HOLY ROSARY CHURCH, KUNDAPUR – 450 th JUBILEE SOUVENIR 2021

ಬೈಂದೂರು ಸಮೀಪ ಸುಟ್ಟು ಕರಲಾಗಿರುವ ಕಾರಿನ ಒಳಗಡೆ ಶವ ಪತ್ತೆ

JANANUDI NEWS NETWORK (EDITOR : BERNARD D’COSTA)

ಬೈಂದೂರು, ಜುಲೈ 13: ನಿರ್ಜನ ಕಾಡು ಪ್ರದೇಶದಲ್ಲಿ ಕಾರಿನ ಜೊತೆಗೆ ವ್ಯಕ್ತಿಯೊಬ್ಬ ಸುಟ್ಟು ಶವವಾಗಿ  ಕರಕಲಾಗಿ ಪತ್ತೆಯಾಗಿರುವ ಘಟನೆ ಬೈಂದೂರು ಸಮೀಪದ ಹೇನ್ ಬೇರು ಪ್ರದೇಶದಲ್ಲಿ ಜು.12ರ ತಡರಾತ್ರಿ ವರದಿಯಾಗಿದೆ.

ಕಾರಿನಲ್ಲಿದ್ದ ವ್ಯಕ್ತಿ ಸಮೇತ ಕಾರುಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.‌ ಕಾರಿನ ಹಿಂಬದಿ‌ ಸೀಟ್ ನಲ್ಲಿ ವ್ಯಕ್ತಿ ಇದ್ದು, ವ್ಯಕ್ತಿಯ ಶವ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಕಂಡು ಹಿಡಿಯಲಾಗದಷ್ಟು ಸುಟ್ಟುಕರಕಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯೋ ಆತ್ಮಹತ್ಯೆಯೋ ತನಿಖೆಯ ಬಳಿಕವಷ್ಟೇ ಸತ್ಯ ಹೊರ ಬರಬೇಕಿದೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯ ಜೊತೆಗೆ ಪ್ರಕರಣ ಭೇದಿಸಲು ಪೊಲೀಸರು ಮುಂದಾಗಿದ್ದಾರೆ. ಕಾರಿನ ಚೆಸ್ಸಿ ನಂಬರ್ ಕೂಡ ಕಾಣದಷ್ಟು ಬೆಂಕಿ ಅನಾಹುತ ಆಗಿದೆ ಎಂದರೆ ನಂಬಲು ಸಾಧ್ಯವಿಲ್ಲ.ಇದು ಬೇಕಂತಲೇ ಮಾಡಿಕೊಂಡ ಅನಾಹುತ.

ರೋಟರಿ ಕುಂದಾಪುರ ದಕ್ಷಿಣ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ:ಮಾನವೀಯತೆ ಜೀವನದ ಮೌಲ್ಯ – ಓಂ ಗಣೇಶ್

JANANUDI NEWS NETWORK (EDITOR : BERNARD D’COSTA)


“ಒಳ್ಳೆಯವರಾಗುವುದು” ನಮ್ಮ ಬದುಕಿನ ಧ್ಯೇಯದಲ್ಲಿ ಒಂದಾಗಿರಬೇಕು. ಮಾನವೀಯತೆಯ ಸ್ಪರ್ಶ ಇರುವ ಸೇವೆ ಬಹಳ ಉತ್ತಮ ಪರಿಣಾಮ ಸಮಾಜದಲ್ಲಿ ಉಂಟು ಮಾಡುತ್ತದೆ. ಜನ ಜೀವನದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡುತ್ತಿರುವ ರೋಟರಿ ಸದಸ್ಯರಾಗುವುದರೊಂದಿಗೆ ವೃತ್ತಿಯಲ್ಲೂ ಶೃದ್ಧೆ, ಕರ್ತವ್ಯ, ನಿಷ್ಠೆ ತೋರುತ್ತಿರುವ ರೋಟರಿ ಸದಸ್ಯರು ಅಭಿನಂದನೀಯರು. ರೋಟರಿ ಕುಂದಾಪುರ ದಕ್ಷಿಣ ಈ ನಿಟ್ಟಿನಲ್ಲಿ ಬಹಳ ಶ್ರೇಷ್ಠ ಸಾಧನೆ ಮಾಡುತ್ತಾ ಬಂದಿದೆ. ಕಳೆದ ವರ್ಷ ಅಸಹಾಯಕರಿಗೆ ಸುಸಜ್ಜಿತ ಮನೆಗಳನ್ನು ಕಟ್ಟಿ ಕೊಟ್ಟು, ಬಸ್ ತಂಗುದಾಣವನ್ನು ನಿರ್ಮಿಸಿದ್ದಲ್ಲದೆ ಹತ್ತಾರು ಆರೋಗ್ಯಪೂರ್ಣ ಸೇವೆ ಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷರು ಅದೇ ಪರಂಪರೆಯಲ್ಲಿ ಮುನ್ನಡೆಯಲಿ ಎಂದು ಖ್ಯಾತ ಜಾದುಗಾರ, ಸಾಹಿತಿ, ವಾಗ್ಮಿ ಓಂ ಗಣೇಶ್ ಉಪ್ಪುಂದ ಹೇಳಿದರು.
ಕುಂದಾಪುರ ಸ.ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ರೋಟರಿ ಕುಂದಾಪುರ ದಕ್ಷಿಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
“ನಾವು ಸಚ್ಚಾರಿತ್ರ್ಯವಂತರಾಗೋಣ, ಅದು ನಮ್ಮ ಹೆಗ್ಗುರುತು ಆಗಲಿ” ಎಂದು ಓಂ ಗಣೇಶ್ ಆಶಯ ವ್ಯಕ್ತಪಡಿಸಿದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಮಹೇಂದ್ರ ಶೆಟ್ಟಿ, ನೂತನ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕರಿಗೆ ಅಧಿಕಾರ ಹಸ್ತಾಂತರಿಸಿದರು.
ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಿ “ಪೋಲಿಯೋ ಪ್ಲಸ್ ಸೇರಿದಂತೆ ಆರೋಗ್ಯಪೂರ್ಣ ಜಗತ್ತಿಗಾಗಿ ರೋಟರಿ ನಡೆಸುತ್ತಿರುವ ಅಭಿಯಾನ ಅದೇ ಗಂಭೀರತೆಯಲ್ಲಿ ಮುಂದುವರಿಯಬೇಕು.” ಎಂದರು.
ಝೋನಲ್ ಲೆಪ್ಟಿನೆಂಟ್ ಡಾ. ಸಂದೀಪ್ ಶೆಟ್ಟಿ ಶುಭ ಹಾರೈಸಿದರು.
ಕಾರ್ಯದರ್ಶಿ ಸುಹಾಸ್ ಭಂಡಾರ್‍ಕಾರ್ ಹಾಗೂ ರಮಾನಂದ ಕಾರಂತ ಗತ ವರ್ಷದ ಕಾರ್ಯಕ್ರಮಗಳ ವಿವರ ನೀಡಿದರು.
ಕಾವೇರಿ ಹಾಸ್ಪಿಟಲ್, ಬೆಂಗಳೂರು, ಕುಂಭಾಶಿ ವೆಂಕಟರಮಣ ಪ್ರಭು ಚಾರಿಟೆಬಲ್ ಟ್ರಸ್ಟ್ ಹಾಗೂ ರೋಟರಿ ಕುಂದಾಪುರ ದಕ್ಷಿಣದ ಸಹಭಾಗಿತ್ವದಲ್ಲಿ ವಿವಿಧ ಸಂಘಟನೆಗಳಿಗೆ ಸಾರ್ವಜನಿಕ ಉಪಯೋಗಕ್ಕಾಗಿ “ಆಕ್ಸಿಜನ್ ಕಾನ್ಸಂಟ್ರೆಟರ್” ನೀಡಲಾಯಿತು.
ವಿವಿಧ ತಳಿಯ ಔಷಧೀಯ ಗುಣಗಳುಳ್ಳ ಗಿಡಗಳನ್ನು ಡಾ. ಉತ್ತಮ ಕುಮಾರ್ ಶೆಟ್ಟಿ, ಗಣೇಶ ಶೆಣೈ ಮುನಿಯಾಲು, ವೆಂಕಟೇಶ ಪೈ ಸಹಕಾರದೊಂದಿಗೆ ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ವಿತರಿಸಲಾಯಿತು. ಚೈತನ್ಯ ವಿಶೇಷ ಶಾಲೆಗೆ ಕೊಡುಗೆ ನೀಡಲಾಯಿತು.
ನೂತನ ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ವಂದಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ :ಸ್ಪರ್ಧೆಗಳಿಂದ ಪ್ರತಿಭೆಗಳ ಅನಾವರಣ

JANANUDI NEWS NETWORK (EDITOR : BERNARD D’COSTA)

ಶಿರ್ವ: ಇಂದು ನಾವು ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ಇದ್ದೇವೆ. ಪ್ರತಿಯೊಂದು ಉದ್ಯೋಗ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿದ್ದು ಅದನ್ನು ಪಡೆಯುವುದರಲ್ಲಿ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಪಡೆದುಕೊಳ್ಳಲು ವಿವಿಧ ಸ್ಪರ್ಧೆಗಳ ಅವಶ್ಯಕತೆ ಇಂದು ಅನಿವಾರ್ಯವಾಗಿದೆ . ಪ್ರತಿಯೊಂದು ಸ್ಪರ್ಧೆಯು ಯುವ ಪೀಳಿಗೆಗಳಿಗೆ ಜೀವನದ ಕೌಶಲ್ಯ ಜೊತೆಗೆ ವ್ಯಕ್ತಿತ್ವ ವಿಕಸನವನ್ನು ರೂಪಿಸುವಲ್ಲಿ ಸಹಕಾರಿಯಾಗಲಿದೆ, ತನ್ಮೂಲಕ ಪ್ರತಿಭೆಗಳ ಅನಾವರಣ ಆಗಲಿದೆ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಬಿಸಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ ಟೆಕ್ ಮಂತನ 22 ಐಟಿ ಕಾಂಪಿಟೇಶನ್ಸ್ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ವಿಜೇತರಿಗೆ ಪ್ರಮಾಣ ಪತ್ರ ಜೊತೆಗೆ ಬಹುಮಾನಗಳನ್ನು ವಿತರಿಸಿದರು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ಟೆಕ್ ಮಂತನ್ 22 ಐಟಿ ಕಾಂಪಿಟೇಶನ್ಸ್ ಬಗ್ಗೆ ಮಾರ್ಗದರ್ಶನ ನೀಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ವೃದ್ಧಿಸುವ ರಸಪ್ರಶ್ನೆ,ಚರ್ಚೆ ಕೋಡಿಂಗ್, ಗೇಮಿಂಗ್,ರಂಗೋಲಿ,ಅಣುಕು ಸಂದರ್ಶನ, ಪೋಸ್ಟರ್ ತಯಾರಿಕೆ, ಪವರ್ಪಾಯಿಂಟ್ ಪ್ರಸ್ತುತಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್, ಕೆಂಜಾರ್ನಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೇಮಿಂಗ್ ಕಾಂಪಿಟೇಶನ್ ನಲ್ಲಿ 1500 ನಗದು ಬಹುಮಾನ ಪಡೆದು ವಿಜೇತರಾದ ಶ್ರೀ ದೇವಿ ಪ್ರಸಾದ್ ಶೆಟ್ಟಿ, ಹಾರ್ದಿಕ್ ಸಾಲಿಯಾನ್, ವರ್ಷಿತ್ ಶೆಟ್ಟಿ ಹಾಗೂ ಡೆನ್ಸನ್ ಬ್ರೈನ್ ನಜರೆತ್ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಮಾನ್ವಿತ ಎಸ್ ಸುವರ್ಣ, ಪದ್ಮಶ್ರೀ ಭಟ್, ರಾಯ್ಸನ್ ಜೋಸೆಫ್ ಬರ್ಬೋಜಾ , ನಿವೇದಿತಾ ನಿಖಿಲ್ ಪೂಜಾರಿ, ಪ್ರತ್ವಿನ್ ಬಂಗೇರ ಈ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ದಿವ್ಯಶ್ರೀ ಬಿ, ಶ್ರೀ ಪ್ರಕಾಶ್, ಕು. ಪ್ರಣಿತ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು.ಪ್ರೀತಿಕಾ ಬಹುಮಾನ ಪಟ್ಟಿಯನ್ನು ವಾಚಿಸಿದರು.ವಿದ್ಯಾರ್ಥಿಗಳಾದ ಸನತ್ ಕುಮಾರ್ ಶೆಟ್ಟಿ, ರಕ್ಷಿತ್ ಪೂಜಾರಿ,ಅನುಪ್ ನಾಯಕ,ಸಹಕರಿಸಿದರು.ಕು. ಪ್ರಿಯಾಂಕ ಪ್ರಾರ್ಥಿಸಿದರು. ಕು.ಸೃಷ್ಟಿ ಸ್ವಾಗತಿಸಿ, ವಿಧಾತ್ ಶೆಟ್ಟಿ ವಂದಿಸಿದರು. ಕು. ಎಲ್ರುಶಾ ಮೆಲಿನಾ ಡಿಸಾ ಕಾರ್ಯಕ್ರಮ ಸಂಯೋಜಿಸಿದರು.

ಶ್ರೀನಿವಾಸಪುರ ಸರ್ಕಾರಿ ಆದರ್ಶ ವಿದ್ಯಾಲಯ ಈ ಸಾಲಿನ 7,8, 9 ನೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳಿಗಾಗಿ ಅರ್ಜಿ ಆಹ್ವಾನ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ     (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2022-23ನೇ ಸಾಲಿನಲ್ಲಿ 7,8 ಮತ್ತು 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಕೊಳ್ಳಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜು.27ರಂದು ಶಾಲೆಯಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಶಾಲೆಯಿಂದ ಅರ್ಜಿ ಪಡೆದು ಜು.20ರೊಳಗೆ ಸಲ್ಲಿಸಬಹುತಾದಾಗಿದೆ ಎಂದು ಮುಖ್ಯ ಶಿಕ್ಷಕಿ ಕೆ.ಮಮತಾರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9731197976, 8660568686 ಸಂಪರ್ಕಿಸಲು ಕೋರಲಾಗಿದೆ.

ಶ್ರೀನಿವಾಸಪುರ ಜು.13 ರಂದು ತಾಲ್ಲೂಕಿನ ಹಲವೆಡೆ ವಿದ್ಯುತ್ ಸರಬಾರಾಜಿನಲ್ಲಿ ಅಡಚಣೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ     (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ತಾಲ್ಲೂಕಿನ ಶ್ರೀನಿವಾಸಪುರ, ತಾಡಿಗೋಳ್, ಲಕ್ಷ್ಮೀಪುರ, ಸೋಮಯಾಜಲಹಳ್ಳಿ, ಗೌನಿಪಲ್ಲಿ, ಅಡ್ಡಗಲ್ ಹಾಗೂ ರಾಯಲ್ಪಾಡ್ 66/11ಕೆವಿ ವಿದ್ಯುತ್ ಉಪ ಕೇಂದ್ರಗಳಲ್ಲಿ, ಜು.13 ರಂದು ಕೆಪಿಟಿಸಿಎಲ್ ವತಿಯಿಂದ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಪರಿಣಾಮವಾಗಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಚಿಂತಾಮಣಿ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಮೇಲ್ಕಂಡ ಎಲ್ಲಾ ಉಪ ಕೇಂದ್ರಗಳ 11 ಕೆವಿ ಮಾರ್ಗಗಳಿಗೆ ವಿದ್ಯುತ್ ಸರಗರಾಜಿನಲ್ಲಿ ಅಡಚಣೆಯಾಗಲಿದೆ ಎಂದು ಸಂಸ್ಥೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮತೀರ್ಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀನಿವಾಸಪುರ:ವಲಯ ಅರಣ್ಯಾಧಿಕಾರಿ ಎಸ್.ಸುರೇಶ್ ಬಾಬು ಅಧಿಕಾರ ಸ್ವೀಕಾರ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ ಸಾಮಾಜಿಕ ವಲಯ ಅರಣ್ಯಾಧಿಕಾರಿಯಾಗಿ ಕೆ.ಮಹೇಶ್, ಬೇರೆಡೆಗೆ ವರ್ಗವಾಗಿರುವ ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಸುರೇಶ್ ಬಾಬು ಅವರಿಂದ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆ: ಸಮವಸ್ತ್ರ ವಿತರಣೆ

JANANUDI NEWS NETWORK          (EDITOR : BERNARD D’COSTA)

ಕುಂದಾಪುರ: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಜು.೧೨ ರಂದು ಶಾಲಾ ಆಡಳಿತ ಮಂಡಳಿಯಿಂದ ಸಮವಸ್ತ್ರ ವಿತರಣೆ ಮಾಡಲಾಯಿತು. ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಆಶಾ ರವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿ ಸಮವಸ್ತ್ರದ ಮಹತ್ವದ ಬಗ್ಗೆ ತಿಳಿಸಿದರು.

ಕಾನ್ವೆಂಟ್ ಸುಪೀರಿಯರ್ ಆಗಿರುವ ಸಿಸ್ಟರ್ ಸಂಗೀತ ರವರು ಸಮವಸ್ತ್ರ ಕೂಡಮಾಡಿದ ಆಡಳಿತ ಮಂಡಳಿಯನ್ನು ಪ್ರಶಂಸಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ದೈಹಿಕ ಶಿಕ್ಷಕ ಮೈಕಲ್ ಇವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ಇವರು ವಂದಿಸಿದರು. ಶಿಕ್ಷಕಿ ಸರಸ್ವತಿ ಇವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಎಸ್ಕಾರ್ಟ್ ವಾಹನ ಉಡುಪಿಯ ಸಂತೆಕಟ್ಟೆಯಲ್ಲಿ ಪಲ್ಟಿ

JANANUDI NEWS NETWORK         (EDITOR : BERNARD D’COSTA

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಎಸ್ಕಾರ್ಟ್ ವಾಹನ ಉಡುಪಿಯ ಸಂತೆಕಟ್ಟೆಯ ಸಮೀಪ್ಸ ಕೆ.ಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ಇಂದು ಸಂಭವಿಸಿದೆ.

   ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಗಿದ್ದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸಚಿವರ ಬೆಂಗಾವಲು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಗಾಯಾಳು ಸಿಬ್ಬಂದಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆದಾಖಲಿಸಲಾಗಿದೆ. ಬೆಂಗಾವಲು ವಾಹನದ ಎದುರು ಸಂಚರಿಸುತಿದ್ದ ಲಾರಿ ಸೂಚನೆ ನೀಡದೇ ಪಥ ಬದಲಿಸಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

   ಘಟನೆಯಿಂದ ಅದೃಷ್ಟವಶಾತ್ ‌ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಬೆಂಗಾವಲು‌ ಸಿಬ್ಬಂದಿ ಗಣೇಶ್ ಆಳ್ವ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೋಟ : ತಾಯಿ ಊಟ ಬಡಿಸದೇ, ನೀನೇ ಬಡಿಸಿಕೊಂಡು ಉಣ್ಣು, ನೀರಲ್ಲಿ ಆಟವಾಡಬೇಡ ಎಂದಿದಕ್ಕೆ ಬಾಲಕನು ನೇಣಿಗೆ ಶರಣು

JANANUDI NEWS NETWORK         

ಚಿತ್ರ ಸಾಂದರ್ಭಿಕ

ಕೋಟ : ತಾಯಿಯು ಊಟ ಬಡಿಸದೇ, ನೀನೇ ಹೋಗಿ ಬಡಿಸಿಕೋ ಎಂದು ಹೇಳಿದ್ದಕ್ಕೆ ಬಾಲಕನೊಬ್ಬ ನೇಣಿಗೆ ಶರಣಾದ ಕರಾಳ ಕುಂದಾಪುರ ಸಮೀಪದ ಕೋಟದಲ್ಲಿ ಸೋಮವಾರದಂದು ನಡೆದಿದೆ.

  ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕೋಟ ಸಮೀಪದ ಕಾರ್ಕಡ ನಿವಾಸಿ ಲಕ್ಷ್ಮೀ ಎಂಬವರ ಪುತ್ರ 9ನೇ ತರಗತಿ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ.

    ಈತನ ತಾಯಿ ಲಕ್ಷ್ಮೀ ಅವರು, ಜೀವನೋಪಾಯಕ್ಕಾಗಿ ಕಾರ್ಕಡದಲ್ಲಿ ತನ್ನ ಮನೆಯ ಪಕ್ಕದಲ್ಲೇ ವೀರಭದ್ರ ಎಂಬ ಸಣ್ಣ ಕ್ಯಾಂಟೀನ್‌ ನಡೆಸುತ್ತಿದ್ದಾರೆ. ವಿಪರೀತ ಮಳೆ ಹಿನ್ನೆಲೆ ಶಾಲೆಗೆ ರಜೆಯಿದ್ದ ಕಾರಣ ನಾಗೇಂದ್ರ ಕಾರ್ಕಡ ಶಾಲಾ ಮೈದಾನಲ್ಲಿ ಆಡಲು ಹೋಗಿದ್ದು, ಮಧ್ಯಾಹ್ನ ಊಟಕ್ಕೆಂದು ಕ್ಯಾಂಟಿನ್ ಬಳಿ ಬಂದು ಬಾಲಕ ತಾಯಿ ಬಳಿ ಊಟ ಬಡಿಸಲು ಹೇಳಿದ್ದಾನೆ. ತಾಯಿ ನೀರಲ್ಲಿ ಆಟವಾಡಬೇಡ ಎಂದು ಬುದ್ದಿವಾದ ಹೇಳಿ, ಇದೇ ವೇಳೆ ಕ್ಯಾಂಟೀನ್‌ನಲ್ಲಿ ಗ್ರಾಹಕರಿದ್ದುದರಿಂದ ಮಗನಿಗೆ ಮನೆಗೆ ಹೋಗಿ ನೀನೆ ಊಟ ಬಡಿಸಿಕೊಂಡು ಉಣ್ಣುವಂತೆ ತಾಯಿ ಹೇಳಿದ್ದಾರೆ.

    ಆದರೆ ಹಠ ಸ್ವಭಾವದ ಹುಡುಗ ಇಷ್ಟಕ್ಕೆ ಸಿಟ್ಟುಗೊಂಡ ಆತ ಮನೆಗೆ ತೆರಳಿ, ಸಿಟೌಟ್‌ನಲ್ಲಿ ಬಟ್ಟೆ ಒಣಗಿಸಲು ಕಟ್ಟಿದ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.