HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ ಸಂತ ಮೇರಿಸ್  ಕನ್ನಡ ಪ್ರೌಢ ಶಾಲೆಯ ದುರಸ್ತಿಗಾಗಿ: ಶ್ರಮದಾನ

ಕುಂದಾಪುರ ಸಂತ ಮೆರಿಸ್ ಕನ್ನಡ ಪ್ರೌಢ ಶಾಲೆಯ ದುರಸ್ತಿಗಾಗಿ: ಶ್ರಮದಾನ


ಕುಂದಾಪುರ, ಎ.13: ಕಳೆದ ವರ್ಷ ಸ್ವರ್ಣ ಮಹತ್ಸೋವನ್ನು ಆಚರಿಸಿದ ಕುಂದಾಪುರ ಸಂತ ಮೇರಿಸ್, ಕನ್ನಡ ಮಾಧ್ಯಮ ಶಾಲೆಯ ಕಟ್ಟಡಕ್ಕೆ ಸುಮಾರು ಸುಮಾರು ಐವತ್ತು ವರ್ಷಗಳಿಕ್ಕಿಂತಲು ಹಳೆಯದಾದ ಕಟ್ಟಡವಾಗಿದ್ದು. ಅದೀಗ ದುರಸ್ತಿ ಮಾಡುವ ಸಮಯ ಬಂದಿದ್ದರಿಂದ ದುರಸ್ತಿ ಕಾರ್ಯ ಆರಂಭವಾಗಿದ್ದು, ಅದಕ್ಕಾಗಿ ಶಾಲೆಯ ಹಳೆ ವಿದ್ಯಾಥಿಗಳು, ಈಗಿನ ವಿದ್ಯಾರ್ಥಿಗಳು, ಶಾಲೆಯ ಹಿತಚಿಂತಕರು ಮತ್ತು ಕುಂದಾಪುರ ಇಗರ್ಜಿಯ ಬಂದುಗಳು ಶ್ರಮದಾನವನ್ನು ಇದೇ ಸುಕ್ರವಾರದಂದು ಶಾಲೆಗಾಗಿ ಶ್ರಮದಾನವನ್ನು ಆರಂಭಿಸಿದರು.
ಉಡುಪಿ ಧರ್ಮಪ್ರಾಂತ್ಯ ಕಥೊಲಿಕ್ ವಿಧ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವ|ಸ್ಟ್ಯಾನಿ ತಾವ್ರೊ ಪ್ರಾರ್ಥನೆ ಸಲ್ಲಿಸಿ ಶ್ರಮದಾನಕ್ಕೆ ಚಾಲನೆಯನ್ನು ನೀಡಿದರು. ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ ಶುಭ ಕೋರಿದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಸ್ವರ್ಣ ಮಹತ್ಸೋವ ಸಮಿತಿಯ ಅಧ್ಯಕ್ಷ ಇದೇ ಶಾಲೆಯ ನಿವ್ರತ್ತ ಮುಖ್ಯೋಪಾಧ್ಯಾಯ ಲುವಿಸ್ ಜೆ. ಫೆರ್ನಾಂಡಿಸ್, ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು, ಶಿಕ್ಷರರು, ಶಾಲಾ ಶಿಕ್ಷಕೇತರ ಸಿಬಂದಿ, ಶಾಲೆಯ ಹಿತಚಿಂತಕರು ಮತ್ತು ಕುಂದಾಪುರ ಇಗರ್ಜಿಯ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶ್ರಮದಾನದಲ್ಲಿ ಭಾಗಿಯಾದರು.

ಶ್ರೀನಿವಾಸಪುರ ಹೆಚ್. ನಲ್ಲಪಲ್ಲಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ: ಸರ್ಕಾರದ ಪರಿಹಾರಕ್ಕಾಗಿ ಮನವಿ

ವರದಿ: ಶಬ್ಬೀರ್ ಅಹ್ಮದ್

ಶ್ರೀನಿವಾಸಪುರ ಹೆಚ್. ನಲ್ಲಪಲ್ಲಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ: ಸರ್ಕಾರದ ಪರಿಹಾರಕ್ಕಾಗಿ ಮನವಿ


ಶ್ರೀನಿವಾಸಪುರ: ಹೆಚ್. ನಲ್ಲಪಲ್ಲಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿ ಮನೆಯ ಛಾವಣಿ, ಗೃಹ ಉಪಯೋಗ ವಸ್ತುಗಳು, ಒಂದು ಮಾವಿನ ಮರ, 2 ತೆಂಗಿನ ಮರ ಸೇರಿ ಸುಮಾರು 2 ಲಕ್ಷ ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ ಎಂದು ರೈತ ಮುನಿನಾರಾಯಣಪ್ಪ ಸರ್ಕಾರದ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ಪಟ್ಟಣದ ಹೊರಭಾÀಗದಲ್ಲಿರುವ ನಲ್ಲಪಲ್ಲಿ 21/1 ಸರ್ವೆ ನಂಬರಿನಲ್ಲಿ ಮುನಿನಾರಾಯಣಪ್ಪ, ಸುಮಾರು 40ವರ್ಷಗಳಿಂದ ಬೋರ್ ವೆಲ್ ಹಾಕಿಕೊಂಡು ಅಲ್ಲಿಯೆ ಮನೆಯನ್ನು ನಿರ್ಮಿಸಿಕೊಂಡು ಕೃಷಿ ಕೆಲಸಗಳನ್ನು ಮಾಡಿಕೊಂಡು ಅಲ್ಲಿ ತಂಗಲಾಗಿದ್ದು, ಮನೆಯ ಮುಂಬಾಗ 30 ವರ್ಷಗಳ ಬಾದಾಮಿ ಮಾವಿನ ಮರ, ಮನೆಯ ಹಿಂದಗಡೆ 2 ತೆಂಗಿನಮರಗಳು ಇದ್ದು, ಗುರುವಾರ ಸುಮಾರು 3.30 ಗಂಟೆಯಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿ ಮನೆಯ ಮುಂಬಾಗದ ಮೇಲ್ಛಾವಣೆ ಸುಟ್ಟು ಬೃಹದಾಕಾರದ ಸುಮಾರು 1500 ಕೆ.ಜಿ. ಮಾವಿನ ಕಾಯಿ ಇರುವ ಮರ, ತೆಂಗಿನ ಮರ, ಹುಡ್ ವರ್ಕ್ ಕೆಲಸಕ್ಕೆ ಬೇಕಾಗಿರುವ ಮರದ ದಿಮ್ಮಿಗಳು ಸುಡುತ್ತಿದ್ದ ವೇಳೆ, ನೆರೆಹೊರೆಯವರ ಮಾಹಿತಿಯಿಂದ ರೈತರು ಕಂಗಾಲಾಗಿ ಕೂಡಲೆ ಅಗ್ನಿ ಶಾಮಕ ದಳಕ್ಕೆ ಮನವಿ ಮಾಡಿದಾಗ, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಉರಿಯುತ್ತಿರುವ ಬೆಂಕಿಯನ್ನು ಆರಿಸಿ ಹೆಚ್ಚು ಆಗುತ್ತಿರುವ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಸ್ಥಳಪರಿಶೀಲಿಸಿ ವರಧಿಯನ್ನು ಸಂಗ್ರಹಿಸಿದ್ದು ಸರ್ಕಾರದಿಂದ ಬರುವ ಪರಿಹಾರವನ್ನು ದೊರಕಿಸಿಕೊಡಬೇಕಾಗಿ ನೊಂದ ರೈತ ಮುನಿನಾರಾಯಣಪ್ಪ ಮತ್ತು ಮಗ ಸೊಣ್ಣೆಗೌಡ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ದೇಶ ಅಭಿವ್ರದ್ದಿಯಾಗಲ್ಲ: ಬಿಎಸ್‍ಪಿ ಪಕ್ಷ ಆಡಳಿತಕ್ಕೆ ಬರಬೇಕು

ವರದಿ: ಶಬ್ಬೀರ್ ಅಹ್ಮದ್

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ದೇಶ ಅಭಿವ್ರದ್ದಿಯಾಗಲ್ಲ: ಬಿಎಸ್‍ಪಿ ಪಕ್ಷ ಆಡಳಿತಕ್ಕೆ ಬರಬೇಕು


ಶ್ರೀನಿವಾಸಪುರ: ಸುಮಾರು 70 ವರ್ಷಗಳ ಯು.ಪಿ.ಎ. ಸರ್ಕಾರ ಮತ್ತು ಸುಮಾರು 15 ವರ್ಷಗಳ ಬಿ.ಜೆ.ಪಿ. ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸಿದರೂ ನಮ್ಮ ದೇಶ ಅಭಿವೃದ್ದಿಯತ್ತ ಸಾಗಿಲ್ಲ, ಈ ಬಾರಿ ಮಾಯಾವತಿಯವರು ಪ್ರಧಾನಮಂತ್ರಿಗಳಾಗುವುದು ಶತಸಿದ್ದವಾಗಿದ್ದು, ಬಿ.ಎಸ್ ಪಿ. ಪಕ್ಷವನ್ನು ಬಲಪಡಿಸಲು ಈ ಕ್ಷೇತ್ರದ ಅಭ್ಯರ್ಥಿ ಎಂ.ಜಿ. ಜಯಪ್ರಸಾದ್‍ರನ್ನು ಮತದಾರರು ಬೆಂಬಲಿಸಬೇಕೆಂದು ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ.
ಪಟ್ಟಣದಲ್ಲಿ ಬಿ.ಎಸ್.ಪಿ. ಪಕ್ಷದ ವತಿಯಿಂದ ಚುನಾವಣಾ ಪ್ರಚಾರದ ಸಲುವಾಗಿ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಮುನಿಯಪ್ಪ, ನಮ್ಮ ದೇಶವನ್ನು ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್ ಆಡಳಿತ ನಡೆಸಿದ್ದು, ಜೊತೆಗೆ ಬಿ.ಜೆ.ಪಿ.ಪಕ್ಷವೂ ಸಹ ಆಡಳಿತ ನಡೆಸಿದೆ, ಆದರೂ ನಮ್ಮ ದೇಶದ, ನಮ್ಮ ರಾಜ್ಯದಲ್ಲಿ ನಿರುಧ್ಯೋಗ, ಬಡತನ, ಮೂಲಭೂತ ಸೌಲಭ್ಯಗಳು ತಾಂಡವಾಡುತ್ತಿವೆ, ರಾಜ್ಯದಲ್ಲಿ ಕೋಲಾರಜಿಲ್ಲೆ ತುಂಬಾ ಹಿಂದುಳಿದÀ ಜಿಲ್ಲೆಯಾಗಿದ್ದು ಈ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ 7 ಬಾರಿ ಸಂಸದರಾಗಿ 2 ಬಾರಿ ಸಚಿವರಾಗಿ ನಮ್ಮ ಜಿಲ್ಲೆಗೆ ಶಾಸ್ವತವಾದ ಕೊಡುಗೆ ಏನೂ ತಂದಿಲ್ಲ. ನೀರಾವರಿ ಸಮಸ್ಯೆ, ಕೈಗಾರಿಕೆಗಳು, ರೈಲ್ವೆ ಕೋಚ್ ಫ್ಯಾಕ್ಟರಿ, ನಿರುಧ್ಯೋಗ ಸಮಸ್ಯೆ ಇವಾವು ಈಡೇರಲಿಲ್ಲ, ಇದು ಕಾಂಗ್ರೆಸ್ ಪಕ್ಷದ ಆಡಳಿತವಾಗಿದೆ.
ಮೋದಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದ ಹಾಗೆ ಯಾವುದು ನಡೆದಿಲ್ಲ, ರೈತರ ಖಾತೆಗಳಿಗೆ ಹಣ ಜಮ ಮಾಡಿಲ್ಲ, ನಿರುಧ್ಯೋಗ ಸಮಸ್ಯೆ ಹಾಗೆಯೆ ಇದೆ, ನದಿಗಳ ಜೋಡಣೆಯಾಗಿಲ್ಲ, ಬಡವರಿಗೆ ಜಿ.ಎಸ್.ಟಿ. ಯಿಂದ ತೊಂದರೆಯಾಗಿದೆ, ಶ್ರೀಮಂತರಿಗೆ, ಡಿಮಾನಿಟರೈಸಿಂಗ್ ಅನುಕೂಲವಾಗಿದೆ, ಕೇವಲ 5 ವರ್ಷಗಳಲ್ಲಿ ಸುಳ್ಳು ಬರವಸೆಗಳನ್ನು ಹೇಳುತ್ತಾ ಕಾಲವನ್ನು ಕಳೆದಿದೆ, ಇಂತಹ ಮತದಾರ ಬಂದುಗಳು ಕಡಿವಾಣ ಹಾಕಿ ಬದಲಾವಣೆ ತರಬೇಕಾಗಿದೆ ಎಂದರು.
ಮಾಯಾವತಿ ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಪೌರಕಾÀರ್ಮಿಕರನ್ನು ಕಾಯಂ ನೌಕರಿಯಾಗಿ ಮಾಡಿದ್ದು, ಬಡವರಿಗೆ ಸರ್ಕಾರದ ಗೋಮಾಳ ಭೂಮಿಯನ್ನು ಗುರ್ತಿಸಿ ನಿವೇಶನಗಳನ್ನು ಹಂಚಿ ಸಾವಿರಾರು ಸಂಖ್ಯೆಯಲ್ಲಿ ವಸತಿ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಈ ಬಾರಿ ದೇಶದ ಪ್ರಧಾನಿಗಳಾಗುವುದು ಖಚಿತವಾಗಿದ್ದು, ಬಿ.ಎಸ್.ಪಿ. ಪಕ್ಷವನ್ನು ಬಲಪಡಿಸಲು ಎಂಜಿ. ಜಯಪ್ರಸಾದ್ ರನ್ನು ಈ ಕ್ಷೇತ್ರದಿಂದ ಆರಿಸಲು ಮತದಾನ ಬಂದುಗಳು ಆಶೀರ್ವದಿಸಬೇಕೆಂದು ಕೋರಿದರು.
ಬಿ.ಎಸ್.ಪಿ. ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಜಿ. ಜಯಪ್ರಸಾದ್ ಮಾತನಾಡಿ ನಾನು ಇದೆ ಜಿಲ್ಲೆಯವನಾಗಿದ್ದು, ಒಬ್ಬ ನಿವೃತ್ತಿಯಾಗಿದ್ದು, ಈಭಾಗದ ಸಮಸ್ಯೆಗಳನ್ನು ಅರಿತಿದ್ದು, ಜನತೆಗೆ ಸೇವೆ ಮಾಡಲು ಆಶಾಭಾವನೆಯನ್ನು ಇಟ್ಟುಕೊಂಡಿದ್ದೇನೆ, ಈ ಚುನಾವಣೆಯಲ್ಲಿ ನನಗೊಮ್ಮೆ ಅವಕಾಶ ಮಾಡಿಕೊಡಿ, ನಾನು ಈ ಭಾಗದ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಿ ಈ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳಿ ಶ್ರಮಿಸಿ ಸದಾ ನಿಮ್ಮೊಂದಿಗೆ ಇರಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ರಘುನಾಥ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್. ವಕೀಲ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಚಂದ್ರಶೇಕರ್, ನಗರಘಟಕ ಆಂಜಿ, ಕಾರ್ಯದರ್ಶಿ ಶ್ರೀನಿವಾಸ್, ಯುವಘಟಕದ ಅಧ್ಯಕ್ಷ ನಿರಂಜನ್, ಕಾರ್ಯದರ್ಶಿ ಶ್ರೀನಿವಾಸ್, ನರಸಿಂಹಪ್ಪ ಮತ್ತು ಅನೇಕ ಕಾರ್ಯಕರ್ತರು ಹಾಜರಿದ್ದರು.

ಮುಕ್ತ ಚುನಾವಣೆ: ಜವಾಬ್ದರಿತ ನಾಗರಿಕರಾಗಿ ತಪ್ಪದೇ ಮತದಾನ ಮಾಡಿ:ಉಪಚುನಾವಣಾ ಅಧಿಕಾರಿ ಡಾ|ಎಸ್ಎಸ್ ಮಧುಕೇಶ್ವರ್ ಹೇಳಿದರು.


ಮುಕ್ತ ಚುನಾವಣೆ: ಜವಾಬ್ದರಿತ ನಾಗರಿಕರಾಗಿ ತಪ್ಪದೇ ಮತದಾನ ಮಾಡಿ:ಉಪಚುನಾವಣಾ ಅಧಿಕಾರಿ ಡಾ|ಎಸ್ಎಸ್ ಮಧುಕೇಶ್ವರ್ ಹೇಳಿದರು.


ಕುಂದಾಪುರ, ಎ.12: ಭಾರತೀಯರೆಲ್ಲರೂ ಮುಕ್ತವಾಗಿ ಮತದಾನದಲ್ಲಿ ಭಾಗವಹಿಸುವಂತೆ ಚುನಾವಣಾ ಅಯೋಗ ಮಾಡುವಂತೆ ಎಲ್ಲಾ ವ್ಯವಸ್ಥೆ ಮಾಡಿದೆ. ಪ್ರತಿ ಮನೆಗೂ ಮತದಾರರ ಛಾಯಚಿತ್ರ ಇರುವ ಮತ ಚೀಟಿಗಳನ್ನು ವಿತರಿಸಲಾಗಿದೆ. ಗುರುತಿನ ಚೀಟಿ ಅಥವ ಅಗತ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಿ. ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ಮತದಾನ ಚಲಾಯಿಸುವ ಅವಕಾಶವಿದೆ. ಯಾವ ಕಾರಣಕ್ಕೂ ಮತದಾನ ಚಲಾಯಿಸದೆ ಇರಬೇಡಿ. ದೇಶಾದ ಹಿತ ದ್ರಷ್ಟಿಯಿಂದ ಪ್ರತಿಯೊಂದು ಮತದಾನ ಅಮೂಲ್ಯವಾಗಿರುತ್ತದೆ. ಮತದಾನದಂದು ಮತ ಚಲಾಯಿಸದೆ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಿ. ಯಾವುದೇ ಅಮಿಷಕ್ಕೆ ಬಲಿಯಾಗಬೇಡಿ. ಜವಾಬ್ದಾರಿಯುತ ನಾಗರಿಕರಾಗಿ ನಿಮ್ಮ ಹಕ್ಕಿನ ಮತ ಚಲಾಯಿಸಿ’ ಎಂದು ಕುಂದಾಪುರ ಸಹಾಯಕ ಆಯುಕ್ತ, ಜಿಲ್ಲೆಯ ಉಪಚುನಾವಣಾ ಅಧಿಕಾರಿ ಡಾ|ಎಸ್ಎಸ್ ಮಧುಕೇಶ್ವರ್ ಹೇಳಿದರು.
ರೋಟರಿ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ, ರೋಟರಿ ಮೀಡ್ ಟೌನ್, ರೋಟರಿ ಕ್ಲಬ್ ಸನ್ ರೈಸ್, ರೋಟರಿ ಕ್ಲಬ್ ರೀವರ್ ಸೈಡ್ ಇವರ ಇವರ ಸಹಾಯ್ದೊಂದಿಗೆ ನೆಡೆದ ‘ಮತದಾನ ಪ್ರಕ್ರಿಯೆ ಮತ್ತು ಮತಚಲಾವಣೆ ಹಕ್ಕು’ ಬಗ್ಗೆ ಮಾಹಿತಿ ಸಮಾವೇಶದಲ್ಲಿ ಅವರು ಚುನಾವಣೆ ಪ್ರಕ್ರಿಯೆಯ ಸಂಪೂರ್ಣ ವಿವರ ನೀಡಿದರು.
ಅಂದರಿಗೆ, ವ್ರದ್ದರಿಗೆ ಮತ ಚಲಾಯಿಸಲು ಇರುವ ಅವಕಾಶ, ಹಾಗೂ ಸುಳ್ಳು ದೂರು ನೀಡುವುದು, ಆಕ್ರಮ ಮತದಾನಕ್ಕೆ ಪ್ರಯತ್ನ ನೆಡೆಸುವುದು, ಮುಂತಾದ ಕ್ರಿಯೆಗಳಿಗೆ ಇರುವ ಶಿಕ್ಷೆ, ಮುಂತಾದುವುದರ ಬಗ್ಗೆ ಅವರು ಮಾಹಿತಿ ನೀಡಿದರು. ಉಪವಿಭಾಗಿದಾರಿಗಳಚುನಾವಣಾ ಸಹಾಯಕ ಅಧಿಕಾರಿ ಚಂದ್ರಶೇಖರ ಶೆಟ್ಟಿ ಮತ ಯಂತ್ರದ, ವಿ ವಿ ಪ್ಯಾಟ್ ಮತ ಚಲಾವಣೆ ದಾಖಲಿಸುವ ರೀತಿ ಅಭ್ಯರ್ಥಿಗಳು ಪಡೆದ ಮತಗಳ ಎಣಿಕೆ ಮುಂತಾದುವುದರ ಬಗ್ಗೆ ಪ್ರ್ಯಾತ್ಯಕ್ಷಿಕೆ ನೆಡೆಸಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕುಂದಾಪುರ ಅಧ್ಯಕ್ಷ ಗೋಪಾಲ ಶೆಟ್ಟಿ ಉಪ ಚುನಾವಣಾ ಅಧಿಕಾರಿಗಳನ್ನು ಪರಿಚಯಿಸಿದರು. ರೋಟರಿ ಮಿಟ್ ಟೌನ್ ಅಧ್ಯಕ್ಷ ಪ್ರಭಾಕರ ಅತಿಥಿಗಳನ್ನು ಗೌರವಿಸಿದರು. ರೋಟರಿ ಸನ್ ರೈಸ್ ಅಧ್ಯಕ್ಷ ಅಬ್ಬು ಶೇಖ್ ಅಭಿನಂದನ ಮಾತುಗಳನ್ನಾಡಿದರು. ರೋಟರಿ ದಕ್ಷಿಣದ ಕಾರ್ಯದರ್ಶಿ ರಾಮಪ್ರಸಾದ್ ಶೇಟ್ ಕಾರ್ಯಕ್ರಮದ ವಿವರಗಳನ್ನು ನೀಡಿದರು. ರೋಟರಿ ಸನ್ ರೈಸನ ನಿಯೋಜಿತ ಅಧ್ಯಕ್ಷ ರಾಜು ಪೂಜಾರಿ ವಂದಿಸಿದರು.
ಮತಯಂತ್ರದಿಂದ ಸ್ಪಷ್ಟ ಚಿತ್ರಣ
ಚುನಾವಣೆಗೆ ಬಳಸುವ ಮತಯಂತ್ರಗಳು, ಮತದಾನ ಮಾಡುವರ ಕೈ ಬೆರಳಿಗೆ ಬಳಸುವ ಶಾಯಿ ಎಲ್ಲವೂ ಭಾರತದ ಉತ್ಪನ್ನಗಳು. ಉತ್ತಮ ಗುಣಮಟ್ಟದ ಮತಯಂತ್ರದ ಕ್ರಿಯೆಯನ್ನು ಯಾರೂ ಬೇಕಾದರೂ ಪರಿಶೀಲನೆ ಮಾಡಬಹುದು, ಚುನಾವಣೆ ನೆಡೆಯುವ ಒಂದು ಗಂಟೆ ಮೊದಲು, ಆಯಾ ಅಭ್ಯರ್ಥಿಯ ಚುನಾವಣ ಎಜೆಂಟ ಸಮ್ಮುಖದಲ್ಲಿ ಈ ಪ್ರಕ್ರಿಯೆ ನೆಡೆಯುತ್ತದೆ.

 

ತಲ್ಲೂರು ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಮೂಳೆ ತಪಾಸಣೆ ಕಾರ್ಯಗಾರ

ತಲ್ಲೂರು ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಮೂಳೆ ತಪಾಸಣೆ ಕಾರ್ಯಗಾರ


ಕುಂದಾಪುರ,ಎ.12: ತಲ್ಲೂರಿನ ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಅಶ್ರಯದಲ್ಲಿ ಕಾರಿತಾಸ್ ಇಂಡಿಯಾ ಮತ್ತು ಸಂಪದ ಉಡುಪಿ ಧರ್ಮಕೇಂದ್ರದ “ಸುರಕ್ಷ” ಆರೋಗ್ಯ ಮತ್ತು ನೈರ್ಮಲೀಕರಣ ಕಾರ್ಯಕ್ರದಡಿ ಮೇಸಸ್ ಒರ್ಗಾಯ್ನಿಕ್ ಪೈ.ಲಿ.’ ಇವರಿಂದ ಮೂಳೆಗಳ ತಪಾಸಣೆ ಕಾರ್ಯಗಾರ ನೆಡೆಯಿತು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ, ಮಾಜಿ ಉಡುಪಿ ನಗರಸಭೆಯ ಸದಸ್ಯ ಪ್ರಕಾಶ್ ಅಂದ್ರಾದೆ ಕಾರ್ಯಗಾರವನ್ನು ಉದ್ಘಾಟಿಸಿ ‘ನಮ್ಮ ಹಿರಿಯವರು ಕ್ರಷಿ ಕೆಲಸ, ಬಟ್ಟೆ ಒಗೆಯುವುದು, ನೆಲ ಒರೆಸುವುದು, ಇಂತಹ ಶರೀರಕ್ಕೆ ವ್ಯಾಯಮ ಆಗುವಂತ ಕೆಲಸಗಳನ್ನು ಮಾಡುತಿದ್ದರು. ಹಾಗಾಗಿ ಅವರ ಆರೋಗ್ಯ ಉತ್ತಮವಿದ್ದು ಮೂಳೆಗಳು ಗಟ್ಟಿಯಾಗಿರುತಿದ್ದವು. ಆದರೆ ಈಗೀನ ಯಾಂತ್ರೀಕ ಜೀವನದಲ್ಲಿ ಶರೀರಕ್ಕೆ ಬೇಕಾದ ಕೆಲಸಗಳು ಕಡಿಮೆಯಾಗಿವೆ, ಹಾಗಾಗಿ ಪ್ರಾಯ ಕಳೆದಂತ್ತೆ ಮೂಳೆಗಳ ಕ್ಯಾಲ್ಸಿಯಂ ಸಾಂದ್ರತೆ ಕಡಿಮೆಯಾಗಿ ಅಪಾಯದ ಮಟ್ಟಕ್ಕೆ ಬರುತ್ತವೆ. ನಮ್ಮಲ್ಲಿನ ಪರೀಕ್ಷಾ ಯಂತ್ರಗಳಿಂದ ಮೂಳೆ ಸಾಂದ್ರತೆ ಮತ್ತು ಮೂಳೆಗಳ ಶಕ್ತಿಯನ್ನು ತಿಳಿದುಕೊಳ್ಳ ಬಹುದು, ಮಾತ್ರವಲ್ಲಾ ದೇಹಕ್ಕೆ ಬೇಕಾದ ಕೊಲೆಸ್ಟ್ರೊಲ್ ಕೊರತೆ ಮತ್ತು ಅಗತ್ಯತೆ ಕಂಡುಕೊಳ್ಳ ಬಹುದು, ಇಂತಹ ಶಿಬಿರಗಳಿಂದ ಹಲವಾರು ಜನರಿಗೆ ಪ್ರಯೋಜನವಾಗಿದ್ದು, ಇಂತಹ ಕಾರ್ಯಗಾರಗಳಿಗೆ ತುಂಬ ಬೇಡಿಕೆಯಿದೆ’ ಎಂದು ತಿಳುವಳಿಕೆ ನೀಡಿದರು.
ಉಡುಪಿ ಧರ್ಮ ಕೇಂದ್ರದ ಕೇಂದ್ರಿಯ ಸ್ತ್ರೀ ಆಯೋಗದ ನಿರ್ದೇಶಕಿ ಹಾಗೂ ಕಾರ್ಯಕ್ರಮದ ಸಂಚಾಲಕಿ ವಂ|ಭಗಿನಿ ಜಾನೆಟ್ ಫೆರ್ನಾಂಡಿಸ್ ಇವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮಕ್ಕೆ ಫಾತಿಮಾ ಸಿಸ್ಟರ್ ಮೇಳದ ಬೆಂಗಳೂರಿನ ಪೆÇ್ರವಿನ್ಸಿಯಲ್ ವಂ|ಭಗಿನಿ ಲಿಲ್ಲಿ ಮೇರಿ ಅಧ್ಯಕ್ಷತೆ ವಹಿಸಿದ್ದರು, ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ವ್ಯವಸ್ಥಾಪಕಿ ವಂ|ಭಗಿನಿ ಲಿಜ್ಜಿ, ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ವಂ|ಭಗಿನಿ ತೆರೆಸಾ ಮತ್ತು ವಂ|ಭಗಿನಿ ವಿಜಯಾ ಉಪಸ್ಥಿತರಿದ್ದರು. ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಶಿಕ್ಷಕಿಯರು ಪ್ರಾಥನೆಯನ್ನು ನೆಡೆಸಿಕೊಟ್ಟರು. ಕಾರ್ಯಗಾರದಲ್ಲಿ ಮೂಳೆ ತಪಾಸಣೆಯನ್ನು ‘ಮೆಸಸ್ ಒರ್ಗಾಯ್ನಿಕ್ ಪೈ.ಲಿ.’ ಸಂಸ್ಥೆಯ ಉಮೇಶ್ ಕಡೂರ್ ಮಠ್, ಸಂದೇಶ್ ಶೆಟ್ಟಿ ಮತ್ತು ಮಧುಕೇಶ್ವರ್ ನೆಡೆಸಿಕೊಟ್ಟರು. ಜಯರಾಣಿ ಆಂಗ್ಲಾ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ವಂ|ಭಗಿನಿ ಲೀಲಾ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.

ಕೋಲಾರ ರೈತರ ಕಷ್ಟಗಳಿಗೆ ಸ್ಪಂಧಿಸದ ಕಾಂಗ್ರೆಸ್ ಪಕ್ಷದ ಸಂಸದರನ್ನು ತಿರಸ್ಕಾರ

ವರದಿ:ಶಬ್ಬೀರ್ ಅಹ್ಮದ್

ಕೋಲಾರ ರೈತರ ಕಷ್ಟಗಳಿಗೆ ಸ್ಪಂಧಿಸದ ಕಾಂಗ್ರೆಸ್ ಪಕ್ಷದ ಸಂಸದರನ್ನು ತಿರಸ್ಕಾರ


ಕೋಲಾರ, ಏ.28 ವರ್ಷಗಳ ಕಾಲ ಸಂಸದರಾದ ಕೆ.ಹೆಚ್.ಮುನಿಯಪ್ಪ ನವರು ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ರೈತರ ಕಷ್ಟಗಳಿಗೆ ಸ್ಪಂಧಿಸದ ಕಾಂಗ್ರೆಸ್ ಪಕ್ಷದ ಸಂಸದರನ್ನು ತಿರಸ್ಕರಿಸಿ ಬಿ.ಜೆ.ಪಿ ಅಭ್ಯರ್ಥಿ ಮಿನಿಶ್ಯಾಮಿಗೆ ಬೆಂಬಲ ನೀಡಲು ಜಿಲ್ಲಾ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದೆ. ಆದರೆ ಇಡೀ ದೇಶಕ್ಕೆ ಅನ್ನಾ ಹಾಕುವ ಅನ್ನದಾತನು ಬೆಳೆದ ಬೆಳೆಗೆ ಬೆಲೆ ನಿಗಧಿ ಮಾಡುವ ಸ್ವಾತಂತ್ರ್ಯ ಬಂದಿಲ್ಲ. ಜೊತೆಗೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಸಂಸದರು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸುವ ಜೊತೆಗೆ ರೈತರ ಕಷ್ಟಾ ಸುಖಗಳಲ್ಲಿ ಭಾಗಿಯಾಗಬೇಕಾದ ಸಂಸದರು ಇಂದು ಸಂಪೂರ್ಣವಾಗಿ ಬರಪೀಡಿತ ಕೋಲಾರ ಜಿಲ್ಲೆಯನ್ನು ಮರೆತಿದ್ದಾರೆ. ಯಾವುದೇ ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ 15 ವರ್ಷಗಳಿಂದ ಬರಗಾಲ ಆವರಿಸುವ ಜೊತೆಗೆ ರೇಷ್ಮೆ, ಹಾಲು, ಟೆಮೋಟೋ ಬೆಲೆ ಕುಸಿತದಿಂದ ಕಂಗಾಲಾಗಿ ರೈತ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದರು. ರೈತರ ಸಮಸ್ಯೆಗಳಿಗೆ ಸ್ಪಂಧಿಸದ ಜೊತೆಗೆ ಶಾಶ್ವತ ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಉದ್ಯೋಗ ಸೃಷ್ಟಿಯೆಂದು ಹೇಳುವ ಸಂಸದರೇ ಪಕ್ಕದ ಆಂಧ್ರ ಪ್ರದೇಶಕ್ಕೆ ಕೃಷ್ಣಾ ಮೇಲ್ದಂಡೆ ನೀರು 850 ಕಿ.ಮೀ. ಕಾಲುವೆ ಮುಖಾಂತರ ಹರಿದರೆ 60 ಕಿ.ಮೀ. ಅಂತರದ ಬೆಂಗಳೂರಿನಿಂದ ಹರಿಯುತ್ತಿರುವ ಕೆ.ಸಿ.ವ್ಯಾಲಿ ನೀರು ಯಾಕೆ ತಾರತಮ್ಯ ಮಾಡುತ್ತಿದ್ದಾರೆ. ಜೊತೆಗೆ 11 ವರ್ಷವಾದರೂ ಯರಗೋಳ್ ನೀರವಾರಿ ಯೋಜನೆ ಬಗ್ಗೆ ದ್ವನಿ ಎತ್ತಿಲ್ಲ. ಜೊತೆಗೆ ಏಷ್ಯಾದಲ್ಲೇ ಮೊದಲನೇ ಸ್ಥಾನದಲ್ಲಿರುವ ಟೆಮೋಟೋ ಮಾರುಕಟ್ಟೆಯ ವಿಸ್ತೀರ್ಣಕ್ಕೆ ಸತತವಾಗಿ 4 ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಜಮೀನು ಮಂಜೂರು ಮಾಡಲು ಆಗುತ್ತಿಲ್ಲವೆ. ಇನ್ನು ನೂರಾರು ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸದ ಕೆ.ಹೆಚ್.ಮುನಿಯಪ್ಪನವರ ಬಯಲು ಸೀಮೆ ರೈತ ವಿರೋಧಿ ದೋರಣೆಯನ್ನು ಸಭೆಯಲ್ಲಿ ಖಂಡಿಸಿದರು.
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ 28 ವರ್ಷ ಸಂಸದರಾಗಿ ಯಾವ ಅಭಿವೃದ್ಧಿಕಾರ್ಯ ಮಾಡಿದ್ದಾರೆ. ಉದ್ಯೋಗ ಸೃಷ್ಟಿ ಎಂದು ಹೇಳಿ ರೈಲ್ವೆ ಕೋಚ್ ಪ್ಯಾಕ್ಟರಿ ನಿರ್ಮಾಣ ಮಾಡಲು ಗುದ್ದಲಿ ಪೂಜೆ ಮಾಡಿ 5 ವರ್ಷ ಕಳೆದರೂ ಇದುವರೆವಿಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಜೊತೆಗೆ ನರಸಾಪುರ, ವೇಮಗಲ್, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಹಾಗೂ ರಾಷ್ಟ್ರೀಯಹೆದ್ದಾರಿ ಅಭಿವೃದ್ಧಿ ಮಾಡಿದ್ದೇನೆಂದು, ಸಾರ್ವಜನಿಕವಾಗಿ ಹೇಳುವ ಸಂಸದರೇ ಹೆದ್ದಾರಿ ಅಭಿವೃದ್ಧಿಗೆ ಭೂಮಿ ಕಳೆದುಕೊಂಡ ರೈತರ ಜಮೀನಿಗೆ ಪರಿಹಾರ ಇದುವರೆವಿಗೂ ನೀಡಿಲ್ಲ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ. ಚುನಾವಣೆ ಬಂದಾಗ ಮಾತ್ರ ಈ ಬರ ಪೀಡಿತ ಜಿಲ್ಲೆ ಜ್ಞಾಪಕಕ್ಕೆ ಬರುತ್ತದೆ. ಆದರೆ ತಮ್ಮ 28 ವರ್ಷದ ಸಂಸದರ ಅಧಿಕಾರದಲ್ಲಿದ್ದ ಮಾನ್ಯ ಸಚಿವರಿಗೆ ಜಿಲ್ಲೆಯ ಜ್ವಲಂತ ಹಾಗೂ ರೈತರ ಸಮಸ್ಯೆಗಳನ್ನು ಸ್ಪಂಧಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸಂಸದರಾದ ಕೆ.ಹೆಚ್.ಮುನಿಯಪ್ಪನವರಿಗೆ ಬೆಂಬಲ ನೀಡದೆ ಪುಟ್ಟಣ್ಣಯ್ಯ ಬಣದ ರೈತ ಸಂಘದಿಂದ ಬಾರಿ ಬಿ.ಜೆ.ಪಿಗೆ ಸಂಪೂರ್ಣ ಬೆಂಬಲವನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಳಬಾಗಿಲು ತಾ.ಅಧ್ಯಕ್ಷ ಪಾರುಕ್‍ಪಾಷ, ಮಾ.ತಾ.ಅಧ್ಯಕ್ಷರು ಹೊಸಹಳ್ಳಿ ವೆಂಕಟೇಶ್, ಕೆ.ಜಿ.ಎಫ್ ತಾ.ಅಧ್ಯಕ್ಷ ಕ್ಯಾಸಂಬಳ್ಳಿ ಪ್ರತಾಪ್, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಬಂಗಾರಪೇಟ ತಾ.ಅ ಇಲಿಯಾಜ್‍ಖಾನ್, ಐತಂಡಹಳ್ಳಿ ಅಂಬರೀಶ್, ಕೆಂಬೋಡಿ ಕಷ್ಣೇಗೌಡ, ಪುರುಶೋತ್ತಮ್, ಪುತ್ತೇರಿ ರಾಜು, ವೇಮಗಲ್ ನಟರಾಜ್, ಗೋವಿಂದಪ್ಪ, ಅಮರನಾರಾಯಣಸ್ವಾಮಿ, ಗಣೇಶ್, ಮೀಸೆ ವೆಂಕಟೇಶಪ್ಪ, ಮುನಿಶಾಮಣ್ಣ, ರಂಜಿತ್, ಸಾಗರ್, ಸುಪ್ರಿಂ ಚಲ, ಮುದುವಾಡಿ ಚಂದ್ರಪ್ಪ

ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಚುಕ್ಕಿ ಚಂದ್ರಮ : ಭಾನ ತಾರೆಗಳೊಂದಿಗೆ ಒಂದು ಸಂಜೆ

ಕುಂದಾಪುರ ಸಂತ ಜೋಸೆಫ್ ಶಾಲೆಯಲ್ಲಿ ಚುಕ್ಕಿ ಚಂದ್ರಮ : ಭಾನ ತಾರೆಗಳೊಂದಿಗೆ ಒಂದು ಸಂಜೆ


ಕುಂದಾಪುರ, ಎ.10: ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸಮುದಾಯ ಕುಂದಾಪುರ ಇವರ ಆಯೋಜಕತ್ವದಲ್ಲಿ ಉಡುಪಿ ಪೂರ್ಣ ಪ್ರಜ್ಞಾ ಹವ್ಯಾಸಿ ಖಗೋಳ ವೀಕ್ಷಕ ತಂಡದಿಂದ ಚುಕ್ಕಿ ಚಂದ್ರಮ ಭಾನ ತಾರೆಗಳೊಂದಿಗೆ ಒಂದು ಸಂಜೆ ಎಂಬ ಕಾರ್ಯಕ್ರಮ ನೆಡೆಯಿತು.
ಮುಖ್ಯ ಅತಿಥಿಯಾಗಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅತಿ.ವಂ|ಸ್ಟ್ಯಾನಿ ತಾವ್ರೊ ಆಗಮಿಸಿ ‘ಚಂದ್ರ ಎಲ್ಲರಿಗೂ ಕೌತುಕಮಯ, ತಾಯಿ ಮಗುವನ್ನು ಉಣಿಸಲು ಚಂದ್ರನನ್ನು ತೋರಿಸುತ್ತಾಳೆ, ಅದರ ಆಕರ್ಷಣೆಗೆ ಮಗು ಊಟ ಮಾಡುತ್ತದೆ, ಈ ಕಾರ್ಯಕ್ರಮ ಜ್ಞಾನದ ಒಂದು ಉಡುಗೋರೆ, ಜ್ಞಾನದ ಬೆಳಕನ್ನು ನೀಡುವ ಕಾರ್ಯಕ್ರಮ’ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮುದಾಯ ತಂಡವು ಕಾರ್ಕಡ ರಾಮಚಂದ್ರ ಉಡುಪ ಇವರ ನೆನಪಿನಲ್ಲಿ ಮಾಡುವ ಈ ಕಾರ್ಯಕ್ರಮಕ್ಕೆ ಆಗಮಿಸಿದ ಅವರ ಪುತ್ರ ಪೆÇ್ರಫೆಸರ್ ರಾಜೇಂದ್ರ ಉಡುಪ ‘ಖಗೋ:ಳ ವಿಜ್ಞಾನ ಸರಿಯಾಗಿ ಅವಲೋಕಿಸಿದರೆ, ನಾವು ಇವತ್ತು ಮೂಢ ನಂಬಿಕೆಯಿಂದ ಮುಳುಗಿ ಹೋಗಿದ್ದೆವೆ, ಕೆಲವರು ಇದೇ ನಕ್ಷತ್ರಗಳ ಮೂಲಕ ಹೊಟ್ಟೆ ಪಾಡು ಮಾಡಿಕೊಂಡು ಶೋಷಣೆ ಮಾಡುತ್ತಾರೆ, ಖಗೋಳ ವಿಜ್ಞಾನ ಸಂಶೊಧನೆ ಆರಂಭವಾಗಿದ್ದೆ ಕ್ರೈಸ್ತರಿಂದ, ಪಾಶ್ಚ್ಯಾತ ದೇಶದಲ್ಲಿ ಇಗರ್ಜಿಯಲ್ಲೆ ಒಂದು ದೊಡ್ಡ ಖಗೋಳ ವಿಜ್ಞಾನಕ್ಕೆ ಸಂಬಂಧ ಪಟ್ಟ ಪ್ರಯೋಗಾಲಯ ಇದೆ, ನಮ್ಮಲ್ಲಿ ಅಂತಕ ಖಗೋಳ ಪ್ರಯೋಗಾಲಯ ಇಲ್ಲವೆಂಬುದು ಬೇಸರದ ಸಂಗತಿ’ ಎಂದು ಅವರು ಹೇಳಿದರು.
ಸಂತ ಜೋಸೆಫ್ sಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ವಾಯ್ಲೆಟ್ ತಾವ್ರೊ ‘ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ತುಂಬ ಉಪಯೋಗವಾಗುತ್ತೆ, ಈ ಪ್ರಾತ್ಯಕ್ಷಿಕೆಯನ್ನು ನೋಡಿ ಮಕ್ಕಳಲ್ಲಿ ತಿರುವು ಪಡೆದು ಕೆಲವರು ವಿಜ್ಞಾನಿ ಕೂಡ ಆಗುವುದಕ್ಕೆ ಸಾಧ್ಯವಿದೆ’ ಎಂದರು. ಪುರ್ಣ ಪ್ರಜ್ಞಾ ಕಾಲೇಜಿನ ಪ್ರಾಧ್ಯಾಪಕ ಪೆÇ್ರ. ಎ.ಪಿ ಭಟ್ ‘ಪ್ರಾತ್ಯಾಕ್ಷಿಕೆ ಮೂಲಕ ಆಕಶದಲ್ಲಿನ ಎಲ್ಲಾ ಗ್ರಹಗಳನ್ನು, ಕೋಟಿಕಟ್ಟಲೆ ಥರಹ ಥರಹ ಬಣ್ಣಗಳ ವಿವಿಧ ಗಾತ್ರಗಳ ನಕ್ಷತ್ರಗಳನ್ನು ಚಂದ್ರನ ಕುಳಿಗಳು, ತಾರೆಗಳ ಹುಟ್ಟು-ಸಾವು, ಗ್ರಹಣ, ತಾರಾಪುಂಜ ಮತ್ತಿತರ ಸಂಗತಿಗಳನ್ನು ತಮ್ಮ ಅನನ್ಯ ದೇಹಭಾಷೆಯ ಮೂಲಕ ವಿವರಿಸಿದರು. ಈ ಗ್ರಹಗಳಲ್ಲಿ  ಶ್ರೇಷ್ಟವಾದುದು  ನಮ್ಮ ಭೂಮಿ, ಇಲ್ಲಿ ನೀರು ಆಮ್ಲಜನಕವಿದ್ದು, ಸಕಲ ಜೀವ ಸಂಕಲನಕ್ಕೆ ಜೀವಿಸಲು ಯೋಗ್ಯವಾಗಿದೆ, ಆದರೆ ಮಾನವ ಈ ಭೂಮಿಗೆ ಅನ್ಯಾಯ ಮಾಡಿದ್ದಾನೆ, ಕಾಡು ಮರಗಳನ್ನು ಕಡಿದು ಆಮ್ಲಜನಕದ ಕೊರತೆಯುಂಟಾಗಿದೆ, ಅದಕ್ಕೆ ಭೂಮಿಯನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ, ಅದಕ್ಕಾಗಿ ನಾವು ಗೀಡ ಮರಗಳನ್ನು ನೆಟ್ಟು ಭೂಮಿಯ ರಕ್ಷಣೆಯ ಕಾರ್ಯಕ್ಕೆ ತೊಡಗ ಬೇಕೆಂದು’ ನಕ್ಶತ್ರ ಲೋಕವನ್ನು ಮಕ್ಕಳ ಮುಂದಿಟ್ಟರು. ಅವರ ಜೊತೆಗೆ ಪೂ.ಪ್ರ., ಹ. ಖ. ವೀಕ್ಷಕ ತಂಡ ಬಂದಿದ್ದು ಆಸಕ್ತರಿಗೆ ಸೂರ್ಯ ಮತ್ತು ಚಂದ್ರನ ವೀಕ್ಷಣೆಯನ್ನು ಮಾಡಿಸಿದರು ಡಿಸೆಂಬರ್ ನಲ್ಲಿ ಸಂಭವಿಸಲಿರುವ ಖಗ್ರಾಸ ಸೂರ್ಯಗ್ರಹಣವನ್ನು ಜಿಲ್ಲೆಯ ಎಲ್ಲ ಶಾಲಾ ಮಕ್ಕಳು ನೋಡುವಲ್ಲಿ ಸಹಾಯಕವಾಗಲಿರುವ ಉಪಕರಣವನ್ನು ಡಾ.ಎ.ಪಿ ಭಟ್ ರವರು ಸಮುದಾಯದ ಜಿ.ವಿ.ಕಾರಂತರಿಗೆ ಹಸ್ತಾಂತರಿಸಿದರು. ಸಮುದಾಯದ ಕೋಶಾಧಿಕಾರಿ ಬಾಲಕೃಷ್ಣ.ಎಂ ಎಲ್ಲರಿಗೂ ಪುಸ್ತಕ ಸ್ಮರಣಿಕೆ ನೀಡಿದರು. ಸಮುದಾಯ. ಸಮುದಾಯದ ವಾಸುದೇವ್ ಗಂಗೇರಾ ಇವರ ನಿರ್ದೇಶನದಲ್ಲಿ ಹಾಡುಗಳನ್ನು ಹಾಡಲಾಯಿತು, ಸಮುದಾಯದ ಅಧ್ಯಕ್ಷ ಉದಯ್ ಗಾಂವ್ಕರ್ ಸ್ವಾಗತಿಸಿ ನಿರೂಪಣೆ ಮಾಡಿದರು. ಅಶೋಕ ತೆಕ್ಕಟ್ಟೆ ವಂದಿಸಿದರು.

ಕೋಲಾರ ಜಿಲ್ಲೆಯ 134 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ -ಜೆ. ಮಂಜುನಾಥ್.

 ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ ಜಿಲ್ಲೆಯ 134 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ -ಜೆ. ಮಂಜುನಾಥ್.
ಕೋಲಾರ:ಜಿಲ್ಲೆಯಲ್ಲಿ ಅಕ್ಟೋಬರ್‍ನಿಂದ ಇಲ್ಲಿಯವರೆಗೆ 192 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು, ಇವುಗಳಲ್ಲಿ 134 ಗ್ರಾಮಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಿ ಅಥವಾ ಇರುವ ಕೊಳವೆ ಬಾವಿಗಳಿಗೆ ಹೊಸದಾಗಿ ಪಂಪು ಮೋಟಾರ್ ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು.
ಇಂದು ಬರ ನಿರ್ವಹಣೆ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿದ್ದ ಪರಿಹಾರ ಕಾರ್ಯಕ್ರಮಗಳನ್ನು ವೀಕ್ಷಿಸಿದ ಅವರು ಮಾತನಾಡಿ ಉಳಿದ 58 ಗ್ರಾಮಗಳಲ್ಲಿ 29 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರನ್ನು ಒದಗಿಸಲಾಗುತ್ತಿದೆ.  ಕೋಲಾರದ ಇತಿಹಾಸದಲ್ಲಿ ಅತಿ ಹೆಚ್ಚು ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದಿರುವುದು ಇದೇ ಮೊದಲು ಎಂದು ಅವರು ತಿಳಿಸಿದರು. ಇನ್ನುಳಿದ 29 ಗ್ರಾಮಗಳಿಗೆ ಖಾಸಗಿ ಟ್ಯಾಂಕರ್‍ಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋಲಾರದಲ್ಲಿ ಮುಂಗಾರಿನಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಹಿಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಜಿಲ್ಲೆಯು ತೀವ್ರ ಬರಕ್ಕೆ ತುತ್ತಾಗಿದೆ.  ಕೋಲಾರ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ನೀರಿನ ಸಮಸ್ಯೆ ಇದ್ದು, 20 ಖಾಸಗಿ ಟ್ಯಾಂಕರ್‍ಗಳ ಮೂಲಕ ಪ್ರತಿದಿನ 99 ಟ್ರಿಪ್‍ಗಳಲ್ಲಿ ನೀರನ್ನು ಒದಗಿಸಲಾಗುತ್ತಿದೆ ಎಂದರು.
ಹಸಿರು ಮೇವು
ಜಿಲ್ಲೆಯಲ್ಲಿನ 2 ಲಕ್ಷದ 8 ಸಾವಿರ ರಾಸುಗಳಿದ್ದು ಅಗತ್ಯ ಹಸಿರು ಮೇವು ಒದಗಿಸುವ ಸಂಬಂಧ 
92 ಸಾವಿರ ಮಿನಿಕಿಟ್‍ಗಳನ್ನು ನೀರು ಲಭ್ಯವಿರುವ ರೈತರು ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಒದಗಿಸಲಾಗಿದೆ. ಪ್ರಸ್ತುತ 82 ಸಾವಿರ ಮೆಟ್ರಿಕ್ ಟನ್ ಹಸಿರು ಮೇವು ಲಭ್ಯವಿದ್ದು, ಇದು 12 ವಾರಗಳಿಗೆ ಸಾಕಾಗುತ್ತದೆ.  ಸಿ.ಆರ್.ಎಫ್ ಅನುದಾನದಲ್ಲಿ 20 ಸಾವಿರ ಮಿನಿಕಿಟ್‍ಗಳನ್ನು ವಿತರಿಸಿದ್ದು, ಇವನ್ನು ಫೆಬ್ರವರಿ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದು ಮುಂದಿನ ತಿಂಗಳು ಕಟಾವಣೆಗೆ ಬರುತ್ತದೆ ಎಂದರು.
ಒಣ ಮೇವು
ಟೆಂಡರ್ ಮೂಲಕ ರಾಯಚೂರಿನಿಂದ 49 ಮೆಟ್ರಿಕ್ ಟನ್ ಒಣ ಮೇವನ್ನು ಖರೀದಿಸಿದ್ದು ದಾಸ್ತಾನು ಮಾಡಲಾಗಿದೆ.  ಈಗಾಗಲೇ ಶ್ರೀನಿವಾಸಪುರ ಮತ್ತು ಮುಳಬಾಗಿಲಿನಲ್ಲಿನ ಮೇವು ಬ್ಯಾಂಕ್ ತೆರೆಯಲಾಗಿದ್ದು, ಉಳಿದ 4 ತಾಲ್ಲೂಕುಗಳಲ್ಲಿಯೂ ಮೇವು ಬ್ಯಾಂಕ್ ತೆರೆಯಲಾಗುವುದು. ಅಗತ್ಯವಿರುವ ರೈತರಿಗೆ ರಿಯಾಯಿತಿ ದರವಾದ ಕೆ.ಜಿ.ಗೆ 2 ರೂ ನಂತೆ ವಿತರಿಸಲಾಗುವುದು ಎಂದು ತಿಳಿಸಿದರು.
ಪ್ರವಾಸ ಕಾರ್ಯಕ್ರಮ
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬರ ನಿರ್ವಹಣೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೋಲಾರ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಕುರಿತು ವೀಕ್ಷಣೆ ಮಾಡಿದರು. ನಂತರ ಹನಿಗಾನಹಳ್ಳಿಯ ಮುನಿಸ್ವಾಮಿಗೌಡರ ರೇಷ್ಮೆ ಬೆಳೆ ವೀಕ್ಷಣೆ ಮಾಡಿದರು. ಸದರಿ ರೈತರಿಗೆ ನರೇಗಾ ಯೋಜನೆಯಡಿ ಪ್ರತಿ ಎಕರೆಗೆ 86 ಸಾವಿರ ರೂ.ಗಳಂತೆ 2 ಎಕರೆಗೆ ಪ್ರೋತ್ಸಾಹಧನ ನೀಡಲಾಗಿದ್ದು, ಕೃಷಿ ಹೊಂಡವನ್ನು ಸಹ ನಿರ್ಮಿಸಿ ಕೊಡಲಾಗಿತ್ತು.
ಚಿಕ್ಕ ಅಂಕಂಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ 10 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಚೆಕ್ ಡ್ಯಾಮ್ ಕಾಮಗಾರಿಯನ್ನು ವೀಕ್ಷಿಸಿ ರೈತರಿಂದ ಚೆಕ್ ಡ್ಯಾಂ ನಿರ್ಮಾಣದ ಕುರಿತು ಅಭಿಪ್ರಾಯಗಳನ್ನು ಪಡೆದುಕೊಂಡರು. ಕುಪ್ಪನಹಳ್ಳಿ ಗೇಟ್‍ನಲ್ಲಿ ವಿಜಿಯಮ್ಮ ಅವರ ಜಮೀನಿನಲ್ಲಿ ಬೆಳೆದಿದ್ದ  ಮೇವು ಬೆಳೆಯನ್ನು ವೀಕ್ಷಣೆ ಮಾಡಿದರು. ಪಶು ಇಲಾಖೆಯ ವತಿಯಿಂದ 12 ಮಿನಿಕಿಟ್‍ಗಳನ್ನು ಉಚಿತವಾಗಿ ಪಡೆದ ವಿಜಯಮ್ಮ 1 ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆದಿದ್ದಾರೆ. ಇದೇ ರೀತಿ ಅಕ್ಕಪಕ್ಕದಲ್ಲಿರುವ ರೈತರಿಗೂ ಮಿನಿಕಿಟ್‍ಗಳನ್ನು ನೀಡಲಾಗುವುದು. ನೀರು ಲಭ್ಯವಿರುವ ರೈತರು ವಿಜಯಮ್ಮ ಅವರಿಂದ ಸ್ಪೂರ್ತಿ ಪಡೆದು ಇದೇ ರೀತಿ ಮೇವು ಬೆಳೆಯುವಂತೆ ಆಗಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾಋಇ ಜಿ ಜಗದೀಶ್ ಅವರು ತಿಳಿಸಿದರು.
ಬಂಗಾರಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ 143, 144 ಹಾಗೂ 145 ರ ಸಂಖ್ಯೆಯ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿ ಅಳವಡಿಸಿರುವ ಸೌಲಭ್ಯಗಳಾದ ರ್ಯಾಂಪ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಫ್ಯಾನ್, ಶೌಚಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೂ ಇದೇ ರೀತಿ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ಬಂಗಾರಪೇಟೆ ತಾಲ್ಲೂಕಿನ ನಾಗಶೆಟ್ಟಿಹಳ್ಳಿ ಗ್ರಾಮದ ಶುದ್ಧ ನೀರಿನ ಕುಡಿಯುವ ಘಟಕ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನರೇಗಾ ಯೋಜನೆಯಡಿ ನಿರ್ಮಿಸಿರುವ ನೀರಿನ ತೊಟ್ಟಿ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ವೆಂಕಟರಮಣಪ್ಪ ಅವರು ಸಾಕಿದ್ದ 14 ಹಸುಗಳನ್ನು ಪೋಷಿಸಲು ತಗಲುವ ಖರ್ಚು, ಹಾಲು ಮಾರಾಟದಿಂದ ಬರುವ ಆದಾಯದ ಕುರಿತು ಮಾಹಿತಿ ಪಡೆದುಕೊಂಡರು. ಜಾನುವಾರುಗಳಿಗೆ ಮೇವು ಬೆಳೆಯಲು ಮಿನಿಕಿಟ್ ಒದಗಿಸುವಂತೆ ಸ್ಥಳದಲ್ಲಿದ್ದ ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಖಾಸಗಿ ಬೋರ್‍ವೆಲ್‍ನಿಂದ ಕುಡಿಯುವ ನೀರನ್ನು ಒದಗಿಸುತ್ತಿರುವ ಮುಳಬಾಗಿಲಿನ ಹೊನಗಾನಹಳ್ಳಿ ರೈತರ ಜಮೀನಿಗೆ ಭೇಟಿ ನೀಡಿ ಬರ ಪರಿಸ್ಥಿತಿಯಲ್ಲಿ ಅಗತ್ಯ ನೀರು ಪೂರೈಸುತ್ತಿರುವ ರೈತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗೊಂಡಹಳ್ಳಿ ನಾಗರಾಜ್ ಅವರ ಸೀಬೆ ತೋಟಕ್ಕೆ ಭೇಟಿ ನೀಡಿ ಉತ್ತಮ ವ್ಯವಸಾಯ ಅಭ್ಯಾಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಕುದಾಂಡಹಳ್ಳಿಯಲ್ಲಿ ನರೇಗಾ ಯೋಜನೆಯಡಿ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ವೀಕ್ಷಣೆ ಮಾಡಿದರು. ಬೆಸ್ತರಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ವೀಕ್ಷಿಸಿದರು. ನಂತರ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯಲ್ಲಿ ದಾಸ್ತಾನು ಮಾಡಿರುವ ಒಣ ಮೇವನ್ನು ವೀಕ್ಷಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಜಗದೀಶ್ ಅವರು ಮಾತನಾಡಿ ಕಳೆದ ಸೆಪ್ಟೆಂಬರ್‍ನಲ್ಲಿ ಜಿಲ್ಲೆಯಲ್ಲಿ ಕೇವಲ 8 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿತ್ತು.  ನಾನು ಜಿಲ್ಲೆಗೆ ಬಂದ ನಂತರ 6 ತಿಂಗಳಲ್ಲಿ ನರೇಗಾ ಯೋಜನೆಯನ್ನು ಚುರುಕುಗೊಳಿಸಿ ಮಾರ್ಚ್ ಅಂತ್ಯಕ್ಕೆ 40 ಲಕ್ಷ 3 ಸಾವಿರ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಕಳೆದ ವರ್ಷ 22 ಲಕ್ಷ ಮಾನವ ದಿನಗಳನ್ನು ಸೃಜಿಸಿ 70 ಕೋಟಿ ಖರ್ಚು ಮಾಡಲಾಗಿತ್ತು. ಈ ವರ್ಷ 130 ಕೋಟಿಗಳನ್ನು ಖರ್ಚು ಮಾಡಲಾಗಿದ್ದು ಉತ್ತಮ ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿ 1000 ಚೆಕ್ ಡ್ಯಾಂಗಳ ನಿರ್ಮಾಣದ ಗುರಿ ಹೊಂದಿದ್ದು, ಅನುಮೋದನೆ ನೀಡಲಾಗಿದೆ. ಈಗಾಗಲೆ 600 ಚೆಕ್‍ಡ್ಯಾಂಗಳ ನಿರ್ಮಾಣ ಮಾಡಲಾಗಿದೆ.  ನರೇಗಾ ಯೋಜನೆಯಡಿ ದನದ ಕೊಟ್ಟಿಗೆ, ಶಾಲಾ ಕಾಂಪೌಂಡ್, ಗೋಕುಂಟೆ, ಅಂಗನವಾಡಿ ಕಟ್ಟಡದ ಜೊತೆಗೆ ಹೆಚ್ಚಾಗಿ ಬಡವರು ಮನೆ ನಿರ್ಮಿಸಿಕೊಳ್ಳಲು ಪ್ರೋತ್ಸಾಹಧನ ಒದಗಿಸಲಾಗಿದೆ ಎಂದರು.
ಈ ಬಾರಿ ಹೊಸ ಯೋಜನೆಯಾಗಿ ಪ್ರತಿ ಊರಿಗೆ 1 ಕೆರೆಯನ್ನು ಗುರುತಿಸಿ, ಕೆರೆಯ ಹೂಳನ್ನು ನರೇಗಾ ಯೋಜನೆಯಡಿ ರೈತರಿಂದ ತೆಗೆಸಲಾಗುತ್ತದೆ. ಒಂದು ಮಾನವ ದಿನದ ಕೆಲಸಕ್ಕೆ 1*1 ಮೀಟರ್ ಅಳತೆಯ ಹೂಳನ್ನು ತೆಗೆಯಲು ನೀಡಲಾಗುವುದು. ಒಬ್ಬ ಸಾಮಾನ್ಯ ಮನುಷ್ಯ 3 ಗಂಟೆಯಲ್ಲಿ ಈ ಕೆಲಸವನ್ನು ಮುಗಿಸಿ ನಂತರ ತನ್ನ ಜಮೀನಿನ ಕೆಲಸ ಮಾಡಿಕೊಳ್ಳುವುದರ ಜೊತೆಗೆ 1 ದಿನದ ಕೂಲಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಅರಣ್ಯ ಸಂರಕ್ಷಣಾಧಿಕಾರಿಗಳಾದ ಚಕ್ರಪಾಣಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸಲು 106 ಚಟುವಟಿಕೆಗಳನ್ನು ನಿರ್ಮಾಣ ಮಾಡಿ ನೀರನ್ನು ತುಂಬಿಸಲಾಗಿದೆ.  ಇದಲ್ಲದೆ ಪ್ರತಿ ತಾಲ್ಲೂಕಿಗೆ 20 ರಂತೆ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ತುಂಬಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರವಾಸದ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ: ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಂಗಣ ಉದ್ಘಾಟನೆ

ವರದಿ: ಚಂದ್ರಶೇಖರ ಬೀಜಾಡಿ

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ: ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಂಗಣ ಉದ್ಘಾಟನೆ


ಕುಂದಾಪುರ: ಸಮಾಜದ ಅಭಿವೃದ್ಥಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಆಗ ಸಮಾಜ ಬೇಗನೆ ಅಭಿವೃದ್ಥಿ ಹೊಂದಲು ಸಾಧ್ಯ.ಗಾಣಿಗ ಸಮಾಜ ಸಣ್ಣ ಸಮಾಜ ಆದರೂ ಕಡಿಮೆ ಅವಧಿಯಲ್ಲಿ ಸುಮಾರು 1.35ಕೋಟಿ ಅಧಿಕ ವೆಚ್ಚದಲ್ಲಿ ಹವಾನಿಯಂತ್ರಿತ ಸಭಾಂಗಣ ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ ಕೀರ್ತಿ ಗಾಣಿಗ ಸಮಾಜಕ್ಕೆ ಸಲ್ಲುತ್ತದೆ ಎಂದು ಉದ್ಯಮಿ, ಕುಂದಾಪುರ ವ್ಯಾಸರಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಲಕ್ಷ್ಮಣ ಹೇಳಿದರು.
ಅವರು ಭಾನುವಾರ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ವ್ಯಾಸರಾಜ ಕಲಾ ಮಂದಿರದಲ್ಲಿ ಸುಮಾರು 1.35 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೋಜನ ಶಾಲೆಯನ್ನು ಉದ್ಯಮಿ ಕೆ.ಎಂ.ರಾಮ, ಪಾಕ ಶಾಲೆಯನ್ನು ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಎಚ್.ಟಿ.ನರಸಿಂಹ, ಸೀತಾರತ್ನ ಯು.ಪಿ ಪರಮೇಶ್ವರ ವಧು-ವರರ ಕೊಠಡಿ ಉದ್ಘಾಟಿಸಿದರು. ಉದ್ಯಮಿಗಳಾದ ನಾಗೇಶ ಮಾರಾಳಿ ಲಿಪ್ಟ್,ಬಿ.ಎಸ್.ಸುಬ್ಬಣ್ಣ ಜನರೇಟರ್ ವ್ಯವಸ್ಥೆ, ಉಮೇಶ ಹವಾನಿಯಂತ್ರಿತ ವ್ಯವಸ್ಥೆಗೆ ಚಾಲನೆ ನೀಡುವರು. ಬೆಂಗಳೂರು ಕೈಗಾರಿಕೋದ್ಯಮಿ ದಿನಕರ ಸಂಘದ ನವೀಕೃತ ಕಛೇರಿ ಉದ್ಘಾಟಿಸಿದರು. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಜೆ.ಪಿ “ಪ್ರೇರಣೆ” ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ,ಭಟ್ಕಳ ಗಾಣಿಗ ಸೇವಾ ಸಂಘದ ನಾರಾಯಣ ಮಂಜುನಾಥ ಶೆಟ್ಟಿ,ಇಂಜನಿಯರ್ ಸುಕೇಶ್ ಕುಮಾರ್ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಕಲಾವತಿ ಅಚ್ಯುತ್, ಕೊಡಪಾಡಿ ಶ್ರೀ ಗುಹೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನರಸಿಂಹ ಗಾಣಿಗ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರವಿ ಗಾಣಿಗ ಆಜ್ರಿ, ಗುಜ್ಜಾಡಿ ಶ್ರೀ ಮಾರಿಕಾಂಬಾ ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ವಿಜಯಭಾಸ್ಕರ ಗಾಣಿಗ, ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ, ಸಿದ್ಥಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಹೊಸಂಗಡಿ ಜಯರಾಮ ಗಾಣಿಗ, ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪವರ್ ಲಿಷ್ಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಪವನ ಕುಮಾರ ಕೊಂಡಮ್ಮಾಡಿ, ರಾಷ್ಟ್ರಮಟ್ಟದ ಪವರ್ ಲಿಷ್ಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಕುಮಾರಿ ರಶ್ಮಿತಾ ಕುಂಭಾಶಿ,ಸಮಾಜ ಸೇವಕ ಆಟೋ ರಾಜ ಅವರನ್ನು ಸನ್ಮಾನಿಸಲಾಯಿತು.ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ್ ಗಾಣಿಗ,ಬೈಂದೂರು ಘಟಕದ ಅಧ್ಯಕ್ಷ ಗೋಪಾಲ ಗಾಣಿಗ,ಉಪ್ಪುಂದ ಘಟಕದ ಅಧ್ಯಕ್ಷ ರಮೇಶ ಗಾಣಿಗ ಮೊಗೇರಿ,ನಾವುಂದ ಘಟಕದ ಅಧ್ಯಕ್ಷ ಎನ್.ರತ್ನಾಕರ ಗಾಣಿಗ,ಹೆಮ್ಮಾಡಿ ಘಟಕದ ಅಧ್ಯಕ್ಷ ರವಿ ಗಾಣಿಗ ಮಲ್ಲಾರಿ,ನಾಡ ಪಡುಕೋಣೆ ಘಟಕದ ಅಧ್ಯಕ್ಷ ವೆಂಕಟರಮಣ ಗಾಣಿಗ,ನೇರಳಕಟ್ಟೆ-ಆಜ್ರಿ ಘಟಕದ ಅಧ್ಯಕ್ಷ ರಾಘವೇಂದ್ರ ಗಾಣಿಗ,ಕುಂದಾಪುರ ಘಟಕದ ಅಧ್ಯಕ್ಷ ಸಚ್ಚಿದಾನಂದ ಎಮ್.ಎಲ್.,ಬಸ್ರೂರು ಘಟಕದ ಅಧ್ಯಕ್ಷ ಪ್ರಶಾಂತ,ಕೋಟೇಶ್ವರ ಘಟಕದ ಅಧ್ಯಕ್ಷ ಸುಧಾಕರ ಗಾಣಿಗ,ತೆಕ್ಕಟ್ಟೆ ಘಟಕದ ಅಧ್ಯಕ್ಷ ಗುರುರಾಜ ಗಾಣಿಗ,ಕುಂದಾಪುರ ತಾಲೂಕು ಗಾಣಿಗ ಮಹಿಳಾ ಸಂಘಟನೆಯ ಅಧ್ಯಕ್ಷ ಶಶಿಕಲಾ ನಾರಾಯಣ ಗಾಣಿಗ,ಕೋಟೇಶ್ವರ ಗಾಣಿಗ ಮಹಿಳಾ ಸಂಘಟನೆಯ ಅಧ್ಯಕ್ಷ ಸವಿತಾ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಸ್ವಾಗತಿಸಿದರು.ಇಂಜಿನಿಯರ್ ರಮಾನಂದ ಕೆ.ಪ್ರಾಸ್ತಾವಿಕವಾಗಿ ಮಾತನಾಡಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ಪರಮೇಶ್ವರ ಜಿ.ಪಿ ವಂದಿಸಿದರು.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಆಸಮ್ ಬಾಯ್ಸ್ ಕೋಟೇಶ್ವರ ಇವರಿಂದ ನೃತ್ಯ ವೈವಿಧ್ಯ ಜರುಗಿತು.
ಬಾಕ್ಸ್ ಮಾಡಿ ಹಾಕಿ
ಸಭಾಂಗಣದ ವಿಶೇಷತೆಗಳು
ಸಂಪೂರ್ಣ ಹವಾನಿಯಂತ್ರಿತ 7 ಸಾವಿರ ಚದರ ಅಡಿಯ ವಿಸ್ತೀರ್ಣದ ಹಾಲ್ ಇದಾಗಿದ್ದು, 700 ಮಂದಿ ಕುಳಿತುಕೊಳ್ಳ ಬಹುದಾದಷ್ಟು ಸ್ಥಳಾವಕಾಶ ಹೊಂದಿದೆ. 6 ಸಾವಿರ ಚದರ ಅಡಿಯ 400 ಮಂದಿ ಕುಳಿತು ಊಟ ಮಾಡಬಹುದಾದ ನಾನ್ ಎ.ಸಿ ಬೋಜನ ಶಾಲೆಯ ಜತೆಗೆ, 1.5ಸಾವಿರ ಅಡಿ ವಿಸ್ತೀರ್ಣದ ವಿಶಾಲವಾದ ಶುದ್ಧ ಸಸ್ಯಾಹಾರಿ ಪಾಕ ಶಾಲೆಯನ್ನು ಹೊಂದಿದ್ದು,8 ಮಂದಿ ಸಾಮಥ್ರ್ಯದ ಲಿಷ್ಟ್ ಸೌಲಭ್ಯ,150ಕೆವಿ ಜನರೇಟರ್ ಸೌಲಭ್ಯದ ಜತೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.