HOLY ROSARY CHURCH, KUNDAPUR – 450 th JUBILEE SOUVENIR 2021

ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ:ಎಸ್.ಎನ್.ಆರ್.ಬಾಬುರೆಡ್ಡಿ

ಶ್ರೀನಿವಾಸಪುರ: ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಗಿಸಿಕೊಂಡಿದ್ದ ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದು ಜಿಲ್ಲಾ ಎಎಪಿ ಮುಖಂಡ ಎಸ್.ಎನ್.ಆರ್.ಬಾಬುರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಎಎಪಿ ಘಟಕದ ವತಿಯಿಂದ ಭಾನುವಾರ ಸ್ವಂತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಎಲ್ಲರಿಗು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ಎಎಪಿ ಬೆಂಬಲಿಸಬೇಕು ಎಂದು ಹೇಳಿದರು.
ಮುಖಂಡರಾದ ಶಶಿಕುಮಾರ್, ಪ್ರಕಾಶ್, ಶ್ರೀನಿವಾಸರೆಡ್ಡಿ, ಶಿವಾರೆಡ್ಡಿ, ಚಲಪತಿ, ರಾಜೇಶ್, ಜನಾರ್ಧನ್, ಕಟೇಶ್, ರೆಡ್ಡಪ್ಪ, ನಾಗರಾಜ್, ಸೋಮಶೇಖರ್ ಇದ್ದರು.
ಬೈಕ್ ರ್ಯಾಲಿ: ಎಎಪಿ ಕಾರ್ಯಕರ್ತರು ಪಟ್ಟಣದಲ್ಲಿ ರಾಷ್ಟ್ರಧ್ವಜ ಹೊತ್ತು ಬೈಕ್ ರ್ಯಾಲಿ ನಡೆಸಿದರು

ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ:ಎಸ್.ಎನ್.ಆರ್.ಬಾಬುರೆಡ್ಡಿ

ಶ್ರೀನಿವಾಸಪುರ: ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾಂತಂತ್ರ್ಯ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಗಿಸಿಕೊಂಡಿದ್ದ ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದು ಜಿಲ್ಲಾ ಎಎಪಿ ಮುಖಂಡ ಎಸ್.ಎನ್.ಆರ್.ಬಾಬುರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಎಎಪಿ ಘಟಕದ ವತಿಯಿಂದ ಭಾನುವಾರ ಸ್ವಂತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಎಲ್ಲರಿಗು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ಎಎಪಿ ಬೆಂಬಲಿಸಬೇಕು ಎಂದು ಹೇಳಿದರು.
ಮುಖಂಡರಾದ ಶಶಿಕುಮಾರ್, ಪ್ರಕಾಶ್, ಶ್ರೀನಿವಾಸರೆಡ್ಡಿ, ಶಿವಾರೆಡ್ಡಿ, ಚಲಪತಿ, ರಾಜೇಶ್, ಜನಾರ್ಧನ್, ವೆಂಕಟೇಶ್, ರೆಡ್ಡಪ್ಪ, ನಾಗರಾಜ್, ಸೋಮಶೇಖರ್ ಇದ್ದರು.
ಬೈಕ್ ರ್ಯಾಲಿ: ಎಎಪಿ ಕಾರ್ಯಕರ್ತರು ಪಟ್ಟಣದಲ್ಲಿ ರಾಷ್ಟ್ರಧ್ವಜ ಹೊತ್ತು ಬೈಕ್ ರ್ಯಾಲಿ ನಡೆಸಿದರು

Our Lady of Vailankanni Center at Kalmady declared as Diocesan Shrine/ಕಲ್ಮಾಡಿಯಲ್ಲಿರುವ ಅವರ್ ಲೇಡಿ ಆಫ್ ವೆಲಂಕಣಿ ಕೇಂದ್ರವನ್ನು ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವೆಂದು ಘೋಷಿಸಲಾಗಿದೆ

Our Lady of Vailankanni Center at Kalmady declared as Diocesan Shrine.

Proclamation and Dedication of Our Lady of Vailankanni Center at Stella Maris Church, Kalmady was officially declared as Diocesan Shrine on 15 th August 2022, during the solemnly Eucharistic Mass at 10:00 am. The Decree which was given by the Bishop of Udupi, Most Rev. Dr Gerald Isaac Lobo was read by the Chancellor of the Udupi Diocese Rt. Rev. Fr
Staney B. Lobo. The Holy Eucharistic Mass was celebrated by the Most Rev. Dr Gerald
Isaac Lobo, Bishop of Udupi and con celebrated by Most Rev. Dr Peter Paul Saldanha, Bishop of Mangalore, Most Rev. Dr Francis Serrao, Bishop of Shimoga, Most Rev. Dr Robert Miranda, Bishop of Gulbarga, Most Rev. Dr Henry D’Souza, , Bishop of Bellary, Most Rev. Dr Lawrence Mukkuzhy, Bishop of Belthangady, Most Rev. Dr Geevargheese Mar Makarios Kalayil,
Bishop of Puttur, V. Rev. Fr Staney B. Lobo, Chancellor of Udupi Diocese, V. Rev. Fr Charles Menezes, Dean of Udupi Deanery, V. Rev. Fr Baptist Menezes, Parish Priest of Stella Maris Church and the Rector of Our Lady of Vailankanni Shrine, Rev. Fr Roy Lobo, Assistant Parish Priest and other priests. The Golden Jubilee Felicitation Programme of the Stella Maris Church Kalmady was held soon after the Holy Eucharistic Mass, during the celebration the past Parish Priests and the Vocations from Kalmady who are currently serving in various places were honoured also the past and present Vice Presidents, Secretaries, coordinators of 20 commission, Gurkars of wards were honoured. The Vice President of the Parish Pastoral Council, Mr. Sandeep Andrade, Secretary Mrs. Shobha Mendonsa, Coordinator of 20 Commission Mrs. Ida D’Souza, Coordinator of Golden Jubilee Committee Mr. Sandeep Andrade were present.

ಕಲ್ಮಾಡಿಯಲ್ಲಿರುವ ಅವರ್ ಲೇಡಿ ಆಫ್ ವೆಲಂಕಣಿ ಕೇಂದ್ರವನ್ನು ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವೆಂದು ಘೋಷಿಸಲಾಗಿದೆ

ಉಡುಪಿ: ವಿಶ್ವ ಪ್ರಸಿದ್ದ ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಅಧಿಕೃತ ಪುಣ್ಯಕ್ಷೇತ್ರವೆಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾಕ್ಟರ್ ಜೆರಾಲ್ಡ್
ಐಸಾಕ್ ಲೋಬೋರವರು ಆಗಸ್ಟ್ 15 ರಂದು ವಿದ್ಯುಕ್ತವಾಗಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಘೋಷಿಸಿದರು. ಈ ಸಂಧರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾದ ಫಾದರ್ ಸ್ಟ್ಯಾನಿ ಬಿ ಲೋಬೋ ಅವರು ಪುಣ್ಯಕ್ಷೇತ್ರದ ಘೋಷಣೆ
ಪತ್ರವನ್ನು ವಾಚಿಸಿದರು. ಈ ಸಂಧರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾಕ್ಟರ್ಜೆ ರಾಲ್ಡ್ ಐಸಾಕ್ ಲೋಬೋ ರವರು ದಿವ್ಯ ಬಲಿಪೂಜೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ
ಧರ್ಮಾಧ್ಯಕ್ಷ್ಯರಾದ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಫ್ರಾನ್ಸಿಸ್ ಸೆರಾವೋ, ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಹೆನ್ರಿ ಡಿಸೋಜ, ಕಲ್ಬುರ್ಗಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ರಾಬರ್ಟ್ ಮಿರಾಂದಾ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಲಾರೆನ್ಸ್ ಮುಕ್ಕುಜಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ಕ ಲಾಯಿಲ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಟಾನಿ ಬಿ ಲೋಬೋ, ಫಾದರ್ ಚಾರ್ಲ್ಸ್ ಮೆನೇಜಸ್, ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದ
ಪ್ರಧಾನ ಧರ್ಮಗುರುಗಳಾದ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ಫಾದರ್. ಮೆಲ್ವಿಲ್ ರೊಯ್ ಲೋಬೋ, ಮತ್ತು ಧರ್ಮಪ್ರಾಂತ್ಯದ ಇತರ ಧರ್ಮಗುರುಗಳು ಕಲ್ಮಾಡಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ಸಂಧರ್ಭದಲ್ಲಿ ಸ್ಟೆಲ್ಲಾ ಮಾರಿಸ್ ದೇವಾಲಯದ ಸುವರ್ಣ ಮಹೋತ್ಸವದ ಸನ್ಮಾನ ಸಮಾರಂಭ ಕೂಡಾ ನಡೆಯಿತು.
ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಹಾಗೂ ಕಳೆದ 50 ವರ್ಷಗಳಲ್ಲಿ ಸೇವೆ ಸಲ್ಲಿಸಿದ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷ್ಯ ಕಾರ್ಯದರ್ಶಿ ಮತ್ತು ವಾರ್ಡಿನ ಗುರಿಕಾರರನ್ನು
ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದ ಶಾಶ್ವತ ಯೋಜನೆಯಾಗಿ ಆರೋಗ್ಯ ನಿಧಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ| ಜೆರಾಲ್ಡ್ ಐಸಾಕ್ ಲೋಬೋ ಚಾಲನೆ ಯನ್ನು ನೀಡಿದರು. ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾಕ್ಟರ್ ಪೀಟರ್ ಪೌಲ್ ಸಲ್ಡಾನ ಬಿಡುಗಡೆಗೊಳಿಸಿದರು.
ಪ್ರಧಾನ ಧರ್ಮಗುರುಗಳಾದ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್ ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ ವಂದಿಸಿದರು. ಹೆನ್ರಿ ಪೂರ್ಟಾಡೋ ಮತ್ತು ಜೆನವಿವ್ ಲೋಬೋ ಕಾರ್ಯಕ್ರಮ ನಿರ್ವಹಿಸಿದರು. ಈ ಸಂಧರ್ಭದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ,, 20 ಆಯೋಗದ ಸಂಯೋಜಕಿ ಐಡಾ
ಡಿಸೋಜಾ, ಸುವರ್ಣ ಮಹೋತ್ಸವ ಸಮಿತಿಯ ಸಂಯೋಜಕ ಸಂದೀಪ್ ಅಂದ್ರಾದೆ ಪಾಲನಾ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಶಿರ್ವ: ಸಂತ ಮೇರಿ ಮಹಾವಿದ್ಯಾಲಯದಲ್ಲಿ ಅಮೃತ ಮಹೋತ್ಸವ ಆಚರಣೆ

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 2022ರ ಆಗಸ್ಟ್ 15 ರಂದು 76ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದ 75 ನೇ ಅಮೃತ ಮಹೋತ್ಸವ ಪ್ರಯುಕ್ತ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಧ್ವಜಾರೋಹಣವನ್ನು ನೆರವೇರಿಸಿ, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವೆಂದರೆ ಇದರ ಹಿಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕೋಟ್ಯಾಂತರ ಭಾರತೀಯರ ತ್ಯಾಗ-ಬಲಿದಾನ- ಹೋರಾಟದ ಕಥೆ ಇದೆ. ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ. ನವಸಮಾಜ ನಿರ್ಮಾಣ ಜೊತೆಗೆ ದೇಶಾಭಿವೃದ್ಧಿಗಾಗಿ ಇಂದು ಯುವಕರು ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ನೀಡಿ ದೇಶ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಪ್ರಾಮುಖ್ಯತೆಯನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು .

ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ, ಕ್ವಾರ್ಟರ್ ಮಾಸ್ಟರ್ ಮೋಹಿತ್ ಎನ್ ಸಾಲಿಯಾನ್, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ಪರೇಡ್ ನ ನೆರವೇರಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿನ ಅಧೀಕ್ಷಕಿ ಶ್ರೀಮತಿ ಡೋರಿನ್ ಡಿಸಿಲ್ವಾ, ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಶ್ರೀ ಪ್ರಕಾಶ್, ಶ್ರೀಮತಿ ಸಂಗೀತ ಪೂಜಾರಿ, ಎನ್ ಎಸ್ ಎಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿ ಕಾಲೇಜಿನ ಎಲ್ಲಾ ಭೋಧಕ ಹಾಗು ಭೋಧಕೆತರ ವೃಂದದವರು ಉಪಸ್ಥಿತರಿದ್ದರು.

ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀ ಪ್ರೇಮನಾಥ್ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಕು. ಯಶೋದ ವಂದಿಸಿದರು.ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್‌ಕುಮಾರ್‌ ರವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ-ಸಂಯೋಜಿಸಿದರು.

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ – ಅಂತರ್ ತರಗತಿ ಪ್ರತಿಭಾ ಪ್ರದರ್ಶನ

ಕುಂದಾಪುರ: ಆಗಸ್ಟ್ 15ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ನಡೆದ – ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬರಹಗಾರ ನರೇಂದ್ರ ಗಂಗೊಳ್ಳಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಸ್ವಾಗತಿಸಿದರು. ಉಪನ್ಯಾಸಕರಾದ ದುರ್ಗಾಪ್ರಸಾದ್ ವಂದಿಸಿ ಸುಮಾ ಕಾರ್ಯಕ್ರಮ ನಿರೂಪಿಸಿದರು

ಆಟೋರಿಕ್ಷಾ , ಟ್ಯಾಕ್ಸಿ , ಮೆಟಡೋರ್ ಡ್ರೈವರ್ ಅಸೋಸಿಯೇಷನ್ (ರಿ) ಕುಂದಾಪುರ ಇವರಿಂದ ಸ್ವಾತಂತ್ರ್ಯ ದಿನಾಚರಣೆ

.

ದೇಶದ 75 ನೇ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ, ಮೆಟಡೋರ್ ಡ್ರೈವರ್ ಅಸೋಸಿಯೇಷನ್ (ರಿ) ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಧ್ವಜಾರೋಹಣವನ್ನು ನೇರವೇರಿಸಿ ಜಾತಿ, ಮತ, ಧರ್ಮ ಭೇದವನ್ನು ಮರೆತು ಸಂಘಟಿತರಾಗಿ ಬ್ರಿಟೀಷರಿಂದ ಪಡೆದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿದರು. ಪ್ರಸ್ತುತ ದೇಶವು ಎದುರಿಸುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಕೋಮುಸಂಘರ್ಷಗಳ ವಿರುದ್ಧ ಪಕ್ಷ ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನು ಸಂವಿಧಾನದ ಆಶಯದಂತೆ ಸರಕಾರದ ವಿರುದ್ಧ ನಡೆಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿಯವರು ಈ ಸಂದರ್ಭದಲ್ಲಿ ಶುಭವನ್ನು ಕೋರಿ , ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿದರು.

ಸಭೆಯಲ್ಲಿ ಡ್ರೈವರ್ ಅಸೋಸಿಯೇಷನ್ (ರಿ) ಗೌರವ ಅಧ್ಯಕ್ಷರಾದ ಆನಂದ ಪೂಜಾರಿ, ಬಸವಣ್ಣ ವಕ್ವಾಡಿ, ಉಪಾಧ್ಯಕ್ಷರಾದ ಶೇಖರ್ ತಲ್ಲೂರ್, ಪುರಸಭೆಯ ಮಾಜಿ ಸದಸ್ಯರಾದ ಸುಭಾಷ್ ಪೂಜಾರಿ, ರವಿಕಲಾ ಶೇರಿಗಾರ್, ಪಂಚಾಯತ್ ಸದಸ್ಯರಾದ ವಿಜಯಧರ್, ಕಿಸಾನ್ ಘಟಕದ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ, ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಸೇವಾದಳದ ಅಧ್ಯಕ್ಷರಾದ ಧರ್ಮ ಪ್ರಕಾಶ್, ಎಸ್ ಸಿ ಘಟಕದ ಅಧ್ಯಕ್ಷರಾದ ಅಶ್ವಥ್ ಕುಮಾರ್, ಬ್ಲಾಕ್ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಯುವ ಮುಖಂಡರಾದ ಸುನಿಲ್ ಪೂಜಾರಿ, ಸೋಶಿಯಲ್ ಮೀಡಿಯಾ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಮಹಿಳಾ ಸದಸ್ಯರಾದ ಶೋಭಾ ಸಚ್ಚಿದಾನಂದ, ಜ್ಯೋತಿ ನಾಯಕ್ ,ಸುವರ್ಣ ಆಲ್ಮೇಡಾ, ಸಂಗೀತಾ, ಹಿರಿಯರಾದ ಕಾಳಪ್ಪ ಪೂಜಾರಿ, ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಕೇಶವ್ ಭಟ್, ಅಶೋಕ್ ಸುವರ್ಣ, ಶಶಿರಾಜ್ ಪೂಜಾರಿ, ಕೆ ಪಿ ಅರುಣ್ ಪಟೇಲ್, ಸಚಿನ್ ಕುಮಾರ್, ಎಡೊಲ್ಫ್ ಡಿಕೋಸ್ತಾ, ಅಶೋಕ್, ಜೋಸೆಫ್ ರೆಬೆಲ್ಲೊ, ಜನಾರ್ದನ, ದಿನೇಶ್ ಬೆಟ್ಟ, ಸೂರ್ಯನಾರಾಯಣ, ಸುರೇಶ್ ಪೂಜಾರಿ, ಶ್ರೀಧರ ಬಸ್ರೂರು, ನರೇಂದ್ರ ಗಾಣಿಗ ಬಸ್ರೂರು, ಬಾಬು ಬಸ್ರೂರು, ರಫಿಕ್ ಬಸ್ರೂರು, ಕೃಷ್ಣ ಬಿ ಎನ್, ಭಾಸ್ಕರ, ಚಂದ್ರಶೇಖರ ಶೇರಿಗಾರ್, ನಾಗೇಂದ್ರ ಬಸ್ರೂರು, ಕರುಣಾಕರ , ಅಬ್ಬುಬ್ಬಕರ್ ಕೋಡಿ ಇನ್ನಿತರರು ಉಪಸ್ಥಿತರಿದ್ದರು.
ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಯವರು ಸ್ವಾಗತಿಸಿ, ಕಾರ್ಯದರ್ಶಿ ಮಾಣಿ ಉದಯರವರು ವಂದಿಸಿದರು. ನಂತರ ಸಂಘದ ಸದಸ್ಯರು ವಾಹನಗಳ ಪುರ ಮೆರವಣಿಗೆಯನ್ನು ನೆರವೇರಿಸಿದರು.

ಕುಂದಾಪುರ ಚರ್ಚ್ ಮೈದಾನದಲ್ಲಿ ಸ್ವಾತಂತ್ರ್ಯ ಸಂಭ್ರಮದ ಅಮ್ರತ ಮಹೋತ್ಸವ ಆಚರಣೆ

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, ಸ್ವಾತಂತ್ರ್ಯ ಸಂಭ್ರಮದ ಅಮ್ರತ ಮಹೋತ್ಸವನ್ನುಆಚರಿಸಲಾಯಿತು
  ಕುಂದಾಪುರ ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು “ನಮ್ಮ ಹಿರಿಯರು ಮಾಡಿದ ತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಾವು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಅವರೆನೆಲ್ಲ ನಾವು ಸ್ಮರಿಸಿಕೊಳ್ಳುವ ಅಗತ್ಯವಿದೆ, ಇಂದು ನಮ್ಮ ದೇಶವನ್ನು ಕಾಯುವ ಸೈನಿಕರನ್ನು ನಾವು ನೆನಪಿಸಿಕೊಳ್ಳ ಬೇಕು, ಇಂದು ಅವರು ನಮ್ಮ ದೇಶವನ್ನು 24 ಗಂಟೆ ತ್ಯಾಗ ಬಲಿದಾನಗಳಿಂದ ಕಾಯುತಿದ್ದಾರೆ” ಎಂದು ಅವರು ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಈ ಸಂದರ್ಭದಲ್ಲಿ ಶುಭ ಕೋರಿದರು.

ಘಟಕದನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಕಥೊಲಿಕ್ ಸಭಾದ ಪದಾಧಿಕಾರಿಗಳಾದ ಜೂಲಿಯೆಟ್ ಪಾಯ್ಸ್,ಡಾ| ಸೋನಿ ಡಿಕೋಸ್ತಾ, ವಾಲ್ಟರ್ ಡಿಸೋಜಾ, ವಿನೋದ್ ಕ್ರಾಸ್ಟೊ, ಮೈಕಲ್ ಗೊನ್ಸಾಲ್ವಿಸ್, ಪಾಲನ ಮಂಡಳಿ ಉಪಧ್ಯಾಕ್ಷ ಲುವಿಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ,  ಜೋನ್ ಮಾಸ್ಟರ್, ಇನ್ನಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಕಾರ್ಯದರ್ಶಿ ಆಲ್ಡ್ರಿನ್ ಡಿಸೋಜಾ ವಂದಿಸಿದರು, ವಿಲ್ಸನ್ ಡಿಆಲ್ಮೇಡಾ ನಿರೂಪಿಸಿದರು.

ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದಿಂದ ಸ್ವಾತಂತ್ರ್ಯ ಸಂಭ್ರಮದ ಅಮ್ರತ ಮಹೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ 10 ಸಾವಿರ ಲಡ್ಡುಗಳ ವಿತರಣೆ- ಪ್ರತಾಪ್ ಚಂದ್ರ ಶೆಟ್ಟಿಯವರಿಂದ ಚಾಲನೆ

ಉಡಪಿ/ ಕುಂದಾಪುರ. ಅ.15:ನಮ್ಮ ದೇಶದ ಸ್ವಾತಂತ್ರ್ಯ ಸಂಭ್ರಮದ ಅಮ್ರತ ಮಹೋತ್ಸವದ ಪ್ರಯುಕ್ತ ಕುಂದಾಪುರ ಮತ್ತು ಕೋಟ ಬ್ಲಾಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ೧೦ ಸಾವಿರ ಲಡ್ಡುಗಳ ವಿತರಣೆಯನ್ನು ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗ ವಿತರಣೆ ಮಾಡಿತು. ಮಾಜಿ ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿಯವರು ತಮ್ಮ ನಿವಾಸದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ಈ ಸಂದರ್ಭದಲ್ಲಿ ಅಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ರೊನಾಲ್ಡ್ ಮನೋಹರ್ ಕರ್ಕಡ, ಮಂಜೀತ್ ನಾಗರಾಜ್, ಮಹ್ಮಮದ್ ಶೀಸ್, ಕಿಶನ್ ಖಾರ್ವಿ, ಪವನ ಬಂಗೇರ, ಕೆ.ಗಣೇಶ ಕೋಟ, ಉಪಸ್ಥಿರರಿದ್ದು, ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡ ಸಮಾಜ ಸೇವಕ ಬರ್ನಾಡ್ ಡಿಕೋಸ್ತಾ, ಚಾಲನೇಯ ರೂಪವಾಗಿ ಲಡ್ಡುಗಳನ್ನು ಪ್ರತಾಪಚಂದ್ರ ಶೇಟ್ಟಿಯವರಿಗೆ ಹಸ್ತಾಂತರಿಸಿದರು.

 ಪ್ರತಾಪಚಂದ್ರ ಶೇಟ್ಟಿಯವರು ಇದೊಂದು ಉತ್ತಮ ಕಾರ್ಯಕ್ರಮ ಎಂದು ಶುಭ ಕೋರಿದರು.ಬ್ಲಾಕಗಳ ಎಲ್ಲ ಶಾಲೆಗಳಿಗೆ ಸಿಹಿ ತಿಂಡಿಯನ್ನು ಹಂಚಲಿಕ್ಕೆ ಈ ವರ್ಷ ಅಸಾಧ್ಯವಾಗಿದ್ದು ನಮ್ಮ ಗಮನಕ್ಕೆ ಬಂದಿದೆ, ಮುಂದಿನ ವರ್ಷಗಳಲ್ಲಿ ಎಲ್ಲರಿಗೂ ದೊರಕುವ ಹಾಗೆ ಪ್ರಯತ್ನ ಮಾಡಲಾಗುವುದೆಂದು. ರೊನಾಲ್ಡ್ ಕರ್ಕಡ ತಿಳಿಸಿದರು.

ಕುಂದಾಪುರ ಪುರಸಭಾ ವ್ಯಾಪ್ತಿಯ ಸರ್ಕಾರಿ ಪ.ಪೂ.ಕಾಲೇಜ್ ಮತ್ತು ಸರ್ಕಾರಿ ಬೋರ್ಡ್ ಪ್ರೌಢ ಶಾಲೆ, ಸಂತಮೇರಿಸ್ ಪ್ರೌಢ ಶಾಲೆ, ಸಂತ ಮೇರಿಸ್ ಹಿ.ಪ್ರಾ.ಶಾಲೆ, ಸಂತ ಮೇರಿ ಪಿ.ಯು. ಕಾಲೇಜ್, ಸಂತ ಜೋಸೆಫ್ ಪ್ರೌಢ ಶಾಲೆ, ಸಂತ ಜೋಸೆಫ್ ಹಿ.ಪ್ರಾ ಶಾಲೆ, ಅರ್.ಎನ್.ಶೆಟ್ಟಿ ಪ.ಪೂ.ಕಾಲೇಜ್ ಮತ್ತು ಪ್ರೌಢ ಶಾಲೆಗಳಿಗೆ ಲಡ್ಡುಗಳನ್ನು ವಿತರಿಸಲಾಯಿತು.

.

ಉಡುಪಿ: ಭಾರೀ ಉತ್ಸಾಹದಲ್ಲಿ ಪಕ್ಷ ಸಂಘಟನೆಯಲ್ಲಿ ದಿ. ಆಸ್ಕರ್‌ ಫೆರ್ನಾಂಡೀಸ್‌ ಅಭಿಮಾನಿ ಬಳಗ

ಉಡುಪಿ: ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ ನಡುವೆ ಉಡುಪಿಯಲ್ಲಿ ಉತ್ಸಾಹದಿಂದ ಸಮಾಜಮುಖಿ ಕೆಲಸ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿರುವ ದಿ.ಆಸ್ಕರ್‌ ಫೆರ್ನಾಂಡೀಸ್‌ ಅಭಿಮಾನಿ ಬಳಗವು ದಿನೆ ದೀನೆ ಖ್ಯಾತಿಯನ್ನು ಗಳಿಸುತೀದೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ಹಮ್ಮಿಕೊಂಡ 75ನೇ ಸ್ವಾತಂತ್ರೋತ್ಸವದ ನಡಿಗೆ ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಕೆ.ಪ್ರತಾಪ್‌ ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ದಿ.ಆಸ್ಕರ್‌ ಫೆರ್ನಾಂಡೀಸ್‌ ಅಭಿಮಾನಿ ಬಳಗವು ಕಾಂಗ್ರೆಸ್‌ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿತು.

ವಿವಿಧ ಕಡೆಗಳಲ್ಲಿ ಅಭಿಮಾನಿ ಬಳಗದ ಸದಸ್ಯರಾದ ರೊನಾಲ್ಡ್ ಮನೋಹರ್ ಕರ್ಕಡ, ಮಂಜೀತ್ ನಾಗರಾಜ್, ಮಹಮ್ಮದ್ ಶಿಷ್, ಅರವಿನ್, ನಾಗೇಶ್ ಉದ್ಯಾವರ ಇವರುಗಳು ಮೊದಲಾದವರು ಸ್ವತಃ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಜಿಲ್ಲೆಯಲ್ಲಿ ಪುನರಪಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಣತೊಟ್ಟಿರುವ ಜಿಲ್ಲಾ ಕಾಂಗ್ರೆಸ್‌ ಗೆ, ದಿ. ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವು ಜೊತೆಯಾಗಿದ್ದು, ಉಡುಪಿ ಮತ್ತು ಕುಂದಾಪುರ ವಿಧಾನ ಕ್ಷೇತ್ರದ ಒಟ್ಟು 4 ಬ್ಲಾಕ್‌ ಆಯೋಜಿಸಿದ ಕಾಲ್ನಡಿಗೆ ಜಾಥಕ್ಕೆ ವಿನಯ ಕುಮಾರ್ ಸೊರಕೆ ಚಾಲನೆ ನೀಡಿದರು.ಅಸ್ಕರ್‌ ಅಭಿಮಾನಿ ಬಳಗವು ಸಾವಿರಾರು. ಕಾರ್ಯಕರ್ತರಿಗೆ, ತಿಂಡಿ ಪಾನೀಯ ಮತ್ತು ಭೋಜನ ವ್ಯವಸ್ಥೆ ಮಾಡಿ ಕಾರ್ಯಕರ್ತರು ಮತ್ತು ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.