

ಕುಂದಾಪುರ,ಅ:14: ಸ್ಥಳೀಯ ಹೋಲಿ ರೋಜರಿ ಇಗರ್ಜಿಯಲ್ಲಿ ಐ.ಸಿ.ವೈ.ಎಮ್. ಮತ್ತು ವೈ.ಸಿ.ಎಸ್ ಸಂಘಟನೆಯ ಯುವ ಯುವತಿಯರು ರಾಷ್ಟ್ರೀಯ ಯುವ ದಿನಾಚರಣೆಯನ್ನು (ಅ:14) ಆಚರಿಸಿದರು. ಈ ಪ್ರಯುಕ್ತ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನ ಅರ್ಪಿಸಿದರು ತಾವ್ರೊ ಸಹ ಬಲಿದಾನವನ್ನು ಅರ್ಪಿಸಿದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಯುವ ಪ್ರಾಯದಲ್ಲಿ ಯವಜನತೆ ಎನೋ ಒಂದು ವಿಶೇಷತೆ ಇರುತ್ತದೆ, ಅವರ ಮನಸಿನಲ್ಲಿ, ಆಲೋಚನೆಗಳಲ್ಲಿ ಹೊಸತನ, ವಿಶೇಷತೆ ನಾವು ಕಾಣುತ್ತೇವೆ, ಯುವ ಜನತೆ ಸಮಾಜಕ್ಕೆ ದೇಶಕ್ಕೆ ಒಳಿತನ್ನುಂಟು ಮಾಡುವ ಗುಣಗಳನ್ನು ಮೈಗೂಡಿಸಿಗೊಳ್ಳಬೇಕು, ನಿರಾಶೆ, ಹತಾಶಾ ಭಾವನೆ ಬಿಟ್ಟು ಮೇರಿ ಮಾತೆ ದೇವರ ಹೇಳಿದಂತೆ ಸಂಪೂರ್ಣವಾಗಿ ನಂಬಿದಳೊ ಹಾಗೇ,ನೀವು ಮೇರಿ ಮಾತೆಯಲ್ಲಿ ನೀವು ನಂಬಿಕೆ ಇಟ್ಟು ಮುಂದೆ ನಡೆಯಿರಿ” ಎಂದು ಸಂದೇಶ ನೀಡಿದರು.
ಅ|ವಂ|ಸ್ಟ್ಯಾನಿ ತಾವ್ರೊ ಯುವ ಜನತೆ ಮುಂದಿನ ಭವಿಸ್ಯವಾಗಿದ್ದು, ಮುಂದೆ ನೀವು ಸಮಾಜವನ್ನು ನಡೆಸಬೇಕಾಗುತ್ತದೆ, ಅದಕ್ಕೆ ಯುವ ಜನತೆ ಸನ್ನದರಾಗಬೇಕು” ಎಂದು ಶುಭ ಕೋರಿದರು. ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಲಾಯಿತು
ಈ ಸಂದರ್ಭದಲ್ಲಿ ಐ.ಸಿ.ವೈ.ಎಮ್. ನೂತನ ಅಧ್ಯಕ್ಷ ಕೆಲ್ವಿನ್ ರೋಚ್, ಕಾರ್ಯದರ್ಶಿ ಜಾಸ್ನಿ ಡಿಆಲ್ಮೇಡಾ, ಸಚೇತಕರಾದ ಶಾಂತಿ ರಾಣಿ ಬರೆಟ್ಟೊ, ಜೆಸನ್ ಪಾಯ್ಸ್, ಎಲ್ಲಾ ಪದಾಧಿಕಾರಿಗಳು ಸದಸ್ಯರು, ಹಾಗೆ ವೈ.ಸಿ.ಎಸ್ ಸಂಘಟನೇಯ ಪದಾಧಿಕಾರಿಗಳು ಸದಸ್ಯರು, ಸಚೇತಕಿ ಶೈಲಾ ಡಿಆಲ್ಮೇಡಾ ಉಪಸ್ಥಿತರಿದ್ದರು.

































































































































































































































































