HOLY ROSARY CHURCH, KUNDAPUR – 450 th JUBILEE SOUVENIR 2021

ಹರ್ಷ ಹತ್ಯೆ ಪ್ರಕರಣ; ಎನ್‌ ಐ ಎ, ಎಫ್‌ ಐ ಆರ್‌ ನಲ್ಲಿ ಆತ೦ಕಕಾರಿ ವಿಷಯ – ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿ೦ದ ಈ ಕೊಲೆ ನಡೆದದ್ದು 

JANANUDI.COM NETWORK


ಶಿವಮೊಗ್ಗ: ಸುಮಾರು ಒ೦ದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೈಗೊಂಡಿದ್ದು ಎಫ್‌ಐಆರ್‌ ಕೂಡ ದಾಖಲಿಸಿ ಕೊಂಡಿತ್ತು.  ಫೆ. 21ರ ರಾತ್ರಿ ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ಹರ್ಷನ  ಕೊಲೆ ಮಾಡಲಾಗಿತ್ತು. ಅಂದು ಹರ್ಷನನ್ನು ಅಟ್ಮಾಡಿಸಿಕೊಂಡು ಹೋದದುಷ್ಕರ್ಮಿಗಳು ಭರ್ಜಿಯಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ತಕ್ಷಣ ಮೆಗ್ರಾನ್‌ ಆಸೃತ್ರಿಗೆ ಕರೆದೊಯ್ದು ದಾಖಲಿಸಿದರೂ ಆತನನ್ನು ಬದುಕುಳಿಯಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೂಲೀಸರು, ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಹತ್ತು ಆರೋಪಿಗಳನ್ನು ಬಂಧಿಸಿ, ಕೇಸು ದಾಖಲಿಸಿಕೊಂಡಿದ್ದರು.    ಬಳಿಕ ರಾಜಕೀಯ ಒತ್ತಡಕ್ಕಾಗಿ ಈ ಪ್ರಕರಣವನ್ನು ಎನ್‌ಐಐಗೆ ಹಸ್ತಾ೦ತರಿಸಲಾಯಿತು.  ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ ಎಫ್‌ಐಆರ್‌ದಾಖಲಿಸಿಕೊ೦ಡಿದೆ. ಎಫ್‌ಐಆರ್‌ ವರದಿಯಲ್ಲಿ ಕೊಲೆ ಹಿ೦ದಿನ ಉದ್ದೇಶವನ್ನು ಉಲ್ಲೇಖಿಸಲಾಗಿದೆ. ಈ ಹಿಂದೆ ವೈಯಕ್ತಿಕ ದ್ವೇಷದಿ೦ದ ಹರ್ಷನನ್ನು ಕೊಲೆ ಮಾಡಲಾಗಿತ್ತು ಎ೦ದು ಹೇಳಲಾಗಗುತಿದ್ದರೂ, ಇದೀಗ ಮತ್ತೊ೦ದು ಆಘಾತಕಾರಿ ವಿಷಯ ಹೊರಬಿದ್ದಿದೆ.   ಆರೋಪಿಗಳು ಕೋಮುಗಲಭೆ ಸೃಷ್ಟಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ತ೦ದು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಉದ್ದೇಶದಿ೦ದಲೇ ಈ ಕೊಲೆಯನ್ನು ನಡೆಸಿದ್ದರು ಎ೦ಬುದು ಎನ್‌ಐಎ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸ೦ಬಂಧಿಸಿದ೦ತೆ ತನಿಖೆ ಮುಂದುವರಿದಿದೆ. ಇನ್ನು ಮುಂದಕ್ಕೆ ನೈಜ್ಯ ಆರೋಪಿಗಳು ಯಾರೆಂದು ಗೊತ್ತಾಗಬೇಕಿದೆ 

ಕಳೆದ ಎರಡು ವಾರಗಳಲ್ಲಿ11ನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ

JANANUDI.COM NETWORK

INDIA-OIL-ENERGY-PETROL

ಹೊಸದಿಲ್ಲಿ ಮಾ.3: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರ ಮತ್ತೊಮ್ಮೆ ಲೀಟರ್‌ಗೆ ತಲಾ 80 ಪೈಸೆಯಷ್ಟು ಹೆಚ್ಚಿಸಲಾಗಿದೆ.ಇದು ಕಳೆದ ಎರಡು ವಾರಗಳಲ್ಲಿ ಇದು 13 ದಿನಗಳಲ್ಲಿ  11ನೇ ಬಾರಿಯ ಹೆಚ್ಚಳವಾಗಿದೆ. ಪ್ರತಿ ಲೀಟರ್ ಬೆಲೆಯಲ್ಲಿ ಒಟ್ಟಾರೆಯಾಗಿ 8ರೂ. ಹೆಚಿದೆ. 

    ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 102.61 ರಿಂದ 103.41 ರಷ್ಟಿದ್ದರೆ, ಡೀಸೆಲ್ ದರಗಳು ಲೀಟರ್‌ಗೆ 93.87 ರಿಂದ94.67 ಕ್ಕೆ ಏರಿದೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ 108.14 ,ಚನೈ-108.21, ಭೂಪಾಲ್-115,ಔರಂಗಾಬದ್ -119,ಆಗ್ರಾ -102.23,ಅಹಮದಾಬಾದ್- 102.29,ಅಲಹಾಬಾದ್ 102.53,ಔರಂಗಾಬಾದ್-119.18,ಭುವನೇಶ್ವರ- 109.50,ಚಂಡೀಗಢ- 101.99,ಡೆಹ್ರಾಡೂನ್ -100.99 ಇದೆ.

ತೈಲಬೆಲೆ ನಿರಂತರವಾಗಿ ಹೆಚ್ಚಳದಿಂದಾಗಿ, ಜನಸಾಮಾನ್ಯರಿಗೆ ತೈಲದ ಬಿಸಿ ತಟ್ಟುವುದಲ್ಲದೆ, ತೈಲ ಬೆಲೆ ಹೆಚ್ಚಿದ್ದರಿಂದ ಸಾಗಾಣೆಯ ಬೆಲೆ ಜಾಸ್ತಿಯಾಗುವುದರ ಜೊತೆ ದೀನ  ನಿತ್ಯದ ಬಳಕೆಯ ಎಲ್ಲಾ ವಸ್ತುಗಳಿಗೂ ಬೆಲೆ ಏರುವುದು ಖಚಿತವಾಗಿದೆ. ನಿರಂತರವಾಗಿ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುತ್ತಿರುವುದು ಇದು  ಜನಸಾಮಾನ್ಯರಿಗೆ ಕಳವಳಕಾರಿ ವಿಷಯವಾಗಿದೆ 

ಹಲಾಲ್ /  ಜಟ್ಕಾ ಕಟ್ ವಿವಾದದ ನಡುವೆ  ಪಶು ಸಂಗೋಪನಾ ಇಲಾಖೆಯಿಂದ ಬೇರೆಯೇ  ಆದೇಶ

JANANUDI.COM NETWORK

ಬೆಂಗಳೂರು,ಎ.2:  ರಾಜ್ಯದಲ್ಲಿ ಹಲಾಲ್ ಕಟ್ ಜಟ್ಕಾ ಕಟ್ ವಿವಾದಗಳ ನಡುವೆ  ಪಶು ಸಂಗೋಪನಾ ಇಲಾಖೆ ಮಹತ್ವದ  ಆದೇಶ ಹೊರಡಿಸಿದೆ. ಮೊದಲಿಗೆ ಪ್ರಾಣಿಗೆ ಚಿತ್ರ  ಹಿಂಸೆ ತಡೆಗಟ್ಟಿ ಎಂದು ಆದೇಶ ಹೊರಡಿಸಲಾಗಿದೆ.

ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದೆ. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ (stunning) ಕಡ್ಡಾಯ ಎಂದು ಸರ್ಕಾರದ ಆದೇಶ ಹೇಳಿದೆ.    ಪ್ರಾಣಿ ವಧೆಗೂ ಮುನ್ನ ಸ್ಟನಿಂಗ್ ಮಾಡಲು ಸೂಚನೆ ನೀಡಲಾಗಿದ್ದು, ಸ್ಟನ್ನಿಂಗ್ ಸಿಸ್ಟಮ್ ಇರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಂದರೆ ಪ್ರಾಣಿ ಹತ್ಯೆಗೂ ಮುನ್ನಾ ಪ್ರಾಣಿಗಳಿಗೆ ಪ್ರಜ್ಞೆ ತಪ್ಪಿಸುವ ವಿಧಾನ ಅನುಸರಿಸಬೇಕಾಗುತ್ತದೆ.  ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ‌ ಅವುಗಳಿಗೆ ನೋವು ತಿಳಿಯುವುದಿಲ್ಲ. ಯಾವುದೇ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ, ಅನೇಕ ದೂರುಗಳು ಪಶು ಸಂಗೋಪನಾ ಇಲಾಖೆಗೆ ಬಂದಿದ್ದವು. ಹೀಗಾಗಿ ಈಗ ಆದೇಶ ಹೊರಡಿಸಲಾಗಿದೆ ಮತ್ತುಮಹತ್ವ ಪಡೆದುಕೊಂಡಿದೆ. 

ಸಚಿವ ವಿ ಸೋಮಣ್ಣ ಜಾಮೀನು ಅರ್ಜಿ ತಿರಸ್ಕ್ರತ ; ಶೀಘ್ರದಲ್ಲೇ ಬಂಧನ ಸಾಧ್ಯತೆ

JANANUDI.COM NETWORK

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ಧ ಅರ್ಜಿಯನ್ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿದೆ. ಅವರ ಮೇಲೆ  ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪ ಇದ್ದು ಜಾಮೀನು  ಅರ್ಜಿಯನ್ನ  ವಜಾಗೊಳಿಸಿದ  ಹಿನ್ನೆಲೆಯಲ್ಲಿ ಸೋಮಣ್ಣಗೆ ಶೀಘ್ರದಲ್ಲೇ ಬಂಧನವಾಗುವ ಸಾಧ್ಯತೆಗಳಿವೆ.      

     ವಿ. ಸೋಮಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ಸಂಬಂಧ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಅವರ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಸಿಆರ್ ಪಿಸಿ ಸೆಕ್ಷನ್ 438ರಡಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗದು. ಈ ಹಂತದಲ್ಲಿ ಜಾಮೀನು ನೀಡಲು ಯಾವುದೇ ಸಕಾರಣಗಳಿಲ್ಲ ವಿಶೇಷ ಕೋರ್ಟ್ ಹೇಳಿದೆ.

     ಸಚಿವ ಸೋಮಣ್ಣ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ನ್ಯಾಯಮೂರ್ತಿ ಎಸ್.ಸುನಿಲ್ ದತ್‌ ಯಾದವ್‌ ಅವರಿದ್ದ ಏಕ ಸದಸ್ಯಪೀಠ ಶುಕ್ರವಾರ ವಿಚಾರಣೆ ನಡೆಸಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿತು. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿದೆ. ಜೊತೆಗೆ ಹೈಕೋರ್ಟ್ ಕೂಡ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಆದಾಯಕ್ಕೆ ಮೀರಿದ ಆಸ್ತಿ ಗಳಿಕೆ ಮತ್ತು ಭಷ್ಟಾಚಾರ ಆರೋಪ ಸಂಬಂಧ ಜನಪ್ರತಿನಿಗಳ ಕೋರ್ಟ್‌ಗೆ ಖುದ್ದು ಹಾಜರಾಗಲು ವಸತಿ ಸಚಿವ ವಿ. ಸೋಮಣ್ಣ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಏಪ್ರಿಲ್‌ 16ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೋಮಣ್ಣ ಅವರಿಗೆ ಆದೇಶಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ 

   ಪ್ರಕರಣದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿ ಸಲ್ಲಿಸಿರುವ ವರದಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಸೋಮಣ್ಣ ಮತ್ತು ಅವರ ಕುಟುಂಬದ ಸದಸ್ಯರ ಆದಾಯ ಮೂಲಗಳು ದಿನೇ ದಿನೇ ಹೇಗೆ ವೃದ್ಧಿಯಾಯಿತು ಎಂಬ ಬಗ್ಗೆ ಸೂಕ್ತ ತನಿಖೆ ನಡೆದಿಲ್ಲ. ಎಲ್ಲವನ್ನೂ ಮುಚ್ಚಿಡಲಾಗಿದೆ ಎಂಬ ಆರೋಪವನ್ನು ನ್ಯಾಯಾಲಯ ಪುರಸ್ಕರಿಸಿದೆ. ಮೂಡಲಪಾಳ್ಯದ ರಾಮಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಸೋಮಣ್ಣ ಮತ್ತು ಕುಟುಂಬದವರು ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಸಾಕಷ್ಟು ಅಕ್ರಮ ಸ್ಥಿರಾಸ್ತಿ ಹೊಂದಿದ್ದಾರೆ. ಮಾರ್ಗದರ್ಶಿ ಮೌಲ್ಯಕ್ಕಿಂತಲೂ ಕಡಿಮೆ ದರದಲ್ಲಿ ಜಮೀನು ಖರೀದಿಸಿದ್ದಾರೆ. ಎಸಿಬಿ ತನಿಖೆಯಲ್ಲಿ ಕೇವಲ ಅವರ ವೈಯಕ್ತಿಕ ಮತ್ತು ಖಾಸಗಿ ಸಾಲಗಳ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಸೋಮಣ್ಣ ಸಾರ್ವಜನಿಕ ಸೇವಕರಾಗಿ ಅಕ್ರಮ ಸಂಪಾದನೆ ಮಾಡುವ ಮೂಲಕ ಕ್ರಿಮಿನಲ್ ದುರ್ನಡತೆ ತೋರಿದ್ದಾರೆ. ಆದ್ದರಿಂದ, ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಕಲಂ 13(1)(ಬಿ) (ಡಿ) ಮತ್ತು (ಇ) ಕಲಂ 13(2)ರ ಅಡಿ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು  ಎಂದು ಅವರು  ಕೋರಿದ್ದಾರೆ.

ಕುಂದಾಪುರದಲ್ಲಿ ಎನ್.ಎಮ್.ಎ. ಕುಂದಾಪುರ ತಾಲೂಕು ಸಮಿತಿಯ 2021-22 ನೇ ಸಾಲಿನ ಮಹಾಸಭೆ

JANANUDI.COM NETWORK

ಕುಂದಾಪುರ: ಎನ್ ಎಮ್ ಎ ಕುಂದಾಪುರ ತಾಲೂಕು ಸಮಿತಿಯ 2021-22 ನೇ ಸಾಲಿನ ಮಹಾಸಭೆಯು ದಿನಾಂಕ 01/04/2022 ರ ಶುಕ್ರವಾರ  ಕುಂದಾಪುರ ಕೋಡಿಯ ಎನ್ ಎಮ್ ಎ ಸೌಹಾರ್ಧ ಭವನದಲ್ಲಿ ಮಹಮ್ಮದ್ ರಫೀಕ್ ಗಂಗೊಳ್ಳಿ ರವರ ಅಧ್ಯಕ್ಷತೆಯಲ್ಲಿ ಹಾಗೂ ಯೂಸುಫ್ ಅಹ್ಮದ್  ಅವರ ಪ್ರವಚನದೊಂದಿಗೆ ಪ್ರಾರಂಭವಾಯಿತು.   

ವೇದಿಕೆಯಲ್ಲಿ ಎನ್ ಎಮ್ ಎ ಕೇಂದ್ರ ಅಧ್ಯಕ್ಷರಾದ ಅಬೂಬಕ್ಕರ್ ಮಹಮ್ಮದ್ ಅಲೀ, ಗೌರವಾಧ್ಯಕ್ಷ ಶೇಖ್ ಅಬೂ ಮಹಮ್ಮದ್ ಹಾಗೂ ಮುಖ್ಯ ಅತಿಥಿ ಇಬ್ರಾಹಿಂ ಹೊಸನಗರ ಇವರು ಉಪಸ್ಥಿತರಿದ್ದರು. ತಾಲೂಕು ಸಮಿತಿಯ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.    ಪ್ರಧಾನ ಕಾರ್ಯದರ್ಶಿ ಬಂದ ಅತಿಥಿಗಳೆಲ್ಲರನ್ನು ಸ್ವಾಗತಿಸಿ  ಸಂಸ್ಥೆಯಲ್ಲಿ ಆದಂತಹ ಕಾರ್ಯಗಳ ವರದಿಯನ್ನು ವಾಚಿಸಿದರು ಮುಖ್ಯ ನಿರ್ವಾಹಕ ಮಹಮ್ಮದ್ ತಾಹಿರ್ ಹಸನ್ ರವರು ಲೆಕ್ಕ ಪತ್ರಗಳನ್ನು ಸಭೆಯಲ್ಲಿ ಮಂಡನೆ ಮಾಡಿ ಸಭೆಯ ಅನುಮೋದನೆ ಪಡೆದರು.   

ಯೂಸುಫ್ ಅಹ್ಮದ್ ರವರು ಹಳೆ ಸಮಿತಿ ಬರ್ಕ್ಸತ್ ಮಾಡಿ 2022-23 ನೇ ಸಾಲಿನ ಹೊಸ ಕಮಿಟಿ ರಚನೆ ಮಾಡಿದರು.   

ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಶೈಖ್ ಅಬು ಮೊಹಮ್ಮದ್, ಮೊಹಮ್ಮದ್ ರಫೀಕ್ ಗಂಗೊಳ್ಳಿ ಅಧ್ಯಕ್ಷರು. ಜಿ.ಪಿ.ಮೊಹಮ್ಮದ್ ಗುಲ್ವಾಡಿ ಹಾಗೂ  ಮೊಹಮ್ಮದ್ ಅಲಿ… ಉಪಾಧ್ಯಕ್ಷರಾಗಿ,  ಮುನಾಫ್ ಕೋಡಿ ಪ್ರಧಾನ ಕಾರ್ಯದರ್ಶಿ, ಬಿ ಎಂ. ನಾಸಿರ್ ಜೊತೆ ಕಾರ್ಯದರ್ಶಿ, ಕೆ.ಮೊಹಮ್ಮದ್,  ಶಾಬಾನ್ ಎ. ಎಚ್. ಹಾಗೂ ನಜೀರ್ ಅಹ್ಮದ್ ಆಲಿ ಲೆಕ್ಕ ಪರಿಶೋಧಕರಾಗಿ ಅಬು ಶೇಕ್, ಅಶ್ರಫ್ ಬ್ಯಾರಿ ಹಾಗೂ ಅಬು ಮೊಹಮ್ಮದ್ ಮುಜಾವರ್ ಸಂಚಾಲಕರಾಗಿ,  ಸದಸ್ಯರಾಗಿ ಖಾದರ್ ಹಳೆಅಳ್ವೆ ,  ರೌಫ್ ಎಂ.ಕೆ, ಅಹ್ಮದ್ ಯೂಸುಫ್.ಅಬ್ದುಲ್ಲ ಕೋಟೆ, ರಿಯಾಜ್.ಕೆ.ಎಸ್., ಅಬ್ದುಲ್ ರಜಾಕ್ ಗೋಪಾಡಿ,  ಪಲ್ಲಿ ಉಸ್ಮಾನ್ ಗುಲ್ವಾಡಿ, ಇಬ್ರಾಹಿಂ ಮಣಿಕೋಲು, ಹಸೈನಾರ್ ಗುಲ್ವಾಡಿ, ರಹೀಮ್.ಕೆ.ಎಸ್,  ಕೆ.ಎಚ್.ಸಲಾಮ್. ಹಿಸ್ಸೈನಾರ್ ಜೊಯ್ನಿ,  ಜಿ.ಎಂ.ಮುಸ್ತಫಾ, ಸಲಾಂ ತೆಕ್ಕಟ್ಟೆ. ಹನೀಫ್ ಎಸ್.ಎಸ್.,  ವಾಸಿ, ಬಾಷಾ, ದಸ್ತಗೀರ್ ಕಂಡ್ಲೂರ್, ಹಿಸ್ಸೈನ್ ಹೈಕಡಿ, ರೌಫ್ ಕೋಟೇಶ್ವರ, ಯಾಸಿನ್ ಹೆಮ್ಮಾಡಿ, ಆರಿಸಿ ಬಂದಿದ್ದಾರೆ. 

ಎನ್ ಎಮ್ ಎ ಸಂಸ್ಥೆಯು 2004 ರಲ್ಲಿ ಸೌದಿ ಅರೇಬಿಯಾದಲ್ಲಿ ಪ್ರಾರಂಭಗೊಂಡಿದ್ದು, ಕುಂದಾಪುರ ತಾಲೂಕಿನಾದ್ಯಂತ ಜಾತಿ ಮತ ಭೇದವಿಲ್ಲದೆ ಬಡವ ಅನಾಥ  ಹೆಣ್ಣು ಮಕ್ಕಳ ಮದುವೆಗಳಿಗೆ  ಸಹಾಯ, ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿವೇತನ, ಹಾಗೂ ಇನ್ನಿತರ ಉತ್ತಮ ಕಾರ್ಯಗಳನ್ನು ಮಾಡುತ್ತಾ 18 ವರ್ಷ ಪೂರೈಸಿ ಯಶಸ್ಸು ಗಳಿಸಿದೆ.   

2018 ರಲ್ಲಿ ಕುಂದಾಪುರ ತಾಲೂಕಿನಾದ್ಯಂತ ಜನರಿಗೆ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಸಂಸ್ಥೆ ಕೋಡಿಯಲ್ಲಿ “ಎನ್ ಎಮ್ ಎ ಪಾಲಿಕ್ಲಿನಿಕ್” ಪ್ರಾರಂಬಿಸಿ 3 ವರ್ಷದಿಂದ ಸೇವೆ ನೀಡುತ್ತಾ ಇದೆ.ಆಸೀಫ್ ಕಾರ್ಯಕ್ರಮ ನಿರೂಪಿಸಿದರು, ಮುನಾಫ್ ಕೋಡಿ ಧನ್ಯವಾದ ಸಮರ್ಪಪಿಸಿದರು. ಅಲ್ಲಾಹುಗೆ ಕ್ರತಜ್ಞೆತೆ ಸಲ್ಲಿಸಿ ಸಭೆ ಮುಕ್ತಾಯಗೊಳಿಸಲಾಯತು.

ವಿವಿಧ ಇಲಾಖೆಗಳ ಮುಖ್ಯಸ್ಥರು ಬಾಬು ಜಗಜೀವನ್ ರಾಮ್ ಜಯಂತಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು ಏ.5 ರಂದು ಬಾಬು ಜಗಜೀವನ್ ರಾಮ್ ಜಯಂತಿ ಹಾಗೂ ಏ.14 ರಂದು ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸರ್ಕಾರದ ನಿಯಮಾನುಸಾರ ಕಡ್ಡಾಯವಾಗಿ ಆಚರಿಸಬೇಕು ಎಂದು ತಹಶೀಲ್ದಾರ್ ಹನ್ಸಾಮರಿಯ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ಚರ್ಚಿಸಲು ಏರ್ಪಡಿಸಲಾಗಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯಂತಿ ಹಿಂದಿನ ದಿನ ರಾತ್ರಿ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ, ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಕಂದಾಯ ಇಲಾಖೆ ಅಧಿಕರಿಗಳು ಅಂಬೇಡ್ಕರ್ ದಿನಾಚರಣೆ ಒಳಗೆ ಜಮೀನನ್ನು ಪಹಣಿಗೆ ಏರಿಸಬೇಕು. ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ರವಿಕುಮಾರ್, ಶಿರಸ್ತೇದಾರ್ ಮನೋಹರ ಮಾನೆ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುಸೇನ್ ಸಾಬ್, ವಿವಿಧ ಇಲಾಖೆ ಅಧಿಕಾರಿಗಳಾದ ಸುರೇಶ್ ಬಾಬು, ಬಾಲಚಂದ್ರ, ಧನಂಜಯ್, ಶ್ರೀನಿವಾಸನ್, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ರಾಮಾಂಜನಮ್ಮ, ವರ್ತನಹಳ್ಳಿ ವೆಂಕಟೇಶ್, ತಮ್ಮಯ್ಯ, ನಾರಾಯಣಸ್ವಾಮಿ, ಈರಪ್ಪ, ಶಂಕರ್, ಆಂಜಿ ಇದ್ದರು.

ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆಯಿಂದ ಜನರ ಹೃದಯಂತಾರದೊಳಗೆ  ಮೌಲ್ಯಗಳು ಸ್ಥಾಪನೆಗೊಳ್ಳುತ್ತವೆ : ವೈ.ಎನ್.ಸತ್ಯನಾರಾಯಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆಯಿಂದ ಜನರ ಹೃದಯಂತಾರದೊಳಗೆ  ಮೌಲ್ಯಗಳು ಸ್ಥಾಪನೆಗೊಳ್ಳುತ್ತವೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಸ್ವಾಮೀಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರು ನಿಜವಾದ ಮಾನವತಾ ವಾದಿಯಾಗಿದ್ದರು. ಜಾತಿ, ಮತ ಭೇದವಿಲ್ಲದೆ ಮಕ್ಕಳಿಗೆ ಅಕ್ಷರ ನೀಡಿದರು. ಅನ್ನದಾಸೋಹ ಮಾಡಿದರು ಎಂದು ಹೇಳಿದರು.
ಅವರ ಬದುಕು ಎಷ್ಟೋ ಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಅವರ ಚೈತನ್ಯ ಶಕ್ತಿ ಸಮಾಜದಲ್ಲಿ ನೆಲೆಗೊಂಡಿದೆ. ಸ್ವಾಮೀಜಿ ಬದುಕಿಗೊಂದು ಮಾದರಿಯಾಗಿದ್ದಾರೆ. ಪ್ರತಿಯೊಬ್ಬರು ಅವರ ಮಾರ್ಗದಲ್ಲಿ ನಡೆದಾಗ ಸವi ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಪುರಸಭೆ ಅಧಿಕಾರಿಗಾಳಾ ಡಿ.ಶೇಖರರೆಡ್ಡಿ, ವಿ.ನಾಗರಾಜ್, ಎನ್.ಶಂಕರ್, ನಾಗರಾಜು, ಸಮುದಾಯದ ಮುಖಂಡರಾದ ವೇದಾಂತ್ ಶಾಸ್ತ್ರಿ, ಸತೀಶ್ ಕುಮಾರ್, ಪ್ರೇಮ್ ಕುಮಾರ್, ರಾಜಣ್ಣ, ರಾಮಲಿಂಗ, ಶಾರದ, ಮಾಲತಿ ಇದ್ದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸನಾತನ ಹಿಂದೂಧರ್ಮದಲ್ಲಿ ಋಷಿ ಮುನಿಗಳು ಅತ್ಯಂತ ವಿಷಿಷ್ಟವಾಗಿ ಹೇಳಿದಂತಾ ಮಾತುಗಳು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸನಾತನ ಹಿಂದೂಧರ್ಮದಲ್ಲಿ ಋಷಿ ಮುನಿಗಳು ಅತ್ಯಂತ ವಿಷಿಷ್ಟವಾಗಿ ಹೇಳಿದಂತಾ ಮಾತುಗಳು, ಮಾತೃಭ್ಯೋನ್ನಮಹ, ಪಿತ್ರುಭ್ಯೋಹ್ನಮಹ, ಗುರುಭೋಹ್ನಮಹ, ಆಚಾರ್ಯಾನ್ನೇಮಃ, ರಾಷ್ಟ್ರದೇವತಾಧ್ಯೋನ್ನಮಹ, ಇದರಲ್ಲಿ ಪ್ರಥಮವಾಗಿ ಮಾತೃಭ್ಯೋಹ್ನಮ:, ಅಂದರೆಎಲ್ಲರಿಗೂ ನಮಸ್ಕಾರ ಮಾಡುವುದರಮೊದಲುತಾಯಿಗೆ ನಮಸ್ಕಾರ ಮಾಡಬೇಕುಎಂದುಯೋಗ ಮತ್ತುಅಧ್ಯಾತ್ಮಿಕ ಗುರುಗಳೂ ಆದ ಶ್ರೀ ಸತ್ಯಮೂರ್ತಿಯವರು ತಿಳಿಸಿದರು.
ತಾಲ್ಲೂಕಿನಪಾಳ್ಯ ಗ್ರಾಮದಲ್ಲಿರುವ ಸರ್ಕಾರಿಕನ್ನಡ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿಮಾತೃಪೂಜಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸತ್ಯಮೂರ್ತಿಯವರು, ಸನಾತನ ಹಿಂದೂಧರ್ಮದಲ್ಲಿ ಋಷಿ ಮುನಿಗಳು ಅತ್ಯಂತ ವಿಷಿಷ್ಟವಾಗಿ ಹೇಳಿದಂತ ಮಾತುಗಳು, ಮಾತೃಭ್ಯೋನ್ನಮಹ, ಪಿತ್ರುಭ್ಯೋಹ್ನಮಹ, ಗುರುಭೋಹ್ನಮಹ, ಆಚಾರ್ಯಾನ್ನೇಮಃ,ರಾಷ್ಟ್ರದೇವತಾಧ್ಯೋನ್ನಮಹ, ಇದರಲ್ಲಿ ಪ್ರಥಮವಾಗಿ ಮಾತೃಭ್ಯೋಹ್ನಮ:, ಅಂದರೆಎಲ್ಲರಿಗೂ ನಮಸ್ಕಾರಮಾಡುವುದರ ಮೊದಲುತಾಯಿಗೆ ನಮಸ್ಕಾರ ಮಾಡಬೇಕು, ತಾಯಿಗೆ ಪ್ರಥಮ ಸ್ಥಾನನೀಡಬೇಕು, ಇಡೀ ಸೃಷ್ಟಿಯಲ್ಲಿ ಮೊದಲುಒಂದುಜೀವಿಗೆಜನ್ಮವನ್ನು ನೀಡುವಂತಹ ಸ್ಥಾನ ಮಾತೃಸ್ಥಾನ, 9 ತಿಂಗಳ ಕಾಲತನ್ನ ಹೊಟ್ಟೆಯಲ್ಲಿ ಹೊತ್ತುತನ್ನಮಗುವನ್ನುಅತ್ಯಂತಜಾಗರೂಕತೆಯಲ್ಲಿ ಬೇಳೆÉಸುವಂತ ಕರ್ತವ್ಯ, ಆ ಸಮಯದಲ್ಲೂ ಸಹ ಆ ತಾಯಿತನ್ನಿಷ್ಟವಾದಂತಹ ಪದಾರ್ಥಗಳನ್ನು ತಿನ್ನುವುದಕ್ಕೆ ಆಗುವುದಿಲ್ಲ, ತನ್ನಿಷ್ಟದಂತೆ ನಡೆದುಕೊಳ್ಳಲೂ ಸಹ ಆಗುವುದಿಲ್ಲ, ಕಾರಣಮಗು ತನ್ನ ಹೊಟ್ಟೆಯಲ್ಲಿ ಬೆಳೆಯಬೇಕು. ಆ ಮಗುವನ್ನುತಾನು ನೋಡಿಯೇಇರುವುದಿಲ್ಲ, ಆದರೂ ಸಹ ಎಷ್ಟೋ ಪ್ರೀತಿ, ಮಗುವನ್ನುಎಷ್ಟೋಚೆನ್ನಾಗಿ ಬೆಳೆÉಯಬೇಕು, ಆರೋಗ್ಯವಂತವಾಗಿ ಬೆಳೆಯಬೇಕಾದರೆ ತನಗೆಇಷ್ಟವಾದಂತ ಪದಾರ್ಥಗಳನ್ನೆಲ್ಲ ಬಿಟ್ಟುಬಿಡುತ್ತಾಳೆ, ಪ್ರಸÀವ ಸಂದರ್ಭದಲ್ಲಿಎಷ್ಟು ಬಾದೆ ಪಡುತ್ತಾಳೆ ಎನ್ನುವುದುತಾಯಂದಿರಿಗೆಗೊತ್ತಿದೆ. ಎಷ್ಟೋ ಕಷ್ಟ ಪಟ್ಟು, ನೋವನ್ನು ಅನುಭವಿಸಿ, ಮಗುವಿಗೆ ಜನ್ಮಕೊಟ್ಟಮೇಲೆತಾಯಿ ಮತ್ತೊಂದುಜನ್ಮ ಪಡೆದಂತೆಆಗುತ್ತದೆ.

ಚಿಕ್ಕ ವಯಸ್ಸಿನಿಂದಲೂ ಸಹ ಮಗುವಿನ ಏಳಿಗೆಗೆ ಶ್ರಮಿಸುತ್ತ್ತಾಳೆ, ಪ್ರತಿಯೊಂದು ಸ್ಥಿತಿಯಲ್ಲೂ ಸಹ ಮಗುವನ್ನು ಬೆಳೆಸುತ್ತಾ, ಮಗುವಿನಲ್ಲಿಉತ್ತಮ ಗುಣಗಳು ಬಂದರೆತಾಯಿ ಎಷ್ಟೋ ಸಂತೋಷ ಪಡುತ್ತಾಳೆ. ಕೆಟ್ಟ ಗುಣಗಳನ್ನು ಹೊಂದಿರುವ ಮಕ್ಕಳಾದರೆ ಆ ಮಗುವನ್ನುತಿದ್ದಲೂ ಸಹ ಕಷ್ಟಪಡುತ್ತಾಳೆ ತಾಯಿ. ಮಗುವನ್ನು ಬೆಳೆಸುವಲ್ಲಿಯಾವುದೇ ಸ್ವಾರ್ಥ ಭಾವನೆಇಲ್ಲದೆ ಮಗುವನ್ನು ಬೆಳೆಸುತ್ತಾಳೆ. ಈ ನಿಸ್ವಾರ್ಥ ಭಾವನೆಯಿಂದಎಲ್ಲಾರೀತಿ ಸೇವೆ ಮಾಡುವಂತಹ ಆ ತಾಯಿಯಒಂದು ವಿಶೇಷವಾದಂತಹ ಪ್ರೀತಿ, ಕಾಳಜಿ ವಾತ್ಸಲ್ಯ ಮಾದುರ್ಯಇವೆಲ್ಲವೂಇದ್ದು, ಮೊದಲುತಾಯಿಗೆ ನಮಸ್ಕಾರ ಮಾಡಬೇಕುಎಂದರು.
ಮಾತ್ರು ವಂದನಾಕಾರ್ಯಕ್ರಮ, ಅಧ್ಬುತವಾದಂತಹಕಾರ್ಯಕ್ರಮ, ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಪ್ರತಿಯೊಂದು ಶಾಲೆಯಲ್ಲಿ ಮಾಡಬೇಕುಎಂದರು. ಮಕ್ಕಳಲ್ಲಿ ಪೂಜ್ಯ ಭಾವನೆಯನ್ನು ಬೆಳೆಸುವಂತೆ ಮಾಡಬೇಕು. ಇಲ್ಲಿಇರುವಂತಹ ಮುಖ್ಯೋಪಾಧ್ಯಯರು ಮತ್ತುಇಲ್ಲಿನ ಸಿಬ್ಬಂದಿ ವಿಶೇಷವಾದಸಂಸ್ಕಾರವನ್ನು ಹೊಂದಿರುವುದರಿಂದ ಈ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯಎಂದರು.
ಈ ಸಂದರ್ಭದಲ್ಲಿಮುಖ್ಯೋಪಾದ್ಯಾಯರಾದ ಶಿವಮೂರ್ತಿಯವರು ಮಾತನಾಡಿದರು.
ಈ ಸಂದರ್ಭದಲ್ಲಿಸಿ.ಆರ್.ಪಿ. ಮಮತ, ಶಿಕ್ಷಕರಾದ ವಿ. ರವೀಂದ್ರ, ಶ್ರೀರಾಮಪ್ಪ, ಶ್ರೀನಾಥ ಎಂ. ಪೆÇೀಷಕರು ಮಕ್ಕಳು ಹಾಜರಿದ್ದರು,

ಇಂದಿನಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯ ಬಿಸಿ ನೇರವಾಗಿ ಜನ ಸಾಮಾನ್ಯರಿಗೆ ತಟ್ಟಲಿದೆ

JANANUDI.COM NETWORK

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಳೆದ ತಿಂಗಳು ಮಂಡಿಸಿದ 2022-23ನೇ ಸಾಲಿನ ಆಯವ್ಯಯದಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದ ಪರಿಣಾಮ ಇಂದಿನಿಂದ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣಲಿದೆ. ಅಬಕಾರಿ ಸುಂಕವನ್ನು ಹೆಚ್ಚಿಸಿದ ಪರಿಣಾಮ ಕಚ್ಚಾ ವಸ್ತು, ಅವುಗಳಿಗೆ ಸಂಬಂಧಿಸಿದ ಉತ್ಪನ್ನಗಳ ಬೆಲೆಗಳು ಸಹ ಏರಿಕೆಯಾಗಲಿವೆ.ಅಗತ್ಯವಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯು ಬಿಸಿ ನೇರವಾಗಿ ಜನ ಸಾಮಾನ್ಯರಿಗೆ ತಟ್ಟಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನರು ಸೋತಿರುವಾಗ  ಬೆಲೆ ಏರಿಕೆಯ ಹೊರೆಯನ್ನು ಮತ್ತಷ್ಟು ಹೆಚ್ಚಿಗೆ ಹೊತ್ತುಕೊಳ್ಳಬೇಕಾದ ಪರಿಸ್ಥತಿ ಅನಿವಾರ್ಯವಾಗಿ ಜನರು ಹೈರಾಣಾಲಯಗಳಲಿದ್ದಾರೆ.     

  ಈಗಾಗಲೇ ಪೆಟ್ರೋಲ್​, ಡಿಸೇಲ್, ಗ್ಯಾಸ್‌ ಸಿಲಿಂಡರ್‌​ ದರ ನಿರಂತರ ಏರಿಕೆಯಿಂದಾಗಿ ಸಾಮಾನ್ಯ ಜನರು ಕಂಗೆಟ್ಟಿದ್ದಾರೆ. ಈ ಬೆಲೆ ಏರಿಕೆ ಹೊಟೇಲ್​ ಊಟ, ತಿಂಡಿ ಮೇಲೂ ಆಗಿದೆ.ಅದರೊಂದಿಗೆ, ಸೂಚಿತ ಔಷಧಗಳ ಮೇಲೆ ಕೇಂದ್ರ ಸರಕಾರವು ಶೇ. 10.7 ಅಧಿಕ ದರ ಏರಿಕೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನೋವು ನಿವಾರಕಗಳು, ರೋಗ ನಿರೋಧಕಗಳು, ಸೋಂಕು ನಿವಾರಕಗಳು ಸೇರಿದಂತೆ ಇತರ ಅಗತ್ಯ ಔಷಧಗಳು ಏರಿಕೆಯಾಗಲಿವೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯಲ್ಲಿ 800 ವಿಧದ  ಅಗತ್ಯ ಔಷಧಗಳಿವೆ.

 ಇನ್ನು ಮನೆ ನಿರ್ಮಾಣ ಸಾಮಾಗ್ರಿಗಳ ಬೆಲೆ ಏರಿಕೆಯಾಗಿರುವದುರಿಂದ ಮನೆ ಖರೀದಿ ಮೇಲೆ ಶೇ 10-20 ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತದೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ತೆರಿಗೆಯನ್ನು ಕೂಡ  ಹೆಚ್ಚಿಸಿದೆ. ಏಪ್ರಿಲ್ 1 ರಿಂದ 10 ರಿಂದ 65 ರೂ.ವರೆಗೆ ದುಬಾರಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಣ್ಣ ವಾಹನಗಳಿಗೆ 10-15 ರೂ., ವಾಣಿಜ್ಯ ವಾಹನಗಳ ಟೋಲ್ ತೆರಿಗೆಯನ್ನು 65 ರೂ. ಹೆಚ್ಚಳವಾಗಲಿದೆ. ಅಂದರೆ ಇಲ್ಲಿವರೆಗೆ ಕಾರು ಮತ್ತು ಜೀಪ್‌ಗೆ 140 ರೂ. ಟೋಲ್  ಪಾವತಿಸುತ್ತಿದ್ದರೆ, ಇನ್ನು ಮುಂದೆ 155 ರೂ. ಪಾವತಿಸಬೇಕಾಗುತ್ತದೆ. ಹಲವು ಬಗೆಯ ವಾಹನಗಳಿಗೆ ಶೇ.10-15ರಷ್ಟು ಟೋಲ್ ತೆರಿಗೆ ಹೆಚ್ಚಿಸಲಾಗಿದೆ.            

ಕಚ್ಚಾ ವಸ್ತುಗಳ ದುಬಾರಿ ಪೂರೈಕೆಯಿಂದಾಗಿ, ಕಂಪನಿಗಳ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತದೆ ಮತ್ತು ಅದರ ನೇರ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ. ಇದಲ್ಲದೇ ಕಂಪ್ರೆಸರ್ ನಲ್ಲಿ ಬಳಸುವ ಬಿಡಿಭಾಗಗಳ ಮೇಲೂ ಆಮದು ಸುಂಕವನ್ನು ಹೆಚ್ಚಿಸಲಾಗಿದ್ದು, ಇದರಿಂದ ರೆಫ್ರಿಜರೇಟರ್ ಗಳ ಬೆಲೆಯೂ ಹೆಚ್ಚಾಗಲಿದೆ. ಅಲ್ಯೂಮಿನಿಯಂ ಅದಿರು ಮತ್ತು ಸಾಂದ್ರೀಕರಣದ ಮೇಲೆ ಶೇಕಡಾ 30 ರಷ್ಟು ಆಮದು ಸುಂಕವನ್ನು ಹೆಚ್ಚಿಸಲಾಗಿದೆ . ಇವುಗಳನ್ನು ಟಿವಿ, ಎಸಿ ಮತ್ತು ಫ್ರಿಡ್ಜ್​​ನ ಹಾರ್ಡ್‌ವೇರ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಲ್‌ಇಡಿ ಬಲ್ಬ್‌ಗಳನ್ನು ತಯಾರಿಸಲು ಬಳಸುವ ವಸ್ತುಗಳಿಗೆ ಮೂಲ ಕಸ್ಟಮ್ಸ್ ಸುಂಕ ಮತ್ತು ಶೇಕಡಾ 6 ಮರುಪಾವತಿ ಸುಂಕವನ್ನು ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ. ಏಪ್ರಿಲ್ 1ರಿಂದ ಅದರ ಹೊಸ ನಿಯಮ ಜಾರಿಯಾದ ನಂತರ ಎಲ್ ಇಡಿ ಬಲ್ಬ್ ಗಳೂ ದುಬಾರಿಯಾಗಲಿವೆ.

ಬೆಳ್ಳಿಯ ಮೇಲಿನ ಆಮದು ಸುಂಕವನ್ನೂ ಬದಲಾಯಿಸಿದೆ ಇದರ ಪರಿಣಾಮ ಬೆಳ್ಳಿ ವಸ್ತು ಮಾತ್ರವಲ್ಲದೇ, ಉಕ್ಕಿನ ವಸ್ತುಗಳು ಕೂಡ ದುಬಾರಿ ಆಗಲಿದೆ.  ಹಲವು ಆಟೊಮೊಬೈಲ್‌ ಕಂಪನಿಗಳ ಕಾರು, ಎಸ್‌ಯುವಿ ದರಗಳು ಏಪ್ರಿಲ್‌ 1ರಿಂದ ಏರಿಕೆಯಾಗುತ್ತಿದೆ. ಟೊಯೊಟಾ ಜತೆಗೆ ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್‌ ಬೆಂಜ್‌ ಇತ್ಯಾದಿ ಐಷಾರಾಮಿ ಬ್ರ್ಯಾಂಡ್‌ಗಳ ಕಾರುಗಳ ದರ ಹೆಚ್ಚಲಿದೆ.