HOLY ROSARY CHURCH, KUNDAPUR – 450 th JUBILEE SOUVENIR 2021

ಸರ್ಕಾರಿ ಕೆರೆಯ ಸುಳ್ಳು ದಾಖಲೆ ಮಾಡಿ ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿದ ಅಧಿಕಾರಿಗಳ ವಿರುದ್ದ ಕೇಸ್ ದಾಖಲು ಮಾಡಲು ಒತ್ತಾಯ

ಕೋಲಾರ,ಜೂ-23, ವಕ್ಕಲೇರಿ ಹೋಬಳಿ, ಆಲಹಳ್ಳಿ ಗ್ರಾಮದ ಸ.ನಂ.127 ರ 3.23 ಗುಂಟೆ ಸರ್ಕಾರಿ ಕೆರೆ ಕರಾಬು ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿ ಮಾಡಿ ಸನ್‍ಲಾರ್ಜ್ ಕಂಪನಿಗೆ ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾಧಿಕಾರಿಳಾದ ವೆಂಕಟರಾಜು ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿಗಳ ಪೋರ್ಜರಿ ಸಹಿಯನ್ನು ಪತ್ತೆ ಹಚ್ಚಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಕೆರೆ ಕಟ್ಟೆ ಜಮೀನನ್ನು ಉಳಿಸಿದಂತಹ ತಹಶೀಲ್ಧಾರ್ ನಾಗರಾಜ್‍ರವರಿಗೆ ರೈತ ಸಂಘದಿಂದ ದನ್ಯವಾದಗಳು, ಇದೇ ರೀತಿ ತಾಲ್ಲೂಕು ಕಚೇರಿಯ ಮೂಲೆ ಮೂಲೆಯಲ್ಲೂ ದಲ್ಲಾಳಿಗಳ ಆರ್ಭಟಕ್ಕೆ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ ಎಂದು ಸಲಹೆ ನೀಡಿದರು.
ಸರ್ಕಾರದ ಆಸ್ತಿಗಳನ್ನು ಉಳಿಸಬೇಕೆಂಬ ಛಲ ನಮ್ಮದು ಸರ್ಕಾರದ ಸಂಬಳ ಪಡೆದು ಐಷಾರಾಮಿ ಜೀವನಕ್ಕೆ ಹಣ ಸಕಾಗದೆ ಅಕ್ರಮ ಆಸ್ತಿಗಾಗಿ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವ ಉದ್ಯೋಗ ಕಂದಾಯ, ಸರ್ವೆ ಅಧಿಕಾರಿಗಳದೆಂದು ಜಿಲ್ಲಾದ್ಯಂತ ತಾಲ್ಲೂಕು ಕಛೇರಿಗಳ ಅವ್ಯವಸ್ಥೆ ಬಗ್ಗೆ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿಗೌಡ ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಒಂದು ತಾಲ್ಲೂಕು ಕಛೇರಿಯಲ್ಲಿ ಬದುಕಿದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಾರೆ. ಮತ್ತೊಂದು ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡುತ್ತಾರೆ. ತಾಲ್ಲೂಕು ಕಚೇರಿಯಲ್ಲಿ ಆಲಹಳ್ಳಿ ಸ.ನಂ. 127 ರಲ್ಲಿ 3 ಎಕರೆ 23 ಗುಂಟೆಯನ್ನು ಸನ್‍ಲಾರ್ಜ್ ಕಂಪನಿಯವರಿಗೆ ಸರ್ಕಾರಿ ಕೆರೆ ಕಟ್ಟೆಯನ್ನೇ 50 ಲಕ್ಷ ಲಂಚ ಪಡೆದು ಕೋಲಾರ ತಾಲ್ಲೂಕು ಕಚೇರಿಯಲ್ಲಿನ 4-5 ಜನ ಕಂದಾಯ ಅಧಿಕಾರಿಗಳು ಸರ್ಕಾರದ ಕಾರ್ಯದರ್ಶಿಯಿಂದ ತಿರಸ್ಕøತವಾಗಿರುವ ಉಲ್ಲೇಖ ಪತ್ರವನ್ನು ಭೊಗಸ್ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಿ ಸರ್ವೆ ಇಲಾಖೆಯಿಂದ ಮಂಜೂರು ಮಾಡಬಾರದೆಂಬ ಆದೇಶವನ್ನೇ ಉಲ್ಲಂಘನೆ ಮಾಡಿ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡುವ ಮುಖಾಂತರ ಕಂದಾಯ ಇಲಾಖೆಯ ಬ್ರಹ್ಮಾಂಡ ಭ್ರಷ್ಠಾಚಾರಕ್ಕೆ ಕನ್ನಡಿಯಾಗಿದೆ ಎಂದು ಅವ್ಯವಸ್ಥೆಯ ವಿರುದ್ದ ಕಿಡಿಕಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ. ಸರಿಪಡಿಸಬೇಕಾದ ಸರ್ಕಾರ ಕೋಲಾರ ಜಿಲ್ಲೆಗೆ ಕೂಗಳತೆ ದೂರದಲ್ಲಿದ್ದರೂ ಜಿಲ್ಲೆಯನ್ನು ನಿರ್ಲಕ್ಷೆ ಮಾಡುವ ಜೊತೆಗೆ ಸರ್ಕಾರಿ ಕಛೇರಿಗಳು ಬಡ ಕೂಲಿ ಕಾರ್ಮಿಕರ ರಕ್ತ ಹೀರುವ ಇಲಾಖೆಗಳಾಗಿ ಮಾರ್ಪಟ್ಟಿದರು ಸರಿಪಡಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಾಮಕವಸ್ತ ಸಚಿವರಾಗಿ ಬಿ.ಜೆ.ಪಿ ಕಾರ್ಯಕರ್ತರ ಸಭೆಗಳಿಗೆ ಸೀಮಿತವಾಗಿದ್ದಾರೆಂದು ಆರೋಪ ಮಾಡಿದರು.
ಇನ್ನು ಜಿಲ್ಲೆಯ ತಾಲ್ಲೂಕು ಆಡಳಿತದ ಕಂದಾಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿದರೆ ಇನ್ನು ಜನ ಸಾಮಾನ್ಯರಿಗೆ ನ್ಯಾಯ ಸಿಗುವುದುಂಟೆ ಕಟ್ಟಕಡೆಯ ರೈತ ಕೂಲಿ ಕಾರ್ಮಿಕರಿಗೆ ನ್ಯಾಯ ಸಿಗಬೇಕಾದ ಅಕ್ರಮ ದಾಖೆಲ ಸೃಷ್ಟಿ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿರುವ ಕಂದಾಯ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲು ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಸರ್ಕಾರಿ ಆಸ್ತಿಗಳನ್ನು ಉಳಿಸಲು ಮಾನ್ಯ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ವೆಂಕಟರಾಜು ರವರು ಅಕ್ರಮ ಸರ್ಕಾರಿ ಕೆರೆ ಕಟ್ಟೆಯನ್ನು ಮಂಜೂರು ಮಾಡಲು ತನ್ನ ಸಹಿಯನ್ನು ನಕಲು ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ದಂಡಾಧಿಕಾರಿಗಳಿಗೆ ಸೂಚನೆ ಮಾಡಿ ತನಿಖೆ ನಡೆಸಿ ಅಮಾನತ್ತು ಮಾಡುವ ಬರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಕೋಲಾರ ತಾಲ್ಲೂಕು ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ನಾರಾಯಣಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಯಲ್ಲಣ್ಣ, ವಿಭಾಗೀಯ ಕಾರ್ಯದರ್ಶಿ ಪಾರುಕ್‍ಪಾಷ, ವಿಜಯ್‍ಪಾಲ್, ವಿಶ್ವ, ಬಂಗಾರಿ ಮಂಜು, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ ಮುಳಬಾಗಿಲು ತಾ.ಅದ್ಯಕ್ಷ ಯಲುವಳ್ಳಿ ಪ್ರಬಾಕರ್, ಮುಂತಾದವರು ಇದ್ದರು.

ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜನರಲ್ಲಿ ಜೀವ ವಿಮೆ ಕಾಡಿಸಬೇಕಾದ ಅಗತ್ಯ ಕುರಿತು ಅರಿವು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜನರಲ್ಲಿ ಜೀವ ವಿಮೆ ಕಾಡಿಸಬೇಕಾದ ಅಗತ್ಯ ಕುರಿತು ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ತಾಲ್ಲೂಕು ಎಲ್‍ಐಸಿ ಶಾಖೆಯ ಹಿರಿಯ ವ್ಯವಸ್ಥಾಪಕ ಸಿದ್ದೇಶ್ ಹೇಳಿದರು.
ಪಟ್ಟಣದ ಎಲ್‍ಐಸಿ ಕಚೇರಿ ಸಭಾಗಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಎಲ್‍ಐಸಿ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಆರೋಗ್ಯ ವಿಮಾ ಸೌಲಭ್ಯ, ಜನಾರೋಗ್ಯ ಕ್ಷೇತ್ರದಲ್ಲಿ ಮಹತ್ವ ಪಡೆದಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಜೀವ ವಿಮೆ ಮಾಡಿಸುವ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯವಿದೆ. ಆರ್ಥಿಕ ಸಮಸ್ಯೆಗಳು ಗ್ರಾಮೀಣ ಜನರನ್ನು ಕಾಡುತ್ತಿವೆ. ಅದಕ್ಕೆ ವಿಮಾ ಪಾಲಿಸಿ ಪರಿಹಾರವಾಗಬಲ್ಲದು. ಎಲ್‍ಐಸಿ ಅಗತ್ಯುತ್ತಮ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರ ಪೂರ್ಣ ಪ್ರಯೋಜನ ಅರ್ಹರಿಗೆ ದೊರೆಯುವಂತೆ ಮಾಡಲು ಪ್ರತಿನಿಧಿಗಳು ಶ್ರಮ ವಹಿಸಬೇಕು ಎಂದು ಹೇಳಿದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕೆ.ಕುಲಕರ್ಣಿ ಮಾತನಾಡಿ, ಭಾರತೀಯ ಜೀವ ವಿಮಾ ಕಂಪನಿ ದೇಶದ ಅತಿ ದೊಡ್ಡ ಆರ್ಥಿಕ ಸಂಸ್ಥೆಯಾಗಿದೆ. ಅದು ದೇಶದ ಆರ್ಥಿಕಾಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ. ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ತಾಲ್ಲೂಕು ಜೀೀವ ವಿಮಾ ನಿಗಮದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ : ಸತತ ಪ್ರಯತ್ನ ಮತ್ತು ಉತ್ತಮ ಗುಣಮಟ್ಟದ ತರಬೇತಿಯಿಂದ ನಿಮ್ಮ ಸಾಧನೆಗೆ ಸಹಕಾರಿಯಾಗುತ್ತದೆ – ಬಿ.ಪಿ.ವರದರಾಯ್ ಪೈ

JANANUDI.COM NETWORK

ಕುಂದಾಪುರ: ಸತತ ಪ್ರಯತ್ನ ಮತ್ತು ಉತ್ತಮ ಗುಣಮಟ್ಟದ ತರಬೇತಿಯಿಂದ ನಿಮ್ಮ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಗಳಾದ ಬಿ.ಪಿ.ವರದರಾಯ್ ಪೈ ಅವರು ಹೇಳಿದರು.
ಅವರು ದಿನಾಂಕ 22ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಮತ್ತು ಉತ್ತರಪ್ರದೇಶದ ನೋಯ್ಡಾ ಇಲ್ಲಿನ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯ ಸಹಯೋಗದಲ್ಲಿ ಸಿ.ಇ.ಟಿ, ಐಐಟಿ-ಜೆಇಇ, ನೀಟ್ ಮತ್ತು ಎಂ.ಇ.ಟಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಸಮಯ ಪ್ರಜ್ಞೆ, ಏಕಾಗ್ರತೆ, ಸತತ ಓದು ಗುಣಮಟ್ಟದ ತರಬೇತಿ ತುಂಬಾ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯು ಉತ್ತಮ ತರಬೇತಿಯ ಉಪಯೋಗವನ್ನು ಪಡೆದುಕೊಂಡು ಒಳ್ಳೆಯ ಶಿಕ್ಷಣ ಪಡೆಯಬೇಕು. ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಹಾಕುವ ಬಂಡವಾಳದಿಂದ ಕುಟುಂಬ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಎಂದು ಹೇಳಿದರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಅಡಿಯಲ್ಲಿ ಬರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನಲ್ಲಿ ಅಧ್ಯಯನ ಮಾಡಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಅದರ ಆಯ್ಕೆ ಪ್ರಕ್ರಿಯೆಗೆ ಅನುಸಾರವಾಗಿ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯ ಕರ್ನಾಟಕದ ಬಿಸಿನೆಸ್ ಮುಖ್ಯಸ್ಥರಾದ ವಿನೋದ್ ರಮೇಶ್, ಡೆಪ್ಯೂಟಿ ವ್ಯವಸ್ಥಾಪಕರಾದ ದಿಶಾ ಶೆಟ್ಟಿ, ಉಪನ್ಯಾಸಕ ಜೀವಶಾಸ್ತ್ರ ಡಾ. ನಿರಂಜನ, ನಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಪ್ರಕಾಶ್ ಸೋನ್ಸ್, ರಾಜೇಂದ್ರ ತೋಳಾರ್, ಸದಾನಂದ ಛಾತ್ರ , ಜಯಕಾರ ಶೆಟ್ಟಿ , ಆಡಳಿತ ಮಂಡಳಿಯ ಸದಸ್ಯರಾದ ಪ್ರಜ್ಞೇಶ್ ಪ್ರಭು, ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಸರೋಜಾ ಎಂ. ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಡೊಮಿನಿಕ್ ವಿನಸ್ಟನ್ ಬ್ರಗಾಂಝಾ ಕಾರ್ಯಕ್ರಮ ನಿರೂಪಿಸಿದರು.


ಶ್ರೀನಿವಾಸಪುರ :ಎಸ್ಸಿ, ಎಸ್ಟಿ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲ್ಲೂಕಿನ ನೂತನ ಅಧ್ಯಕ್ಷರಾಗಿ ಜಿ.ವಿ.ಶ್ರೀನಿವಾಸ್ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ತಾಲ್ಲೂಕು ಶಾಖೆಯ 2022-23ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಜಿ. ಹೆಚ್.ಪಿ.ಎಸ್.ಯದರೂರು, ಮುಖ್ಯ ಶಿಕ್ಷಕ ವಿ.ಮುನಿಶಾಮಿ, ಅಧ್ಯಕ್ಷರಾಗಿ ಸ.ಕಿ.ಪ್ರಾ.ಶಾಲೆ ಪೆದ್ದಪಲ್ಲಿ ಸಹ ಶಿಕ್ಷಕ ಜಿ.ವಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಸ.ಕಿ.ಉ.ಪ್ರಾ.ಶಾಲೆ, ಮುತ್ತಕಪಲ್ಲಿ ಸಹ ಶಿಕ್ಷಕ ಟಿ.ಪೆದ್ದಪ್ಪಯ್ಯ, ಉಪಾಧ್ಯಕ್ಷರುಗಳಾಗಿ ಸ.ಕ.ಕಿ.ಪ್ರಾ.ಶಾಲೆ, ಮಂಜಲನಗರ ಸಹ ಶಿಕ್ಷಕ ಎಂ.ಶ್ರೀನಿವಾಸಮೂರ್ತಿ, ಸ.ಹಿ.ಪ್ರಾ.ಶಾಲೆ ಮಾಸ್ತೇನಹಳ್ಳಿ ಸಹ ಶಿಕ್ಷಕ ಹೆಚ್.ಎ.ಶ್ರೀನಿವಾಸಪ್ಪ, ಖಜಾಂಚಿಯಾಗಿ ಸ.ಕ.ಕಿ.ಪ್ರಾ.ಶಾಲೆ, ಬುರಕಾಯಲಕೋಟೆ ಸಹ ಶಿಕ್ಷಕ ಎ.ನಾಗರಾಜ, ಕಾರ್ಯಾಧ್ಯಕ್ಷರಾಗಿ ಜಿ.ಹೆಚ್.ಪಿ.ಎಸ್. ನಕ್ಕಲಗಡ್ಡ ಮುಖ್ಯ ಶಿಕ್ಷಕ ಎಂ.ಪಿ.ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಸ.ಕಿ.ಪ್ರಾ.ಶಾಲೆ ಗುಂತವಾರಪಲ್ಲಿ ಸಹ ಶಿಕ್ಷಕ ಸಿ.ನಾಗೇಂದ್ರ, ಸ.ಕಿ.ಪ್ರಾ.ಶಾಲೆ, ಬಚ್ಚವಾರಪಲ್ಲಿ ಸಹ ಶಿಕ್ಷಕ ಎಂ.ರಾಮಚಂದ್ರ, ಸ.ಕಿ.ಪ್ರಾ.ಶಾಲೆ, ಬಗಲಹಳ್ಳಿ ಸಹ ಶಿಕ್ಷಕ ನಾರಾಯಣಸ್ವಾಮಿ, ಸ.ಹಿ.ಪ್ರಾ.ಶಾಲೆ ವೇಂಪಲ್ಲಿ, ಮುಖ್ಯ ಶಿಕ್ಷಕ ವಿ.ನಾರಾಯಣಸ್ವಾಮಿ, ಸ.ಹಿ.ಪ್ರಾ.ಶಾಲೆ, ಜೀಡಮಾಕಲಹಳ್ಳಿ ಮುಖ್ಯ ಶಿಕ್ಷಕ ಚಂದ್ರಣ್ಣ ವಿ., ಸ.ಹಿ.ಪ್ರಾ.ಶಾಲೆ, ರಂಗಾರಸ್ತೆ, ಶ್ರೀನಿವಾಸಪುರ ಟೌನ್ ಮುಖ್ಯ ಶಿಕ್ಷಕಿ ಆದಿಲಕ್ಷ್ಮಮ್ಮ, ಸಹಕಾರ್ಯದರ್ಶಿಗಳಾಗಿ ಸ.ಕಿ.ಪ್ರಾ.ಶಾಲೆ, ಅಮ್ಮಗಾರಿಪೇಟೆ ಸಹ ಶಿಕ್ಷಕ ಆಂಜಪ್ಪ ಕೆ.ಎಸ್. ಸ.ಹಿ.ಪ್ರಾ.ಶಾಲೆ ಮಣಿಗಾನಹಳ್ಳಿ ಮುಖ್ಯ ಶಿಕ್ಷಕಿ ವೆಂಕಟಲಕ್ಷ್ಮಮ್ಮ, ಪತ್ರಿಕಾ ಕಾರ್ಯದರ್ಶಿಗಳಾಗಿ ಸ.ಹಿ.ಪ್ರಾ.ಶಾಲೆ ರೆಡ್ಡಂಪಲ್ಲಿ, ಸಹ ಶಿಕ್ಷಕ ಕೆ.ಪಿ.ನಾರಾಯಣಸ್ವಾಮಿ, ಬದ್ದಿಪಲ್ಲಿ ಶಾಲೆಯ ಸಹ ಶಿಕ್ಷಕ ಬಿ.ಕೆ.ವೆಂಕಟರವಣ ರವರನ್ನು ಜಿಲ್ಲಾ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎನ್.ಮುನಿಯಪ್ಪ ರವರು ರಾಜ್ಯ ಸಮಿತಿ ಹಾಗೂ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ಪಡೆದು ಈ ಮೇಲ್ಕಂಡ ಸಂಘಕ್ಕೆ ಶ್ರೀನಿವಾಸಪುರ ತಾಲ್ಲೂಕು ಶಾಖೆಗೆ ನೂತನವಾಗಿ 2022-23ನೇ ಸಾಲಿನಿಂದ ಅನ್ವಯಿಸುವಂತೆ ಮುಂದಿನ ಆದೇಶದವರೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನ ಪದಾಧಿಕಾರಿಗಳು ಸಂಘಟನೆಯನ್ನು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬಲಗೊಳಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ತಿಳಿಸಿದೆ.

ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆ: “ವಿದ್ಯಾರ್ಥಿ ಸಂಸತ್ತು ಉದ್ಘಾಟನೆ”

JANANUDI.COM NETWORK

ಕುಂದಾಪುರ, ಜೂ.22: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತನ್ನು (20-06-2022 ರಂದು)ಶಾಲಾ ಜಂಟಿ ಕಾರ್ಯದರ್ಶಿಯಾಗಿರುವ ಸಿಸ್ಟರ್ ಆಶಾ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿದೆಸೆಯಿಂದಲೇ ನಾಯಕತ್ವ ಗುಣ ರೂಢಿಸಿಕೊಳ್ಳಲು ಹಾಗೂ ಸಂಸತ್ತಿನಲ್ಲಿ ನಡೆಯುವ ಕಾರ್ಯಕಲಾಪಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಸಂಸತ್ತಿನಿಂದ ಸಾಧ್ಯವಾಗುತ್ತದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ಪ್ರಮಾಣವಚನ ಬೋಧಿಸಿದರು. ಶಾಲಾ ನಾಯಕ ಪ್ರಜ್ವಲ್ , ಸಭಾಪತಿ ಸಿಂಚನ ಆರ್, ವಿರೋಧ ಪಕ್ಷದ ನಾಯಕ ಹರ್ಷಿತ್, ಗ್ರಹಮಂತ್ರಿ ಅರ್ಚನಾ, ಚಟುವಟಿಕ ಮಂತ್ರಿ ಕೃಷ್ಣಪ್ರಸಾದ್, ಕ್ರೀಡಾ ಮಂತ್ರಿ ರಜತ್, ವಿದ್ಯಾಮಂತ್ರಿ ಸಂಜನಾ, ಗ್ರಹಮಂತ್ರಿ ಅನಿತಾ, ತೋಟಗಾರಿಕಾ ಮಂತ್ರಿ ಗೌತಮ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಕ ಮೈಕಲ್ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಕಾರ್ಯಕ್ರಮ ನಡೆಸಲು ಸಹಕರಿಸಿದರು.ಶಿಕ್ಷಕ ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 8ನೇ ವಿಶ್ವ ಯೋಗ ದಿನಾಚರಣೆ

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು


ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್
ಮತ್ತು ನೆಹರು ಯುವ ಕೇಂದ್ರ ಉಡುಪಿ ಇವರ ಸಂಯುಕ್ರ ಆಶ್ರಯದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ಮಂಗಳವಾರ 8ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ನಂದಳಿಕೆ
ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಬಿರದಲ್ಲಿ ಲಲಿತಾ ಆಚಾರ್ಯ ಮತ್ತು ನಿಯಾ ಶೆಟ್ಟಿ ಅವರು ಯೋಗ ತರಬೇತಿ ನೀಡಿದರು
ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಕಾರ್ಯದರ್ಶಿ ಸುರೇಶ್ಕಾ ಸ್ರಬೈಲು, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಅಬ್ಬನಡ್ಕ ಭಜನಾ ಮಂಡಳಿ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಸದಸ್ಯರಾದ ಅಬ್ಬನಡ್ಕ ಪದ್ಮಶ್ರೀ ಪೂಜಾರಿ, ಮಂಜುನಾಥ ಆಚಾರ್ಯ, ಕೀರ್ತನ್ ಕುಮಾರ್ ಮೊದಲಾದವರಿದ್ದರು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆ: ವಿಶ್ವ ಯೋಗ ದಿನಾಚರಣೆ

JANANUDI.COM NETWORK

ಕುಂದಾಪುರ,ಜೂ.22: ರಂದು ಸಂತ ಜೋಸೆಫರ ಪ್ರೌಢಶಾಲೆಯ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ (21ರಂದು) ಆಚರಿಸಲಾಯಿತು. ಕುಂದಾಪುರ ಪುರಸಭೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಯೋಗದಿಂದ ಆರೋಗ್ಯ, ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ” ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಮೈಕಲ್ ಇವರ ಮಾರ್ಗದರ್ಶನದಲ್ಲಿ ಸೂರ್ಯ ನಮಸ್ಕಾರ ಆಸನದೊಂದಿಗೆ ವಿದ್ಯಾರ್ಥಿಗಳಿಗೆ ಯೋಗಾಸನ ನಡೆಸಿಕೊಟ್ಟರು. ಯೋಗಾಸನಕ್ಕೆ ಸಂಬಂಧಿಸಿದ ವಿಡಿಯೋವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಪಟ್ಟಣದ ರಂಗಾರಸ್ತೆಯಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥ ನಾಗರ ಕಲ್ಲು ಪ್ರತಿಷ್ಠಾಪನಾ ಮಹೋತ್ಸವ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ರಂಗಾರಸ್ತೆಯಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥ ನಾಗರ ಕಲ್ಲು ಪ್ರತಿಷ್ಠಾಪನಾ ಮಹೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ತಾಲ್ಲೂಕು ವಿಶ್ವಕರ್ಮ ಸಮುದಾಯದ ಪರವಾಗಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ ಹಾಗೂ ಪುರಸಭೆಯ ಮಾಜಿ ಸದಸ್ಯೆ ರಾಧಮ್ಮ ಮೋಹನಾಚಾರಿ ಅಶ್ವತ್ಥಕಟ್ಟೆ ಮೇಲೆ ನೂತನವಾಗಿ ಪ್ರತಿಷ್ಠಾಪಿಸಿದರು.
ಈ ಸಂದರ್ಭದಲ್ಲಿ ದೇವತಾ ವಿಗ್ರಹಗಳಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪಂಡಿತರಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಘದ ಮಹಿಳಾ ಘಟಕದ ಸದಸ್ಯರಿಂದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತೀರ್ಥ, ಪ್ರಸಾದ ವಿನಿಯೋಗ ಮಾಡಲಾಯಿತು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ರಾಜಣ್ಣ, ಮುಖಂಡರಾದ ವೈ.ಆರ್.ಶಿವಪ್ರಕಾಶ್, ಬಿ.ಎಂ.ಸೂರ್ಯನಾರಾಯಣ, ಪೂಲ ಶಿವಾರೆಡ್ಡಿ, ಮುನೀಶ್ವರಾಚಾರಿ, ನಾಗರಾಜಾಚಾರಿ, ರವಿಚಂದ್ರಾಚಾರಿ ಇದ್ದರು.

ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಸಮಾಜದ ಎಲ್ಲ ವರ್ಗದ ಜನರೂ ಸಹಕರಿಸಬೇಕು : ಡಾ. ವೈ.ವಿ.ವೆಂಕಟಾಚಲ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬಾಲ ಕಾರ್ಮಿಕ ಪದ್ಧತಿ ನಿವಾರಣೆಗೆ ಸಮಾಜದ ಎಲ್ಲ ವರ್ಗದ ಜನರೂ ಸಹಕರಿಸಬೇಕು ಎಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಹಾಗೂ ವೆಂಕಟೇಶ್ವರ ಗ್ರಾಮೀನ ಆರೋಗ್ಯ ಶಿಕ್ಷಣೆ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿರುವ ಶ್ರೀಮಂತರು ಮತ್ತು ಕಾರ್ಖಾನೆ ಮಾಲೀಕರು ಮಕ್ಕಳಿಂದ ಗುಟ್ಟಾಗಿ ದುಡಿಸಿಕೊಳ್ಳುತ್ತಿದ್ದಾರೆ. ಕಾನೂನಿಂದ ಪಾರಾಗಲು ಮಕ್ಕಳ ಜನ್ಮ ದಿನಾಂಕ ಬದಲಾವಣೆ ಮಾಡಲು ಮುದಾಗಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೃದ್ಧರು ನಿರ್ಲಕ್ಷ್ಯಕ್ಕೆ ಒಳಗಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರ ಕ್ಷೇಮ ಪಾಲನೆಗಾಗಿ ಅಂಗನವಾಡಿ ರೀತಿಯಲ್ಲಿ ಗ್ರಾಮ ಪಂಚಾಯಿತಿಗೆ ಒಂದರಂತೆ ಹಿರಿಯರವಾಡಿ ತೆರೆಯಬೇಕಾದ ಅಗತ್ಯವಿದೆ. ಉತ್ತಮ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅವರಿಗೆ ಗೌರವಾರ್ಪಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ರಾಷ್ಟ್ರದಲ್ಲಿ 20 ವರ್ಷದ ವರೆಗೆ ಲಿಂಗ ಭೇದವಿಲ್ಲದೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು. ಯಾವುದೇ ತಾರತಮ್ಯಕ್ಕೆ ಅವಕಾಶ ನೀಡದೆ ಎಲ್ಲರಿಗೂ ಸಮಾನ ಶಿಕ್ಷಣ ನೀಡಬೇಕು. ಮಾದರಿ ಶಿಕ್ಷಣ ನೀಡುವುದಕ್ಕೆ ದೆಹಲಿ ಸರ್ಕಾರ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಎಎಪಿ ಅಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಉತ್ತಮ ಆಡಳಿತಕ್ಕೆ ಎಎಪಿ ಆಶಾಕಿರಣವಾಗಿದೆ. ದೆಹಲಿ ಹಾಗೂ ಪಂಜಾಬಿನಲ್ಲಿ ಅಧಿಕಾರದಲ್ಲಿರುವ ಎಎಪಿ ಸರ್ಕಾರಗಳು ಮಾದರಿಯಾಗಿ ಆಡಳಿತ ನಡೆಸುತ್ತಿವೆ. ಪಕ್ಷದ ಸಮಾಜ ಮುಖಿ ಧೋರಣೆ, ಸಮಾಜದ ಎಲ್ಲ ವರ್ಗದ ಜನರಿಗೆ ಭರವಸೆಯ ಬೆಳಕಾಗಿದೆ. ಎಲ್ಲ ವಯೋಮಾನದ ವ್ಯಕ್ತಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ ಎಂದು ಹೇಳಿದರು.
ಮೂಲ ಸೌಕರ್ಯ, ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆ ಪ್ರಜೆಯ ಹಕ್ಕು. ಎಎಪಿ ಎಲ್ಲರಿಗೂ ಈ ಸೌಲಭ್ಯ ಒದಗಿಸಲು ಬದ್ಧವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ಎಎಪಿ ಸರ್ಕಾರದ ಹೆಗ್ಗಳಿಕೆಯಾಗಿದೆ. ಹಾಗಾಗಿ ರಾಜ್ಯದ ಮತದಾರರು ಎಲ್ಲ ಚುನಾವಣೆಗಳಲ್ಲೂ ಎಎಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಚಿತ್ರ ನಟ ಮುಖ್ಯ ಮಂತ್ರಿ ಚಂದ್ರು ಮಾತನಾಡಿ, ಎಎಪಿ ರಾಜಕೀಯ ಕ್ಷೇತ್ರದಲ್ಲಿ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಯಿಂದ ಜನರು ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರ ನಾಡು ನುಡಿಗೆ ಅಪಚಾರವಾಗುವಂತೆ ನಡೆದುಕೊಳ್ಳುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂದು ಹೇಳಿದರು.
ಮತದಾರರು ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ಎಎಪಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕು. ಹಿಂದಿ ಹೇರಿಕೆಯನ್ನು ಸಾಂಘಿಕವಾಗಿ ತಡೆಯಬೇಕು ಎಂದು ಹೇಳಿದರು.
ಎಎಪಿ ರಾಜ್ಯ ಕಾರ್ಯದರ್ಶಿ ಡಾ. ವೆಂಕಟೇಶ್, ವಲಯ ಸಂಯೋಜಕ ರವಿಶಂಕರ್, ಸಿಬಿಐಟಿ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಜಿಲ್ಲಾ ಕಾರ್ಮಿಕರ ಸಂಘದ ಉಪಾಧ್ಯಕ್ಷೆ ಜಿ.ಈಶ್ವರಮ್ಮ, ಮಕ್ಕಳ ತಜ್ಞ ಡಾ. ಬೀರೇಗೌಡ, ಎಎಪಿ ಜಿಲ್ಲಾಧ್ಯಕ್ಷ ಸುರೇಶ್ ಬಾಲಕೃಷ್ಣ, ತಾಲ್ಲೂಕು ಮುಖಂಡ ಬಾಬುರೆಡ್ಡಿ, ಮುಖಂಡರಾದ ಫಸಲ್ ಮಹಮೂದ್, ಕೆ.ಎಸ್.ನಾರಾಯಣಸ್ವಾಮಿ, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಕಾರ್ಯದರ್ಶಿ ನಾರಾಯಣಸ್ವಾಮಿ, ಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, ರಾಮಚಂದ್ರಪ್ಪ, ಸುಧಾಕರ್ ಇದ್ದರು.