HOLY ROSARY CHURCH, KUNDAPUR – 450 th JUBILEE SOUVENIR 2021

ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ್ದು ನಾವು, ಭಾರತ ಸರ್ಕಾರವಲ್ಲ ರೊಮೇನಿಯದಲ್ಲಿ ಕೇಂದ್ರ ಸಚಿವ ಸಿಂದಿಯಾಗೆ ಅಲ್ಲಿನ ಮೇಯರ್ ತರಾಟೆ.

.

ಎಲ್ಲ ವಿದ್ಯಾಮಾನಗಳನ್ನು ಮತ ಬ್ಯಾಂಕಿಗೆ ಬಳ್ಸಿಕೊಳ್ಳುವ ಕೇಂದ್ರ ಸರಕಾರದ ನೀತಿ ರೊಮೇನಿಯದಲ್ಲಿ ತರಾಟೆ.

JANANUDI.COM NETWORK

ರೊಮೇನಿಯಾ,4: ಭಾರತೀಯ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವ್ಯವಸ್ಥೆ ನಾವು ಮಾಡಿದ್ದು, ನೀವಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ರೊಮೇನಿಯಾ ಮೇಯರ್ ಹೇಳುವ ವಿಡಿಯೋ ವೈರಲ್ ಆಗಿದ್ದು, ಭಾರೀ ಸುದಿಯಾಗಿದೆ


ಎಲ್ಲ ವಿದ್ಯಾಮಾನಗಳನ್ನು ಮತ ಬ್ಯಾಂಕಿಗೆ ಬಳ್ಸಿಕೊಳ್ಳುವ ಕೇಂದ್ರ ಸರಕಾರದ ನೀತಿ ರೂಮಾನೀಯಾದಿಂದ ಕೂಡ ವಿರೋಧ ವ್ಯಕ್ತವಾಗಿದೆ. ಆದರೆ ನಮ್ಮ ಕೆಲವು ಭಾರತೀಯರಿಗೆ ಇದು ಅರ್ಥವಾಗಲ್ಲ. ಅಧಿರಕಾರ ಪಡೆದುಕೊಂಡು ೮ ವರ್ಷ ಪೂರೈಸಿದರೂ, ಇನ್ನೂ ಹಿಂದಿನ ಸರಕಾರಗಳಿಗನ್ನು ದೂರುವ ಕೆಟ್ಟ ಚಾಳಿ ಪ್ರಧಾನಿಯವರು ನಡೆಸಿಕಒಂಡು ಹೋಗುತ್ತಾ ಇದ್ದಾರೆ. ಅದಕ್ಕೆ ಭಾರತದಲ್ಲಿ ಡಾಕ್ಟರ್ ವ್ರತ್ತಿ ವಿದ್ಯಾಭಾಸವನ್ನು ಪಡೆದುಕೊಳ್ಳಲು ಭಾರತದಲ್ಲಿ ಕೋಟಿ ಕೋಟಿಯಲ್ಲಿ ಖರ್ಚು ಮಾಡಬೇಕಾಗುತ್ತದೆ ಅದಕ್ಕೆ ಹಿಂದಿನ ಸರಕಾರಗಳು ಕಾರಣ ಎಂದು, ಯುಕ್ರೆನಲ್ಲಿ ವೈದ್ಯಕೀಯ ವಿದ್ಯಾರ್ಥಿ ಯುದ್ದದಲ್ಲಿ ಸತ್ತ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಮೋದಿ ಸರ್ಕಾರ ಬಂದು ೮ ವರ್ಷಗಳಾಗುತ್ತ ಬಂತು, ಹಿಂದಿನ ಸರ್ಕಾರಗಳು ಮಾಡಿದ ತಪ್ಪನ್ನು ಇವರು ಸರಿ ಮಾಡಬಹುದಿತ್ತಲ್ಲ. ಯಾಕೆ ಮಾಡಲಿಲ್ಲ. ಯಾಕೆ!!? ಇವರು ಹಿಂದಿನ ಸರ್ಕಾರಗಳು ಮಾಡಿರುರವ ಜನಪ್ರಿಯ ಯೋಜನೆಗಳ ಹೆಸರನ್ನು ಮಾತ್ರ ಬದಲಾಯಿಸುವುದರಲ್ಲೇ ಮಗ್ನವಾಗಿದ್ದು, ತಮ್ಮ ಕಾಲ ಕಳೆಯುತಿದ್ದಾರಾ ಎಂಬ, ವಿಷಯ ಪ್ರಭುದ್ದ ನಾಗರಿಕರಿಗೆ ಕಾಡುತ್ತಿದೆ. ಸಣ್ಣ ಸಣ್ಣ ಕಾದಟಕ್ಕೆ ಮೀಸಲಾದ ಮೋದಿ ಸರ್ಕಾರಕ್ಕೆ ಯುದ್ದ ಏನೆಂದು ಗೊತ್ತಿಲ್ಲ. ಇದು ನೀಜವಾದ ಯುದ್ದ. ಇಲ್ಲಿನ ಕಷ್ಟ್, ಕಾರ್ಪಣ್ಯ, ದುಸ್ಥಿತಿ ಇವರಿಗೆ ತಿಳಿಯದು. ನಗರ ಪ್ರದೇಶಗಳಲ್ಲಿ ನಡೆಯುವ ಯುದ್ದ, ನಿಜಕ್ಕೂ ಸ್ವರ್ಗವು ನರಕ ಮಾಡುವವ ಭಯಾನಕ ಸ್ಥಿತಿ. ವಾಸ್ತವ ತಿಳಿಯದ ಸರ್ಕಾರ ನಮ್ಮ ಭಾರತೀಯರನ್ನು ಮೊದಲೇ ಕರೆ ತರುವಲ್ಲಿ ವಿಫಲವಾದುದು, ಇಂದಿನ ಸರಕಾರದ ದಯನೀಯ ವಿಫಲವಾಗಿದೆ. ಕೇಂದ್ರ ಸರ್ಕಾರ ಕೇವಲ ಮತ ಗಳಿಕೆ, ಚುನಾವಣೆಯಲ್ಲಿ ಮುಳುಗಿ ಭಾರತವನ್ನು ಮುಳುಗಿಸುವತ್ತ ನಡೆದಿದೆ ಎನ್ನಲು ದುಖವಾಗುತ್ತದೆ’


ನಮ್ಮ ಭಾರತೀಯರು ಹಲವು ಕಷ್ಟ ಕಾರ್ಪಣ್ಯದಿಂದ ಬದುಕಿ ರುಮಾನೀಯಕ್ಕೆ ತೆರಳಿ ಸಚಿವ ಸಿಂಧಿಯಾ ಆಪರೇಷನ್‌ ಗಂಗಾದ ದೊಡ್ಡಸ್ತಿಕೆ ಮಾತನಾಡುವಾಗ ಅಡ್ಡಿಪಡಿಸಿ, ‘ ಈ ಭಾರತೀಯ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವ್ಯವಸ್ಥೆ ಮಾಡಿದ್ದು ನೀವಲ್ಲ’ ನಾವು ಎಂದು ಮೇಯರ್‌ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮುಜುಗರವನ್ನು ತಪ್ಪಿಸುವ ಯತ್ನವನ್ನು ಸಿಂದಿಯಾ ಮಾಡಿದ್ದಾರೆ‌. ರೊಮೇನಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಿಂಧಿಯಾ ಮಾತನಾಡುತ್ತಾ, ತಮ್ಮ ಸರ್ಕಾರವನ್ನು ಹೊಗಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಲ್ಲೇ ಇದ್ದ ರೊಮೇನಿಯಾದ ಮೇಯರ್, ಸಿಂಧಿಯಾ ಮಾತಿಗೆ ಉತ್ತರಿಸಿ ವಾಸ್ತವವಾಗಿ ಮನವರಿಕೆ ಮಾಡಿಸಿದ್ದಾರೆ. ಈ ವೇಳೆ ಅಲ್ಲಿದ್ದ ವಿದ್ಯಾರ್ಥಿಗಳು ಮೇಯರ್ ಗೆ ಚಪ್ಪಾಳೆ ತಟ್ಟಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ

ಯುದ್ಧ ಪೀಡಿತ ಯುಕ್ರೆನಿನಲ್ಲಿ ಕೊಲೆ ದರೋಡೆ ಸುಲಿಗೆ ಆರಂಭ

JANANUDI.COM NETWORK


ರಷ್ಯಾ ಸೈವಿಕರೊ೦ದಿಗೆ ಹೋರಾಡಲು ನಾಗರಿಕರು ಸಹ ಯುದ್ಧದಲ್ಲಿ ಭಾಗಿಯಾಗಬಹುದು ಎ೦ದು ಉಕ್ರೇನ್‌ ದೇಶದ ಅಧ್ಯಕ್ಷರು ಕರೆ ನೀಡಿದ್ದು ನಾಗರಿಕರ ಕೈಯಲ್ಲಿ ಶಸ್ತಾಸ್ತಗಳು ಸಿಕ್ಕಿವೆ, ಇದೀಗ ಎಲ್ಲಾ ನಾಗರಿಕರು ಯುದ್ಧದಲ್ಲಿ
ಭಾಗಿಯಾಗಲು ಶಸ್ತಾಸ್ತಗಳನ್ನು ಕೈಗೆ ತೆಗೆದು ಕೊ೦ಡಿದ್ದಾರೆ, ಆದರೆ ಇದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಕೆಲವರು ಕಿಡಿಗೇಡಿಗಳು ಶಸ್ತಾಸ್ತವನ್ನು ಕೈಯಲ್ಲಿ ಹಿಡಿದು ಉಕ್ರೇನ್‌ ನಲ್ಲಿ ಸಿಕ್ಕಸಿಕ್ಕ ಅಂಗಡಿಗಳಿಗೆ ನುಗ್ಗಿ ದರೋಡೆ ಮಾಡುವುದಲ್ಲದೇ ಕೊಲೆ-ಸುಲಿಗೆ ಮಾಡುತ್ತಿದ್ದಾರೆ. ಇದಿಷ್ಟು ಸಾಲದು ಎ೦ಬ೦ತೆ ಉಕ್ರೇನ್‌ ನಲ್ಲಿ ಇರುವ ಅಮಾಯಕ ಮಹಿಳೆಯರನ್ನು ಅಪಹರಿಸಿ ಬಲತ್ಕಾರ ಕೂಡ ಮಾಡುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎನ್ನುವ೦ತೆ ಯುಎಸ್‌ ಮೂಲದ ವಿದೇಶಾ೦ಗ ನೀತಿ ವಿಶ್ಲೇಷಕ ಕ್ಲಿ೦ಟ್‌ ಎರ್ಲಿಜ್‌ ಎ೦ಬುವವರು ವಿಡಿಯೋವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಉಕ್ರೇನ್‌ನ ದೊಡ್ಡ ನಗರಗಳಲ್ಲಿ ಒಂದಾದ ಖೆರ್ಸನ್‌ನಗರವನ್ನು ರಷ್ಯಾ ಪಡೆಯ ವಶವಾಗಿದೆ

JANANUDI.COM NETWORK

ಕೀವ್‌: ಉಕ್ರೇನ್‌ನ ದೊಡ್ಡ ನಗರಗಳಲ್ಲಿ ಒಂದಾದ ಖೆರ್ಸನ್‌ ನಗರವನ್ನು ರಷ್ಯಾ ಪಡೆ ವಶಪಡಿಸಿಕೊಂಡಿದೆ. ರಷ್ಯಾ ಪಡೆ ಉಕ್ರೇನ್‌ ಮೇಲೆ ಆಕ್ರಮಣ ನಡೆಸಲು ಆರಂಭಿಸಿ.ವಾರವಾಗಿದ್ದು, ವಶಕ್ಕೆ ಪಡೆದ ಮೊದಲ ನಗರ ಇದಾಗಿದೆ ಎಂದು ತಿಳಿದು ಬಂದಿದೆ.. ಖೆರ್ಸನ್‌ ನಗರವನ್ನು ರಷ್ಯಾ ವಶಕ್ಕೆ ಪಡೆದಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
‘ನಗರದ ಎಲ್ಲ ಭಾಗಗಳ ಸುತ್ತಲೂ ರಷ್ಯಾ ಸೇನೆ ಸುತ್ತುವರಿದಿದ್ದು, ಭಾರಿ ಅಪಾಯಕಾರಿ ಸ್ಥಿತಿ ಉಂಟಾಗಿದೆ ಎಂದು ಸ್ಥಳೀಯ ಆಡಳಿತದ ಮುಖ್ಯಸ್ಥ ಗೆನ್ನೆಡಿ ಲಖುತ ಬುಧವಾರ ರಾತ್ರಿ ಟೆಲಿಗ್ರಾಮ್‌ನಲ್ಲಿ ಸಂದೇಶ ರವಾನಿಸಿದ್ದಾರೆ. ಕಪ್ಪು ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಖೆರ್ಸನ್‌ನ ಮೇಯರ್‌ ಇಗೊರ್‌ ಕೊಲೈಖೈವ್‌ ಅವರು ರಷ್ಯಾ ಪಡೆಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು
ಸುದ್ದಿ ಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ. ‘ನಮ್ಮ ಬಳಿ ಆಯುಧಗಳಿಲ್ಲ ಮತ್ತು ನಾವು ಆಕ್ರಮಣಕಾರಿಗಳಲ್ಲಆದರೆ ನಮ್ಮ ನಗರವನ್ನು ರಕ್ಷಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಇಗೊರ್‌ ಕೊಲೈಖೈವ್‌ ಫೇಸ್ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಉಕ್ರೇನ್‌ ನಿಂದ ಮರಳಿದ ವಿದ್ಯಾರ್ಥಿಗಳು ಕೇಂದ್ರದ ಸರಕಾರದ ವಿರುದ್ಧ ಆಕ್ರೋಶ

JANANUDI.COM NETWORK

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ ದೇಶದಿಂದ ಭಾರತಕ್ಕೆ ವಿಶೇಷ ವಿಮಾನಗಳ ಮೂಲಕ ವಾಪಸ್ಸಾದ ವಿದ್ಯಾರ್ಥಿಗಳಿಗೆ ಕೇಂದ್ರದ ಮಂತ್ರಿಗಳು ಗುಲಾಬಿ ಹೂ ಕೊಟ್ಟು ಸ್ವಾಗತಿಸಲಾಗುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರದ ನೆಡೆಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ್‌ ಮೂಲದ ದಿವ್ಯಂಶು ಸಿಂಗ್‌ ಎಂಬ ವಿದ್ಯಾರ್ಥಿ ಉಕ್ರೇನ್‌ ನಿಂದ ಹಂಗೇರಿ ಗಡಿ ತಲುಪಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಭಾರತದ ದೆಹಲಿಗೆ ಮರಳಿದ್ದಾರೆ. ಈ ವೇಳೆ ಗುಲಾಬಿ ಹೂ ಕೊಟ್ಟು ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

  ಈ ವೇಳೆ ಮಾತನಾಡಿದ ದಿವ್ಯಂಶು ಸಿಂಗ್‌,ಭೀಕರ  ಯುದ್ಧ ಸ್ಥಳ ಉಕ್ರೇನ್‌ನಿಂದ ಪಾರಾಗಿ ಹಂಗೇರಿ ಗಡಿ ತಲುಪಿದ ಬಳಿಕ ನಮಗೆ ಭಾರತ ಸರ್ಕಾರ ಸಹಾಯ ಮಾಡಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದಾಗ ಯಾವುದೇ ನಮಗೆ ಭಾರತ ಸರಕಾರದಿಂದ ಸಹಾಯ ಸಿಗಲಿಲ್ಲ. ಹಂಗೇರಿ ತಲುಪಲು ನಮಗೆ ನಾವೇ ಶ್ರಮವಹಿಸಿದ್ದೇವೆ. ನಾವು 10 ಮಂದಿ ಗುಂಪು ಕಟ್ಟಿಕೊಂಡು ದಟ್ಟಣೆಯಿದ್ದ ರೈಲಿನಲ್ಲಿ ಹೇಗೋ ಪ್ರಯಾಣ ಮಾಡಿದೆವು ಎಂದು ತಮ್ಮ ಕಷ್ಟದ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.

ಬಂಟ್ವಾಳದಲ್ಲಿ ಕ್ರೈಸ್ತ ಸಮುದಾಯದಿಂದ ಬ್ರಹತ್ ಮಾನವ ಸರಪಳಿ ಪ್ರತಿಭಟನೆ.

JANANUDI.COM NETWORK

ಬಂಟ್ವಾಳ,ಮಾ.02: ಭಾರತದ ಸಂವಿಧಾನದಲ್ಲಿ ಅಲ್ಪ ಸಂಖ್ಯಾತರಿಗೆ ಇರುವ ಹಕ್ಕುಗಳಿಂದ ನಾವು ವಂಚಿತರಾಗಿದ್ದೇವೆ, ಈ ದೇಶದ ನೈಜ್ಯ ಪ್ರಜೆಗಳಾಗಿ ಭಾರತ ದೇಶದಲ್ಲಿ ಜೀವಿಸುವ ಹಕ್ಕು ನಮಗೆ ಸಿಗಲಿ ಎಂಬ ಉದ್ದೇಶದಿಂದ ನಮ್ಮ ಸಂಸ್ಥೆಗಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಖಂಡಿಸಿ, ಕ್ರೈಸ್ತ ಸಮುದಾಯ ಬಂಟ್ವಾಳ ವತಿಯಿಂದ ಮೊಗರ್ನಾಡ್ ವಲಯದಿಂದ ಬಿ.ಸಿ.ರೋಡ್ ಬೈಪಾಸ್ ಸರ್ಕಲ್ ಬಳಿ ಕೈಸ್ತ ಸಮುದಾಯದವರಿಂದ ಬ್ರಹತ್ ಮಾನವ ಸರಪಳಿ ಪ್ರತಿಭಟನೆ ನಡೆಸಲಾಯಿತು.
ಶ್ರೀ ಹೆರಾಲ್ಡ್ ಡಿಸೋಜರವರು ಪ್ರಾಸ್ತವಿಕ ಭಾಷಣವನ್ನು ಗೈದರು. ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಸಭಾ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊರವರು ಹಾಗೂ ಕಾರ್ಯದರ್ಶಿ ಅಲ್ಪೊನ್ಸ್ ಫೆರ್ನಾಂಡಿಸ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕ್ರೈಸ್ತ ಸಮುದಾಯಗಳ ಮೇಲೆ ನಿರಂತರವಾಗಿ ಹಲ್ಲೆ ದೌರ್ಜನ್ಯಗಳು ನಡೆಯುತ್ತಿವೆ. ಸರಕಾರ ಮತ್ತು ಸಂಭಂದಪಟ್ಟ ಇಲಾಖೆಗಳು, ಅಧಿಕಾರಿಗಳು ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ಒದಗಿಸಬೇಕಾಗಿದೆ. ವಂ| ವಲೇರಿಯನ್ ಡಿಸೋಜ, ವಂ| ಪೀಟರ್ ಡಿಸೋಜ, ವಂ| ಫೆಡ್ರಿಕ್ ಮೊಂತೇರೊ, ವಂ| ಐವನ್ ಪೀಟರ್ ಡಿಮೆಲ್ಲೊ, ವಂ| ಪ್ಯಾಟ್ರಿಕ್ ಸಿಕ್ವೇರಾ, ವಂ| ಜೋನ್ ಪ್ರಕಾಶ್ ಪಿರೇರಾ, ವಂ| ಗ್ರೇಶನ್ ಅಲ್ವಾರಿಸ್, ವಂ| ಫ್ರಾನ್ಸಿಸ್ ಕ್ರಾಸ್ತ, ವಂ| ಲಿಯೊ ಲೋಬೊ, ವಂ| ಆಲ್ವಿನ್ ಡಿಕುನ್ಹ, ವಂ| ಡಾ| ಮಾರ್ಕ್ ಕ್ಯಾಸ್ತೆಲಿನೊ, ವಂ| ಐವನ್ ಮೈಕಲ್ ರೊಡ್ರಿಗಸ್, ವಂ| ಪಾವ್ಲ್ ಪ್ರಕಾಶ್ ಡಿಸೋಜ, ವಂ| ವಿಶಾಲ್ ಮೆಲ್ವಿನ್ ಮೋನಿಸ್, ವಂ| ಸುನಿಲ್ ಪ್ರವೀಣ್ ಪಿಂಟೊ, ವಂ| ಗ್ರೆಗೊರಿ ಪಿರೇರಾ, ವಂ| ಹೆನ್ರಿ ಡಿಸೋಜ, ವಂ| ಸಂತೋಷ್ ಡಿಸೋಜ, ವಂ| ತ್ರಿಶಾನ್, ಅನೇಕ ಧರ್ಮ ಭಗಿನಿಯರು, ಸಾವಿರಾರು ಕ್ರೈಸ್ತ ಭಾಂಧವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನೆಯ ನಂತರ ಕ್ರೈಸ್ತ ಮುಖಂಡರು ಬಂಟ್ವಾಳ ತಹಶೀಲ್ದಾರವರಿಗೆ ಮನವಿಯನ್ನು ಸಲ್ಲಿಸಿದರು. ಶ್ರೀ ವಾಲ್ಟರ್ ನೊರೊನ್ಹ ರವರು ಕಾರ್ಯ ನಿರ್ವಹಿಸಿದರು.

ಮಂಗಳೂರು: ಮತಾಂತರ ವಿರೋಧಿ ಮಸೂದೆ ವಿರೋಧಿಸಿ ಸಾವಿರಾರು ಕ್ಯಾಥೋಲಿಕ್‌ ಬಾಂಧವರು ಒಗ್ಗೂಡಿ ಪ್ರತಿಭಟನೆ

JANANUDI.COM NETWORK

ಮಂಗಳೂರು, ಮಾ.3: ಕೆಥೋಲಿಕ್ ಸಭಾಸಂಘಟನೆಯು ಜಿಲ್ಲೆಯ ಎಲ್ಲಾ ಸ್ಥಳೀಯ ಶಾಖೆಗಳೊಂದಿಗೆ ಮಾರ್ಚ್ 2 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಚರ್ಚ್‌ಗಳ ಹೊರಭಾಗದ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಬುಧವಾರ ಶಾಂತಿಯುತ ಪ್ರತಿಭಟನೆಯ ಸಂಕೇತವಾಗಿ ಮೇಣದಬತ್ತಿಗಳ ಬೆಳಕಿನಲ್ಲಿ ಮಾನವ ಸರಪಳಿ ನಡೆಸಿತು.
ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿದ ಮತಾಂತರ ವಿರೋಧಿ ಮಸೂದೆ.ರೊಸಾರಿಯೊ, ಮಿಲಾಗ್ರೆಸ್, ಬೆಜೈ, ಬೆಂದೂರು, ಬೊಂದೇಲ್ ಸೇರಿದಂತೆ ಎಲ್ಲ ಪ್ಯಾರಿಷ್‌ಗಳಲ್ಲಿ ಏಕಕಾಲಕ್ಕೆ ಸಂಜೆ 6 ಗಂಟೆಗೆ ಪ್ರತಿಭಟನೆ ಆರಂಭವಾಯಿತು. ಸಾವಿರಾರು ಕ್ರೈಸ್ತರು ಪಾಲ್ಗೊಂಡು ದೇಶವನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಅ।ವಂ। ಬಿಷಪ್ ಡಾ। ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ಧರ್ಮಗುರುಗಳು ಮತ್ತು ಸನ್ಯಾಸಿನಿಯರು, ಜೊತೆ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಥೋಲಿಕ್‌ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡ್ಡರು.
ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ಕ್ಯಾಥೋಲಿಕ್ ಸಭೆಯ ಸಹಯೋಗದಲ್ಲಿ ಚರ್ಚ್ ಪ್ರಾಂತದಿಂದ ಮದರ್ ಥೆರೇಸಾ ರಸ್ತೆ (ಫಲ್ನೀರ್) ವರೆಗೆ ಕ್ಯಾಂಡಲ್ ಲೈಟ್ ಮಾನವ ಸರಪಳಿಯ ಪ್ರತಿಭಟನೆಯನ್ನು ಆಯೋಜಿಸಿ ಸರ್ಕಾರವು ಮಂಡಿಸಲು ಉದ್ದೇಶಿಸಿರುವ ಮತಾಂತರ ವಿರೋಧಿ ಮಸೂದೆಯನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಪ್ರತಿಭಟನೆಯನ್ನುಆಯೋಜಿಸಲಾಗಿತ್ತು.
ಪ್ರತಿಭಟನೆಯ ಸಂಚಾಲಕ ಹಾಗೂ ಕರ್ನಾಟಕ ಕ್ಯಾಥೋಲಿಕ್ ಕೌನ್ಸಿಲ್ ಸದಸ್ಯ ಶ್ರೀ ಜಾನ್ ಮೊಂತೇರೊ ಮಾತನಾಡಿ, ಮತಾಂತರ ವಿರೋಧಿ ಮಸೂದೆ ಹಾಗೂ ಕ್ರೈಸ್ತರ ಮೇಲಿನ ದೌರ್ಜನ್ಯ, ನಮ್ಮ ಪ್ರಾರ್ಥನಾ ಕೇಂದ್ರಗಳ ಧ್ವಂಸ, ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವಂತಹ ವಿಷಯಗಳ ವಿರುದ್ಧ ಪ್ರತಿಭಟನೆ .ಉದ್ದೇಶಿತ ಮಸೂದೆಯು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ಮತ್ತು ಅದನ್ನು ದುರುಪಯೋಗಪಡಿಸಿ ಕೊಳ್ಳಬಹುದು ಮತ್ತು ಕ್ರಿಶ್ಚಿಯನ್ ಸಮುದಾಯವು ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗಬಹುದು ಮತ್ತು ಪಾದ್ರಿಗಳು, ಸನ್ಯಾಸಿಗಳು, ಗಣ್ಯರು ಮತ್ತು ಕ್ರೈಸ್ತರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿರುವುದರಿಂದ ಅದನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿ, ಮೌನ ಮೇಣದ ಬತ್ತಿಯ ಪ್ರತಿಭಟನೆಯನ್ನು ಮಾಡಲಾಯಿತು.

Mangaluru: Thousands of Diocesan Catholics unite in protest against Anti Conversion Bill

Mangaluru, Mar 2: The Catholic Sabha, along with all its local branches in the district, held a candle light human chain on the roads and highways outside all the churches throughout Dakshina Kannada district on Wednesday, March 2 as a mark of peaceful protest against the Anti Conversion Bill proposed by the Government of Karnataka.

The protest began at 6 PM simultaneously in all the parishes including Rosario, Milagres, Bejai, Bendoor, Bondel. Thousands of Christians participated expressing concern over the country being divided on communal lines. The priests and nuns led by Bishop Peter Paul Saldanha took part in the protest in large numbers.

Our lady of miracles church in association with catholic sabha has organised candle light human chain protest from the church primises to mother Theresa road(Falnir). The protest was planned by the Mangalore diocese in view of the anti conversion bill proposed to be moved by the government.

Mr. John Monteiro convenor of protest and member of catholic council of Karnataka said, the protest is against anti conversion bill as well as against the issues like atrocities committed on Christians, the demolition and destruction of our prayer centres, hurting the religious sentiments of Christians.

Silent candle light protest is to urge the government to drop the proposed bill as it is in clear violation of constitutional rights and it can also be misused and the Christian community may have to face a lot of hardship priests, nuns, laity leaders and parishioners took part in the protest.

ಜನ ಔಷಧಿ ಸಪ್ತಾಹ: ಮಹಿಳಾ ಶಕ್ತಿ ಅಭಿಯಾನ.

JANANUDI.COM NETWORK


ಕುಂದಾಪುರ, ಫೆ:3 ಜನ ಔಷಧಿ ಸಪ್ತಾಹದ ಮೂರನೇ ದಿನವಾದ ಇಂದು 03-03-2022 ರಂದುಮಹಿಳಾ ಶಕ್ತಿ ಅಭಿಯಾನ. ಜನ ಔಷಧಿ ಫಾರ್ಮಸಿ ಎದುರು ಸುಮಾರು 50 ಮಂದಿ ಮಹಿಳೆಯರಿಗೆ ಈ ಕಾರ್ಯವನ್ನು ಆಯೋಜಿಸ ಲಾಯಿತು.
ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆಯ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಿದರು.
ಮುಖ್ಯ ಅತಿಥಿ ಗಳಾಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ರಾಜೇಶ್ವರಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಯಾಗಿ ಡಾ. ರಶ್ಮಿ ಕುಂದಾಪುರ (community medicine AIIMS Hyderabad ) ಇವರು ಉಪಸ್ಥಿತರಿದ್ದ ಮಹಿಳೆಯರಿಗೆ ರಕ್ತ ಹೀನತೆ ಮತ್ತು ಕೆಲ್ಸಿಯಮ್ ಡೆಫೀಶಿಯನ್ಶಿ ವಿಷಯದಲ್ಲಿ ಮಾಹಿತಿ ನೀಡಿದರು. ಜನ ಔಷಧಿ ಉತ್ಪನ್ನ ಗಳ ಕುರಿತು ಮಾಹಿತಿ ನೀಡಿದರು. ಎಲ್ಲಾ ಉಪಸ್ಥಿತ ಮಹಿಳೆಯರಿಗೆ ಗಿಫ್ಟ್ ಹೆಂಪರ್ ಮತ್ತು ಉಪಹಾರ ನೀಡಲಾಯಿತು.
ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಮತ್ತು ನಾರಾಯಣ ದೇವಾಡಿಗ ಉಪಸ್ಥಿತರಿದ್ದರು.ಕಾರ್ಯಕಾರಿ ಸಮಿತಿಯ ಸದಸ್ಯ ರಾದ ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು.

ಆಗುಂಬೆ ಘಾಟಿಯಲ್ಲಿ ಸಂಚಾರ ಬಂದ್- ಪ್ರಯಾಣಿಕರು ಪರ್ಯಾಯ ಮಾರ್ಗ ಅನುಸರಿಸಿ

JANANUDI.COM NETWORK

ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ -ಹೆಬ್ರಿ ವರೆಗಿನ ರಸ್ತೆ ಡಾಂಬರೀಕರಣ ಕಾರಣದಿಂದಾಗಿ, ಮಾರ್ಚ್ 5 ರಿಂದ 15ನೇ ತಾರೀಕಿನವರೆಗೆ ಹತ್ತು ದಿನಗಳ ಕಾಲ ಆಗುಂಬೆ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರ್ಯಾಯ ಮಾರ್ಗ ಅನುಸರಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

ದಳಸನೂರು ಗ್ರಾಮದ ಕೆರೆ ಗಡಿ ಗುರ್ತಿಸುವಲ್ಲಿ ಕಂದಾಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ:ಎಲ್.ಗೋಪಾಲಕೃಷ್ಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ದಳಸನೂರು ಗ್ರಾಮದ ಕೆರೆ ಗಡಿ ಗುರ್ತಿಸುವಲ್ಲಿ ಕಂದಾಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಕೆರೆ ಅಭಿವೃದ್ಧಿ ಕಾರ್ಯ ಅರ್ಧದಲ್ಲಿ ನಿಂತಿದೆ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕಿನ ದಳಸನೂರು ಗ್ರಾಮದ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿ
ಸರ್ವೆ ನಂಬರ್ 42 ರಲ್ಲಿ 12 ಎಕರೆ ವಿಸ್ತೀರ್ಣದ ಕೆರೆ ಇದೆ. ಕೆಲವು ರೈತರು ಕೆರೆ ಜಮೀನಲ್ಲಿ ಪಹಣಿ ಹೊಂದಿದ್ದರೂ, ಗ್ರಾಮದ ಹಿತದೃಷ್ಟಿಯಿಂದ ಹೂಳು ತೆಗೆಯಲು ಬಿಟ್ಟುಕೊಟ್ಟಿದ್ದಾರೆ. ಆದರೆ ರೈತ ಚಂದ್ರೇಗೌಡ ಅವರು ಮಾತ್ರ ತಮ್ಮ ಹೆಸರಿಗೆ 4 ಎಕರೆ ಪಹಣಿ ಇದೆ ಎಂದು ಹೇಳಿ ಹೂಳು ತೆಗೆಯಲು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಕೆರೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಆದ್ದರಿಂದ ಕೆರೆ ಗಡಿ ಗುರುತಿಸಿ ಕೊಡುವಂತೆ ತಹಶೀಲ್ದಾರರನ್ನು ಕೋರಲಾಗಿತ್ತು. ಕಂದಾಯ ನಿರೀಕ್ಷಕರು ಕೆರೆಗೆ ಭೇಟಿ ನೀಡಿ ಹೋದರು. ಕೆರೆ ಅಳೆಯಲು ಮಾತ್ರ ಯಾರೂ ಬರಲಿಲ್ಲ ಎಂದು ಹೇಳಿದರು.
ಕೆರೆ ಅಭಿವೃದ್ದಿ ಪಕ್ಷಾತೀತವಾಗಿ ನಡೆಯುತ್ತಿದೆ. ಅದಕ್ಕೆ ಇರುವ ಅಡ್ಡಿ ಆತಂಕ ನಿವಾರಣೆ ಮಾಡಬೇಕಾಗಿದೆ. ತಡ ಮಾಡಿದಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ಕಾಲ್ನಡಿಗೆ ಜಾಥಾ ಕೈಗೊಳ್ಳಲಾಗುವುದು. ತಾಲ್ಲೂಕು ಕಚೇರಿ ಎದರುರು ಪ್ರತಿಭಟನೆ ನಡೆಸಲಾಗುವುದು. ಸಮಸ್ಯೆ ಬಗೆಹರಿಸುವಲ್ಲಿ ಸಂಬಂಧ ಅಧಿಕಾರಿಗಳು ವಿಫಲರಾದರೆ ಕೆರೆ ಅಭಿವೃದ್ದಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಕೆರೆಗೆ ಭೇಟಿ ನೀಡಿ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು. ಕಾಮಗಾರಿ ಮುಂದುವರಿಸಲು ಉಂಟಾಗಿರುವ ಸಮಸ್ಯೆ ಕುರಿತು ಚರ್ಚಿಸಿದರು.
ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಮ್ಮ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯದರ್ಶಿ ವೀರಭದ್ರಸ್ವಾಮಿ, ಮುಖಂಡರಾದ ಚಲಪತಿ, ಶಶಿಕುಮಾರ್, ಜಗದೀಶ್, ವಿಶ್ವನಾಥ್, ಶ್ರೀನಿವಾಸಗೌಡ, ರಹಮತ್, ಶಿವಾರೆಡ್ಡಿ, ಭಾರತಿ ನಾರಾಯಣಸ್ವಾಮಿ, ಹರಿಪ್ರಸಾದ್ ಇದ್ದರು.