HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಾದಕ ವಸ್ತು ವ್ಯಸನ-ವಿರೋಧಿ ದಿನದ ಅಂಗವಾಗಿ ಮಾದಕ ವಸ್ತು- ವ್ಯಸನದ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ.

JANANUDI.COM NETWORK

ಕುಂದಾಪುರ: ” ಮಾದಕ ವಸ್ತು ಸೇವನೆಯು ನಮ್ಮ ಸಮಾಜದ ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿದೆ. ಈ ವ್ಯಸನದಿಂದ ಸಂಪೂರ್ಣ ದೂರವಿದ್ದು, ಮಾದಕ ವ್ಯಸನ ಸಂಬಂಧಿತ ಪ್ರಬಲ ಕಾನೂನುಗಳ ಬಗ್ಗೆ ಅರಿವು ಹೊಂದಿರಬೇಕು” ಎಂದು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಅಂತರ ರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರ ಪೋಲೀಸ್ ಠಾಣಾಧಿಕಾರಿ ಶ್ರೀ ಸದಾಶಿವ ಗವರೋಜಿಯವರು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಮಾದಕ ವ್ಯಸನ ಪಿಡುಗಿನ ಗಂಭೀರ ಪರಿಣಾಮಗಳ ಬಗ್ಗೆ ಜಾಗೃತರಾಗಬೇಕೆಂದು ತಿಳಿಸಿದರು.
ಹಿಂದಿ ವಿಭಾಗ ಮುಖ್ಯಸ್ಥೆ ಶ್ರೀಮತಿ ಜಯಶೀಲಾ ಪೈಯವರು ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ಕಾಲೇಜಿನ‌ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರ ವೈ ಸಿ ಎಸ್ ಸಂಘದ ಪದಾಧಿಕಾರಿಗಳಿಂದ ಪ್ರತಿಜ್ನಾ ವಿಧಿ ಸ್ವೀಕಾರ

JANANUDI.COM NETWORK


ಕುಂದಾಪುರ,ಜೂ.26: ಕುಂದಾಪುರ ಹೋಲಿ ರೋಜರಿ ಚರ್ಚಿನ “ಯಂಗ್ ಕಥೊಲಿಕ್ ಸ್ಟೂಡೆಂಟ್” ಸಂಘದಿಂದ ಚುನಾಯಿತರಾದ ಪದಾಧಿಕಾರಿಗಳ ಪ್ರತಿಜ್ನಾ ವಿಧಿ ಸ್ವೀಕಾರ ಕಾರ್ಯಕ್ರಮವು ಭಾನುವಾರದ (26-6-22) ಬಲಿದಾನದ ಬಳಿಕ ನಡೆಯಿತು. ಈ ಕಾರ್ಯಕ್ರಮವನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಪ್ರಜ್ವಲ್ ಪಾಯ್ಸ್, ಕಾರ್ಯದರ್ಶಿಯಾಗಿ ವೆನೀಶಾ ಡಿಸೋಜಾ, ಉಪಾಧ್ಯಕ್ಷರಾಗಿ ಪ್ರೀತೆಶ್ ಕರ್ವಾಲ್ಲೊ, ಬಾಲಾಕಿಯ ವಿಭಾಗದ ಅಧ್ಯಕ್ಷೆಯಾಗಿ ಸೊನಾಲ್ ಕ್ರಾಸ್ತಾ, ಖಜಾಂಚಿಯಾಗಿ ಎಲ್ರಿಕ್ ಕ್ರಾಸ್ತಾ, ಸಹಖಜಾಂಚಿಯಾಗಿ ಕ್ಲೆರೀಷಾ ಸಿಕ್ವೇರಾ, ಕ್ರೀಡಾ ಕಾರ್ಯದರ್ಶಿಯಾಗಿ ರೈಸನ್ ಡಿಸೋಜಾ, ವರದಿಗಾರ್ತಿಯಾಗಿ ಡಾಯ್ನ್ ಡಿಸೋಜಾ ಪ್ರತಿಜ್ನಾ ಸ್ವೀಕಾರ ಕೈಗೊಂಡರು. ಈ ಸಂದರ್ಭದಲ್ಲಿ ಸಂಘದ ಸಚೇತಕಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು.

ವಿಜಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ:ವಿದ್ಯಾರ್ಥಿಯ ಜೀವನ ತನ್ನ ಗುರಿ ಕಡೆಗೆ ಇರಬೇಕು-ಎನ್.ಶಿವಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 3 : ವಿದ್ಯಾರ್ಥಿಯ ಜೀವನ ತನ್ನ ಗುರಿ ಕಡೆಗೆ ಇರಬೇಕು . ಇಟ್ಟುಕೊಂಡ ಗುರಿ ತಲುಪಲು ನಿರಂತರ ಪ್ರಯತ್ನ ಮತ್ತು ಶ್ರದ್ದೆ , ಭಕ್ತಿಯಿಂದ ಅಧ್ಯಯನ ಮಾಡಬೇಕು ಎಂದು ಆಡಳಿತ ಮಂಡಲಿ ಕಾರ್ಯದರ್ಶಿ ಹಾಗು ಪ್ರಾಶುಂಪಾಲ ಎನ್.ಶಿವಕುಮಾರ್ ಹೇಳಿದರು.
ಪಟ್ಟಣದ ಹೊರವಲಯದ ವಿಜಯಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಆಡಳಿತ ಮಂಡಲಿಯವರು ಶನಿವಾರ 2021-22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ . ಶ್ರದ್ದೆಯಿಂದ ಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೀರ್ತಿ ತರುವ ಜವಬ್ದಾರಿ ವಿದ್ಯಾರ್ಥಿಗಳ ಮೇಲಿದೆ . ಸ್ವಶಕ್ತಿ,ಛಲ,ಗುರಿಯೊಂದಿಗೆ ವಿದ್ಯೆ ಪಡೆದು ಉನ್ನತ ಶಿಕ್ಷಣ ಪಡೆಯಬೇಕು ಎಂದು ಕಿವಿಮಾತು ಹೇಳಿದರು .
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಲ್.ಮುರಳಿಮೋಹನ್ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವುದು ಕಷ್ಟ . ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಸಲಹೆ ನೀಡಿದರು.

ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನ ಅಲಂಕರಿಸಿದರೂ ತಾಯಿ, ತಂದೆ, ಗುರುಗಳನ್ನ ಗೌರವಿಸಿರಿ:ಶರೀನಾತಾಜ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ 1 : ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನ ಅಲಂಕರಿಸಿದರೂ ಸಹ ತಾಯಿ, ತಂದೆ, ಗುರುಗಳನ್ನ ಗೌರವಿಸಿರಿ ಎಂದು ತಹಶೀಲ್ದಾರ್ ಶರೀನಾತಾಜ್ ಹೇಳಿದರು.
ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ದೇವಾಯಯದಲ್ಲಿ ಶುಕ್ರವಾರ ದೇವಾಲಯದ 31ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೇ ಅಧ್ಯಯನ ಮಾಡಬೇಕು .ಅಧ್ಯಯನವನ್ನು ಇಷ್ಟಪಟ್ಟು ಮಾಡಬೇಕು. ಯಾವುದೇ ಕೆಲಸವನ್ನು ಇಷ್ಟವಿಲ್ಲದೇ ಮಾಡಿದರೆ ಅದು ಫಲನೀಡುವುದಿಲ್ಲ. ಹಾಗಾಗಿ ಅಧ್ಯಯನದಲ್ಲಿ ಶ್ರದ್ಧೆ, ಛಲ, ಸಮಯಪಾಲನೆ ಸೇರಿದಂತೆ ಶಿಸ್ತುಬದ್ದ ಜೀವನ ನಡೆಸುವ ಮೂಲಕ ಯಶಸ್ಸುಗಳಿಸಬೇಕು ಎಂದರು ಹಾಗು ನಿಮ್ಮ ಗುರಿಯನ್ನು ತಲುಪಲು ಗುರುಹಿರಿಯರ ಮಾರ್ಗದರ್ಶನವನ್ನು ಪಡೆಯುಂತೆ ಸಲಹೆ ನೀಡಿದರು.
ಹೈಕೋರ್ಟ್ ವಕೀಲ ಆರ್.ಎಸ್.ಪ್ರಸನ್ನಕುಮಾರ್ ಮಾತನಾಡಿ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನಡೆಸಿ ಸಾಧನೆ ಮಾಡಲು ಎಲ್ಲ ಕ್ಷೇತ್ರದಲ್ಲಿಯೂ ನಿರಂತರ ಶ್ರಮ ಹಾಕುವುದರ ಜತೆಗೆ ತಮ್ಮ ಮುಂದಿನ ಗುರಿ, ಕ್ಷೇತ್ರಗಳನ್ನು ಮೊದಲು ಆಯ್ಕೆ ಮಾಡಿಕೊಂಡು ಆಯಾ ಕ್ಷೇತ್ರಕ್ಕೆ ಸಂಬಂದಿಸಿದ ಪಠ್ಯಕ್ರಮಗಳನ್ನು ಕ್ರಮಬದ್ದವಾಗಿ ಶಿಸ್ತು, ಸಂಯಮ,ತಮ್ಮನ್ನು ತಾವು ನಿಯಂತ್ರಿಸುವ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಅವಿರಂತವಾಗಿ ಅಭ್ಯಾಸ ಮಾಡುವಂತೆ ಸಲಹೆ ನೀಡಿದರು.
ಆರ್ಯವೈಶ್ಯ ಮಂಡಳಿ ಟ್ರಸ್ಟ್ ನ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಮಾತನಾಡಿ ನಿಶ್ಚಲ ಗುರಿ ಸಾಧನೆಗೆ ನಿರಂತರ ಕಠಿಣ ಪರಿಶ್ರಮದಿಂದ ತಮ್ಮ ಸಾಧನೆಯ ಶಿಖರವನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಲಲಿತಾ ಮಹಿಳಾ ಸಂಘ, ವಾಸವಿ ಯುವಜನ ಸಂಘದ ಸದಸ್ಯರು ಪಾಲ್ಗುಂಡಿದ್ದರು. ಆರ್ಯವ್ಯಶ್ಯ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಆರ್.ಅಮರನಾಥ್, ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣಶೆಟ್ಟಿ, ಸದಸ್ಯರಾದ ವೈ.ಆರ್.ನಾಗೇಂದ್ರಬಾಬು, ರಾಮನಾಥ, ಸತ್ಯಣ್ಣ, ಕಿಟ್ಟ, ಪದ್ಮೇಶ್, ರೆಡ್ಡಪ್ಪ, ಕಿಶೋರ್‍ಕುಮಾರ್, ಜೆ.ಆರ್.ಲಿಶಾಂತ್ , ವಾಸವಿರವಿ ಇತರರು ಇದ್ದರು.

ಪ್ರತಿಭಾನ್ವಿತ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ವಿ.ಎನ್.ಮೇಘನರವರನ್ನು ಸನ್ಮಾನಿಸಿದರು

ಜೂನ್ 26ರಂದು ನಂದಳಿಕೆಯ ಕುಡುಂದೂರಿನ ಬೆರಣಗುಡ್ಡೆಯಲ್ಲಿ ಕೆಸರ್‍ಡೊಂಜಿ ದಿನ ಕಾರ್ಯಕ್ರಮ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ನಂದಳಿಕೆ: ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ವತಿಯಂದ 22ನೇ ವರ್ಷಾಚರಣೆ ಅಂಗವಾಗಿ ನಂದಳಿಕೆಯ ಕುಡುಂದೂರಿನ ಬೆರಣಗುಡ್ಡೆಯಲ್ಲಿ ಕೆಸರ್‍ಡೊಂಜಿ ದಿನ ಕಾರ್ಯಕ್ರಮ ಜೂನ್ 26ರಂದು ಆದಿತ್ಯವಾರ ಬೆಳಿಗ್ಗೆ 09-00ಗಂಟೆಗೆ ನಡೆಯಲಿದೆ. ಕಂಬಳ ಶೈಲಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಕಳ ರಶ್ಮಿ ಚಾರಿಟೇಬಲ್ಟ್ರ ಸ್ಟ್‍ನ ಅಧ್ಯಕ್ಷರಾದ ಡಿ.ಆರ್. ರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಶಂಕರಪುರ ನವೀನ್ ಅಮೀನ್, ಉದ್ಯಮಿ ಅಲನ್ ರೋಹನ್ ವಾಚ್ ಕಲ್ಯಾಣಪುರ, ಕಾರ್ಕಳ ಛತ್ರಪತಿ ಫೌಂಡೇಶನ್ ಅಧ್ಯಕ್ಷ ಗಿರೀಶ್ ರಾವ್, ಉದ್ಯಮಿ ಉದಯ ಕುಮಾರ್ ಹೆಗ್ಡೆ ಎರ್ಲಪಾಡಿ, ಸಂಜೀವಿ ಶೆಟ್ಟಿ ಬೆರಣಗುಡ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆಸರ್‍ಡೊಂಜಿ ದಿನ ಕಾರ್ಯಕ್ರಮದಲ್ಲಿ ನಡೆಯಲಿರುವ ಸ್ಪರ್ಧೆಗಳು ಪುರುಷರ ಹಾಗೂ ಮಹಿಳೆಯ ವಿಭಾಗದ ಹಗ್ಗಾಜಗಾಟ ಸ್ಪರ್ಧೆಗೆ 20 ತಂಡಗಳು ಹೆಸರು ನೊಂದಾಯಿಸಿವೆ. ಪುರುಷರ ವಿಭಾಗದಲ್ಲಿ ಹಗ್ಗಾಜಗಾಟ ಸ್ಪರ್ಧೆ, ಮಡಿಕೆ ಹೊಡೆಯುವ ಸ್ಪರ್ಧೆ, 100ಮೀ ಓಟ, ಮಹಿಳೆಯ ವಿಭಾಗದಲ್ಲಿ ಹಗ್ಗಾಜಗಾಟ ಸ್ಪರ್ಧೆ, ಮಡಿಕೆ ಹೊಡೆಯುವ
ಸ್ಪರ್ಧೆ,ಮೂರು ಕಾಲಿನ ಓಟ, ಬಾಲಕರ ವಿಭಾಗದಲ್ಲಿ ಮಡಿಕೆ ಹೊಡೆಯುವ ಸ್ಫರ್ಧೆ, 100ಮೀ ಓಟ, ಉಪ್ಪು ಮುಡಿ ಓಟ, ಬಾಲಕಿಯರ ವಿಭಾಗದಲ್ಲಿ ಮಡಿಕೆ ಹೊಡೆಯುವ ಸ್ಫರ್ಧೆ, 100ಮೀ ಓಟ, ಪಾಲೆದ ಗೊಬ್ಬು ನಡೆಯಲಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ
ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಪ್ರಕಟನೆಯಲ್ಲಿ ತಿಳಿಸಿದೆ.

ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ: ಮಂತ್ರಿ ಮಂಡಲದ ಉದ್ಘಾಟನೆ

JANANUDI.COM NETWORK



ಕುಂದಾಪುರ,ಜೂ.25: ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಕಾರ್ಯಕ್ರಮವು (24-6-22 ರಂದು) ಶಾಲಾ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಪ್ರದಾನ ಧರ್ಮ ಗುರು ಶಾಲೆಯ ಸಂಚಾಲಕರಾದ ಅತೀ ವಂದನೀಯ ಸ್ಟ್ಯಾನಿ ತಾವ್ರೊ ವಹಿಸಿದ್ದರು. ಶಾಲೆಯ ಹಳೆ ವಿದ್ಯಾರ್ಥಿ, ನ್ಯೂಸ್ 224 ರ ಸಂಸ್ಥಾಪಕರು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕಾರ್ತಿಕ್ ಜಿ ಕುಂದರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮ ಶಾಲಾ ಜೀವನದಲ್ಲಿ ಪಡೆದ ಅನುಭವಗಳ ಬಗ್ಗೆ ಮತ್ತು ಪಠ್ಯಪೂರಕ ವಿಷಯದಲ್ಲಿ ಸಿಕ್ಕ ಅವಕಾಶದಿಂದ ತಾನು ಬೆಳೆಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ಅವ್ರನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಜ್ ಶಾಂತಿ ಎ.ಸಿ ಯವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಭೋದಿಸಿದರು. ವಿದ್ಯಾರ್ಥಿಗಳಾದ ರೋಹಿಣಿ ಮತ್ತು ಪರ್ಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಂತ್ರಿ ಮಂಡಲದ ನಾಯಕ ಕಲ್ಯಾಣ್ ಬಸವರಾಜ್ ಸ್ವಾಗತಿಸಿ, ಉಪನಾಯಕಿ ರಿಯಾ ಡಿಸೋಜ ವಂದಿಸಿದರು.

ಬೈರಗಾನಪಲ್ಲಿ ಗ್ರಾಮ ಪಂಚಾಯಿತಿ : ಕಾಂಗ್ರೆಸ್ ಬೆಂಬಲಿತ ನಿರ್ಮಲ ಶಿವಾರೆಡ್ಡಿ, ಗೌರಮ್ಮ ರೆಡ್ಡಪ್ಪ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬೈರಗಾನಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿಗಳಾದ ನಿರ್ಮಲ ಶಿವಾರೆಡ್ಡಿ, ಗೌರಮ್ಮ ರೆಡ್ಡಪ್ಪ ಕ್ರಮವಾಗಿ ಅದ್ಯಕ್ಷರು ಹಾಗೂ ಉಪಾದ್ಯಕ್ಷರಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಶುಮಾ ಶಿವಾರೆಡ್ಡಿ ಹಾಗೂ ಉಪಾಧ್ಯಕ್ಷರಾಗಿದ್ದ ಚಿನ್ನವೆಂಕಟರವಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಸಲಾಯಿತು. ಜೆಡಿಎಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ¯ಕ್ಷ್ಮಿ, ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಸ್ಪರ್ಧಿಸಿದ್ದರು.
ಗ್ರಾಮ ಪಂಚಾಯಿತಿಯ 16 ಸದಸ್ಯರ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ತಲಾ 8 ಮತ ಪಡೆದುಕೊಂಡರು. ಚುನಾವಣಾಧಿಕಾರಿ ಕೃಷ್ಣಪ್ಪ ಲಾಟರಿ ಹಾಕಿದಾಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರಸ್ ಪಾಲಾಯಿತು.
ಪಿಡಿಒ ಆರ್.ರವಿಮುಮಾರ್, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಮುಖಂಡರಾದ ಸಂಜಯ್ ರೆಡ್ಡಿ, ಶಿವಾರೆಡ್ಡಿ, ಕರ್ಣಾಕರರೆಡ್ಡಿ, ರೆಡ್ಡಪ್ಪ, ಜನಾರ್ಧನ್, ಹೊಸಹುಡ್ಯ ಶಿವಾರೆಡ್ಡಿ, ಶ್ರೀರಾಮರೆಡ್ಡಿ ಇದ್ದರು.
ಹಲ್ಲೆ ಆರೋಪ: ಚುನಾವಣಾ ಫಲಿತಾಂಶದಿಂದ ಬೇಸರಗೊಂಡ ಕೆಲವು ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡ ಹೊಸಹುಡ್ಡ ಶಿವಾರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಕಾರ್ ಜಖಂ ಗೊಳಿಸಿರುವುದಾಗಿ ಆರೋಪಿಸಿ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಅಲ್ಪ ಸಂಖ್ಯಾತರು ವಾಸಿಸುವ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ : ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಲ್ಪ ಸಂಖ್ಯಾತರು ವಾಸಿಸುವ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಹೆಬ್ಬಟ ಗ್ರಾಮದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ, ತಾಲ್ಲೂಕಿನ 43 ಗ್ರಾಮಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಜನರು ವಾಸವಾಗಿದ್ದಾರೆ. ಆ ಗ್ರಾಮಗಳಿಗೆ ಅಗತ್ಯವಾದ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಹೇಳಿದರು.
ಗ್ರಾಮದ ಅಲ್ಪ ಸಂಖ್ಯಾತರಿಗೆ ಅನುಕೂಲವಾಗುವಂತೆ ರೂ.25 ಲಕ್ಷ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಿಸಲಾಗುವುದು. ರೂ.9 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲಾಗುವುದು. ರೂ.27 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವದು. ಗ್ರಾಮದ ಇನ್ನೊಂದು ರಸ್ತೆಯನ್ನು ರೂ.5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ರೂ.5 ಲಕ್ಷ ವೆಚ್ಚದಲ್ಲಿ ಮಸೀದಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೋಚಿಮುಲ್ ನಿರ್ದೇಶಕ ಎನ್.ಹುಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಅನಂತಕುಮಾರ್, ಪುರಸಭಾ ಸದಸ್ಯ ನಾಗರಾಜ್, ಗೋಪಾಲರೆಡ್ಡಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಂಕರಪ್ಪ ಇದ್ದರು.

ಕಟ್ಕೆರೆ ಬಾಲ ಯೇಸು ಆಶ್ರಮದಲ್ಲಿ  ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯ “ಮುದ್ದು ಯೇಸು” ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

JANANUDI.COM NETWORK

ಕುಂದಾಪುರ, ಜೂ. 23: ಜನನುದಿ ಡಾಟ್ ಕಾಮ್ ಸುದ್ದಿ ಸಂಸ್ಥೆಯಿಂದ ಏರ್ಪಡಿಸಿದ ಮುದ್ದು ಯೇಸು ಫೋಟೊ ಸ್ಫರ್ಧೆಯ ವಿಜೇತರಿಗೆ ಕೋಟೆಶ್ವರ ಕಟ್ಕರೆಯ ಬಾಲ ಯೇಸುವಿನ ಆಶ್ರಮದಲ್ಲಿ ಗುರುವಾರದಂದು ಬಾಲ ಯೇಸುವಿನ ನೊವೆನಾ ದಿವಸ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

  ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಜೊತೆಗೆ ಕಟ್ಕರೆ ಬಾಲ ಯೇಸುವಿನ ಮುಖ್ಯಸ್ಥರಾದ ಧರ್ಮಗುರು ವಂ|ಆಲ್ವಿನ್ ಸಿಕ್ವೇರಾ ಪ್ರಶಸ್ತಿ ಪತ್ರ ವಿತರಿಸಿ ಶುಭ ಕೋರಿದರು.ಈ ಸ್ಪರ್ಧೆಯ ತಿರ್ಪುದಾರರರಲ್ಲಿ ಒರ್ವರಾದ ಕಟ್ಕೆರೆ ಬಾಲ ಯೇಸು ಆಶ್ರಮದ ಧರ್ಮಗುರು ವಂ| ದೀಪ್ ಫೆರ್ನಾಂಡಿಸ್. ಸ್ಫರ್ಧೆಯ  ಮುಖ್ಯ ಪೋಷಕರಾದ ವಸಂತ ಬೇಕರಿಯ ಮಾಲಕರಾದ ಶ್ರೀಶನ್ ಬಹುಮಾನ ವಿತರಣೆಯಲ್ಲಿ ಸಹಕರಿಸಿದರು

  ಜನನುಡಿ ಸುದ್ದಿ ಸಂಸ್ಥೆಯ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿ, ಧನ್ಯವಾದಗಳನ್ನು ಅರ್ಪಿಸಿದರು. ಸ್ಫರ್ಧೆಯ ಸಂಯೋಜಕಿ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನವು ಆಲ್ರಿನಾ ಡಿಸೋಜಾ, ಪಿಯುಸ್ ನಗರ. ಜೇವಿನ್ ಮೆಂಡೊನ್ಸಾ, ಬಸ್ರೂರು, ದ್ವೀತಿಯ ಸ್ಥಾನ ಮತ್ತು ಅಲೈನಾ ಅಬ್ರಿಲ್ಲೆ ಫೆನಾರ್ಂಡಿಸ್,ಕುಂದಾಪುರ ತ್ರತೀಯ ಸ್ಥಾನ ಲಭಿಸಿದರೆ, ಒಂದರಿಂದ ಐದು ವರ್ಷಗಳ  ಮಕ್ಕಳ ವಿಭಾಗದಲ್ಲಿ ಆ್ಯನ್ ಕಾರ್ಡೋಜಾ, ಮೂಡುಬಿದ್ರೆ ಇವರು ಪ್ರಥಮ ಸ್ಥಾನ ಲಭಿಸಿದರೆ, ಸಾನೀಯಾ ಡಿಮೆಲ್ಲೊ, ಕುಂದಾಪುರ ದ್ವೀತಿಯ ಸ್ಥಾನ ಮತ್ತು ಮಾಹಿಮಾ ವಿಯಾನ್ನಾ ಬರೆಟ್ಟೊ ಇವಳಿಗೆ ತ್ರತೀಯ ಸ್ಥಾನ ಲಭಿಸಿತು,

ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕ್ಲೇರ್ ಬರೆಟ್ಟೊ, ಕುಂದಾಪುರ, ಕ್ಯಾರೀನ್ ಫೆಡಿಸಿಯಾ ಮೊಂತೇರೊ, ಪೆರ್ಮನ್ನೂರು, ಸಾಮ್ಜುನ್ ಡಿಸಿಲ್ವಾ ಕುಂಟಾಲ್ ಪಾಡಿ, ಒಂದರಿಂದ ಐದು ವರ್ಷಗಳ ಒಳಗಿನ ಮಕ್ಕಳ ವಿಭಾಗದಲ್ಲಿ ಕಾರೆನ್ ಡಿ’ಲಿಮಾ, ಬಜ್ಪೆ, ಸೆಲ್ವಿಟಾ ಡಿಆಲ್ಮೇಡಾ, ಹಂಗಾರ್ ಕಟ್ಟೆ, ಇಥನ್ ಅಬ್ನೆರ್ ಡಿಸೋಜಾ, ದೇರಲಕಟ್ಟೆ ಕ್ರಮಾನುಸಾರ ಸಮಾಧಾನಕರ ಸ್ಥಾನಗಳನ್ನು ಗಳಿಸಿದರು. ತೀರ್ಪುಗಾರರಾಗಿ ಧರ್ಮಗುರು ವಂ|ರೋಹನ್ ಡಿಆಲ್ಮೇಡಾ, ಸೈಂಟ್ ಜೋಸೆಫ್ ಇಂಡಿಯನ್ ಸ್ಕೂಲ್, ,ಪ್ರಾಂಶುಪಾಲರು,ಬೆಂಗಳೂರು, ಸಿಸ್ಟರ್ ತೆರೆಜಾ ಶಾಂತಿ, ಮುಖ್ಯೋಪಾಧ್ಯಾಯಿನಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಜೋಸೆಫ್ ಫೆನಾರ್ಂಡಿಸ್, ನಾಟಕ ನಿರ್ದೇಶಕರು, ಬೈಂದೂರು ಇವರು ಸಹಕರಿಸಿದ್ದರು.

ಸ್ಫರ್ಧಾ ಪೋಷಕರು