HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರ : ಮಳೆಯು ಪ್ರಾರಂಭವಾದರೂ, ಇಲಾಖೆ ಕಾಲುವೆ, ಚರಂಡಿ, ಸ್ವಚ್ಚ ಮಾಡದೆ ತಗ್ಗು ಪ್ರದೇಶ, ರಸ್ತೆಗಳಲ್ಲಿ, ಚರಂಡಿಳಲ್ಲಿ, ಮನೆಗಳಲ್ಲಿ ಕೊಳಚೆ ನೀರು ತುಂಬಿತಳುಕಿತು

St Agnes PU College Excels in NEET/JEE & CET Exam / ಸೇಂಟ್ ಆಗ್ನೆಸ್ ಪಿಯು ಕಾಲೇಜು ನೀಟ್/ಜೆಇಇ ಮತ್ತು ಸಿಇಟಿ ಪರೀಕ್ಷೆಯಲ್ಲಿ ಉತ್ಕೃಷ್ಟವಾಗಿದೆ

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ಸೈಂಟ್ ಮೇರಿಸ್ ಸಮೂಹ ವಿದ್ಯಾಸಂಸ್ಥೆಗಳಲ್ಲಿ ಸಂಚಾಲಕರ ಹುಟ್ಟು ಹಬ್ಬಆಚರಣೆ

ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭ

ದೋರ್ನಹಳ್ಳಿ ಮೈಸೂರಿನಲ್ಲಿ ನಡೆದ ಸಂತ ಅಂತೋನಿಯವರ ವಾರ್ಷಿಕ ಹಬ್ಬದ ಪ್ರಯುಕ್ತ ನೊವೆನಾದ ಎರಡನೇ ದಿನದ ಭಕ್ತಿ ಪೂರ್ವಕ ನೊವೆನ / Second day of Devotion preceding Annual Feast of St Anthony held at Dornahalli Mysore

ಐವನ್ ಡಿಸೋಜ ಅವಿರೋಧವಾಗಿ ಆಯ್ಕೆ – ವಿಧಾನ ಪರಿಷತ್ ನ ಸದಸ್ಯತ್ವದ ಪ್ರಮಾಣ ಪತ್ರ ಪ್ರಮಾಣ ಪತ್ರ ಹಸ್ತಾಂತರ

ಶ್ರೀನಿವಾಸಪುರ ತಾಲೂಕಿನ ವಿವಿಧೆಡೆ ವಿಶ್ವಪರಿಸರ ದಿನಾಚರಣೆ

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರಿಗೆ ಒಂದು ದಿನದ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದೆ

ಕೋಲಾರ: ಜುಲೈ 1ರ ಪತ್ರಿಕಾ ದಿನಾಚರಣೆ ಅಂಗವಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯನಿರತ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರಿಗೆ ಒಂದು ದಿನದ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದೆ.

ಪುರುಷ ಪತ್ರಕರ್ತರಿಗೆ ಕ್ರಿಕೆಟ್, ಕಬಡ್ಡಿ ಹಾಗೂ ಹಗ್ಗಜಗ್ಗಾಟ ಹಾಗೂ ಪತ್ರಕರ್ತರ ಕುಟುಂಬದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಮ್ಯೂಸಿಕಲ್ ಚೇರ್, ಮಡಕೆ ಒಡೆಯುವ ಸ್ಪರ್ಧೆ, ಮಡಕೆಯಲ್ಲಿ ಚೆಂಡು ಹಾಕುವ ಸ್ಪರ್ಧೆ ಮತ್ತು ಬಾಯಿಯಲ್ಲಿ ಚಮಚ ಇಟ್ಟುಕೊಂಡು ಅದರಲ್ಲಿ ನಿಂಬೆಹಣ್ಣು ಇಟ್ಟು ನಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತರು ಪಟ್ಟಿಯನ್ನು ಜಿಲ್ಲೆಯ ಆಯಾ ತಾಲೂಕು ಸಂಘಗಳು ಸಿದ್ಧಪಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಜೂನ್ 10ರ ಬುಧವಾರದ ಒಳಗಾಗಿ ರವಾನಿಸಬೇಕು.

ಸ್ಪರ್ಧೆಗಳನ್ನು ಇದೇ 2024ರ ಜೂನ್ 16 ಇಲ್ಲವೆ 23 ರಂದು ಆಯೋಜಿಸಲು ನಿರ್ಧರಿಸಲಾಗಿದ್ದು, ಜಿಲ್ಲಾ ಸಂಘಕ್ಕೆ ಸಲ್ಲಿಸಲು ಪಟ್ಟಿಯನ್ನು ಕ್ರೀಡಾ ಸಮಿತಿಯ ಸಮನ್ವಯ ಸಂಪರ್ಕ ಸದಸ್ಯ ಬಿ.ಎಸ್.ಗಂಗಾಧರ್ ವ್ಯಾಟ್ಸಾಫ್ ಸಂಖ್ಯೆ 9110830279 ನೇರವಾಗಿದಾಖಲೆಗಳನ್ನು ರವಾನಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ. ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.