದಾಯವು ಪರಿಸರ ಮತ್ತು ಪ್ರಕೃತಿ ರಕ್ಷಿಸುವ, ಮನುಕುಲದ ಏಳಿಗೆಗೆ ಪೂರಕವಾಗುವ ತಂತ್ರಜ್ಞಾನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿವರಿಸಿದರು.
ಇನೋರ್ವ ಅತಿಥಿ ಹಾಗೂ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಸಂದೀಪ್ ಗಾಣಿಗ ಇವರು ಮಾತನಾಡಿ ವಿಧ್ಯಾರ್ಥಿಗಳು ಕಲಿಕೆಯ ಜೊತೆಗೆ ಹೆಚ್ಚು ಹೆಚ್ಚು ಸಂಶೋಧನಾ ಮನೋಭಾವದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಕೌಶಲ್ಯ ವೃದ್ಧಿಗೊಳಿಸಿಕೊಳ್ಳಿ ಎನ್ನುವ ಜೊತೆಗೆ ಅನೇಕ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರರಾವ್ ಮದಾನೆಯವರು ಮಾತನಾಡಿ ವಿಜ್ಞಾನ ದಿನಾಚರಣೆ ಆಚರಿಸುವ ಮಹತ್ವ ವಿವರಿಸಿ, ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಒಂದಲ್ಲ ಒಂದು ಹೊಸ ವಿಚಾರ ಕಲಿಯಲು ಸಾಧ್ಯವಾಗುವುದರಿಂದ ಹೆಚ್ಚು ಹೆಚ್ಚು ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಂದು ಶುಭ ಹಾರೈಸಿದರು. ಉಪ ಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿ ಸೋಜಾ ರವರು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇದೇ ಸಂಧರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ದೀಪಕ್ ಶೆಟ್ಟಿ .ಎಂ, ಕಾಲೇಜಿನ ಡೀನ್ ಅಕಾಡೆಮಿಕ್, ಡೀನ್ ಪ್ಲೇಸ್ಮೆಂಟ್, ಡೀನ್ ಡೆವಲಪ್ಮೆಂಟ್, ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಧ್ವಿತೀಯ ವರ್ಷದ ವಿಧ್ಯಾರ್ಥಿನಿ ಕುಮಾರಿ ಪೂಜಿತ ಸ್ವಾಗತಿಸಿ, ರೇಷ್ಮ ವಂದಿಸಿದರು. ವಿದ್ಯಾರ್ಥಿನಿ ಆಶ್ರಿತ ಕಾರ್ಯಕ್ರಮ ನಿರೂಪಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಗಾರ

JANANUDI.COM NETWORK

ಶಿರ್ವ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಪದವೀಧರ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನ ಕಲಿಕೆಯು ಕಾಲೇಜು ಹಂತದಲ್ಲಿ ಕಲಿಯುವ ಮೂಲಕ ಮುಂದೆ ಸಮಾಜಕ್ಕೆ ಬೇಕಾಗುವ ನುರಿತ ತಂತ್ರಾಂಶವನ್ನು ರೂಪಿಸಲು ಮತ್ತು ಸಂಶೋಧನಾ ಮನಸ್ಥಿತಿಯನ್ನು ಬೆಳೆಸಲು ಇಂತಹ ಕಾರ್ಯಗಾರ ಸಹಕಾರಿ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಬಿಸಿಎ ವಿದ್ಯಾರ್ಥಿಗಳಿಗೆ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಏರ್ಪಡಿಸಿದ ಸಾಫ್ಟ್ವೇರ್ ಪ್ರಾಜೆಕ್ಟ್ ಅಭಿವೃದ್ಧಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಪ್ರೋ ಕಂಪನಿಯ ಜೂನಿಯರ್ ಅಸೋಸಿಯೇಟ್ ಶ್ರೀ ರಿಯಾನ್ ರಿಷಿ ಅಲ್ಫೋನ್ಸೋ ಮಾತನಾಡಿದರು.
ತಾಂತ್ರಿಕ ಪರಿಣತಿಯೊಂದಿಗೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯೂ ಅಗತ್ಯ. ಈ ಅವಶ್ಯಕತೆಗಳನ್ನು ಪೂರೈಸಲು, ಉದ್ಯಮದ ಮಾನದಂಡಗಳಿಗೆ ಸಮಾನವಾಗಿ ಕಂಪ್ಯೂಟರ್ ಪದವೀಧರರ ಸಾಮರ್ಥ್ಯವನ್ನು ಹೆಚ್ಚಿಸಲು ಕಾಲೇಜು ಹಂತದಲ್ಲೇ ಇಂತಹ ಸಂಪೂರ್ಣ ತರಬೇತಿ ಪಡೆದುಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಮುಂದೆ ವಿವಿಧ ವಿಜ್ಞಾನಿಗಳ ಆಗಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ನುಡಿದರು.
ಪ್ರತಿ ಸ್ಟಾರ್ಟ್‌ಅಪ್‌ಗೆ ಉತ್ತಮ ಐಡಿಯಾ ಬೇಕು. ಅನನ್ಯ ಮತ್ತು ಬಲವಾದ ಪೂರೈಸಬಹುದಾದ ಗ್ರಾಹಕರ ಅಗತ್ಯವನ್ನು ಕಂಡುಕೊಂಡಾಗ ಆರಂಭಿಕ ವ್ಯವಹಾರಗಳು ಯಶಸ್ವಿಯಾಗುತ್ತವೆ. ಯಾವುದೇ ಸಂದರ್ಭದಲ್ಲಿ, ಉತ್ತಮ ಆಲೋಚನೆ, ಸರಿಯಾದ ಮಾನದಂಡಗಳಿಗೆ ಮತ್ತು ಕಠಿಣ ಪರಿಶ್ರಮವು ಯಶಸ್ಸಿಗೆ ನಿರ್ಣಾಯಕವಾಗಿದೆ. ಈ ಪ್ರಮುಖ ಅಂಶವನ್ನು ಪರಿಗಣನೆಗೆ ಇಟ್ಟುಕೊಂಡು, ಪದವಿ ವಿದ್ಯಾರ್ಥಿಗಳು ತಮ್ಮ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ವಿವಿಧ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗವನ್ನು ಸಾಧಿಸಲು ಇಂತಹ ಕಾರ್ಯಗಾರ ಇಂದು ಅನಿವಾರ್ಯವಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ವಿಪ್ರೋ ಕಂಪನಿಯ ಜ್ಯೂನಿಯರ್ ಅಸೋಸಿಯೇಟ್ ಪೂಜಾರಿ ಪ್ರತಿಕ್ ಪ್ರಭಾಕರ್,ಉಪನ್ಯಾಸಕ ಶ್ರೀ ಪ್ರಕಾಶ್, ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಪ್ ನಾಯಕ್, ದೀಕ್ಷಿತ್ ಹಾಗೂ ಸಾತ್ವಿಕ್ ಜೆ ಕೋಟ್ಯಾನ್ ಸಹಕರಿಸಿದರು.ಕು. ಹರ್ಷಿತ ಮತ್ತು ಬಳಗ ಪ್ರಾರ್ಥಿಸಿ, ಕು.ಶ್ರಾವ್ಯ ವಂದಿಸಿದರು. ಕು.ಛಾಯಾ ಏ ಕರ್ಕೇರ ಸ್ವಾಗತಿಸಿ, ಕು. ಚಂದನ ಕಾರ್ಯಕ್ರಮ ನಿರೂಪಿಸಿದರು
.

ಭಾರತೀಯ ಜನೌಷಧ ಸಪ್ತಾಹ: ಕಾಲೇಜು ವಿದ್ಯಾರ್ಥಿಗಳ ಸಾಥ್

JANANUDI.COM NETWORK


ಕು೦ದಾಫುರ, ಫೆ. 20: ಭಾರತೀಯ ಜನೌಷಧಕೇಂದ್ರ ವತಿಯಿಂದಮಾ.೧ ರಿಂದ ಮಾ.7ರವರೆಗೆ ನಡೆಯಲಿರುವ ಜನೌಷಧ ಸಪ್ತಾಹದ ಅಂಗವಾಗಿ ಕುಂದಾಪುರದಲ್ಲಿ ಇಲ್ಲಿನ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಸಹಯೋಗದಲ್ಲಿ ವಿವಿಧ :ಕಾಲೇಜುಗಳ ಎದ್ಯಾರ್ಥಿಗಳಿಂದ ಕಾಲ್ನಡಿಗೆ ಜಾಥಾ ನಡೆಯಿತು. ಕುಂದಾಪುರ. ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರು ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ, ಶುಭ. ಹಾರೈಸಿದರು.

ಜಾಥವು ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯಿಂದ. ಆರಂಭಗೊಂಡ. ಜಾಥಾವು ಪಾರಿಜಾತ ಸರ್ಕಲ್‌ ಆಗಿ, ಮಾಸ್ತಿಕಟ್ಟೆವರೆಗೆ ಸಾಗಿ, ಉಪ ವಿಭಾಗೀಯ ತಾಲೂಕು. ಸಾರ್ವಜನಿಕ ಆಸ್ಪತ್ರೆಯ ಬಳಿಯ ಜನೌಷಧ ಕೇಂದ್ರದ ಬಳಿ ಸಮಾಪನಗೊಂಡಿತು.
ಜಾಥಾದಲ್ಲಿ ಕುಂದಾಪುರದ ಜೂನಿಯರ್‌ ಕಾಲೇಜು, ಡಾ|ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರದ ಇಸಿಆರ್‌ ಕಾಲೇಜು, ಕೋಟ ಆಶ್ರಿತ ಕಾಲೇಜಿನ ವಿದ್ಯಾರ್ಥಿಗಳು, ಯುವ ರೆಡ್‌ಕ್ರಾಸ್‌ ಘಟಕದ ಸಂಯೋಜಕರು ಭಾಗವಹಿಸಿದ್ದರು.
ಈ ಜಾಥದಲ್ಲಿ ರೆಡ್‌ಕ್ರಾಸ್‌ ಕುಂದಾಪುರ ಘಟಕದ ಚೇರ್‌ಮನ್‌ ಜಯಕರ ಶೆಟ್ಟ ಕಾರ್ಯದರ್ಶಿ ಸೀತರಾಮ ಶೆಟ್ಟಿ ಕೋಶಾಧಿಕಾರಿ ಶಿವರಾಮ ಶೆಟ್ಟಿ ಸದಸ್ಯರಾದ ಗಣೇಶ್‌ ಶೆಟ್ಟ ಡಾ। ಸೋನಿ, ಸೀತಾರಾಮ ನಕ್ಕತ್ತಾಯ, ಮುತ್ತಯ್ಯಶೆಟ್ಟಿ ಸದಾನಂದಶೆಟ್ಟ ಬಶೀರ್‌, ನಾರಾಯಣ ದೇವಾಡಿಗ, ನಿರುಪಮ ಶೆಟ್ಟ
ಮತ್ತಿತರರು ಹಾಜರಿದ್ದರು.

ನಾರಾಯಣ ವಿಶೇಷ ಮಕ್ಕಳ ಶಾಲೆ ಯಲ್ಲಿ ವಿಶೇಷ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ

JANANUDI.COM NETWORK


ಕುಂದಾಪುರ, ಮಾ. 3: ದಿನಾಂಕ 02.03.2022ರಂದು ನಾರಾಯಣ ವಿಶೇಷ ಮಕ್ಕಳ ಶಾಲೆ ಯಲ್ಲಿ ವಿಶೇಷ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಪಾಲಕರ ಸಭೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶರತ್ ಚಂದ್ರ ಶೆಟ್ಟಿ ನ್ಯಾಯವಾದಿಗಳು ಕುಂದಾಪುರ ಇವರು ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಮಕ್ಕಳ ಹಕ್ಕುಗಳು, ಪೋಷಕರ ಮತ್ತು ಸಂಸ್ಥೆಯ ಜವಾಬ್ದಾರಿಗಳ ಬಗ್ಗೆ ಹಾಗೂ ವಿಶೇಷ ಮಕ್ಕಳಿಗೆ ಕಾನೂನಿನ ಲ್ಲಿ ಇರುವ ಅವಕಾಶಗಳ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ವಕೀಲರಾದ ಟಿ.ಬಿ ಶೆಟ್ಟಿ ಯವರು ಮಾತನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷರಾದ ಸಳ್ವಾಡಿ ನಿರಂಜನ ಹೆಗಡೆಯವರು ವಿಶೇಷ ಮಕ್ಕಳಿಗೆ ಸಮಾಜದ ಕಾಳಜಿಯ ಅವಶ್ಯಕತೆ ಇದೆ ಮತ್ತು ಈ ನಿಟ್ಟಿನಲ್ಲಿ ವಕೀಲರ ಸಂಘದಿಂದ ಸಾಧ್ಯ ವಾಗುವ ಎಲ್ಲಾ ನೆರವುಗಳನ್ನ ನೀಡಲಾಗುವುದು ಎಂದರು. ವಕೀಲರಾದ ರಾಜು ಪೂಜಾರಿಯವರು ಮತ್ತು ಪಂಚಾಯತ್ ಸದಸ್ಯರಾದ ಜುಡಿತ್ ಮೆಂಡೋನ್ಸಾರವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪ್ರೇಮರವರು ಸ್ವಾಗತಿಸಿದರು ಮತ್ತು
ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು . ಸಹಶಿಕ್ಷಕಿ ಶ್ರೃತಿ ವಂದಿಸಿದರು. ಸಹ ಶಿಕ್ಷಕಿ ದೀಪಾ ಕಾರ್ಯಕ್ರಮ ನಿರೂಪಿಸಿದರು.

ಸಿಗರೇಟಿನಿಂದ ಸುಟ್ಟು ಪತ್ನಿಗೆ ಚಿತ್ರಹಿಂಸೆ ನೀಡಿದ್ದ ಕುಂದಾಪುರದ ಪಾತಕಿ ಪತಿ ಬಂಧನ!

JANANUDI.COM NETWORK


ಕುಂದಾಪುರ, ಮಾ.1: ಪ್ರೀತಿಸಿ ಮ್ದಾದುವೆಯಾದ ಗಂಡ ತನ್ನ ಗರ್ಭಿಣಿ ಹೆಂಡತಿಗೆ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿತ್ತು, ಗಂಡನ ನಿರಂತರ ಕಿರುಕುಳ ತಾಳಲಾರದೆ ಹೆಂಡತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು, ಇದೀಗ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪಾತಕಿ ಪತಿಯನ್ನು ಸಿದ್ದಾಪುರದಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಮೊದಲು ಗಂಡ ಹೆಂಡತಿಗೆ ಸೀಗರೇಟಿನಿಂದ ಸುಡುತಿದ್ದ ವಿಡೀಯೊವೊಂದು ವೈರಲ್ ಆಗಿತ್ತು. ಅದರಲ್ಲಿನ ಸಂಭಾಷಣೆ ಕುಂದಾಪುರ ಕನ್ನಡದಲ್ಲಿ ಇದ್ದುದರಿಂದ ಈ ಕೇಸ್ ಕುಂದಾಪುರ ಕಎಯದೇ ಎಂದು ಜನ ಆಡಿಕೊಳ್ಳುತಿದ್ದರು.


ಇದೀಗ ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಬಂಧಿತ ಗಂಡ ಆರೋಪಿ, ಪ್ರದೀಪ್ ಹಾಗೂ ಪ್ರಿಯಾಂಕ ಪರಸ್ಪರ ಪ್ರೀತಿಸಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ನಾಲ್ಕೈದು ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ದಿನನಿತ್ಯವೂ ತವರು ಮನೆಯಿಂದ ಚಿನ್ನ ಹಾಗೂ ಹಣವನ್ನು ತರುವಂತೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ. ದ್ದೀಗ ಪ್ರದೀಪ್ ಪೊಲೀಸರ ವಷವಾಗಿ ಕಂಬಿ ಎಣಿಸುತ್ತಿದ್ದಾನೆ.

ಫೈರ್ ಬ್ರಾಂಡ್ ಪ್ರಚೋದನಕಾರಿ ಚೈತ್ರಾ ಕುಂದಾಪುರ ಪೊಲೀಸರ ವಶ

JANANUDI.COM NETWORK


ಕುಂದಾಪುರ: ಫೈರ್ ಬ್ರಾಂಡ್ ಪ್ರಚೋದನಕಾರಿ ಹೇಳಿಕೆ ನೀಡಿ ಕುಖ್ಯಾತಿ ಪಡೆದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಕಲಬುರಗಿಯಲ್ಲಿ ಶಹಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚೈತ್ರಾ ಅವರು ಮಂಗಳವಾರ ನಡೆಯಲಿರುವ ಆಳಂದ ಚಲೋ ಕಾರ್ಯಕ್ರಮದ ಹಿನ್ನಲೆಯಲ್ಲಿ ಕಲಬುರಗಿಗೆ ತೆರಳುತ್ತಿದ್ದು, ಈ ವೇಳೆ ಯಾದಗಿರಿ ಮಾರ್ಗವಾಗಿ ಕಲಬುರಗಿಗೆ ಪ್ರಯಾಣಿಸುವಾಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಚೈತ್ರಾ ಮತ್ತು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಕಲಬುರಗಿ ಜಿಲ್ಲಾಡಳಿತವು ನಿರ್ಬಂಧ ಹೇರಿತ್ತು. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆ. 27 ರಿಂದ ಮಾ. 3ರ ವರೆಗೆ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ ಅವರಿಗೆ ಕಲಬುರಗಿ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ.