HOLY ROSARY CHURCH, KUNDAPUR – 450 th JUBILEE SOUVENIR 2021

ಗಂಗೊಳ್ಳಿ ಸ್ಟೆಲ್ಲಾ  ಮಾರಿಸ್‌  ರಕ್ಷಕ –ಶಿಕ್ಷಕ  ಸಂಘ  : ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಮಾನವ  ಧರ್ಮ ಬೆಳೆಸಿಕೊಳ್ಳಬೇಕು – ಉಪನ್ಯಾಸಕಿ ರೇಣುಕಾ

ಗಂಗೊಳ್ಳಿ: ದಿನಾಂಕ  ಗಂಗೊಳ್ಳಿಯ  ಸ್ಟೆಲ್ಲಾ  ಮಾರಿಸ್‌  ಪ್ರೌಢಶಾಲೆಯಲ್ಲಿ  ರಕ್ಷಕ –ಶಿಕ್ಷಕ  ಸಂಘದ  ಮಹಾಸಭೆ 30/07/2022  ರಂದು ಜರಗಿತು. ಸಂಪನ್ಮೂಲ  ವ್ಯಕ್ತಿಗಳಾಗಿ  ಆಗಮಿಸಿದ ಕುಂದಾಪುರದ  ಭಂಡಾರ್ಕಾರ್ಸ್‌ ‌ಕಲಾ ಮತ್ತು  ವಿಜ್ಞಾನ  ಕಾಲೇಜಿನ  ಕನ್ನಡ  ಉಪನ್ಯಾಸಕಿ ರೇಣುಕಾ ರವರು “ವಿದ್ಯಾರ್ಥಿಗಳು  ನಿರಂತರ ಪರಿಶ್ರಮ, ಪ್ರಯತ್ನ ,ಛಲ,ಗುರಿಯಿಟ್ಟು  ಅಧ್ಯಯನದಲ್ಲಿ  ತೊಡಗಿದಾಗ  ಯಶಸ್ಸು  ಕಟ್ಟಿಟ್ಟ  ಬುತ್ತಿ” ಎಂದು ತಿಳಿಯ ಪಡಿಸಿ  “ವಿದ್ಯಾರ್ಥಿಗಳು ಮಾನವ  ಧರ್ಮ  ಬೆಳೆಸಿಕೊಳ್ಳುವುದರ  ಜೊತೆಯಲ್ಲಿ  ಶಿಕ್ಷಣದಲ್ಲಿ  ಸಾಧನೆ  ಮಾಡುವಂತಾಗಲಿ” ಎಂದು ಸಂದೇಶ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯರೂ, ರಕ್ಷಕ ಶಿಕ್ಷಕ ಸಂಘದ  ಕಾರ್ಯದರ್ಶಿಗಳೂ  ಆಗಿರುವ  ಸಿಸ್ಟರ್‌  ಕ್ರಸೆನ್ಸ್‌ ರವರು ಸಂಪನ್ಮೂಲ  ವ್ಯಕ್ತಿಗಳನ್ನು ಪರಿಚಯಿಸಿ ಸರ್ವರನ್ನು  ಸ್ವಾಗತಿಸಿದರು. ರಕ್ಷಕ –ಶಿಕ್ಷಕ  ಸಂಘದ ಅಧ್ಯಕ್ಷರು ಮತ್ತು ಸ್ಟೆಲ್ಲಾ ಮಾರಿಸ್‌  ಪ್ರೌಢಶಾಲೆಯ  ಜಂಟಿ  ಕಾರ್ಯದರ್ಶಿಯಾದ ಸಿಸ್ಟರ್‌  ಡಯಾನ  ಸಭೆಯನ್ನದ್ದೇಶಿಸಿ, ವಿದ್ಯಾರ್ಥಿಗಳಿಗೆ  ಅವರ  ಹೆತ್ತವರಿಗೆ  ಅವರವರ  ಕರ್ತವ್ಯಗಳ  ಬಗ್ಗೆ  ಸ್ಪಷ್ಟ  ಮಾಹಿತಿಗಳನ್ನು  ನೀಡಿದರು.

ಶಿಕ್ಷಕಿ ಶಾಂತಿ ವರದಿ ವಾಚಿಸಿದರು.ಪ್ರಸಕ್ತ ಶೈಕ್ಷಣಿಕ ವರ್ಷದ  ನೂತನ ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಚಂದ್ರಶೇಖರ ಖಾರ್ವಿ, ಸದಸ್ಯರಾಗಿ ಜ್ಯೋತಿ, ಜಾನಕಿ, ಜಯಂತಿ, ನವೀನ್ ಶೆಟ್ಟಿ, ಮತ್ತು ವಿಶಾಲಾಕ್ಷಿ ನೇಮಕಗೊಂಡರು. ಶಿಕ್ಷಕ  ಗಣೇಶ ಹೆಬ್ಬಾರ್  ನಿರೂಪಿಸಿದರು. ಸಭೆಯಲ್ಲಿ  ಶಾಲೆಯ  ಎಲ್ಲಾ  ಭೋದಕ  ಹಾಗೂ  ಭೋದಕೇತರ  ವ್ರಂದದವರು  ಮತ್ತು ಎಲ್ಲಾ  ವಿದ್ಯಾರ್ಥಿಗಳ  ರಕ್ಷಕರು  ಉಪಸ್ಥಿತರಿದ್ದರು. ಶಿಕ್ಷಕ  ಗಣೇಶ್‌  ಭಟ್‌  ಕಾರ್ಯಕ್ರಮ  ನಿರೂಪಿಸಿದರು. ದೈಹಿಕ  ಶಿಕ್ಷಕರಾದ  ಪ್ರಜ್ವಲ್‌  ಪಂಡಿತ್  ವಂದಿಸಿದರು.

ವಿದ್ಯೆಯ ಬೆಳಕು ತೋರುವ ಗರುವಿಗೆ ಭೂಮಿ ಮತ್ತು ತಾಯಿಯ ನಂತರದ ಸ್ಥಾನ ಸಿಕ್ಕಿರುವುದು ಗುರುವಿಗೆ ಮಾತ್ರ ಶ್ಲಾಘನೀಯ : ಬಿಇಒ ವಿ.ಉಮಾದೇವಿ

ಶ್ರೀನಿವಾಸಪುರ 5 : ಬದುಕಿಗೆ ವಿದ್ಯೆಯ ಬೆಳಕು ತೋರುವ ಗರುವಿಗೆ ಭೂಮಿ ಮತ್ತು ತಾಯಿಯ ನಂತರದ ಸ್ಥಾನ ಸಿಕ್ಕಿರುವುದು ಗುರುವಿಗೆ ಮಾತ್ರ ಶ್ಲಾಘನೀಯವೆಂದು ಬಿಇಒ ವಿ.ಉಮಾದೇವಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೋಡಿಗೆ , ಪ್ರೌಡಶಾಲಾ ಸಹ ಸಂಘದ ನೂತನ ಪದಾಧಿಕಾರಿಗಳಿಗೆ, ತಾಲ್ಲೂಕು ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳಿಗೆ ಸನ್ಮಾನ, ನೂತನ ಸಿಆರ್‍ಪಿ ಗಳಗೆ ಅಭಿನಂದನೆ ಹಾಗು ರಾಜ್ಯ ಪುರಸ್ಕøತ ಶಿಕ್ಷಣ ಸಾರಥಿ ಪ್ರಶಸ್ತಿ ಶಿಕ್ಷಕ ವೇಣುಗೋಪಾಲ್‍ರವರಿಗೆ ಸನ್ಮಾನ, ಹಾಗು ಕ್ಷೇತ್ರ ಸಂನ್ಮೂಲ ಸಂಶೋದನ ಶಿಕ್ಷಕ ಜಿ.ವಿ.ಚಂದ್ರಪ್ಪರವರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಭವ್ಯ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಶಿಕ್ಷಕನು ಪ್ರತಿ ಮಗುವಿನಲ್ಲಿನ ಅಂದಕಾರವನ್ನು ಹೋಗಲಾಡಿಸಿ ಬೆಳಕಿನಡೆಗೆ ಕರೆದುಯ್ಯುವ ಕೆಲಸವನ್ನು ಮಾಡುತ್ತಿದ್ದು, ಇದರಿಂದಾಗಿ ಆಧುನಿಕ ಪ್ರಪಂಚಕ್ಕೆ ಶಿಕ್ಷಕರ ಕೂಡುಗೆ ಮಹತ್ವ ಪೂರ್ಣವಾಗಿದ್ದು, ವಯೋನಿವೃತ್ತಿಯನ್ನು ಹೋಂದುತ್ತಿರುವ ಶಿಕ್ಷಕರ ನಿವೃತ್ತಿ ಜೀವನ ಸಖಕರವಾಗಿರಲಿ ಎಂದು ಆಶಿಸಿದರು.
ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್ ಮಾತನಾಡಿ ಸಮಾಜಕ್ಕೆ ಶಿಕ್ಷಕನ ಪಾತ್ರ ಮುಖ್ಯ . ಒಬ್ಬ ಶಿಕ್ಷಕ ವಿದ್ಯಾರ್ಥಿಯನ್ನು ಮೌಲ್ಯಯುತ ಶಿಕ್ಷಣವನ್ನು ನೀಡಿ , ಸಮಾಜದ ಆಗು ಹೋಗಗಳ ಬಗ್ಗೆ ತಿಳಿಸಿ . ಸಮಾಜಕ್ಕೆ ಕೊಡಿಗೆಯಾಗಿ ನೀಡುತ್ತಾನೆ ಉತ್ತಮ ಸಮಾಜ ಸೃಷ್ಟಿಯಾಗಲು ಶಿಕ್ಷಕನ ಪಾತ್ರ ಮುಖ್ಯ ಎಂದರು.
ಗೌರವಾಧ್ಯಕ್ಷ ಶ್ರೀನಿವಾಸಯ್ಯ, ಎನ್‍ಪಿಎಸ್ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ವಿ.ಅಶೋಕ್, ಖಜಾಂಚಿ ಜನಾರ್ಧನ್ ಹಾಗೂ ನೌಕರರ ಸಂಘದ, ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.

ಕಥಾಪಾಠ್ ಶಿಂಕಳ್ 3 (ಎಡ್ವಿನ್ ಜೆ.ಎಫ್.ಡಿ’ಸೋಜ್ ಆನಿ ವಲ್ಲಿ ವಗ್ಗ ಹಾಂಚ್ಯಾ ಕಥೆಂಚೆರ್ ಅಧ್ಯಯನ್)/कथापाठ शिंकळ ३ (एडवीन जे.एफ.डी’सोज आनी वल्ली वग्ग हांच्या कथेंचेर अध्ययन)

ಕಥಾಪಾಠ್ ಶಿಂಕಳ್ 3 (ಎಡ್ವಿನ್ ಜೆ.ಎಫ್.ಡಿ’ಸೋಜ್ ಆನಿ ವಲ್ಲಿ ವಗ್ಗ ಹಾಂಚ್ಯಾ ಕಥೆಂಚೆರ್ ಅಧ್ಯಯನ್)

ಜುಲಾಯ್ 30: ಆಶಾವಾದಿ ಪ್ರಕಾಶನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಂಚ್ಯಾ ಮುಕೇಲ್ಪಣಾಖಾಲ್ ಆಯೋಜಿತ್ ಕೆಲ್ಲ್ಯಾ ರಾಶ್ಟ್ರೀಯ್ ಮಟ್ಟಾಚೆಂ ಚೊವ್ತೆಂ ವೆಬಿನಾರ್ ಜುಲಾಯ್ 30 ತಾರಿಕೆರ್ ಚಲ್ಲೆಂ.

ಎಡ್ವಿನ್ ಜೆ.ಎಫ್. ಡಿ’ಸೋಜ್ ಆನಿ ವಲ್ಲಿ ವಗ್ಗ ಹಾಂಚ್ಯಾ ಕಥೆಂಚೆರ್ ತುಲನಾತ್ಮಕ್ ಅಭ್ಯಾಸ್ ಕರ್ಪಿ ಪ್ರೊ ವಲ್ಲಿ ಕ್ವಾಡ್ರಸ್ ಹಾಣೆಂ ಕೆಲ್ಲೆಂ ಖೊಲಾಯೆಚೆಂ ಅಭ್ಯಾಸ್ ಲೇಖನ್ ಸಾದರ್ ಕರ್ತಚ್, ವೀಜ್ ಪತ್ರಾಚೊ ಸಂಪಾದಕ್ ದೊ|ಆಸ್ಟಿನ್ ಪ್ರಭು, ಬಾಯ್ ಕನ್ಸೆಪ್ಟಾ ಫೆರ್ನಾಂಡಿಸ್ ಆಳ್ವ, ಪ್ರೊ ಚಂದ್ರಲೇಖ ಡಿ’ಸೋಜ್, ಪ್ರೊ ಅಂಜು ಸಾಖರ‌ದಾಂಡೆ, ಪ್ರೊ ಕ್ವೀನಿ ವೇಗಸ್ ಆನಿ ಮಾ|ಬಾ|ರೋಯ್ಸನ್ ಫೆರ್ನಾಂಡಿಸ್ ಹಾಣಿಂ ಕೊಂಕಣಿ ಕಥೆಂಚೆರ್ ಆನಿ ಕೊಂಕಣಿ ಕಥೆಂಚ್ಯಾ ಫುಡಾರಾಚ್ಯಾ ವಾವ್ರಾವಿಶಿಂ ಭಾಸಾಭಾಸ್ ಕೆಲಿ.

ಉಜ್ವಾಡ್ ಪಂದ್ರಾಳ್ಯಾಚ್ಯಾ ಸಂಪಾದಕಾನ್ ಮಾ|ಬಾ|ರೋಯ್ಸನಾನ್ ಯೆವ್ಕಾರ್ ಉಲವ್ಪ್ ಕೆಲೆಂ.
ವಲ್ಲಿ ಕ್ವಾಡ್ರಸಾನ್ ಹೆಂ ವೆಬಿನಾರ್ ಚಲವ್ನ್ ಧಿನ್ವಾಸ್ ಪಾಠಯ್ಲೆ.

(KATHAPATT Series III is supported by Michael DSouza & Family, UAE)कथापाठ शिंकळ ३ (एडवीन जे.एफ.डी’सोज आनी वल्ली वग्ग हांच्या कथेंचेर अध्ययन)

जुलाय ३०: आशावादी प्रकाशन आनी उज्वाड पंद्राळें हांच्या मुकेल्पणाखाल आयोजीत केल्ल्या राश्ट्रीय मट्टाचें चोवतें वेबिनार जुलाय ३० तारिकेर चल्लें.

एडवीन जे.एफ. डी’सोज आनी वल्ली वग्ग हांच्या कथेंचेर तुलनात्मक अभ्यास कर्पी प्रो वल्ली क्वाड्रस हाणें केल्लें खोलायेचें अभ्यास लेखन सादर कर्तच, वीज पत्राचो संपादक दो|आसटीन प्रभू, बाय कन्सेपटा फेर्नांडीस आळव, प्रो चंद्रलेख डी’सोज, प्रो अंजू साखर‌दांडे, प्रो क्वीनी वेगस आनी मा|बा|रोयसन फेर्नांडीस हाणीं कोंकणी कथेंचेर आनी कोंकणी कथेंच्या फुडाराच्या वावराविशीं भासाभास केली.

उज्वाड पंद्राळ्याच्या संपादकान मा|बा|रोयसनान येवकार उलवप केलें.
वल्ली क्वाड्रसान हें वेबिनार चलवन धिन्वास पाठयले.

(KATHAPATT Series III is supported by Michael DSouza & Family, UAE)

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು: ಅಬಕಾರಿ ನಿರೀಕ್ಷಕಿ ಎಂ.ಸುಮಾ

ಕೋಲಾರ : ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕೆAದು ಅಬಕಾರಿ ನಿರೀಕ್ಷಕಿ ಎಂ.ಸುಮಾ ಅವರು ಕರೆ ನೀಡಿದರು.
ನಗರದ ಸ್ಮಾರ್ಟ್ ಪದವಿ ಕಾಲೇಜಿನಲ್ಲಿ ಅಬಕಾರಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರ್ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸದೃಡ ದೇಶ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಮಹತ್ವದಾಯಕವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯವಂತ ಜೀವನಶೈಲಿ ಬಹುಮುಖ್ಯ ಎಂದ ಅವರು, ಆಕರ್ಷಣೆ, ಕತೂಹಲ, ದುಷ್ಟರ ಸಹವಾಸಕ್ಕೆ ಸಿಲುಕಿ ಮಾದಕ ವ್ಯಸನಕ್ಕೆ ದಾಸರಾಗಿದ್ದಲ್ಲಿ ಅಂತಹ ವ್ಯಕ್ತಿಯ ಜೀವನದ ಜೊತೆಗೆ ಆತನ ಕುಟುಂಬವು ಬೀದಿ ಪಾಲಾಗುತ್ತದೆ ಎಂದು ವಿವರಿಸಿದರು.
ಯಾರಾದರೂ ಈ ರೀತಿ ಹಾದಿ ತಪ್ಪಿದ್ದಲ್ಲಿ ವಿದ್ಯಾವಂತರಾದ ನೀವು ಅಂತಹವರನ್ನು ಎಚ್ಚರಿಸುವಂತಾಗಬೇಕು. ಅಪ್ಪಿತಪ್ಪಿಯೂ ನೀವು ಸಹ ಮಾದಕ ಲೋಕದ ಜಾಲಕ್ಕೆ ಸಿಲುಕಬಾರದು ಎಂದ ಒತ್ತಿ ಹೇಳಿದ ಅವರು, ನಿಮ್ಮ ಸದೃಡ ಆರೋಗ್ಯದಿಂದ ಕುಟುಂಬ, ಸಮಾಜ ಹಾಗೂ ದೇಶದ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ದುಶ್ಚಟಗಳಿಗೆ ದಾಸರಾಗುವ ವ್ಯಕ್ತಿಗಳಿಗೆ ಈ ಸಮಾಜದಲ್ಲಿ ಬೆಲೆ ಇರುವುದಿಲ್ಲ ಎಂಬುವುದು ತಿಳಿದಿರಲಿ ಎಂದು ಎಚ್ಚರಿಸಿದ ಸುಮಾ ಅವರು, ಮೋಜು, ಮಸ್ತಿ, ದುಂದು ವೆಚ್ಚ, ಮನೋರಂಜನೆ, ಪಾರ್ಟಿಗಳು ಹಾಗೂ ಕುಂಟು ನೆಪಗಳ ಕಾರಣ ಮುಂದಿಟ್ಟುಕೊAಡು ದುಶ್ಚಟಗಳಿಗೆ ಬಿದ್ದರೆ, ಅದರ ಜಾಲದಿಂದ ಹೊರ ಬರುವುದು ಕಷ್ಟ ಅದಕ್ಕಾಗಿ ತಪ್ಪಿನಲ್ಲೀ ಸಿಲುಕುವ ಮೊದಲು ಜಾಗೃತಿ ಇರಲಿ, ಹಾಗೆಯೇ ಆರೋಗ್ಯವಂತ ಯುವ ಜನತೆಯಿಂದ ಸದೃಡ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಉಪ ನಿರೀಕ್ಷಕ ಜಯಣ್ಣ, ಕಾಲೇಜಿನ ಉಪನ್ಯಾಸಕ ವರುಣ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸ್ಕೌಟ್ ಆಯುಕ್ತ ಸುರೇಶ್, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ ಭಾಗವಹಿಸಿದ್ದರು.

ಮುಸ್ಲಿಂ ಮಕ್ಕಳು ಡ್ರಾಪೌಟ್ ಆಗದಂತೆ ಎಚ್ಚರ ವಹಿಸಿ ಬಿಇಓ ಉಮಾದೇವಿ ಕರೆ

ಮುಸ್ಲಿಂ ಸಮುದಾಯದ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗವನ್ನು ಅರ್ಧದಲ್ಲಿ ಮುಟ್ಟುಗೊಳಿಸಿ ವ್ಯಾಪಾರ ಮತ್ತು ಆಟೋಮೊಬೈಲ್ಸ್ ಗಳಿಗೆ ಮಾರುಹೋಗುತ್ತಿದ್ದಾರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ರವರು ಕರೆ ನೀಡಿದ್ದಾರೆ

 ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮಾಜ ಸೇವಕ ಹಾಗೂ ಅಲ್ಪಸಂಖ್ಯಾತರ ಯುವ ಘಟಕದ ಅಧ್ಯಕ್ಷ ಸಾಧಿಕ್ ಅಹಮದ್ ರವರು ಮಕ್ಕಳಿಗಾಗಿ ಉಚಿತ ಪಠ್ಯ ಪರಿಕರಗಳು ಮತ್ತು ಗುರುತಿನ ಚೀಟಿಗಳನ್ನು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ವಿತರಣೆ ಮಾಡುತ್ತ ಮಾತನಾಡಿದ ಬಿಇಒ ಉಮಾದೇವಿ ರವರು ಈ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು ಮಳೆ ಮಳೆ ಸುರಿಯುವ ವೇಳೆ ಹಾನಿಗೊಳಗಾದಕೊಠಡಿಗಳ ಸಮಸ್ಯೆಯನ್ನು ಶಾಸಕ ರವರ ಗಮನಕ್ಕೆ ತಂದಿದ್ದೇನೆ ಅವರು ಶಾಸಕರ ಅನುದಾನದಲ್ಲಿ ಎರಡು ಕೋಟಿ ಗಣಿಗಳನ್ನು ಮಂಜೂರು ಮಾಡಿದ್ದಾರೆ ಶೀಘ್ರದಲ್ಲಿಯೇ ಈ ಕಾಮಗಾರಿಗಳು ಪ್ರಾರಂಭಗೊಳ್ಳುತ್ತವೆ ಮತ್ತು ಲೈಬ್ರರಿ ಆಟದ ಮೈದಾನ ಮುಂದಿನ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುತ್ತದೆ

 ಇಲಾಖೆ ವತಿಯಿಂದ ಎಲ್ಲ ರೀತಿಯ ಸೌಲಭ್ಯಗಳು ಮಕ್ಕಳಿಗಾಗಿ ನೀಡಲಾಗುತ್ತಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು

 ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಈ ಶಾಲೆಯಲ್ಲಿ ಪಡೆಯುತ್ತಿದ್ದಾರೆ ಹೆಣ್ಣುಮಕ್ಕಳು ಇನ್ನು ಅತ್ಯುನ್ನತ ಶಿಕ್ಷಣವನ್ನು ಪಡೆಯಬೇಕೆಂದು ಕಿವಿಮಾತು ಹೇಳಿದರು

 ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ಮಕ್ಕಳ ಪೋಷ್ಟಿಕತೆಯನ್ನು ಸಹ ಗಮನದಲ್ಲಿಟ್ಟುಕೊಂಡು ಋಣಾತ್ಮಕ ಶಿಕ್ಷಣವನ್ನು ನೀಡಲು ಮತ್ತು ಮಕ್ಕಳ ಆರೋಗ್ಯ ಹಿತ ದೃಷ್ಟಿಯಿಂದ ಪೌಷ್ಟಿಕ ಆಹಾರವನ್ನು ಸಹ ನೀಡಲಾಗುತ್ತಿದೆ ಈ ಎಲ್ಲಾ ಸದುಪಯೋಗಗಳನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು

 ಮುಸ್ಲಿಂ ಸಮುದಾಯದ ಮಕ್ಕಳು ಆಟೋಮೊಬೈಲ್ಸ್ ಮತ್ತು ವ್ಯಾಪಾರವನ್ನು ಮುಂದುವರಿಸಲು ಶಾಲಾ ವ್ಯಾಸಂಗವನ್ನು ಅರ್ಧದಲ್ಲಿ ಮುಟುಕುಗೊಳಿಸಿ ವ್ಯಾಪಾರದ ಜೊತೆ ಗಮನ ಹರಿಸುತ್ತಿದ್ದಾರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ ಪೋಷಕರು ಗಮನದಲ್ಲಿಟ್ಟುಕೊಂಡು ಇಂತಹ ಮಕ್ಕಳಿಗೆ ಸರ್ಕಾರದಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಕಡ್ಡಾಯ ಶಿಕ್ಷಣವನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಇಂತಹ ಮಕ್ಕಳು ಶಾಲೆಗೆ ಹಾಜರಾಗುವಂತೆ ಪೋಷಕರು ಗಮನ ಹರಿಸಬೇಕಾಗಿದೆ ಎಂದು ಕರೆ ನೀಡಿದರು

 ಬಿ ಆರ್ ಸಿ ಸಂಯೋಜಕರಾದ ವಸಂತ ರವರು ಮಾತನಾಡಿ ಕಳೆದ ಸಾಲಿನಲ್ಲಿ ಈ ಶಾಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಇದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ನೀಡಿದ್ದಾರೆ ಆಂಗ್ಲ ಮಾಧ್ಯಮವನ್ನು ಹೊಸದಾಗಿ ನೀಡಿದ್ದು ಈ ನಟಿ ನಲ್ಲಿ ಪೋಷಕರು ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರ್ಪಡೆ ಮಾಡಿದ್ದಾರೆ ಶಿಕ್ಷಕರ ಜವಾಬ್ದಾರಿಯು ಮತ್ತು ಉತ್ತಮ ಬೆಳವಣಿಗೆಯು ನೋಡಿ ಪ್ರಶಂಶಿಸಿದರು ಪೋಷಕರು ಇಲ್ಲಿನ ಶಾಲಾ ಶಿಕ್ಷಕರ ಮೇಲೆ ಅಭಿಮಾನ ನಂಬಿಕೆ ಇಟ್ಟಿದ್ದು ಒಳ್ಳೆಯ ಬೆಳವಣಿಗೆ ಕಲಿಕಾ ಕ್ಷೇತ್ರಕ್ಕೆ ಶಿಕ್ಷಕರು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಹೆಣ್ಣುಮಕ್ಕಳು ಹೆಚ್ಚು ವ್ಯಾಸಂಗವನ್ನು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು

 ಶಾಲಾ ಮಕ್ಕಳಿಗೆ ಓದಲು ಶಿಕ್ಷಕರು ಶಾಲೆಯಲ್ಲಿ ಮಾತ್ರ ಹೇಳುತ್ತಾರೆ ಅನಂತರ ಮಕ್ಕಳಿಗೆ ಪೋಷಕರು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಮನೆಯಲ್ಲಿ ವ್ಯಾಸಂಗ ಮಾಡಲು ಶ್ರಮ ಕೊಡಬೇಕು ಎಂದು ಸಲಹೆಯನ್ನು ಈ ಸಮಯದಲ್ಲಿ ನೀಡಿದರು

 ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುಲೋಚನಾ ರವರು ಮಾತನಾಡಿ ಸಮಾಜ ಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧಿಕ್ ಅಹಮದ್ ರವರು ಒಳ್ಳೆಯ ಪರಿಪಾಠವನ್ನು ಹೊಂದಿದ್ದಾರೆ ಇವರಿಗೆ ಇಲಾಖೆಯ ಪರವಾಗಿ ಧನ್ಯವಾದಗಳು ಎಲ್ಲರಿಗೂ ದಾನ ಮಾಡುವಂತಹ ಮನಸ್ಸು ಬರುವುದಿಲ್ಲ ಸಂಪಾದನೆ ಮಾಡುತ್ತಾರೆ ಆದರೆ ಕೇವಲ ದಾನದ ಗುಣವನ್ನು ನೀಡುತ್ತಾರೆ. ಅಕ್ಷರ ದಾಸೋಹ ಘಟಕದಲ್ಲಿ ಕೈ ತೊಳೆಯುವ ಘಟಕವನ್ನು ಸ್ಥಾಪಿಸಬೇಕೆಂದು ಧಾನ್ಯಗಳಲ್ಲಿ ಇಲ್ಲಿನ ಶಾಲಾ ಶಿಕ್ಷಕರು ಪರಿಶ್ರಮ ಪಡಬೇಕಿದೆ ಎಂದು ಕಿವಿಮಾತು ಹೇಳಿದರು

 ನಾಯಂಡಲ್ಲಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾಗ ನನಗೆ ಕೆಲವು ಅನುಭವಗಳು ಆಗಿವೆ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಲ್ಲಿ ಡ್ರಾಪುಟ್ ಆಗುತ್ತಿದ್ದರು ಅಂತಹ ಮಕ್ಕಳನ್ನು ಪೋಷಕರ ಒಟ್ಟಿಗೆ ಮಾತನಾಡಿ ಪೋಷಕರು ಶಾಲೆಗೆ ಸೇರಿಸಲು ನಾನು ಸಹ ಶ್ರಮ ಪಟ್ಟಿದ್ದೇನೆ ಎಂದು ತನ್ನ ಅನುಭವವನ್ನು ವ್ಯಕ್ತಪಡಿಸಿದ್ದರು

 ಶಾಲೆಗೆ ಬರುವುದು ಹೋದಲು ಮಾತ್ರ ಆದರೆ ಮನೆಗೆ ಹೋದಾಗ ಟಿವಿ ಮೊಬೈಲ್ ಗಳನ್ನು ನೋಡುವ ಪರಿಪಾಠವನ್ನು ಮಕ್ಕಳು ತ್ಯಜಿಸಬೇಕಾಗಿದೆ ಟಿವಿ ನೋಡುವುದಾದರೆ ಪ್ರಚಲಿತ ವಿದ್ಯಮಾನಗಳು ಕುರಿತು ಕಲಿಯಿರಿ ನ್ಯೂಸ್ ವೀಕ್ಷಣೆ ಮಾಡಿ ಆದರೆ ಮೊಬೈಲನ್ನು ಅನು ಕ್ಷಣವು ಬಳಕೆ ಮಾಡಬಾರದು ಅನಿವಾರ್ಯತೆ ಇಲ್ಲದೆ ಮುಂದುವರಿಸಬೇಕಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಅಂತಹ ಮೊಬೈಲ್ ರಿಪೋರ್ಟಕ್ಕೆ ಕಡಿವಾಣ ಹಾಕಬೇಕಾಗಿದೆ ಮಕ್ಕಳು ತಂದೆ ತಾಯಿಯರಿಗೆ ಮತ್ತು ಸಹಸ್ರರಿಗೆ ಶಿಕ್ಷಕರಿಗೆ ಗೌರವವನ್ನು ತರುವಂತಹ ನಿಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕು ಮತ್ತು ನಾಗರಿಕ ಸಮಾಜವನ್ನು ಸೃಷ್ಟಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು

 ವೇಳೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಇದಾಯತ್ ಉಲ್ಲಾ ಉಪಾಧ್ಯಕ್ಷರಾದ ಸಫೀನಾ ಬಡ್ತಿ ಪಡೆದ ಮುಖ್ಯ ಶಿಕ್ಷಕ ಮಹಮ್ಮದ್ ಸಾಧಿಕ್,  ಉರ್ದು ಸಿ ಆರ್ ಪಿ ಅಕಮಲ್ ಖಾನ್, ಅಸ್ಮ ಸುಲ್ತಾನ ತಾಜ್ ಪಾಶ ರಿಯಾನ ಕಾನಂ, ನೂರು ನಿಸ,ದಲಿತ ಸಂಘಟನೆಯ ಮುಖಂಡ ಡಿಪಿಎಸ್ ವೆಂಕಟೇಶ್ ಮಂಜುನಾಥ್ ಹಾಗೂ ಸಹಚರರು ಮತ್ತು ಸ್ಥಳೀಯ ಶಾಲೆಯ ಮಕ್ಕಳ ಎಲ್ಲಾ ಪೋಷಕರು ಸಹ ಹಾಜರಿದ್ದರು.

ಬೀಜಾಡಿಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ: ಕುಂದಾಪ್ರ ಕನ್ನಡ ನಮ್ಮೆಲ್ಲರ ಹೆಮ್ಮೆಯ ಭಾಷೆ – ರೇಖಾ ವಿ.ಬನ್ನಾಡಿ



ಕೋಟ: ಜಾತಿ ಧರ್ಮವನ್ನು ಮೀರಿ ನಮ್ಮೆಲ್ಲರನ್ನು ಭಾವುಕರಾಗಿ ಬಂಧಿಸಲ್ಪಡುವ ಕುಂದಾಪ್ರ ಕನ್ನಡ ನಮ್ಮೆಲ್ಲರ ಹೆಮ್ಮೆಯ ಭಾಷೆಯಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳ ಕೆಲಸ ಅದ್ವಿತೀಯ ಎಂದು ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ರೇಖಾ ವಿ.ಬನ್ನಾಡಿ ಹೇಳಿದರು
ಅವರು ಗುರುವಾರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಇವರ ಸಹಯೋಗದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 4ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಹಾಗೂ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡೋಪಕರಣಗಳ ವಿತರಣೆ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದರು.
ಕುಂದಾಪುರದ ಕುಂದಗನ್ನಡ ಕಳೆಗುಂದದಿರಲಿ.ಜತೆಗೆ ಅದು ನಮ್ಮ ಹೆಮ್ಮೆಯ ಭಾಷೆಯಾಗಿ ಘಮಘಮಿಸಲಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ನಾಗರಾಜ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶ್ರಮ ಸಂಸ್ಕೃತಿಯ ಗುರಿಕಾರ ಕೃಷ್ಣ ಮೆಂಡನ್ ಗೋಳಿಬೆಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಕ್ರೀಡೋಪಕರಣವನ್ನು ಹಸ್ತಾಂತರಿಸಲಾಯಿತು. ಕೋಟ ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ್ ಗಿಳಿಯಾರು,ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಶುಭ ಹಾರೈಸಿದರು. ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್.,ಮಿತ್ರ ಸಂಗಮದ ಕಾರ್ಯದರ್ಶಿ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು.ಅನುಪ್‍ಕುಮಾರ್ ಬಿ.ಆರ್ ಸನ್ಮಾನ ಪತ್ರ ವಾಚಿಸಿದರು. ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕುಂದಾಪುರ ರಿವರ್‍ಸೈಡ್‍ನ ಅಧ್ಯಕ್ಷ ಮಂಜುನಾಥ ಕೆ.ಎಸ್ ವಂದಿಸಿದರು.

ಕಿಕ್ಕಿರಿದು ಜನಸ್ತೋಮ

ಕುಂದಾಪುರ ಕನ್ನಡ ದಿನಾಚರಣೆಯ ಸಂದರ್ಭದಲ್ಲಿ ಭಾಷಾಭಿಮಾನಕ್ಕೆ ಕಿಕ್ಕಿರಿದ ಜನ ಸೇರಿದ್ದು,ಎಲ್ಲರಿಗೂ ಖುಷಿಕೊಟ್ಟಿದೆ. ಸುಮಾರು 15ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ನೆರೆದ ಭಾಷಾಭಿಮಾನಿಗಳಿಗೆ ವಿತರಿಸಲಾಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ವರದರಾಜ ಶೆಟ್ಟಿ ಕಾಲೇಜು ಸಹಭಾಗಿತ್ವದಲ್ಲಿ ಚರ್ಮ ರೋಗ ತಪಾಸಣೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಇವರ ಸಹಭಾಗಿತ್ವದಲ್ಲಿ ಚರ್ಮ ರೋಗ ತಪಾಸಣೆ ಶೆಭಿರ ಆಯೋಜಿಸಲಾಯಿತು. ಈ ಶಿಬಿರವನ್ನು ಖ್ಯಾತ ಚರ್ಮ ರೋಗ ತಜ್ನ ಡಾ. ಅರುಣ ಶೆಟ್ಟಿ, ಕೊರ್ಗಿ ಇವರು ಉಚಿತ ತಪಾಸಣೆ ನಡೆಸಿದರು ಅಲ್ಲದೇ ಸೋಪ್, ಕ್ರೀಮ್, ಲೋಷನ್ ಮಾತ್ರೆ ಇತ್ಯಾದಿ ಗಳನ್ನು ಉಚಿತವಾಗಿ ನೀಡಿದರು.

ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರಯೋಜನ ಪಡೆದರು. ಡಾ. ಅರುಣ್ ಶೆಟ್ಟಿ ಕೆ. ಇವರು ಮಕ್ಕಳಿಗೆ ಚರ್ಮ ರೋಗ ಮತ್ತು ಸೌಂದರ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿ ಹೇಳಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ, ರೆಡ್ ಕ್ರಾಸ್ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜು ಪ್ರಾಂಶುಪಾಲರಾದ ಡಾ. ರಾಜೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ಭಾಷಣ ಮಾಡಿದರು. ಡಾ. ಶೇಖರ್ ಬಿ. (ಕಾಮರ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಯುವ ರೆಡ್ ಕ್ರಾಸ್ ಕನ್ ವೇನರ್ ) ಇವರು ಸ್ವಾಗತಿಸಿದರು. ವೆಂಕಟರಾಮ ಭಟ್ (ಅಸಿಸ್ಟೆಂಟ್ ಪ್ರೊಫೆಸರ್) ಇವರು ವಂದನಾರ್ಪಣೆ ಗೈದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ರಾದ ಗಣೇಶ್ ಆಚಾರ್ಯ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಆದ ನಾಗರಾಜ ಯು. ಉಪಸ್ಥಿತರಿದ್ದರು.

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ:ಸಂಸತ್ತು  ಉದ್ಘಾಟನೆ

ಗಂಗೊಳ್ಳಿ;ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿಯಲ್ಲಿ  ಶಾಲಾ  ಸಂಸತ್ತನ್ನು ಜುಲೈ- 25  ರಂದು ರಚಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಗಿ ದೀಪ ಹಚ್ಚುವುದರ ಮೂಲಕ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ರೆಸೆನ್ಸ್ ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

 ಶಾಲಾ ನಾಯಕನಾಗಿ ವೀರೇಶ್   ಖಾರ್ವಿ,  ಉಪನಾಯಕಿಯಾಗಿ  ಚಂದನಾ,  ಪ್ರಮಾಣವಚನ ಬೋಧಿಸಿದರು.  ಶಿಕ್ಷಣ ಮಂತ್ರಿಯಾಗಿ ಸೃಷ್ಟಿ, ಕ್ರೀಡಾ ಮಂತ್ರಿಯಾಗಿ ಸಂಜನಾ, ಆಹಾರ ಮಂತ್ರಿಯಾಗಿ  ನಮಿತಾ, ಸಾಂಸ್ಕೃತಿಕ ಮಂತ್ರಿಯಾಗಿ ಐಶೂ, ಸ್ವಚ್ಛತಾ ಮಂತ್ರಿಯಾಗಿ  ಶಶಿ, ಸಭಾಪತಿಯಾಗಿ ಪ್ರಜ್ಞಾ, ವಿರೋಧ ಪಕ್ಷದ ನಾಯಕಿಯಾಗಿ ಮಾನ್ಯ, ಸಹಾಯಕ ಮಂತ್ರಿಗಳಾದ ಶೈಲೇಶ್,ಪ್ರೀತಮ್, ಪ್ರೀತೇಶ್,ನವನೀತ ಶೆಟ್ಟಿ, ಝುವೈನಾ, ಪ್ರಮಾಣವಚನ ಸ್ವೀಕರಿಸಿದರು.

ಮುಖ್ಯೋಪಾಧ್ಯಾಯನಿ  ಮಂತ್ರಿಮಂಡಲವನ್ನು ಉದ್ದೇಶಿಸಿ ಎಲ್ಲಾ ಮಂತ್ರಿಗಳ  ಅಧಿಕಾರ ಮತ್ತು ಕರ್ತವ್ಯಗಳ ಕುರಿತು ತಿಳಿಸಿದರು. ಇದರ ಜೊತೆಯಲ್ಲಿ ವಿವಿಧ  ಸಂಘಗಳಾದ  ಇಕೋ ಕ್ಲಬ್, ಸಾಹಿತ್ಯ ಮತ್ತು ಯೋಗ , ಕ್ರೀಡಾ, ಗೈಡ್ಸ್ ಸಂಘಗಳು ಉದ್ಘಾಟನೆಗೊಂಡವು. ನಮ್ರತಾ  ಕಾರ್ಯಕ್ರಮ ನಿರೂಪಿಸಿದಳು.

ಕುಂದಾಪುರದ ಆರ್. ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ

ಕುಂದಾಪುರ: ‘ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸದಾ ಕಾರ್ಯಪ್ರವೃತ್ತವಾಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಆಶ್ರಯದಲ್ಲಿ ಆರಂಭಗೊಂಡ ಜ್ಯೂನಿಯರ್ ರೆಡ್ ಕ್ರಾಸ್ ಘಟಕವು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆರೋಗ್ಯ ಸಂಬಂಧಿ ತುರ್ತು ಸೇವೆಗಳ ಅರಿವು ಜೊತೆಗೆ ಮಾನವೀಯ ಮೌಲ್ಯಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಬೆಳೆಸುವ ಉದ್ದೇಶ ಈ ಸಂಸ್ಥೆ ಹೊಂದಿದೆ ‘ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿಯವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯವರು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನೂತನವಾಗಿ ಆರಂಭಿಸಿದ ಜ್ಯೂನಿಯರ್ ರೆಡ್ ಕ್ರಾಸ್ ಘಟಕವನ್ನು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು.

ರೆಡ್ ಕ್ರಾಸ್ ಘಟಕದ ಸದಸ್ಯರಾದ ಶ್ರೀ ಸತ್ಯನಾರಾಯಣ ಪುರಾಣಿಕ್ ಇವರು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶಗಳ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸೇವಾವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಇಂಡಿಯನ್ ರೆಡ್ ಕ್ರಾಸ್ ಕುಂದಾಪುರ ಘಟಕದ ಕಾರ್ಯದರ್ಶಿ ಶ್ರೀ ಸೀತಾರಾಮ್ ಶೆಟ್ಟಿ, ಸದಸ್ಯರಾದ ಶ್ರೀ ಶಿವರಾಮ ಶೆಟ್ಟಿ, ಇನ್ನೋರ್ವ  ಸದಸ್ಯರಾದ ಡಾ. ಸೋನಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಪಿ.ಯು.ಸಿ ವಿಭಾಗದ ಮಹಿಮಾ ಮತ್ತು ವೈಷ್ಣವಿ ಪ್ರಾರ್ಥನೆ ಹಾಡಿದರು. ಕಾಲೇಜಿನ ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯ ಇವರು ಕಾರ್ಯಕ್ರಮ ನಿರ್ವಹಿಸಿದರು.