HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆರೋಗ್ಯ ರಕ್ಷಣಾ ಕಾರ್ಡ್ ವಿತರಣೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ಫಲಾನುಭವಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿತರಿಸುವ ಆರೋಗ್ಯ ರಕ್ಷಣಾ ಕಾರ್ಡ್ ಪ್ರಯೋಜನ ಪಡೆದು, ಆರೋಗ್ಯ ಉತ್ತಮಪಡಿಸಿಕೊಳ್ಳಬೇಕು ಎಂದು ಮುಖಂಡ ಸಂಜಯ್ ರೆಡ್ಡಿ ಹೇಳಿದರು.


ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ ಬಡವರಿಗೆ ವರದಾನವಾಗಿದೆ. ಅದೆಷ್ಟೋ ಜನರು ಯೋಜನೆಯ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.


ಯೋಜನೆಯ, ಯೋಜನಾ ಮಂಡಳಿ ನಿರ್ದೇಶಕ ಮುರಳಿಧರಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 35 ಸಾವಿರ ಸ್ವಸಹಾಯ ಸಂಘಗಳಿವೆ. ಸಂಘದ ಸದಸ್ಯರ ಹಾಗೂ ಅಗತ್ಯ ಇರುವ ಇತರರ ಆರೋಗ್ಯ ರಕ್ಷಣೆಗೆ ಅನುಕೂಲವಾಗುವಂತೆ ಆರೋಗ್ಯ ರಕ್ಷಣಾ ಕಾರ್ಡ್ ನೀಡಲಾಗುತ್ತಿದೆ. ಈ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ರೂ.20 ಸಾವಿರದ ವರೆಗೆ ಆರೋಗ್ಯ ರಕ್ಷಣೆ ಸಿಗುತ್ತದೆ. ಪ್ರಸ್ತುತ 40 ಮಂದಿಗೆ ಈ ಕಾರ್ಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ಎಂ.ಲಕ್ಷ್ಮಣಗೌಡ, ಯೋಜನೆಯ ತಾಲ್ಲೂಕು ಘಟಕದ ನಿರ್ದೇಶಕ ಸುರೇಂದ್ರಗೌಡ ಇದ್ದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜನಪರ ಆಡಳಿತ ಮಾದರಿಯಾಗಿದೆ:ಬೆಸ್ಕಾಂ ಎಂಜಿನಿಯರ್ ರಾಮತೀರ್ಥ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜನಪರ ಆಡಳಿತ ಮಾದರಿಯಾಗಿದೆ. ಅವರ ಜನೋಪಯೋಗಿ ಯೋಜನೆಗಳ ಫಲದ ಪರಿಣಾಮ ಇಂದಿಗೂ ಕಂಡುಬರುತ್ತದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ ಹೇಳಿದರು.


ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ತಾಲ್ಲೂಕು ಬೆಸ್ಕಾಂ ನೌಕರರ ಸಂಘದ ವತಿಯಿಂದ ಗುರುವಾರ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ, ಮಹಾನ್ ವ್ಯಕ್ತಿಗಳು ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಕೆಂಪೇಗೌಡರು ನಾಡಿನ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ಹೇಳಿದರು.


ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಕೆಂಪೇಗೌಡರ ಸೇವೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗದ ಜನರ ಹಿತಚಿಂತಕರಾಗಿದ್ದ ಅವರು, ಎಲ್ಲರ ಕ್ಷೇಮಾಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದಾರೆ. ನಾಡಿನ ಜನರ ಪ್ರೀತಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೌಡೇಗೌಡ, ನೌಕರರ ಸಂಘದ ಮುಖಂಡರಾದ ಲಕ್ಷ್ಮಣರೆಡ್ಡಿ, ಕೆ.ಮೋಹನಾಚಾರಿ, ದೊರೆಸ್ವಾಮಿ, ಸುಬ್ರಮಣಿ, ಆರ್.ಚಂದ್ರು, ರಾಮಾಂಜಿ, ಟಿ.ಶ್ರೀನಿವಾಸ್, ರಾಜಣ್ಣ, ಅನಂತ್ ದೇವರಾಜ್, ನಂಜುಂಡೇಶ್ವರ್, ಮಂಜುಳ, ವೇಣು, ರಮೇಶ್ ಇದ್ದರು.

ಅಪರಾಧ ತಡೆಯಲು ಗಡಿ ಹಂಚಿಕೊಂಡಿರುವ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸಾಂಘಿಕ ಪ್ರಯತ್ನ ಮಾಡಬೇಕು:ಡಿ.ದೇವರಾಜ್

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ಅಪರಾಧ ತಡೆಯಲು ಗಡಿ ಹಂಚಿಕೊಂಡಿರುವ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸಾಂಘಿಕ ಪ್ರಯತ್ನ ಮಾಡಬೇಕುಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಹೇಳಿದರು.


ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರ ರಾಜ್ಯ ಪೊಲೀಸ್ ಅಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ರಾಜ್ಯದಲ್ಲಿ ಅಪರಾಧ ಮಾಡಿ, ಇನ್ನೊಂದು ರಾಜ್ಯದಲ್ಲಿ ತಲೆ ಮರೆಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಅಪರಾಧಿಗಳ ಪತ್ತೆಗೆ ಸಮಯ ಹಿಡಿಸುತ್ತಿದೆ. ಬೇರೆ ಬೇರೆ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಲ್ಲಿ ಅಪರಾಧಿಗಳ ಪತ್ತೆ ಸುಲಭವಾಗುತ್ತದೆ ಎಂದು ಹೇಳಿದರು.
ಬದಲಾದ ಪರಿಸ್ಥಿತಿಯಲ್ಲಿ ಅಪರಾಧಗಳನ್ನು ತಡೆಯಲು ಹಾಗೂ ಅಪರಾಧಿಗಳನ್ನು ಹಿಡಿಯಲು ಪರಸ್ಪರ ಸಹಕಾರ ಹಾಗೂ ಮಾಹಿತಿ ವಿನಿಮಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಹೊಣೆ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಸೇರಿದೆ ಎಂದು ಹೇಳಿದರು.


ಗಡಿ ಹಂಚಿಕೊಂಡಿರುವ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳು ನಾಡು ಪೊಲೀಸರು ಅಕ್ರಮ ಗೋಸಾಗಾಣಿಕೆ, ಗೋವುಗಳ ಕಳ್ಳತನ, ಎನ್‍ಡಿಪಿಎಸ್ ಪ್ರಕರಣಗಳು, ರಕ್ತಚಂದನ ಕಳ್ಳಸಾಗಾಣಿಕೆ ಪ್ರಕರಣಗಳು, ಅಬಕಾರಿ ಕಾಯ್ದೆ ಪ್ರಕರಣಗಳು, ಪತ್ತೆಯಾಗುವ ಅಪರಿಚಿತ ಮೃತ ದೇಹಗಳು, ಬಾಕಿ ಇರುವ ವಾರಂಟ್ ಆಸಾಮಿಗಳು, ಘೋರ ಅಪರಾಧ ಪ್ರಕರಣಗಳು ಹಾಗೂ ಆರೋಪಿಗಳು, ಅಂತರ ರಾಜ್ಯ ಗ್ಯಾಂಗ್‍ಗಳು, ಪತ್ತೆಯಾಗದ ವ್ಯಕ್ತಿಗಳು ಮುಂತಾದ ಪ್ರಕರಣಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿದರು.


ಸಭೆಯಲ್ಲಿ ಅಂತರ ರಾಜ್ಯ ಅಪರಾಧಗಳಿಗೆ ಸಂಬಂಧಿಸಿದಂತೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಅಪರಾಧಗಳನ್ನು ತಡೆಯುವ ಹಾಗು ಅಪರಾಧಿಗಳನ್ನು ಹಿಡಿಯುವ ಬಗ್ಗೆ ಚರ್ಚಿಸಲಾಯಿತು. ಕೊಲಾರ, ಚಿಕ್ಕಬಳ್ಳಾಪುರ, ಕೆಜಿಎಫ್, ಆಂಧ್ರಪ್ರದೇಶದ ಚಿತ್ತೂರು, ಅನ್ನಮಯ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.


ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಚಿನ್ ಘೋರ್ಪಡೆ, ಆಂಧ್ರಪ್ರದೇಶದ ಮದನಪಲ್ಲಿ ಡಿವೈಎಸ್‍ಪಿ ರವಿಮೋಹನಾಚಾರಿ, ಪಲಮನೇರು ಡಿವೈಎಸ್‍ಪಿ ಗಂಗಯ್ಯ, ಮದನಪಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಮುರಳಿಕೃಷ್ಣ, ಸತ್ಯನಾರಾಯಣ, ಗಂಗುವರಂ ಸರ್ಕಲ್ ಇನ್ಸ್‍ಪೆಕ್ಟರ್, ಅಶೋಕ್ ಕುಮಾರ್, ಕುಪ್ಪಂ ಸರ್ಕಲ್ ಇನ್ಸ್‍ಪೆಕ್ಟರ್ ಮನೋಹರರಾವ್, ವಿಕೋಟ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಸಾದ್ ಬಾಬು, ಕಿತ್ತೂರು ಸರ್ಕಲ್ ಇನ್ಸ್‍ಪೆಕ್ಟರ್ ಶರತ್ ಚಂದ್ರ, ರಾಮಸಮುದ್ರಂ ಸಬ್ ಇನ್ಸ್‍ಪೆಕ್ಟರ್ ರವೀದ್ರ, ಕೋಲಾರ ಡಿವೈಎಸ್‍ಪಿಗಳಾದ ರಮೇಶ್, ಜಯಶಂಕರ್, ಶ್ರೀನಿವಾಸಪುರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಸಿ.ಜಿ.ನಾರಾಯಣಸ್ವಾಮಿ, ಗೌನಿಪಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮುನಿರತ್ನಂ, ರಾಯಲ್ಪಾಡ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹೇಮಂತ್ ಕುಮಾರ್ ಇದ್ದರು.

ಬೈಂದೂರು:ಕಾರಿನೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾದ ಪ್ರಕರಣ : ಬಿಗ್ ಟ್ವಿಸ್ಟ್ ತನ್ನ ಗುಟ್ಟು ರಟ್ಟಾಗದಂತೆ ನಡೆಸಿದ ಘೋರ ಕ್ರತ್ಯ

JANANUDI NEWS NETWORK   

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ಹಾಗೂ ಅದರೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಆತ್ಮಹತ್ಯೆ ಡ್ರಾಮ‌ ಮಾಡಲು ಮುಂದಾದ ವ್ಯಕ್ತಿಯೋರ್ವನ ಸಂಚಿಗೆ ಅಮಾಯಕ ವ್ಯಕ್ತಿ ಬಲಿಯಾಗಿದ್ದಾ‌ರೆ ಎಂದು ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿ  ಆನಂದ ದೇವಾಡಿಗ ಎಂದು ತಿಳಿಯಲಾಗಿದೆ.

ಕಾರ್ಕಳ ಮೂಲದ ಆನಂದ ದೇವಾಡಿಗ (62) ಕೊಲೆಯಾದ ವ್ಯಕ್ತಿ. ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಕೊಲೆ ಮಾಡಿ ಸುಟ್ಟವರು. ಕಾರ್ಕಳದ ಬಾರ್ ಒಂದರಲ್ಲಿ ಸದಾನಂದ ಶೇರಿಗಾರ್  ಮತ್ತು ಶಿಲ್ಪಾ ಸಾಲ್ಯಾನ್ ಆನಂದ ದೇವಾಡಿಗನನ್ನು ಕರೆಸಿ ಅಲ್ಲಿ ಕಂಠಪೂರ್ತಿ ಕುಡಿಸಿ ಅದರ ಮೇಲೆ ನಿದ್ರೆ ಮಾತ್ರೆ ನುಂಗಿಸಿ, ಸ್ಮ್ರತಿ ತಪ್ಪಿಸಿ ಹೇನ್ ಬೇರು ಅಲ್ಲಿಗೆ ತಂದು ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ,   ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಕೊಲೆ ಆರೋಪಿಗಳಿಬ್ಬರು ಪರಾರಿಯಾಗಲು ಸಹಕರಿಸಿದ್ದು ಸದ್ಯ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ.

ಹಳೆ ಕೇಸೊಂದರಲ್ಲಿ ತನಗೆ ಶಿಕ್ಷೆಯಾಗುವ ಭಯದಲ್ಲಿದ್ದ ಸದಾನಂದ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿ‌ ದಾಖಲೆಗಳನ್ನು ನೀಡಿ ಆ ಕೇಸಿನಿಂದ ಬಚಾವ್ ಆಗುವ ಮಾಸ್ಟರ್ ಫ್ಲಾನ್ ಮಾಡಿದ್ದ. ಅದಕ್ಕಾಗಿ ಆನಂದ ದೇವಾಡಿಗನಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕರೆತಂದು 5 ಲೀಟರಿಗೂ ಅಧಿಕ ಪೆಟ್ರೋಲ್ ಕಾರಿಗೆ ಸುರಿದು, ಕಾರು ಮತ್ತು‌ ಮೃತದೇಹ ಸುಟ್ಟುಹಾಕಿದ್ದಾರೆ. ಆರೋಪಿ ಸದಾನಂದ ಮೊದಲು ಖಾಸಗಿ‌ ಸರ್ವೇಯರ್ ಆಗಿದ್ದ. ಇದೀಗಾ ಕಲ್ಲು‌ಕ್ವಾರಿ ನಡೆಸುತ್ತಿದ್ದಾನೆ.‌ ಆರೋಪಿ‌ ವಿವಾಹಿತನಾಗಿದ್ದು ಇಬ್ಬರು ಪುತ್ರಿಯರಿದ್ದಾರೆ. ಇನ್ನೋರ್ವ ಆರೋಪಿ ಶಿಲ್ಪಾ ಕೂಡ ವಿವಾಹಿತಳು.‌ ಕೃತ್ಯದ ಬಳಿಕ ಪರಾರಿಗೆ ಸಹಕರಿಸಿದ ಸತೀಶ್ ಟೈಲರಿಂಗ್ ವೃತ್ತಿ ಮಾಡುತ್ತಿದ್ದು ನಿತೀಶ್ ಫೋಟೋಗ್ರಾಫರ್.

ಎರಡು ತಂಡಗಳೊಂದಿಗೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದು ಕಾರ್ಕಳಕ್ಕೂ ಪೊಲೀಸರು ತೆರಳಿದ್ದರು. ಗುರುವಾರ ಬೆಳಿಗ್ಗೆ ಮೂಡುಬಿದಿರೆ ಹುಲ್ಕೇರಿ ಕ್ರಾಸ್ ಬಳಿ ಕೊಲೆ ಮಾಡಿ ಸುಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಳಿಕ ಸಹಕರಿಸಿದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಉಡುಪಿ‌ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪಿಎಸ್ಐ ಪವನ್ ನಾಯಕ್, ಗಂಗೊಳ್ಳಿ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಸಿಬ್ಬಂದಿಯವರಾದ ಮೋಹನ ಪೂಜಾರಿ , ನಾಗೇಂದ್ರ, ಕೃಷ್ಣ ದೇವಾಡಿಗ, ಶಾಂತರಾಮ ಶೆಟ್ಟಿ,  ಅಣ್ಣಪ್ಪ ಪೂಜಾರಿ, ಚಂದ್ರಶೇಖರ, ಸುಜಿತ್‌, ಶ್ರೀಧರ, ಪ್ರಿನ್ಸ್, ಚಾಲಕರಾದ ಚಂದ್ರಶೇಖರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಶಿರಾಢಿ ಘಾಟಿಯಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ ವಾಹನ ಸಂಚಾರ ನಿಷೇಧ

JANANUDI NEWS NETWORK   (EDITOR : BERNARD D’COSTA)

ಬೆಂಗಳೂರು: ಭಾರಿ ಮಳೆಯಿಂದಾಗಿ ಶಿರಾಡಿಘಾಟ್‌ ನಲ್ಲಿ ಮತ್ತೆ ಭೂಕುಸಿತವುಡಾಗಿದ್ದು, ರಾಜಧಾನಿ ಬೆಂಗಳೂರು ಹಾಗೂ ಮಂಗಳೂರು ಉಡುಪಿ ಕುಂದಾಪುರ ಈ ಮಾರ್ಗದ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

      ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿಘಾಟಿನ ದೋಣಿಗಲ್‌ ಸಮೀಷ ಭೂ ಕುಸಿತವುಂಟಾಗಿದೆ. ಧಾರಾಕಾ ಮಳೆಯಿಂದಾಗಿ ಇದೇ ಭಾಗದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಭೂಕುಸಿತ ಸಂಭವಿಸಿತ್ತು. ಮತ್ತಷ್ಟು ಭೂಕುಸಿತವಾಗದಂತೆ. ಮರಳು ಚೀಲಗಳನ್ನು ಹಾಕಲಾಗಿತ್ತು. ಆದರೆ ಇಂದು ದೋಣಿಗಲ್‌ ನಲ್ಲಿ ಮತ್ತೆ ಭೂಕುಸಿತವುಂಟಾಗಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ದೋಣಿಗಲ್‌ ಬಳಿ ಭೂಕುಸಿತವುಟಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಧ್ಯ ಲಘುವಾನಗಳ ಸಂಚಾರಕ್ಕೆ ಅವಕಾಶ ನೀಡಲಿದ್ದು, ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

    ಕಳೆದ ವರ್ಷ ಶಿರಾಡಿಘಾಟ್‌ ನಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಒಂದು ತಿಂಗಳ ಕಾಲ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಮತ್ತೆ ಶಿರಾಡಿಘಾಟಿನಲ್ಲಿ ಭೂ ಕುಸಿತವುಂಟಾಗುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಕಲ್ಯಾಣಪುರ ಸಮೀಪ ಉಪ್ಪುರಿನಲ್ಲಿ  5 ವರ್ಷದ ಬಾಲಕ  ಕೆರೆಯಲ್ಲಿ ಬಿದ್ದು ಸಾವು

JANANUDI NEWS NETWORK (EDITOR : BERNARD D’COSTA)

ಕುಂದಾಪುರ: ಕಲ್ಯಾಣಪುರ ಸಮೀಪ ಉಪ್ಪುರಿನಲ್ಲಿ  5 ವರ್ಷದ ಬಾಲಕ  ಕೆರೆಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

ಕುವೈಟ್‌ ನ ನಿವಾಸಿಗಳಾದ ನಾರ್ಮನ್‌ ಹಾಗೂ ಸಿಲ್ವಿಯಾ ಲುವೀಸ್ ದಂಪತಿಗಳ ಪುತ್ರ 5 ವರ್ಷದ ಲಾರೆನ್‌

ಲುವೀಸ್ ಮೃತಪಟ್ಟ ಬಾಲಕ.

ನಿನ್ನೆ ಮನೆಯಲ್ಲಿ ಬಾಲಕ ಕಾಣದಿದ್ದ ಹಿನ್ನೆಲೆಯಲ್ಲಿ ಮನೆ ಮಂದಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ

ಬಾಲಕನ ಪತ್ತೆಯಾಗಿರಲಿಲ್ಲ. ಬಳಿಕ ಮನೆಯ ಹಿಂಬದಿ ಇರುವ ತೋಟದ ಸಮೀಪದ ಕೆರೆಯಲ್ಲಿ ಬಾಲಕನ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ನಾರ್ಮನ್ ಅವರ ಕುಟುಂಬ ಇತ್ತೀಚೆಗೆ ಕುವೈತ್ ನಿಂದ ರಜೆ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿತ್ತು. ಬಾಲಕ ಜು.4 ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರಾಜ್ಯದಲ್ಲಿ ಭಾರೀ ಮಳೆಯಾಗುವ ಸೂಚನೆ 11 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

JANANUDI NEWS NETWORK (EDITOR : BERNARD D’COSTA)

ಬೆಂಗಳೂರು: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಇಂದಿನಿಂದ ಇನ್ನೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ ಆಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

   ಕರಾವಳಿ ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ರೆಡ್‌ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬರದ ನಾಡು  ಆಗಿದ್ದ ಉತ್ತರ ಕರ್ನಾಟಕ ಈಗ ಮಳೆನಾಡಾಗಿ  ಬದಲಾಗಿದೆ.  ಕರಾವಳಿ ತೀರದಲ್ಲಿ ೪೫ ಕಿ.ಮಿ. ನಿಂದ ೫೫ ಕಿ.ಮಿ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮುಂದಿನ ೪೮ ಗಂಟೆಗಳಲ್ಲಿ ಇದರ ವೇಗ ೬೫ ಕಿ.ಮಿ. ವೇಗ ತಲುಪಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಹಾಗೇ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರಿದಿದ್ದು, 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.ಮಳೆ ಮತ್ತು ಪ್ರವಾಹ ಮುಂದುವರಿದಿದ್ದು, ಹಲವೆಡೆ ಭೂಕುಸಿತವೂ ಉಂಟಾಗಿದ್ದು, ಮುಂಬೈ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ 11 ಜಿಲ್ಲೆಗಳಲ್ಲಿ ಇಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮಹಾರಾಷ್ಟ್ರದ ಮುಂಬೈ, ರತ್ನಗಿರಿ, ಕೊಲ್ಹಾಪುರ, ರಾಯಗಡ, ಅಮರಾವತಿ, ಸತಾರಾ, ಸಿಂಧುದುರ್ಗ ಮತ್ತು ಥಾಣೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮಿಸ್ಬಾ ತಬಸ್ಸುಮ್ ಳನ್ನು ಸನ್ಮಾನ :ವಿದ್ಯಾರ್ಥಿ ಹಾಗು ಶಿಕ್ಷಕ ಒಂದೇ ನಾಣ್ಯದ ಎರಡು ಮುಖಗಳಂತೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ : ವಿದ್ಯಾರ್ಥಿ ಹಾಗು ಶಿಕ್ಷಕ ಒಂದೇ ನಾಣ್ಯದ ಎರಡು ಮುಖಗಳಂತೆ , ವಿದ್ಯಾರ್ಥಿಗೆ ಕಲಿಯುವ ಆಸಕ್ತಿ ಇರಬೇಕು – ಶಿಕ್ಷಕನಿಗೆ ಕಲಿಸುವ ಆಸಕ್ತಿ ಇರಬೇಕು ಗುರು ಶಿಷ್ಯರ ಭಾಂದವ್ಯ ಉತ್ತಮವಾಗಿದರೆ , ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ವಿದ್ಯಾರ್ಥಿನಿಯೇ ಸಾಕ್ಷಿ ರೋಟರಿ ಕ್ಲಬ್ ಸೆಂಟೆರಲ್ ಡಾ|ವೆಂಕಟಾಚಲ.ಪಟ್ಟಣದ ಅಜಾದ್ ರಸ್ತೆಯ ವಿದ್ಯಾರ್ಥಿ ಮನೆ ಹತ್ತಿರ ನಡೆದ ಸರಳ ಸಮಾರಂಭದಲ್ಲಿ ರೋಟರಿ ಕ್ಲಬ್ ಸೆಂಟರಲ್ ಹಾಗೂ ವಾಕಿಂಗ್ ಗಳೆಯರ ಬಳಗದಿಂದ ವತಿಯಿಂದ ಬುಧವಾರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಭಾಗದಲ್ಲಿ ( ರಾಸಾಯನಶಾಸ್ತ್ರ ) ಚಿನ್ನದ ಪದಕ ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ಳನ್ನು ಸನ್ಮಾನಸಿ ಮಾತನಾಡಿದರು .


ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ರಥಮ ದರ್ಜೆ ಕಾಲೇಜುವರೆಗೂ ಸರ್ಕಾರಿ ಶಾಲಾ ಕಾಲೇಜಿನಲ್ಲಿಯೇ ಓದಿ ವಿದ್ಯಾರ್ಥಿನಿ ಮಿಸ್ಬಾ ತಬಸ್ಸುಮ್ ವಿಜ್ಞಾನ ವಿಭಾಗದಲ್ಲಿ ( ರಾಸಾಯನಶಾಸ್ತ್ರ ) ದಲ್ಲಿ ಚಿನ್ನದ ಪದಕವನ್ನು ಪಡೆದಿರುವುದ ನಮ್ಮ ತಾಲ್ಲೂಕಿಗೆ ಹೆಮ್ಮವಿಚಾರವಾಗಿದೆ .


ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಿದ್ದು , ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಒಳ್ಳೆಯ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದು , ಆರ್ಥಿಕ ಸ್ಥಿತಿವಂತರು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸದರೆ ಒಳ್ಳೆಯ ಇಂತಹ ಅನೇಕ ವಿದ್ಯಾರ್ಥಿಗಳು ಚಿನ್ನಪದಕವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು .


ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಣ್ಣವೀರಯ್ಯ ಮಾತನಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನೀಡಿದರೆ ಅವರ ಜೀವನಕ್ಕೆ ಆಧಾರ ಸ್ಥಂಭವಾಗುತ್ತದೆ .


ಈ ಹೆಣ್ಣುಮಗು ಇತರೆ ಹೆಣ್ಣುಮಕ್ಕಳಿಗೆ ಪೇರಣೆಯಾಗಿದ್ದು , ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಹೆಣ್ಣುಮಗುವಿಗೆ ಒಳ್ಳೆಯ ಶಿಕ್ಷವನ್ನು ಕೊಡಿಸಿ ವಿದ್ಯಾಂತರಾಗಿಸಬೇಕು ಎಂದು ಮನವಿ ಮಾಡಿದರು .


ಪುರಸಭೆ ಉಪಾಧ್ಯಕ್ಷೆ ಆಯಿಶಾ ನಯಜ್ ಮಾತನಾಡಿ ವಿದ್ಯಾರ್ಥಿಗಳು ಶ್ರಮಪಟ್ಟು ವಿದ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು .


ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಸುವದು ಕಷ್ಟ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ಧಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರುಭೋದಿಸುಂತಹ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿಯನ್ನ ಸಾಧಿಸಿ ಎಂದು ಸಲಹೆ ನೀಡಿದರು .


ಸೈಯದ್ ಖಾದರ್ , ಮಿಲನ್ಸರ್ ಮಾವು ಮಂಡಿ ಮಾಲೀಕ ಮುಜಮಿಲ್ ಖಾನ್ ,ಪುರಸಭೆ ಸದಸ್ಯ ಕೆ ಅನೀಸ್ ಅಹಮದ್ ಜಾಮಿಯಾ ಮಸೀದಿ ಅಧ್ಯಕ್ಷ ಝಾಹಿದ್ ಅನ್ಸಾರಿ , ಮುಸ್ಲಿಂ ಎಂಪ್ಲಾಯಿಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಸೈಯದ್ ಅಸ್ಗರ್ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.


ಈ ಸಂದರ್ಭದಲ್ ಆರ್ ಎಂ ಎಂ ತನ್ವೀರ್ ಫ್ರೂಟ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿಗೆ ೨೫ ಸಾವಿರರೂಗಳನ್ನು , ಜಾವಿದ್ ಅನ್ಸಾರಿ ೫ ಸಾವಿರ , ಅಕ್ಟ‌ ಶರೀಫ್ ೫ ಸಾವಿರ , … ಸಯ್ಯದ್ ಖಾದರ್ ೫ ಸಾವಿರ , ಡಾ || ವೆಂಕಟಾಚಲ ರವರು ೫ ಸಾವಿರರೂಗಳ ಪೋತಾಹ ಈ ತ್ಸಾಹ ಧನ ನೀಡಿದರು . ಬ್ಲಾಕ್ ಕಾಂಗ್ರೆಸ್‌ ಅಕ್ಟರ್‌ ಶರೀಪ್ , ಜಾಮೀಯ ಮಸೀದಿಯ ಅಧ್ಯಕ್ಷರಾದ ಜಾಯಿದ್ ಅನ್ಸರಿ , ಕಾಂಗ್ರೆಸ್ ಹಿರಿಯ ಮುಖಂಡರಾದ ಸಯ್ಯದ್ ಖಾದರ್ , ಉಪನ್ಯಾಸಕರು ನವೀನ್‌ಕುಮಾರ್‌ , ಮೃತ್ಯಂಯಜಯ , ರೋಟರಿ ಸಂಸ್ಥೆಯ ಸದಸ್ಯರಾದ ಸೀತರೆಡ್ಡಿ , ಶ್ರೀನಿವಾಸರೆಡ್ಡಿ ಇತರರು ಇದ್ದರು .

ಮುದಿಮಡುಗು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಚಿನ್ನರೆಡ್ಡಪ್ಪ ಅವಿರೋಧ ಆಯ್ಕೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ  (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ 1 : ಮುದಿಮಡುಗು ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುದವಾರ ನಡೆದ ಚುನಾವಣೆಯಲ್ಲಿ ಚಿನ್ನರೆಡ್ಡಪ್ಪ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪಶು ಇಲಾಖೆಯ ನಿರ್ದೇಶಕ ಮಂಜುನಾಥರೆಡ್ಡಿ ತಿಳಿಸಿದರು.

ಈ ಹಿಂದಿನ ಗ್ರಾ.ಪಂ. ಅಧ್ಯಕ್ಷ ಚಿನ್ನನಾರಾಯಣಪ್ಪರವರ ರಾಜಿನಾಮೆಯಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಚಿನ್ನರೆಡ್ಡಪ್ಪರವರು ಏಕೈಕ ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ಚಿನ್ನರೆಡ್ಡಪ್ಪ ಆಯ್ಕೆಯಾಗಿದ್ದಾರೆ.


ಈ ಸಮಯದಲ್ಲಿ ಪಿಡಿಒ ನರೇಂದ್ರಬಾಬು, ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ ಗ್ರಾಮದ ಮುಖಂಡರಾದ ಅಮರನಾಥ್, ಜಯರಾಮ್,ಗಣೇಶ್,ಕೃಷ್ಣಾರೆಡ್ಡಿ,ಗೆಲ್ಜಿಗೂರು ರಾಮಸುಬ್ಬು, ರಾಜೇಂದ್ರ ಇತರರು ಇದ್ದರು.