HOLY ROSARY CHURCH, KUNDAPUR – 450 th JUBILEE SOUVENIR 2021

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಯುಗಾದಿ ಸಂಭ್ರಮ

ವರದಿ:ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಯುಗಾದಿ ಸಂಭ್ರಮ


ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ವತಿಯಿಂದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಘದ ರಂಗಮಂದಿರದಲ್ಲಿ ನಡೆದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಅಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತಾನಾಡಿ ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ, ಸುಖ-ಕಷ್ಟ, ನಲಿವು-ನೋವು ಎಂಬ ಮಾತಿನಂತೆ ಜೇವನದಲ್ಲಿ ಇವೆರಡರ ಸಮಾನ ಇರುವಿಕೆ ಅಗತ್ಯವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ಆದರೆ ಕಷ್ಟಕ್ಕಿಂತ ಸುಖವೇ ಬೇಕು ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನವಂತಾಗಿದೆ. ಆದರೆ ಜೀವನ ಎನ್ನುವುದು ಕಷ್ಟ-ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ ಇವೆರಡು ಒಂದನ್ನೊಂದು ಬಿಟ್ಟಿರಲಾರವು ಎಂದು ಹೇಳಿದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ನಿಕಟ ಪೂರ್ವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಪುಷ್ಪ ಕುಲಾಲ್, ಸುನೀತಾ ಪಿಂಟೋ ಮೊದಲಾದವರು ಉಪಸ್ಥಿತಿತರಿದ್ದರು.

ಶ್ರೀನಿವಾಸಪುರ:ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟನೆ

ವರದಿ: ಶಬ್ಬೀರ್ ಅಹ್ಮದ್

ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ ಉದ್ಘಾಟಿಸಿದರು.

ಶ್ರೀನಿವಾಸಪುರ: ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ ಹೇಳಿದರು.
ಮೈತ್ರಿ ಪಕ್ಷಗಳ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಿದ ಪರಿಣಾಮವಾಗಿ ವೇಮಗಲ್ ಹಾಗೂ ನರಸಾಪುರ ಸಮೀಪ ಕೈಗಾರಿಕೆಗಳು ಸ್ಥಾಪನೆಗೊಂಡಿವೆ. ಅದರಿಂದ ನಿರುದ್ಯೋಗ ನಿವಾರಣೆಗೆ ಸಹಾಯಕವಾಗಿದೆ. ನ್ಯಾರೋಗೇಜ್ ರೈಲು ಮಾರ್ಗವನ್ನು ಬ್ರಾಡ್ ಗೇಜ್ಗೆ ಬದಲಿಸಿದ್ದರಿಂದ ಹೆಚ್ಚಿನ ಜನರಿಗೆ ರೈಲು ಪ್ರಯಾಣ ಸೇವೆ ದೊರೆತಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಜನರಿಗೆ ಕೊಟ್ಟ ಮಾತನ್ನು ಈಡೇರಿಸಿಲ್ಲ. ಬ್ಯಾಂಕ್ ಖಾತೆಗೆ ಹಣ ತುಂಬಲಿಲ್ಲ. ವಿದೇಶಗಳಿಂದ ಕಪ್ಪು ಹಣವನ್ನು ತರಲಿಲ್ಲ. ಉದ್ಯೋಗ ಸೃಷ್ಟಿ ಮಾಡಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವುದರ ಮೂಲಕ ಕೊಟ್ಟ ಮಾತನನ್ನು ಉಳಿಸಿಕೊಂಡಿವೆ ಎಂದು ಹೇಳಿದರು.
ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಮಾತನಾಡಿ, ಕೋಮುವಾದಿ ಬಿಜೆಪಿ ಮುಖಂಡರು ದೇಶಕ್ಕೆ ಧರ್ಮ ಬೋಧಿಸಬೇಕಾಗಿಲ್ಲ. ದೇಶದ ಎಲ್ಲ ಧರ್ಮೀಯರಿಗೂ ಸಂವಿಧಾನ ಸಮಾನವಾದ ಧಾರ್ಮಿಕ ಹಕ್ಕು ನೀಡಿದೆ. ಹಿಂದೂಗಳ ಮನಸ್ಸನ್ನು ಭಾವನಾತ್ಮಕವಾಗಿ ಕೆಡಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿಗೆ ಮತದಾರರು ಪಾಠ ಕಲಿಸಬೇಕು ಎಂದು ಹೇಳಿದರು.
ಎಲ್.ಗೋಪಾಲಕೃಷ್ಣ ಮಾತನಾಡುವಾಗ ಗಳಗಳನೆ ಅತ್ತು ಸಭಿಕರಿಗೆ ಅಚ್ಚರಿ ಮೂಡಿಸಿದರು. ಹೆಚ್ಚಿನ ಸಂಖ್ಯೆಯ ಜನ ಬಂದಿರುವುದರಿಂದ ಸಂತೋಷ ತಡೆಯಲಾಗದೆ ಅಳು ಬಂದಿತು ಎಂದು ಹೇಳಿದರು.
ಮಾಲೂರು ಶಾಸಕ ನಂಜೇಗೌಡ ಮಾತನಾಡಿ, ಕೆ.ಎಚ್.ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏಳು ಬಾರಿ ಗೆಲುವು ಸಾಧಿಸುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಉಳಿಸಿ ಬೆಳೆಸಿದ್ದಾರೆ. ಇಲ್ಲಿನ ಮತದಾರರು ಎಂದೂ ಬಿಜೆಪಿಗೆ ಮಣೆ ಹಾಕಿಲ್ಲ. ಹಾಗಾಗಿ ಈ ಸಲ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿರುವ ಕೆ.ಎಚ್.ಮುನಿಯಪ್ಪ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಬುಧವಾರ ಕಾಗ್ರೆಸ್ ಪಕ್ಷದ ಎರಡು ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿಯನ್ನು ಪ್ರಸ್ತಾಪಿಸಿದ ಅವರು, ಅಂಥ ಘಟನೆ ನಡೆಯಬಾರದಿತ್ತು. . ಸಣ್ಣಪುಟ್ಟ ಭಿನ್ನಾಭಿಪ್ರಾಯಗನ್ನು ಸರಿಪಡಿಸಿಕೊಳ್ಳಬೇಕು. ಚುನಾವಣೆಗೆ ಒಟ್ಟಾಗಿ ಹೋಗಬೇಕು. ಮೈತ್ರಿ ಧರ್ಮ ಪಾಲನೆಯಾಗಬೇಕು ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ವೆಂಕಟಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್, ಮುಖಂಡರಾದ ಜಮೀರ್ ಪಾಷ, ಎನ್.ಜಿ.ಬ್ಯಾಟಪ್ಪ ಬಿ.ಜಿ.ಸೈಯದ್ ಖಾದರ್, ಸಭೆಯಲ್ಲಿ ಮಾತನಾಡಿದರು.
ಮುಖಂಡರಾದ ಶೇಷಾಪುರ ಗೋಪಾಲ್, ಜಯದೇವ್, ನವೀನ್ ಕುಮಾರ್, ಟಿಎಂಬಿ ಮುಕ್ತಿಯಾರ್, ಅನ್ನೀಸ್ ಅಹ್ಮದ್, ಅಶ್ವತ್ಥರೆಡ್ಡಿ, ರಾಮಕೃಷ್ಣಾರೆಡ್ಡಿ, ವೆಂಕಟಾಚಲಪತಿ, ಕುಮಾರ್, ಸತ್ಯನಾರಾಯಣ, ರಾಮಮೂರ್ತಿ ಜಯಣ್ಣ, ಕವಿತ, ಮಂಜು, ನಂಜುಂಡಗೌಡ, ಮುಖೇಶ್, ಮಹಮದ್ ಷರೀಫ್, ಬೈಚಪ್ಪ, ಇದ್ದರು.

ಗೋ ಬ್ಯಾಕ್ ಶೋಬಾ ಅಭಿಯಾನ ಯಶಸ್ವಿಗೊಳಿಸೋಣ.- ಪ್ರಮೋದ್ ಮಧ್ವರಾಜ್

ಗೋ ಬ್ಯಾಕ್ ಶೋಬಾ ಅಭಿಯಾನ ಯಶಸ್ವಿಗೊಳಿಸೋಣ.- ಪ್ರಮೋದ್ ಮಧ್ವರಾಜ್ 

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಿಆರ್‌ಝಡ್ ಸಮಸ್ಯೆ, ಕಸ್ತೂರಿ ರಂಗನ್ ವರದಿ ಸಮಸ್ಯೆ, ಡೀಮ್ಡ್ ಫಾರೆಸ್ಟ್ ಸಂತ್ರಸ್ತರ ಸಮಸ್ಯೆ, ಕಾಫಿ ಅಡಿಕೆ ಬೆಳೆಗಾರರ ಸಮಸ್ಯೆ ಮುಂತಾದ ಜ್ವಲಂತ ಸಮಸ್ಯೆಗಳಿದ್ದಾಗ್ಯೂ ಸಂಸದೆ ಶೋಬಾ ಕರಂದ್ಲಾಜೆಯವರು ಕಳೆದ ಐದು ವರ್ಷಗಳಲ್ಲಿ ಜನಸಾಮಾನ್ಯರ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಒಂದೇ ಒಂದು ದಿನವೂ ಪ್ರಯತ್ನಿಸಿಲ್ಲ. ಕೇವಲ ಪ್ರಚೋದನಾಕಾರಿ ಬಾಷಣ ಮಾಡುವ ಮೂಲಕ ಈ ನೆಲದ ಸೌಹಾರ್ಧತೆಯನ್ನು ಆಕೆ ಕೆಡಿಸಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಆಕೆಯ ವಿರುದ್ಧ ಬಿಜೆಪಿಗರೆ ಗೋಬ್ಯಾಕ್ ಶೋಬಾ ಅಭಿಯಾನ ಆರಂಬಿಸಿದ್ದರು. ಶತಾಯಗತಾಯ ಆಕೆಗೆ ಸೀಟು ಕೊಡಲೇಬಾರದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಿಗೆ ಪ್ರದಾನಿ ಮೋದಿಯವರಿಗೆ ಟ್ವೀಟ್ ಅಭಿಯಾನ ಕೂಡಾ ಮಾಡಿದ್ದರು. ಆದರೂ ಆಕೆ ಟಿಕೇಟು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆಕೆಗೆ ತಾನು ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ ಎಂದು ಅರಿವಾಗಿದೆ. ಆ ಕಾರಣಕ್ಕಾಗಿ ಆಕೆ ನನಗೆ ಓಟು ಕೊಡಬೇಡಿ, ಮೋದಿಗೆ ಓಟು ಕೊಡಿ ಎನ್ನ ತೊಡಗಿದ್ದಾರೆ. ಈ ಕ್ಷೇತ್ರದ ಜನ ವಾರಣಾಸಿಯಲ್ಲಿ ಸ್ಪರ್ಧೆ ಮಾಡಿರುವ ಮೋದಿಯವರ ಹತ್ತಿರ ಹೋಗಿ ಹೇಳಲು ಸಾಧ್ಯವೇ? ಸಾಧ್ಯವಿಲ್ಲ! ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಹಾಗಾಗಿ ನಾವು ಈ ಬಾರಿ ಶೋಬಾ ಕರಂದ್ಲಾಜೆಯವರನ್ನು ಸೋಲಿಸಬೇಕಾಗಿದೆ. ಸೋಲಿಸುವ ಮೂಲಕ ಅವರ ಪಕ್ಷದವರೆ ಆರಂಬಿಸಿದ ಗೋಬ್ಯಾಕ್ ಶೋಬಾ ಚಳವಳಿಯನ್ನು ಯಶಸ್ವಿ ಗೊಳಿಸಬೇಕಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಆಭ್ಯರ್ಥಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಇಂದು ಕುಂದಾಪುರದ ಆರೆನ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಜಿಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಮಮತಾ ಗಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ, ಕೆಪಿಸಿಸಿ ಐ.ಟಿ ಸೆಲ್ ರಾಜ್ಯ ಉಪಾಧ್ಯಕ್ಷ ಸನ್ಮತ್ ಹೆಗ್ಡೆ, ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ ವಂದಿಸಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :  ಪರಿಸರವನ್ನು “ಕೂಲ್” ಮಾಡಲು ಗಿಡ ನೆಡುವ ಕಾರ್ಯಕ್ರಮ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :  ಪರಿಸರವನ್ನು “ಕೂಲ್” ಮಾಡಲು ಗಿಡ ನೆಡುವ ಕಾರ್ಯಕ್ರಮ


“ಏಪ್ರಿಲ್ ಫೂಲ್” ದಿನ “ಫೂಲ್” ಆಗ್ಬೇಡಿ ಬನ್ನಿ ಪರಿಸರವನ್ನು “ಕೂಲ್” ಮಾಡುವ….! ನಮ್ಮ ಪರಿಸರವನ್ನು ನಾವೆಲ್ಲರೂ ಜೊತೆ ಸೇರಿ ಉಳಿಸಬೇಕಾಗಿದೆ, ನಮ್ಮ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸದುದ್ದೇಶವನ್ನಿಟ್ಟುಕೊಂಡು ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.), ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಉಡುಪಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಹಯೋಗದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಗಿಡ ನೆಡುವ ಮೂಲಕ ವಿಶೇಷ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಅಧ್ಯಕ್ಷ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಕೋಶಾಧಿಕಾರಿ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ ಮೊದಲಾದವರು ಉಪಸ್ಥಿತಿತರಿದ್ದರು.

ಶಿರ್ವಾ ವಾರಾಡ್ಯಾ ಮಟ್ಟಾರ್ ಅಂತರಾಷ್ಟ್ರೀಯ ಸ್ತ್ರೀಯಾಂಚೊ ದೀಸ್: ಜರ್ ಸ್ತ್ರೀಯೊ ಸಂಘಟಿತ್ ಜಾತಿತ್ ತರ್, ಸಮಾಜ್ ಪ್ರಗತಿ ದೆಖ್ತಾ

ಶಿರ್ವಾ ವಾರಾಡ್ಯಾ ಮಟ್ಟಾರ್ ಅಂತರಾಷ್ಟ್ರೀಯ ಸ್ತ್ರೀಯಾಂಚೊ ದೀಸ್: ಜರ್ ಸ್ತ್ರೀಯೊ ಸಂಘಟಿತ್ ಜಾತಿತ್ ತರ್, ಸಮಾಜ್ ಪ್ರಗತಿ ದೆಖ್ತಾ

 

ಉಡುಪಿ, ಎ.೨. ’ಜರ್ ಸ್ತ್ರೀಯೊ ಸಂಘಟಿತ್ ಜಾತಿತ್ ತರ್ ಸಮಾಜ್ ಪ್ರಗತಿ ದೆಖ್ತಾ’ ಮ್ಹಣನ್ ಸಂದೇಶ್ ದಿಲೊ. ಶಿರ್ವಾ ವಾರಾಡ್ಯಾ ಮಟ್ಟಾರ್ ಶಿರ್ವಾ ಇಗರ್ಜೆಚ್ಯಾ ಸಾವುದ್ ಸಭಾಸಾಲಾಂತ್ ಆಯ್ತಾರಾ ಮಾರ್ಚ್ 31 ವೇರ್ ಶಿರ್ವಾ ವಾರಾಡೊ ಸ್ತ್ರೀ ಸಂಘಟನ್ ಆನಿ ಸ್ವಸಹಾಯ್ ಪಂಗ್ಡಾ ಥಾವ್ನ್ ಆಸಾ ಕೆಲ್ಯಾ ಅಂತರಾಷ್ಟ್ರೀಯ ಸ್ತ್ರೀಯಾಂಚ್ಯಾ ದೀಸಾ ಅಧ್ಯಕ್ಷ್ ಪಣ್ ಘೆತ್ಲ್ಯಾ ಶಿರ್ವಾ ಸಾವುದ್ ಮಾಯ್ ಫಿರ್ಗಜೆಚೊ ವಿಗಾರ್ ತಶೆಂ ಶಿರ್ವಾ ವಾರಾಡೊ ವಿಗಾರ್ ವಾರ್ ಭೋ|ಮಾ|ಬಾ|ಡೆನಿಸ್ ಡೆಸಾನ್ ಮ್ಹಳೆಂ. ತಾಣಿ ಥೊಡಿಂ ದ್ರಷ್ಟಾಂತ್ ಮುಕಾರ್ ದವ್ರುನ್ ’ಸ್ತ್ರೀಯೊ ಕುಟ್ಮಾಂತ್, ಸಮಾಜೆಂತ್ ತ್ಯಾಗ್ ಸೆವಾ ದಿಂವ್ಚ್ಯಾ ಸ್ತ್ರೀಯಾಂಕ್, ತಶೆಂಚ್ ಹೆಂ ಕಾರ್ಯೆ ಭೋವ್ ಉತ್ತಿಮ್ ಥರಾನ್ ಮಾಂಡುನ್ ಹಾಡ್ಲ್ಯಾಕ್ ಶಾಭಾಸ್ಕಿ ಪಾಟಯ್ಲಿ

    ಉಡುಪಿ ದಿಯೆಸೆಜ್ ಸ್ತ್ರೀ ಆಯೋಗಾಚಿ ನಿರ್ದೇಶಕಿ ಸಂಪದಾಚಿ ಸಂಯೋಜಕಿ ಭಯ್ಣ್ ಜಾನೆಟ್ ಫೆರ್ನಾಂಡಿಸ್ ಹಾಣಿ ದಿವೊ ಪೆಟೊನ್ ಕಾರ್ಯೆ ಉಗ್ತಾವಣ್ ಕರ್ನ್ ’ಸ್ತ್ರೀಯಾಂಕ್ ಏಕ್ ದೀಸ್ ಮಾತ್ರ್ ಮಾನ್ ನ್ಹಯ್, ಹರ್ಯೆಕ್ ದೀಸ್ ಮಾನ್ ಮೆಳೊಂಕ್ ಜಾಯ್’ ಮ್ಹಣನ್ ತಾಣಿ ಸಂದೇಶ್ ದಿಲೊ.ಶಿರ್ವಾ ವಾರಾಡೊ ಕಥೊಲಿಕ್ ಸ್ತ್ರೀ ಸಂಘಟನಾಚೊ ಅತ್ಮಿಕ್ ನಿರ್ದೇಶಕ್ ಮಾ|ಬಾ|ರೋಕ್ ಡಿಸೋಜಾನ್ ದೆವಾಚ್ಯಾ ಉತ್ರಾಂಚ್ಯಾ ನಿಯಾಳ ಸವೆಂ ಮಾಗ್ಣ್ಯಾ ವಿಧಿ ಚಲಂವ್ನ್ ವೆಲಿ. ಕೇಂದ್ರಿಯಾ ಕಥೊಲಿಕ್ ಸ್ತ್ರೀ ಸಂಘಟನಾಚಿ ಕಾರ್ಯದರ್ಶಿ ಕೊಟಿಲ್ಡಾ ಡಿಸೋಜಾನ್ ’ಸ್ತ್ರೀ ಸೊಸ್ಣಿಕಾಯೆಚಿ ಜಾವ್ನಾಸೊನ್, ತಿ ಕುಟ್ಮಾಂತ್ ಸಮಾಜೆಂತ್ ಸದಾಂಚ್ ನಿಸ್ವಾರ್ಥ್ ಸೆವಾ’ ದಿತಾಂ ಮ್ಹಣನ್ ಶುಭಾಷಯ್ ಪಾಟಯ್ಲೆಂ.

   ಸಂಪನ್ಮೂಳ್ ವ್ಯಕ್ತಿ ಜಾವ್ನ್ ಪ್ರೊಫೆಸರ್ ಹಿಲ್ಡಾ ರೊಡ್ರಿಗಸ್ ಹಿಣೆ ’ ಕಥೊಲಿಕ್ ಸ್ತ್ರೀ ಜಾವ್ನ್ ಜಲ್ಮಾಲ್ಲೆ ಆಮ್ಚೆಂ ವರ್ತೆ ಭಾಗ್, ಸ್ತ್ರೀಯೆನ್ ಪಯ್ಲೆಂ ಆಪ್ಲ್ಯಾ ವಿಶಿಂ ಚಿಂತಿಜಾಯ್, ಹಾಂವ್ ಕಶಿಂ, ಮೊಜೆಂ ಕುಟಾಮ್ ಕಶೆಂ ಆಸಾ, ಮುಖ್ಲ್ಯಾ ೨೫ ವರ್ಸಾಂ ಉಪ್ರಾಂತ್ ಆಮ್ಚೆ ಸ್ಥಾನ್ ಮಾನ್ ಕಶೆಂ ಆಸೊಂಕ್ ಪುರೊ ಮ್ಹಳ್ಯಾ ವಿಶಿಂ ಚಿಂತಾಪ್ ಆಟಂವ್ಕ್ ಉಲೊ ದಿಲೊ. ತಿಕಾ ವಿಗಾರ್ ವಾರ್ ಭೋ|ಮಾ|ಬಾ|ಡೆನಿಸ್ ಡೆಸಾನ್ ಸನ್ಮಾನ್ ಕೆಲೊ.

     ವಾರಾಡ್ಯಾಚ್ಯಾ ಬಾರಾ ಘಟಕಾಂಚ್ಯಾ ಕಾರ್ಯದರ್ಶಿಂಕ್ ಆನಿ ಎನಿಮೇಟರ್ ಜೆಸಿಂತಾ ಡೆಸಾಕ್ ಫುಲಾಂ ದಿಂವ್ನ್ ಮಾನ್ ಕೆಲೊ. ವಾರಾಡ್ಯಾಚ್ಯಾ ಹರ್ಯೇಕ್ ಘಟಕಾಚ್ಯಾನಿಂ ಸಾಂಸ್ಕ್ರತಿಕ್ ಕಾರ್ಯೆ ಪ್ರದರ್ಶನ್ ಕೆಲೆಂ.  ವಾರಾಡೊ ಕಥೊಲಿಕ್ ಸ್ತ್ರೀ ಸಂಘಟನಾಚಿ ಅಧ್ಯಕ್ಷಿಣ್ ಟ್ರೀಜಾ ಮಚಾದೊನ್ ಸ್ವಾಗತ್ ಮಾಗ್ಲೊ.  ವಾರಾಡೊ ಉಪಾಧ್ಯಕ್ಷಿಣ್ ಸುನೀತಾ ಮಿನೇಜೆಸಾನ್ ಧನ್ಯವಾದ್ ಪಾಟಯ್ಲೆಂ. ವೀಡಾ ಡಿಸೋಜಾ ಪಿಲಾರ್ ಆನಿ ಟ್ರೀಜಾ ಕಾರ್ಡೊಜಾ ಬೆಳ್ಮಣ್ ಹಾಣಿ ಕಾರ್ಯೆ ನಿರೂಪಣ್ ಕೆಲೆಂ.

 

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಉದ್ಯೋಗ ಮಾಹಿತಿ ಕಾರ್ಯಾಗಾರ

ವರದಿ:ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಉದ್ಯೋಗ ಮಾಹಿತಿ ಕಾರ್ಯಾಗಾರ


ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ವತಿಯಿಂದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಘದ ರಂಗಮಂದಿರದಲ್ಲಿ ಉದ್ಯೋಗ ಮಾಹಿತಿ ಕಾರ್ಯಾಗಾರ ಆದಿತ್ಯವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆದಿಂಜೆ ಅರ್ಜುನ್ ಭಾಗವಹಿಸಿ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ವಹಿಸಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಅಧ್ಯಕ್ಷ ಸಂದೀಪ್ ವಿ. ಪೂಜಾರಿ, ವಿರೇಂದ್ರ ಆರ್.ಕೆ., ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಘದ ನಿಕಟ ಪೂರ್ವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಕೋಶಾಧಿಕಾರಿ ಹರಿಪ್ರಸಾದ್ ಆಚಾರ್ಯ, ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ, ಸದಸ್ಯರಾದ ಅಬ್ಬನಡ್ಕ ಸತೀಶ್ ಪೂಜಾರಿ, ಮಂಜುನಾಥ ಆಚಾರ್ಯ, ಸುನೀತಾ ಮರಿಯಾನ್ ಪಿಂಟೋ, ಸ್ಮಿತಾ ಸುರೇಶ್ ಪೂಜಾರಿ ಮೊದಲಾದವರು ಉಪಸ್ಥಿತಿತರಿದ್ದರು.

ಕುಂದಾಪುರ ಕಾಂಗ್ರೆಸ್: ಎಪ್ರಿಲ್ 02 ಕಾರ್ಯಕರ್ತರ ಸಭೆ.

ವರದಿ: ಚಂದ್ರಶೇಖರ್ ಶೆಟ್ಟಿ

ಕುಂದಾಪುರ ಕಾಂಗ್ರೆಸ್: ಎಪ್ರಿಲ್ 02 ಕಾರ್ಯಕರ್ತರ ಸಭೆ.

ಎಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಅಂಗವಾಗಿ ಎಪ್ರಿಲ್ 02 ಮಂಗಳವಾರ ಮಧ್ಯಾಹ್ನ ಗಂಟೆ 2.30ಕ್ಕೆ ಕುಂದಾಪುರದ ಆರ್‌.ಎನ್‌ ಶೆಟ್ಟಿ ಹಾಲ್‌ನಲ್ಲಿ ಕಾರ್ಯಕರ್ತರ, ಜನಪ್ರತಿನಿಧಿಗಳ ಹಾಗೂ ಪದಾದಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಲ್ಯಾಡಿ ಶಿವರಾಮ ಶೆಟ್ಟಿ, ಬಿ ಹಿರಿಯಣ್ಣ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವ: ಪ್ರತಿಯೊಂದು ಮಗು ದೇವರ ವರವಾಗಿದೆ

ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವ: ಪ್ರತಿಯೊಂದು ಮಗು ದೇವರ ವರವಾಗಿದೆ


ಕುಂದಾಪುರ, ಮಾ.30: ‘ಪ್ರತಿಯೊಂದು ಮಗು ಒಂದು ದೇವರ ವರವಾಗಿದೆ, ಮಕ್ಕಳನ್ನು ತಮ್ಮ ಮಕ್ಕಳಂತ್ತೆ, ಕಾಳಜಿ ವಹಿಸಿ, ಪ್ರೀತಿಸಿ ಅವರನ್ನು ಈಗಿನ ಕಾಲಕ್ಕೆ ತಕ್ಕಂತೆ ಶಿಕ್ಷಣದ ಜೊತೆ ಸಂಸ್ಕ್ರತಿಯನ್ನು ಹೇಳಿಕೊಟ್ಟರೆ, ಮಗುವಿನಲ್ಲಿ ಪ್ರಗತಿ ಕಾಣುತ್ತದೆ’ ಎಂದು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವಂ|ಭಗಿನಿ ಜೊಯಿಸ್ಲಿನ್ ಹೇಳಿದರು. ಅವರು ಕುಂದಾಪುರ ಹೋಲಿ ರೋಜರಿ ಸಭಾ ಭವನದಲ್ಲಿ (30-3-19) ನೆಡೆದ ರೋಜರಿ ಕಿಂಡರ್ ಗಾರ್ಟನ್ ಮಕ್ಕಳ ಘಟಿಕೋತ್ಸವದ ದಿನ ಮಾತಾನಾಡುತಿದ್ದರು ‘ಅಂಥ ಪ್ರಗತಿ ನಿಮ್ಮ ಮಕ್ಕಳಲ್ಲಿ ಮುಂದೆಯು ಕಾಣ ಬೇಕಿದ್ದರೆ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸ ಬೇಕು, ಹಾಗೇ ನಮ್ಮ ಶಾಲೆ ಕಳೆದ ಕೆಲವು ವರ್ಷಗಳಿಂದ ಉತ್ತಮ ಹೆಸರನ್ನು ಗಳಿಸಿಕೊಂಡಿದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮೇರಿಸ್ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿ ಉತಿರ್ಣತೆಯ ಪ್ರಮಾಣ ಪತ್ರವನ್ನು ಮಕ್ಕಳಿಗೆ ನೀಡಿ ‘ಎನೂ ಅರಿಯದ ಮಕ್ಕಳು ಇಲ್ಲಿ ಕಲಿತು ಜಾಣೆಯರಾಗಿದ್ದಾರೆ, ಇಲ್ಲಿ ಸಣ್ಣ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಥರಹದ ತರಬೇತಿಯನ್ನು ನೀಡುತ್ತೇವೆ, ಮುಂದೆಯು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ನಿಮ್ಮ ಮಕ್ಕಳನ್ನು ಭರ್ತಿ ಮಾಡಿದರೆ, ಇನ್ನೂ ಉತ್ತಮ ಪ್ರಗತಿ ನಿಮ್ಮ ಮಗುವಿಗೆ ದೊರಕುತ್ತದೆ’ ಎಂದು ಹೇಳಿದರು. ಕಲಿಕೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಗೌರವಿಸಲಾಯಿತು. ರೋಜರಿ ಕಿಂಡರ್ ಗಾರ್ಟನ್ ಮುಖ್ಯೋಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು. ಶಿಕ್ಷಕಿ ಅನ್ನಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಅಭಿಯಾನ

ವರದಿ:ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಅಭಿಯಾನ


ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ವತಿಯಿಂದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಘದ ರಂಗಮಂದಿರದ ಬಳಿ ಸ್ವಚ್ಛತಾ ಅಭಿಯಾನ & ಶ್ರಮದಾನ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್‍ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಸುರೇಶ್ ಪೂಜಾರಿ ಕಾಸ್ರಬೈಲು, ಪೂರ್ವಾಧ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷರಾದ ಹರೀಶ್ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಸದಸ್ಯರಾದ ಲೀಲಾ ಪೂಜಾರಿ, ಹರಿಣಾಕ್ಷಿ ಪೂಜಾರಿ, ಪ್ರೇಮಾ ಪೂಜಾರಿ, ಸುನೀತಾ ಪಿಂಟೋ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಆರತಿ ಕುಮಾರಿ, ಸುನಿಲ್ ಕುಲಾಲ್ ಮೊದಲಾದವರು ಉಪಸ್ಥಿತಿತರಿದ್ದರು.