HOLY ROSARY CHURCH, KUNDAPUR – 450 th JUBILEE SOUVENIR 2021

ಮುತ್ತಕಪಲ್ಲಿಯಲ್ಲಿ ಗ್ರಾಮಪಂಚಾಯತಿ ಮಟ್ಟದ ಕ್ರೀಡಾಕೂಟ ಬಿಇಒ ಉಮಾದೇವಿಯಿಂದ ಉದ್ಘಾಟನೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,        ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೂಳ್ಳುವ್ಯದರಿಂದ ದೈಹಿಕ ಹಾಗು ಮಾನಸಿಕವಾಗಿ ಸದೃಡವಾಗುತ್ತಾರೆಂದು ಬಿಇಒ ಉಮಾದೇವಿ ತಿಳಿಸಿದರು.


ಅವರು ತಾಲ್ಲೂಕಿನ ಮುತ್ತಕಪಲ್ಲಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ನಡೆದ ಗ್ರಾಮಪಂಚಾಯತಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ಒಂದು ಅವಿಬಾಜ್ಯ ಅಂಗ ಕ್ರೀಡೆಯಲ್ಲಿ ಪಾಲ್ಗೂಳ್ಳುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಮನಸ್ಸು ಉಲ್ಲಾಸವಾಗಿ ,ಏಕಾಗ್ರತೆಯು ಬೆಳೆಯುತ್ತದೆ ಎಂದು ತಿಳಿಸಿದರು.


ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್, ಉಪನ್ಯಾಸಕ ಶೇಷಗಿರಿ, ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮಚೆನ್ನಪ್ಪ, ಸದಸ್ಯರಾದ ಎಂ.ಕೆ.ಸುರೇಶ್‍ಕುಮಾರ್, ನಸೀಮ್ಮನ್ನಿಸಾ, ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಎಂ.ವಿ.ಬಷೀರ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಲಕ್ಷ್ಮಯ್ಯ ಇತರರು ಇದ್ದರು.

ಶ್ರೀನಿವಾಸಪುರ ಪುರಸಭಾ ಅಧ್ಯಕ್ಷೆ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಈ ತಿಂಗಳು 19 ಕ್ಕೆ ಮುಂದೂಡಿಕೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,       ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಶ್ರೀನಿವಾಸಪುರ : ಪುರಸಭಾ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯವನ್ನು ಇದೇ ತಿಂಗಳು 19ಕ್ಕೆ ಮುಂದೂಡಿರುವುದಾಗಿ ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.
ಅವಿಶ್ವಾಸ ನಿರ್ಣಯ ಸಭೆಯನ್ನು ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು, ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಉಪಾಧ್ಯಕ್ಷರು ಇಲ್ಲದ ಕಾರಣ ಸಭೆಯನ್ನು ಮುಂದೂಡಿರುವುದಾಗಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಜೀವಶಾಸ್ತ್ರ ಶಿಕ್ಷಕರಾದ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಮಕ್ಕಳ ಮೆಚ್ಚುಗೆಗೆ ಪಾತ್ರವಾದ ಸೂಕ್ಷ್ಮ ಜೀವಿಗಳ ಕುರಿತ ಬೋಧನೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,     ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಕೋಲಾರ:- ಪೊಲೀಸ್ ಅಧಿಕಾರಿಯಾಗುವ ಮುನ್ನಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಇಂದು ಮಕ್ಕಳಿಗೆ ಜೀವಶಾಸ್ತ್ರದಲ್ಲಿನ ಸೂಕ್ಷ್ಮಜೀವಿಗಳ ಕುರಿತು ಬೋಧನೆ ಮಾಡುವ ಮೂಲಕ ಗಮನ ಸೆಳೆದರು.
ತಾಲ್ಲೂಕಿನ ವೇಮಗಲ್ ಸರ್ಕಾರಿಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಎಪ್ಸನ್ ಕಂಪನಿ ಕೊಡುಗೆಯಾಗಿ ನೀಡಿರುವ 1 ಲಕ್ಷಕ್ಕೂ ಹೆಚ್ಚು ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಕಾರ್ಯಕ್ರಮದ ನಂತರ ತರಗತಿ ಕೋಣೆಯೊಂದಕ್ಕೆ ಪ್ರವೇಶಿಸಿದರು.
ಕೆಲವೊತ್ತು ಮಕ್ಕಳೊಂದಿಗೆ ಸಂವಾದ ನಡೆಸಿದ ಎಸ್ಪಿ ಅವರು, ಬೋರ್ಡ್ ಮೇಲೆ ಸೂಕ್ಷ್ಮ ಜೀವಿಗಳ ಉಪಯೋಗಗಳ ಶೀರ್ಷಿಕೆ ಇದ್ದುದನ್ನು ಕಂಡು ಕೂಡಲೇ ಚಾಕ್‍ಪೀಸ್ ಹಿಡಿದು ಸುಮಾರು 20 ನಿಮಿಷ ಪಾಠ ಮಾಡಿ ಗಮನ ಸೆಳೆದರು.
ಪೊಲೀಸ್ ಅಧಿಕಾರಿಯಾಗಿದ್ದಕ್ಕೂ ಮುನ್ನಾ ಐದು ವರ್ಷಗಳ ಕಾಲ ಉಪನ್ಯಾಸಕರಾಗಿದ್ದುದನ್ನು ಸ್ಮರಿಸಿಕೊಂಡ ಅವರು ಸೂಕ್ಷ್ಮ ಜೀವಿಗಳಾದ ವೈರಸ್,ಬ್ಯಾಕ್ಟೀರಿಯಾ, ಪ್ರೋಟೋಜೋವಾ ಮತ್ತಿತರ ಸೂಕ್ಷ್ಮ ಜೀವಿಗಳ ಕುರಿತು ಸುಲಲಿತವಾಗಿ ಬೋಧನೆ ಮಾಡುವ ಮೂಲಕ ಮಕ್ಕಳ ಮೆಚ್ಚುಗೆಗೆ ಪಾತ್ರರಾದರು.
ಸುಮಾರು 20 ನಿಮಿಷಗಳ ಕಾಲ ತಾವೊಬ್ಬ ಪೊಲೀಸ್ ಅಧಿಕಾರಿ ಎಂಬುದನ್ನೇ ಮರೆತು ತಾವೊಬ್ಬ ಉತ್ತಮ ಶಿಕ್ಷಕರು ಎಂಬುದನ್ನು ನಿರೂಪಿಸಿದ ಎಸ್ಪಿ ದೇವರಾಜ್ ಅವರು, ಮಕ್ಕಳಿಗೆ ಸೂಕ್ಷ್ಮ ಜೀವಿಗಳ ಕುರಿತು ಅತ್ಯಂತ ಸುದೀರ್ಘವಾಗಿ ಬೋಧನೆ ಮಾಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಪನ್ಯಾಸಕರಾಗಿದ್ದ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡು ಶಿಕ್ಷಕ ವೃತ್ತಿ ಮಾತ್ರ ನಿರಂತರ ನೆನಪು,ಗೌರವಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ಮುರಳಿಗೌಡ, ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್ ಮತ್ತಿತರರಿದ್ದರು.

ಎಪ್ಸನ್ ಕಂಪನಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ 1ಲಕ್ಷ ನೋಟ್‍ ಪುಸ್ತಕಗಳ ಕೊಡುಗೆ : ಸರ್ಕಾರಿ ಶಾಲೆಗಳ ಡಿಜಟಲೀಕರಣಕ್ಕೆ ವಿವಿಧ ಕಂಪನಿಗಳ ಸಹಕಾರ-ಎಸ್ಪಿ ದೇವರಾಜ್

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,  ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಕೋಲಾರ:- ಸ್ವರ್ಧಾತ್ಮಕ ಜಗತ್ತಿನಲ್ಲಿ ಕಲಿಕೆಯಲ್ಲಿ ಮಕ್ಕಳು ಸದೃಢರಾಗಲು ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯವಾಗಿದ್ದು, ವಿವಿಧ ಕಂಪನಿಗಳ ಸಹಕಾರ ಪಡೆದ ಆಯ್ದ ಶಾಲೆಗಳ ಡಿಜಟಲೀಕರಣಕ್ಕೆ ಕ್ರಮವಹಿಸೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದರು.
ತಾಲ್ಲೂಕಿನ ವೇಮಗಲ್ ಸರ್ಕಾರಿಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಎಪ್ಸನ್ ಕಂಪನಿ ಕೊಡುಗೆಯಾಗಿ ನೀಡಿರುವ 1 ಲಕ್ಷಕ್ಕೂ ಹೆಚ್ಚು ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ಕಂಪನಿಗಳ ಸಹಕಾರ ಪಡೆದು ಆಯ್ದ ಶಾಲೆಗಳನ್ನು ಡಿಜಟಲೀಕರಣಗೊಳಿಸಲು ಆದಷ್ಟು ಶೀಘ್ರ ರೂಪರೇಷೆ ಸಿದ್ದಪಡಿಸಲು ಸೂಚಿಸಿದ ಅವರು,ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಸಿಕ್ಕರೆ ಮಕ್ಕಳಿಗೆ ಉತ್ತಮ ಬುನಾದಿ ಹಾಕಿದಂತಾಗುತ್ತದೆ ಎಂದರು.
ಕೋಲಾರಕ್ಕೆ ಸಂಬಂಧವೇ ಇಲ್ಲದ ಎಪ್ಸನ್ ಕಂಪನಿ ಜಿಲ್ಲೆಗೆ ಇಷ್ಟೊಂದು ನೆರವು ನೀಡಲು ಮುಂದೆ ಬಂದಿರುವುದು ಶ್ಲಾಘನೀಯ, ವಿಷಯ ಸಣ್ಣದಾದರೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳಲ್ಲಿ ಇದು ಅತ್ಯಂತ ಸಂತೋಷ ನೀಡುವ ಕಾರ್ಯಕ್ರಮ ಎಂದು ತಿಳಿಸಿದರು.

ಶಿಕ್ಷಕರ ಜವಾಬ್ದಾರಿ ಬಹಳ ದೊಡ್ಡದು


ಸಣ್ಣವಯಸ್ಸಿನಲ್ಲೇ ಕಲಿಸುವ ಶಿಸ್ತು ಜೀವನಕ್ಕೆ ಅಡಿಪಾಯವಿದ್ದಂತೆ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಶಿಸ್ತು, ಸ್ವಚ್ಚತೆ ಬೆಳೆಸಿದರೆ ಅವರು ಸಮಾಜಕ್ಕೆ ಆಸ್ತಿಯಾಗುತ್ತಾರೆ ಮತ್ತು ಉತ್ತಮ ಪ್ರಜೆಗಳಾಗಲು ಸಹಕಾರಿ ಎಂದರು.
ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಗುರುವಿಗೆನೀಡುವ ಗೌರವ ಕಡಿಮೆಯಾಗುವುದಿಲ್ಲ, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಲಘುವಾಗಿ ಪರಿಗಣಿಸಿದಾಗ ಮಕ್ಕಳು ದಾರಿ ತಪ್ಪುತ್ತಾರೆ ಎಂದು ಎಚ್ಚರಿಸಿದ ಅವರು, ಮಕ್ಕಳನ್ನು ಸಮಾಜ,ದೇಶಕ್ಕೆ ಆಸ್ತಿಯನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ಕಲಿಕೆಗೆ ಬಡತನ ಅಡ್ಡಿಯಾಗದಿರಲಿ


ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಪ್ರದೀಪ್‍ಕುಮಾರ್ ಮಾತನಾಡಿ, ಮಕ್ಕಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು, ಎಪ್ಸನ್ ಕಂಪನಿ ಜಿಲ್ಲೆಯೊಂದಿಗೆ ಹೊಂದಿರುವ ಸಂಬಂಧ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದ ಅವರು,ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಕ ಗೆಳೆಯರ ಬಳಗ ವಿವಿಧ ಕಂಪನಿಗಳು-ಶಾಲೆಗಳ ನಡುವೆ ಸೇತುವೆಯಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಅಭಿನಂದಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ನಾನೂ ಸರ್ಕಾರಿ ಶಾಲೆಯಲ್ಲೇ ಓದಿದ್ದು, ನನಗೆ ಬಡ ಮಕ್ಕಳ ನೋವಿನ ಸಂಕಷ್ಟದ ಅರಿವಿದೆ, ಸರ್ಕಾರಿ ಶಾಲೆಗಳ ಕುರಿತು ಪೋಷಕರಲ್ಲಿನ ನಂಬಿಕೆ ಬಲಗೊಳಿಸಿ, ದಾಖಲಾತಿ ಹೆಚ್ಚಳದ ಮೂಲಕ ಸಮಾನ ಶಿಕ್ಷಣಕ್ಕಾಗಿ ಈ ಶಾಲೆಗಳನ್ನು ಉಳಿಸುವ ಸದುದ್ದೇಶದಿಂದ ಶಿಕ್ಷಕ ಗೆಳೆಯರ ಬಳಗ ಈ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಶಿಕ್ಷಕ ಗೆಳೆಯರ ಬಳಗ ಕಳೆದ 15 ವರ್ಷಗಳಿಂದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ದುಡಿಯುತ್ತಿದೆ, ಎಪ್ಸನ್ ಕಂಪನಿ ಕಳೆದ 6 ವರ್ಷಗಳಿಂದ ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ವರ್ಷ ಸುಮಾರು 1 ಲಕ್ಷ ನೋಟ್ ಪುಸ್ತಕ ನೀಡುತ್ತಿದ್ದು, ಇದರ ಜತೆಗೆ ಈ ಬಾರಿ 42 ಶಾಲೆಗಳಿಗೆ 52 ವಾಟರ್‍ಫಿಲ್ಟರ್ ನೀಡುವ ಮೂಲಕ ಮಕ್ಕಳಿಗೆ ಶುದ್ದ ಕುಡಿಯುವ ನೀರು ಒದಗಿಸಿದೆ ಎಂದು ಅಭಿನಂದಿಸಿದರು.
ಇದೀಗ ಈ ವರ್ಷ ತಾಲ್ಲೂಕಿನ 19 ಕ್ಲಸ್ಟರ್‍ಗಳ 220 ಸರ್ಕಾರಿ ಶಾಲೆಗಳಿಗೆ ಒಟ್ಟು 1,01220 ಪುಸ್ತಕಗಳನ್ನು ಪ್ರತಿ ವಿದ್ಯಾರ್ಥಿಗೆ ತಲಾ 6 ಪುಸ್ತಕದಂತೆ ಎಪ್ಸನ್ ಕಂಪನಿ ಒದಗಿಸಿದ್ದು, ಕಂಪನಿ ಅಧಿಕಾರಿಗಳಾದ ರಾಜೇಂದ್ರ ಮತ್ತಿತತರರಿಗೆ ಧನ್ಯವಾದ ಸಲ್ಲಿಸಿದರು.
ಎಸ್ಪಿ ದೇವರಾಜ್ ಅವರು 12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎಸಿಪಿಯಾಗಿದ್ದಾಗ ತಾಲ್ಲೂಕಿನ 32 ಶಾಲೆಗಳಿಗೆ ಗ್ರಂಥಾಲಯ ಪುಸ್ತಕ ಕೊಡುಗೆ ನೀಡಿದ್ದನ್ನು ಸ್ಮರಿಸಿದ ಅವರು,ತಾಲ್ಲೂಕಿನ ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಪರಿಕರ ಸಿಗಲು ರಾಜಸ್ತಾನ್ ಕಾಸ್ಮ ಫೌಂಡೇಷನ್ ಕಂಪನಿ ಪರಿಚಯಿಸಿದ್ದೇ ಅವರು ಎಂದು ತಿಳಿಸಿ, ಜಿಲ್ಲೆಯಲ್ಲಿ ಕೋಮು ಸಾಮರಸ್ಯ,ಯುಗಾದಿ ಉತ್ಸವ, ಸಂಚಾರಿ ಸಮಸ್ಯೆ ನಿರ್ವಹಣೆ,ತಂದೆ,ತಾಯಿ ಹೆಸರಲ್ಲಿ ಐಎಎಸ್,ಐಪಿಎಸ್ ಕೋಚಿಂಗ್ ಕೇಂದ್ರ ಸ್ಥಾಪನೆ ಮತ್ತಿತರ ಸಾಮಾಜಿಕ ಕಾರ್ಯಗಳು ನಮಗೆ ಪ್ರೇರಣೆಯಾಗಿವೆ ಎಂದರು.
ಇಸಿಒ ಹಾಗೂ ಸಮಾಜಸೇವಕ ಬೈರೆಡ್ಡಿ, ಶಾಲೆಗಳಿಗೆ ಪುಸ್ತಕ ಪಡೆಯಲು ಬಂದ 150ಕ್ಕೂ ಹೆಚ್ಚು ಶಿಕ್ಷಕರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಹೃದಯವಂತಿಕೆ ಮೆರೆದಿದ್ದು, ಪುಸ್ತಕ ವಿತರಣೆಯಲ್ಲಿ ಶಿಕ್ಷಕರಾದ ಸೋಮಶೇಖರ್, ಬಳಗದ ಕಾರ್ಯದರ್ಶಿ ಗೋವಿಂದ್, ಬಾಬುರಾವ್, ವೆಂಕಟಾಚಲಪತಿ, ಸೀರೆಸಂದ್ರನಾಗರಾಜ್, ಕೆಂಬೋಡಿ ಮಂಜುನಾಥ್, ಕೃಷ್ಣಪ್ಪ,ಚಿಕ್ಕಣ್ಣ ಮತ್ತಿತರರು ಶ್ರಮಿಸಿದರು.
ಕಾರ್ಯಕ್ರಮದಲ್ಲಿ ಎಪ್ಸನ್ ಕಂಪನಿ ಅಧಿಕಾರಿಗಳಾದ ರಾಜೇಂದ್ರ, ವಿಜಯ್‍ಗೋವಿಂದ್, ವೇಲಾನಂದ್, ಸ್ಯಾಮುಯಲ್,ಇಸಿಒಗಳಾದ ಆರ್.ಶ್ರೀನಿವಾಸನ್, ಬೈರೆಡ್ಡಿ, ಮುಖ್ಯಶಿಕ್ಷಕ ವೆಂಕಟೇಶ್, ಸಿಆರ್‍ಪಿ ಗೋವಿಂದ್,ಶಿಕ್ಷಕ ಗೆಳೆಯರ ಬಳಗದ ಸೋಮಶೇಖರ್, ವೆಂಕಟಾಚಲಗೌಡ, ವೆಂಕಟರಾಂ ಮತ್ತಿತರರಿದ್ದರು.

ರಾಜ್ಯದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ;ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

JANANUDI NEWS NETWORK       (EDITOR : BERNARD D’COSTA)


ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು. ಮುಂಜಾನೆಯಿಂದಲೇ ವರುಣಾನ ಆರ್ಭಟ ಜೋರಾಗಿದ್ದು, ಅದರಲ್ಲಿಯೂ ಕರಾವಳಿ, ಮಲೆನಾಡು ಜಿಲ್ಲೆಗಳು ಭಾರಿ ಮಳೆಯಿಂದ ತತ್ತರಿಸಿ ಹೋಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ. ಧಾರಾಕಾರ ಮಳೆಯಾಗುತ್ತಿದ್ದು, ವಿದ್ಯುತ್‌ ಕಂಬಗಳು, ಬೃಹತ್‌ ಮರಗಳು ನೆಲಕ್ಕೆ ಉರುಳಿವೆ,. ಉತ್ತರ ಕನ್ನಡ, ದಕ್ಷಿಣ:ಕನ್ನಡ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ, ಹಾಗೂವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.ತೋಡು, ಹಳ್ಳ, ಗುಂಡಿ, ಹೊಳೆ ನದಿಗಳು ತುಂಬಿ ಹರಿಯುತ್ತಿವೆ. ಕೆಲವು ಕಡೆ ಮನೆ ಜಮೀನುಗಳು ಜಲಾವ್ರತವಾಗಿವೆ.
ಚಿಕ್ಕಮಗಳೂರಿನ ಮೂರು ತಾಲೂಕುಗಳಾದ ಶೃಂಗೇರಿ, ಕಳಸ ಹಾಗೂ ಮೂಡಿಗೆರೆ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ. ಜಿಲ್ಲೆಗಳಲ್ಲಿ ಮುಂಜಾಗೃತಾ ಕ್ರಮವಾಗಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.
ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಭೂ ಕುಸಿತವುಂಟಾಗಿದೆ. ಮಳೆಯ ಆರ್ಭಟಕ್ಕೆ ಮನೆಗಳು ಬಿರುಕು ಬಿಟ್ಟಿದ್ದು,ಜನರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಉತ್ತರ ಒಳನಾಡಿನ ಬೀದರ್‌, ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಗಳು, ದಕ್ಷಿಣ ಒಳನಾಡಿನ. ಹಾಸನ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಗೋವಾ. ಮಹಾರಾಷ್ಟ್ರ ರಾಜಸ್ಥಾನ: ಹಿಮಾಚಲ ಪದೇಶ, ಉತರಾಖಂಡ. ಉತರ ಪದೇಶ. ಒಡಿಶಾ,ಆಂಧ್ರಪ್ರದೇಶ, ಗುಜರಾತ್‌, ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇಂದು ಗುಡುಗು ಸಹಿತ ಭಾರಿ.ಮಳೆಯಾಗಲಿದೆ.

ಅನಿಲದ ಬೆಲೆ ಮತ್ತೆ ಏರಿಕೆ – ಇಂದಿನಿಂದಲೇ 50 ರೂ.ಏರಿಕೆ

JANANUDI NEWS NETWORK  (EDITOR : BERNARD D’COSTA)


ನವದೆಹಲಿ : ಗೃಹ ಬಳಕೆ ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದೆ 14.2 ಕೆ.ಜಿ ತೂಕದ ಸಿಲಿಂಡರಿನ ಗೃಹಬಳಕೆಯ ಅಡುಗೆ ಅನಿಲದ ಬೆಲೆ ಇಂದಿನಿಂದ 50 ರೂಪಾಯಿ ಏರಿಕೆಯಾಗಲಿದೆ ಎಂದು ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ತಿಳಿಸಿವೆ.
ದೇಶದ ಪ್ರಮುಖ ನಗರಗಳಲ್ಲಿ ಪರಿರಿಷ್ಕ್ರತ ದರ ಇಂದಿನಿಂದ ಜಾರಿಯಾಗಲಿದ್ದು,ರಾಷ್ಟ್ರದ ರಾಜಧಾನಿಯಲ್ಲಿ 14.3 ಕೆ.ಜಿ. ತೂಕದಕದ ಅಡುಗೆ ಅನಿಲದ ಸಿಲಿಂಡರ್ ದರ 1,058.ರೂಪಾಯಿ ಆಗಿದ್ದು, ಚೆಂಗಳೂರಿನಲ್ಲಿ 1055 ರೂಫಾಯಿ. ಮುಂಬೈನಲ್ಲಿ 1.052 ರೂಪಾಯ, ಚನ್ನೈನಲ್ಲಿ 1, 068 ರೂಪಾಯಿ. ಕೊಲ್ಕತ್ತಾದ 1.068 ರೂಪಾಯಿಯಾಗಿದೆ.
ಇದೇ ವೇಳೆ 5 ಕೆ.ಜಿ. ಗೃಹ ಬಳಕೆ, ಸಿಲಿಂಡರ್‌ ಬೆಲೆ ಕೂಡಾ ಪರಿಷ್ಕರಿಸಲಾಗಿದ್ದು, 18 ರೂಪಾಯಿ ಎರಿಕೆ ಕಂಡಿದೆ; 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ ದರ 8. 5 ರೂಪಾಯಿ ಪ್ರತಿ ಸಿಲಿಂಡರ್‌ ಸಂತೆ ಇಳಿಕೆಯಾಗಿದೆ.

ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಚಿನ್ನದ ಪದಕ ಪಡೆದಿರುವ ಮಿಸ್ಸಾ ತಬಸ್ಸುಮ್ ಗೆ ಸನ್ಮಾನ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,   ಸಂಪಾದಕರು:ಬರ್ನಾಡ್ ಡಿ’ಕೋಸ್ತಾ

ಶ್ರೀನಿವಾಸಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ 2021-22 ನೇ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಕಾಲೇಜಿನ ವಿದ್ಯಾರ್ಥಿನಿ ಮಿಸ್ಸಾ ತಬಸ್ಸುಮ್ ಅವರನ್ನು ಅಭಿನಂದಿಸಲಾಯಿತು . ಪ್ರಾಂಶುಪಾಲ ಎಸ್.ಸಣ್ಣ ವೀರಯ್ಯ , ಉಪನ್ಯಾಸಕರಾದ ಎಸ್.ಮಧು , ಡಾ.ವೆಂಕಟನಾರಾಯಣ , ಡಾ.ಮಂಜುನಾಥ್ , ಡಾ . ಮೃತ್ಯುಂಜಯ್ , ಎಚ್.ಮಹದೇವಯ್ಯ , ಚಿನ್ನಪ್ಪರೆಡ್ಡಿ , ಬಿ.ನವೀನ್ ಕುಮಾರ್ , ಪ್ರತಿಭಾ , ಪದ್ಮ ಇದ್ದರು.

ವಾಹನ ಚಾಲನ ಪರವಾನಿಗೆಯಲ್ಲಿ ಭಾರಿ ಬದಲಾವಣೆ ! ವಾಹನ ಚಾಲನ ಪರವಾನಿಗೆಗಾಗಿ -ಆರ್ ಟಿ ಒ ಕಚೇರಿಗೆ ಹೋಗಬೇಕಾಗಿಲ್ಲ !!

JANANUDI.COM NETWORK  EDITOR : BERNARD D’COSTA

ನವದೆಹಲಿ: ಕೇಂದ್ರ ರಸ್ತೆಗಳು ಮತ್ತು ಮೋಟಾರು ಮಾರ್ಗಗಳ ಸಚಿವಾಲಯವು ಚಾಲನಾ ಪರವಾನಗಿ ಹೊಸ ನಿಯಮಗಳು 2022 ಅನ್ನು ಪರಿಚಯಿಸಿದೆ.ಇದಲ್ಲದೆ, ಚಾಲನಾ ಪರವಾನಗಿಯನ್ನು ಪಡೆಯಲು ಕೇಂದ್ರ ಸಚಿವಾಲಯವು ಕೆಲವು ಚಾಲನಾ ಪರವಾನಗಿ ನಿಯಮಗಳನ್ನು 2022 ಬದಲಾಯಿಸಿದೆ.
ಈ ನಿಯಮಗಳು 03 ಜುಲೈ 2022 ರಿಂದ ಜಾರಿಗೆ ಬರಲಿವೆ ಮತ್ತು ಎಲ್ಲಾ ಹೊಸ ಡೈವಿಂಗ್‌ ಲೈಸೆನ್ಸ್‌ ಹುಡುಕುವವರು parivahan.gov.in ನಿಂದ ಹೊಸ ನಿಯಮಗಳೊಂದಿಗೆ ಚಾಲನಾ ಪರವಾನಗಿಯನ್ನು ಪಡೆಯಲು ಸಾಧ್ಯವಾಗಲಿದೆ.
ಲರ್ನಿಂಗ್‌ ಲೈಸನ್ಸ್‌ ಯಾವ ಜಿಲ್ಲೆಯಲ್ಲಿ ತಯಾರಾಗಲಿದೆಯೋ, ಅದೇ ಜಿಲ್ಲೆಯಲ್ಲಿ ಪರ್ಮನೆಂಟ್‌ ಲೈಸನ್ಸ್‌ ಅನ್ನು ಕೂಡ ತಯಾರಿಸಬೇಕಾಗಲಿದೆ.ಹೊಸ ನಿಯಮದ ಪ್ರಕಾರ, ಇನ್ಮುಂದೆ ನಿಮ್ಮ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ನಿಮ್ಮ ಆಧಾರ್‌ ಕಾರ್ಡ್‌ ಹೊಂದಿರುವ ಜಿಲ್ಲೆಯಲ್ಲಿ ಮಾಡಲಾಗುವುದು. ಪರವಾನಿಗೆಗಾಗಿ, ಅರ್ಜಿದಾರರು ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ನೀಡಬೇಕು ಮತ್ತು ಅದನ್ನು ನೀವು ನಿಮ್ಮ ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಮಾಡಬೇಕು. ಈ ಹೊಸ ನಿಯಮ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸಲಿದೆ.
ಡೈವಿಂಗ್‌ ಲೈಸೆನ್ಸ್‌ ಹೊಸ ನಿಯಮಗಳು 2022 ಮಾತ್ರವಲ್ಲದೇ ಖಾಸಗಿ ಚಾಲನಾ ತರಬೇತಿ ಕೇಂದ್ರವನ್ನು ತೆರೆಯಲು ಕೆಲವು ನಿಯಮಗಳು ಜುಲೈ 1, 2022 ಠಿಂದ ಜಾರಿಗೆ ಬಂದಿವೆ. ಅಧಿಕೃತ ಮಾಹಿತಿಯ ಪ್ರಕಾರ, ಚಾಲನಾ ಪರವಾನಗಿ ಹೊಸ ನಿಯಮಗಳು 2022 ಎಲ್ಲರಿಗೂ ಅನ್ವಯಿಸುತ್ತದೆ ಭಾರತದಲ್ಲಿ 2 ಚಕ್ರ ಮತ್ತು 4 ಚಕ್ರ ವಾಹನಗಳಿಗೆ.ಇದಲ್ಲದೆ, ಕೇಂದ್ರ ರಸ್ತೆಗಳು ಮತ್ತು ಮೋಟಾರು ಮಾರ್ಗಗಳ ಸಚಿವಾಲಯವು ಹೊಸ ಚಾಲನಾ ಪರವಾಗಗಿಗಾಗಿ ಅರ್ಜಿ ಸಲ್ಲಿಸುವ ದಾಖಲಾತಿಯನ್ನು. ಸಹ ಬದಲಾಯಿಸಿದೆ. ಡ್ರೈವಿಂಗ್‌ ಲೈಸೆನ್ಸ್‌ 2022 ರ ಹೊಸ ನಿಯಮಗಳ ಪ್ರಕಾರ; 2 ಮತ್ತು 4 ಚಕ್ರದ ಚಾಲಕರಿಗೆ ಚಾಲನಾ ಪರವಾನಗಿ ಹೊಸ ನಿಯಮಗಳು 2022 ರ ಉತ್ತಮ ಭಾಗವೆಂದರೆ ನೀವು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ.
ಡ್ರೈವಿಂಗ್‌ ಲೈಸೆನ್ಸ್‌ಗಾಗಿ ಎಲ್ಲಾ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ parivahan.gov.in ನಲ್ಲಿ ಮಾಡಬಹುದು. ಸರ್ಕಾರದ ಪ್ರಕಾರ ಖಖಿಔ ಗಳಲ್ಲಿ ದೀರ್ಥ ಸರತಿ ಸಾಲುಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಚಾಲನಾ ಪರವಾನಗಿ ಹೊಸ ನಿಯಮಗಳು 2022 ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಹೊಸ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಕಾಯುತ್ತಿರುವ ಜನರಿಗೆ ಒಳ್ಳೆಯ ವಿಚಾರವಾಗಲಿದೆ.
ಚಾಲನಾ ಪರವಾನಗಿ ಹೊಸ ನಿಯಮಗಳು 1 ಜುಲೈ 2022 ರಿಂದ ಜಾರಿಗೆ ಬರಲಿದೆ. ಹೊಸ ಚಾಲನಾ ಪರವಾನಗಿ ನಿಯಮಗಳು. 2022 ಎಲ್ಲಾ ಸರ್ಕಾರಿ-ಚಾಲಿತ ಚಾಲನಾ ತರಬೇತಿ ಕೇಂದ್ರಗಳನ್ನು ತೆಗೆದುಹಾಕಲಿದೆ. ಡ್ರೈವಿಂಗ್‌ ಲೈಸೆನ್ಸ್‌ ಹೊಸ ನಿಯಮಗಳು 2022 ರ ನಂತರ ಖಾಸಗಿ ಡ್ರೈವಿಂಗ್‌ ಸೆಂಟರ್‌ಗಳು ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಖಾಸಗಿ ಕೇಂದ್ರವು ಒಟ್ಟು 5 ವರ್ಷಗಳವರೆಗೆ. ಮಾತ್ರ ಮಾನ್ಯವಾಗಿರುತ್ತದೆ, ಅದರ ನಂತರ ಅವರು ತಮ್ಮ ಕಾರ್ಯಾಚರಣೆಗಳಿಗೆ ಪರವಾನಗಿಯನ್ನು ಸವೀಕರಿಸಬೇಕಾಗಬಹುದು.
ಹೊಸ ನಿಯಮಗಳು ಖಾಸಗಿ ತರಬೇತಿ ಉದ್ಯಮವನ್ನು ಉತ್ತೇಜಿಸಲು ಅನುವು ಮಾಡಿಕೊಡುತ್ತದೆ. ಒಬ್ಬ ವ್ಯಕ್ತಿಯು ಈ ಖಾಸಗಿ ತರಬೇತಿ.ಕೇಂದ್ರಗಳಲ್ಲಿ ಡ್ರೈವಿಂಗ್‌ ತರಬೇತಿಯನ್ನು ಪಡೆದಿದ್ದರೆ, ಹೊಸ ಡೈವಿಂಗ್‌ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವಾಗ ಅವಳು ಅಥವಾ ಅವನು RTO ನಲ್ಲಿ ಡ್ರೈವಿಂಗ್‌ ಪರೀಕ್ಷೆಯನ್ನು ನೀಡುವ ಅಗತ್ಯವಿಲ್ಲ. ಹೊಸ ಡೈವಿಂಗ್‌ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ವ್ಯಕ್ತಿಗಳಿಗೆ ಖಾಸಗಿ ತರಬೇತಿ ಕೇಂದ್ರದ ಪ್ರಮಾಣ ಪತ್ರ ಮಾತ್ರ ಅಗತ್ಯವಿರುತ್ತದೆ. ಈ ಮೂಲಕ. RTO ನಲ್ಲಿ ಚಾಲನಾ ಪರೀಕ್ಷೆಯನ್ನು ತೆಗೆದುಹಾಕಲಾಗುತ್ತದೆ. ಇದಲ್ಲದೆ, ಪ್ರತಿ ವರ್ಷ ಖಾಸಗಿ ಚಾಲನಾ ತರಬೇತಿ ಕೇಂದ್ರವು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪರವಾನಗಿಯನ್ನು ನವೀಕರಿಸಬೇಕು.

2022 ರ ಖಾಸಗಿ ಡೈವಿಂಗ್‌ ತರಬೇತಿ ಕೇಂದ್ರಗಳಿಗೆ ಅನುಸರಿಸಲು ಹೊಸ ನಿಯಮಗಳು


ಡ್ರೈವಿಂಗ್‌ ಸ್ಕೂಲ್‌ಗಾಗಿ ಖಾಸಗಿ ಡ್ರೈವಿಂಗ್‌ ಟ್ರೈನಿಂಗ್‌ ಸೆಂಟರ್‌ ಪರವಾನಗಿ ಪಡೆಯಲು ಸರ್ಕಾರ ನಿಗದಿಪಡಿಸಿದ ಮೂಲಭೂತ ನಿಯಮಗಳಿವೆ.


ಮೊದಲನೆಯದಾಗಿ, ಖಾಸಗಿ ಡ್ರೈವಿಂಗ್‌ ಟ್ರೈನಿಂಗ್‌ ಶಾಲೆಗೆ: ಕನಿಷ್ಠ 1 ಎಕರೆ ಜಮೀನು ಇರಬೇಕು. ಇದಲ್ಲದೆ, 4 ಚಕ್ರ ವಾಹನಗಳಿಗೆ 2 ಎಕರೆ ಭೂಮಿ ಬೇಕಾಗುತ್ತದೆ. ಟೆಸ್ಟಿಂಗ್‌ ಟ್ರ್ಯಾಕ್‌ ಖಾಸಗಿ ಚಾಲನಾ ತರಬೇತಿ ಕೇಂದ್ರದಲ್ಲಿ ಲಭ್ಯವಿರಬೇಕು.
ತರಬೇತುದಾರರು ವಿದ್ಯಾವಂತರಾಗಿರಬೇಕು ಮತ್ತು ಕನಿಷ್ಠ ಪ್ರೌಢಶಾಲೆ ಅಥವಾ ಡಿಪ್ಲೊಮಾ ಅಂಕಪಟ್ಟಿಯನ್ನು ಹೊಂದಿರಬೇಕು.


ತರಬೇತುದಾರ ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು.


ತರಬೇತುದಾರರು ಐಟಿ ಮತ್ತು ಬಯೋಮೆಟ್ರಿಕ್‌ ವ್ಯವಸ್ಥೆಗಳ ಮೂಲಭೂತ ಜ್ಞಾನವನ್ನು ಹೊಂದಿರಬೇಕು


ಲಘು ವಾಹನ ತರಬೇತಿಯು ಕನಿಷ್ಠ 29 ಗಂಚೆಗಳ ಕಾಲ ಇರಬೇಕು ಮತ್ತು ಇದನ್ನು 4 ವಾರಗಳಲ್ಲಿ ಪೂರ್ಣಗೊಳ್ಳಬೇಕು.


ತರಬೇತಿಯು ಕನಿಷ್ಠ 2 ವಿಭಾಗಗಳನ್ನು ಹೊಂದಿರಬೇಕು: ಪ್ರಾಯೋಗಿಕ ಮತ್ತು ಪಠ್ಯ ತರಭೇತಿ ಕೂಡ ಇರಬೇಕು. ಇದರಲ್ಲಿ ಪಠ್ಯ ತರಭೇತಿ 8 ಗಂಟೆಗಳಿರಬೇಕು,


ಹೆವಿ ಮೋಟಾರು ವಾಹನ ತರಬೇತಿಯು 38 ಗಂಟಿಗಳ ಕಾಲ ಇರುತ್ತದೆ ಮತ್ತು 8 ಗಂಟೆಗಳ ಸುದೀರ್ಘ ಥಿಯರಿ ತರಗತಿಗಳು, ಮತ್ತು 33 ಗಂಟೆಗಳ: ಪ್ರಾಯೋಗಿಕ ತರಗತಿಗಳೊಂದಿಗೆ 6 ವಾರಗಳಲ್ಲಿ ಪೂರ್ಣಗೊಳಿಸಬೇಕು

ಕರಾವಳಿಯಲ್ಲಿ ಮಳೆಯ ಆರ್ಭಟ ನಾಳೆಯೂ ಶಾಲೆ ಕಾಲೇಜುಗಳಿಗೆ ರಜೆ -ನೆರೆಯ ಭೀತಿ ಕಾಡುತ್ತಿದೆ

JANANUDI.COM NETWORK  EDITOR : BERNARD D’COSTA

ಕುಂದಾಪುರ:  ಕರಾವಳಿ ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆಯಾಗುವ ಹವಾಮಾನ ವರದಿಯ ಮುನ್ಸೂಚನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 6 ರಂದು ಬುಧವಾರ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಧಾರಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ನಾಳೆಯೂ (ಜು 6  ರಂದು ರಜೆ ಘೋಷಣೆ ಮಾಡಲಾಗಿದೆ.

ಅವ್ಯಾಹತ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಇಂದು ರಜೆ ಸಾರಲಾಗಿತ್ತು. ಇದೀಗ ನಾಳೆಯೂ ರಜೆ ಘೋಷಿಸಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ಕೆಳಗಡೆ ಕಾಣುವ ಫೋಟೊಗಳು ಬಾರ್ಕೂರು ಪ್ರದೇಶದ ಫೋಟೊಗಳು

ಫೋಟೊಗಳು : ರೋಶನ್ ಡಿಆಲ್ಮೇಡಾ, ಬಾರ್ಕೂರು