HOLY ROSARY CHURCH, KUNDAPUR – 450 th JUBILEE SOUVENIR 2021

ಮಿನಿ ಉದ್ಯೋಗಮೇಳ 127 ಮಂದಿಗೆ ಉದ್ಯೋಗ – 139 ಮಂದಿ ತರಬೇತಿಗೆ ಆಯ್ಕೆ-ಮುನಿಕೃಷ್ಣ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಮಿನಿ ಉದ್ಯೋಗಮೇಳ 127 ಮಂದಿಗೆ ಉದ್ಯೋಗ – 139 ಮಂದಿ ತರಬೇತಿಗೆ ಆಯ್ಕೆ-ಮುನಿಕೃಷ್ಣ

ಕೋಲಾರ:- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಶನಿವಾರ ನಡೆದ ಮಿನಿ ಉದ್ಯೋಗ ಮೇಳದಲ್ಲಿ ಹಲವಾರು ಕಂಪನಿಗಳು ಪಾಲ್ಗೊಂಡಿದ್ದು, 137 ಮಂದಿಗೆ ಉದ್ಯೋಗ ಲಭಿಸಿದ್ದು, 139 ಮಂದಿ ತರಬೇತಿಗೆ ಆಯ್ಕೆಯಾಗಿದ್ದಾರೆ ಎಂದು ಇಲಾಖೆಯ ಪ್ರಭಾರ ಅಧಿಕಾರಿ ಮುನಿಕೃಷ್ಣ ತಿಳಿಸಿದ್ದಾರೆ.
ಉದ್ಯೋಗ ಅಭಿವೃದ್ದ ಕಾರ್ಯನಿರ್ವಾಹಕಿ ಸುನಿತಾ, ಈ ಸಂಬಂಧ ಮಾಹಿತಿ ನೀಡಿದ್ದು, ಬೆಂಗಳೂರಿನ ಚೋಳ ಜನರಲ್ ವಿಮಾ ಕಂಪನಿ, 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ, ಆದಿತ್ಯ ಬಿರ್ಲಾ ಸನ್‍ಲೈಫ್ ಕ್ಯಾಪಿಟಲ್ ಕಂಪನಿ35 ಮಂದಿಗೆ ಉದ್ಯೋಗ ಮತ್ತು 33 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಹೆಚ್‍ಡಿಎಫ್‍ಸಿ ಬ್ಯಾಂಕ್‍ವತಿಯಿಂದ 7 ಮಂದಿಗೆ ಉದ್ಯೋಗ ಹಾಗೂ 9 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ, ಝೋಮೋಟೋ ಕಂಪನಿಯಿಂದ 15 ಮಂದಿಗೆ ಉದ್ಯೋಗ ಹಾಗೂ 20 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಉಬೇರ್ ಕಂಪನಿ 6 ಮಂದಿಗೆ ಉದ್ಯೋಗ ಹಾಗೂ 4 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಂಡಿದ್ದರೆ, ವೆರಿಫೈಡ್ ಜಾಬ್ಸ್ ಇಂಡಿಯಾ ಕಂಪನಿ19 ಮಂದಿಗೆ ಕೆಲಸ ಹಾಗೂ 23 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಂಡಿದೆ.
ಅದೇ ರೀತಿ ಸ್ಪಂದನಾ ಬ್ರೈಟ್ ಫ್ಯೂಚರ್ ಇನೋವೇಷನ್ ಕಂಪನಿ 35 ಮಂದಿಗೆ ಉದ್ಯೋಗ ಹಾಗೂ 50 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ. ಮೇಳದಲ್ಲಿ ಸಿಬ್ಬಂದಿ ವೆಂಕಟೇಶ್ ಹಾಜರಿದ್ದು, ವಿವಿಧ ಕಂಪನಿಗಳ ಅಧಿಕಾರಿಗಳು ಇಡೀ ದಿನ ಸಂದರ್ಶನ ನಡೆಸಿ ಆಯ್ಕೆ ಪ್ರಕ್ರಿಯೆ ಮುಗಿಸಿದರು. 

ಪಿಯುಸ್ ನಗರ್ – ಸ್ತ್ರೀ ಸಂಘಟನಾ ಥಾವ್ನ್ ಚಲಿಯಾಂಚೊ ದೀಸ್ ಆಚರಣ್

ಭಾತ್ಮಿ: ವಾಲ್ಟರ್ ಫೆರ್ನಾಂಡಿಸ್

ಪಿಯುಸ್ ನಗರ್ – ಸ್ತ್ರೀ ಸಂಘಟನಾ ಥಾವ್ನ್ ಚಲಿಯಾಂಚೊ ದೀಸ್ ಆಚರಣ್

ಕುಂದಾಪುರ್, ಸೆ.೪: ಪಿಯುಸ್ ನಗರ್ ಫಿರ್ಗಜೆಂತ್ ಸಪ್ಟೆಂಬರ್ 2 ತಾರಿಕೆರ್ ಮರಿ ಮಾಯೆಚ್ಯಾ ಫೆಸ್ತಾ ಸಂಬಂಧಿ ಸಾಂಜೆರ್ 5:00 ವೊರಾರ್ ಕಥೊಲಿಕ್ ಸ್ತ್ರೀ ಸಂಘಟನಾನ್ ” ಚಲಿಯಾಂಚೊ ದೀಸ್'” ಆಚರಣ್ ಕೆಲೊ. ಮಾಗ್ಣ್ಯಾ ವಿಧಿ ಸವೆಂ ಕಾರ್ಯಕ್ರಮ್ ಆರಂಭ್ ಕೆಲೆಂ.

   ಪಿಯುಸ್ ನಗರ್ ಸೈಂಟ್ ಪಿಯುಸ್ ಇಂಗ್ಲಿಷ್ ಮಾಧ್ಯಮ್ ಇಸ್ಕೊಲಾಚಿ ಮುಖೆಲ್ ಶಿಕ್ಷಕಿ , ಹ್ಯಾ ವರ್ಷಾಚಿ “ಸಾಧಕ ಶಿಕ್ಷಕಿ” ಪುರಸ್ಕಾರಾಕ್ ಭಾಜನ್ ಜಾಲ್ಲಿ ಸಿ. ಐರಿನ್ ಕ್ರಾಸ್ತಾನ್,ಪ್ರಧಾನ್ ಉಲವ್ಪಿ ಜಾವ್ನ್ ಚಲಿಯಾಂಕ್ ತಾಂಚ್ಯಾ ಮುಖೆಲ್ಪಣಾ ವಿಶಿ ಜಾಗ್ರೃತಿ ದಿಂವ್ನ್ “ತಾಣಿಂ ಸಮಾಜೆಂತ್ ಆದರ್ಶ್ ದೆಖಿಭರಿತ್ (Roll Model) ಜಾಂವ್ನ್ ಜಿಯೆಜೆ” ಮ್ಹಣನ್ ಉಲೊ ದಿಲೊ

      ಸಿ. ಐರಿನಾನ್ ಜೊಡ್ಲ್ಯಾ ಪುರಸ್ಕಾರಾಕ್ ಅಭನಂದನ್ ಜಾವ್ನ್ ಸ್ತ್ರೀ ಸಂಘಟನಾನ್ ತಿಕಾ ಸನ್ಮಾನ್ ಕೆಲೊ. ಫಿರ್ಗಜ್ ಯಾಜಕ್ ಮಾ.ಜೋನ್ ಆಲ್ಫ್ರೆಡ್ ಬಾರ್ಬೊಜಾ ಬಾಪ್ ಕಾರ್ಯಕ್ರಮಾಚೆ ಅಧ್ಯಕ್ಷ್ ಜಾವ್ನಾಸ್ಲೆ . ಗೊವ್ಳಿಕ್ ಮಂಡಳಿಚೆ ಉಪಾಧ್ಯಕ್ಷ್ ವಾಲ್ಟರ್ ಫೆರ್ನಾಂಡಿಸ್ ಹಾಜರ್ ಆಸ್ಲೆ. ಸ್ತ್ರೀ ಸಂಘಟನಾಚಿ ಅಧ್ಯಕ್ಷ್ ಜೆನ್ನಿ ಡೇಸಾನ್ ಸ್ವಾಗತ್ ಕೆಲೊ. ಕಾರ್ಯದರ್ಶಿ ಲವೀನ ಡಿಸೋಜಾನ್ ಧನ್ಯವಾದ್ ಪಾಟಯ್ಲೆ. ಎವ್ಲಿನ್ ಫೆರ್ನಾಂಡಿಸಾನ್ ಸಿ.ಐರಿನ್ ಕ್ರಾಸ್ತಾಚಿ ವ್ಯಕ್ತಿ ಪರಿಚಯ್ ಕೆಲಿ. ವಿಲ್ಮಾ ಮಸ್ಕರೇನ್ಹಸಾನ್ ಕಾರ್ಯೆಂ ಚಲಯ್ಲೆಂ. ಫಿರ್ಗಜ್ ಕುಟ್ಮಾಂತ್ಲ್ಯೊ ಚಲಿಯೊ ಆನಿ ಸ್ತ್ರೀ ಸಂಘಟನಾಚೆ ಸಾಂದೆ ಹಾಜರ್ ಆಸ್ಲೆ. ಚಲಿಯಾಂಕ್ ಉಡಾಸಾಚಿ ಕಾಣಿಕ್ ದಿಲಿ.

ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಚಾಲನೆಯಿಂದ ಕ್ರಿಡೋತ್ಸವ

JANANUDI.COM NETWORK

ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಚಾಲನೆಯಿಂದ ಕ್ರಿಡೋತ್ಸವ

ಕುಂದಾಪುರ, ಸೆ.2: ಕುಂದಾಪುರ ಪವಿತ್ರ ರೋಜರಿ ಮಾತಾ ಚರ್ಚಿನ ಭಾರತೀಯ ಕಥೊಲಿಕ್ ಯುವ ಸಂಚಾಲನೆಯು (ಐ.ಸಿ.ವೈ.ಎಮ್) ಮೊಂತಿ ಹಬ್ಬದ ಪ್ರಯುಕ್ತ ಚರ್ಚ ಮಟ್ಟದಲ್ಲಿ ಕ್ರಿಡೋತ್ಸವವನ್ನು ಎರ್ಪಡಿಸಿತ್ತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕ್ರಿಡೋತ್ಸವಕ್ಕೆ ಶುಭ ಕೋರಿ ಅತಿ ಚಿಕ್ಕ ಮಗುವಿನ ಕೈಯಿಂದ ಬೇಲುನುಗಳನ್ನು ಒಡೆಯುವ ಮೂಲಕ ಉದ್ಘಾಟಿಸಿದರು. ಕ್ರಿಡೋತ್ಚವವು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೂ ಒಳ ಆಟವನ್ನು ಎರ್ಪಡಿಸಿತ್ತು. ಜೊತೆಗೆ ಮಡಿಕೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಚರ್ಚಿನ ನಾಗರಿಕರು ಉತ್ಸಾಹದಿಂದ ಕ್ರಿಡೋತ್ಸವದಲ್ಲಿ ಭಾಗವಹಿಸಿದರು.

    ಸಂಚಾಲನೇಯ ನಿರ್ದೇಶಕ ಧರ್ಮಗುರು ವಂ|ವಿಜಯ್ ಡಿಸೋಜಾ, ಸಚೇತಕಿ ರೇಶ್ಮಾ ಫೆರ್ನಾಂಡಿಸಾನ್, ಅಧ್ಯಕ ಆಲೆನ್ ತಾವ್ರೊ, ಕ್ರೀಡಾ ಕಾರ್ಯದರ್ಶಿ ಜೊಸ್ವಿನ್ ಕ್ರಾಸ್ತಾ, 18 ಆಯೋಗಗಳ ಅಯೋಗಾಚಿಂ ಸಂಚಾಲಕಿ ಪ್ರೇಮಾ ಡಿಕುನ್ಹಾ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಸ್ಮಿತಾ ಕೊರೆಯಾ ಆಟಗಳನ್ನು ನಡೆಸಿಕೊಟ್ಟರು. ಸ್ಯಾಮುವೇಲ್ ಲುವಿಸ್ ಕಾರ್ಯಕ್ರಮ ನಿರೂಪಿಸಿದರು.

 

 

ಕುಂದಾಪುರ, ಸೆ.2: ಕುಂದಾಪುರ ಪವಿತ್ರ ರೋಜರಿ ಮಾತಾ ಚರ್ಚಿನ ಭಾರತೀಯ ಕಥೊಲಿಕ್ ಯುವ ಸಂಚಾಲನೆಯು (ಐ.ಸಿ.ವೈ.ಎಮ್) ಮೊಂತಿ ಹಬ್ಬದ ಪ್ರಯುಕ್ತ ಚರ್ಚ ಮಟ್ಟದಲ್ಲಿ ಕ್ರಿಡೋತ್ಸವವನ್ನು ಎರ್ಪಡಿಸಿತ್ತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕ್ರಿಡೋತ್ಸವಕ್ಕೆ ಶುಭ ಕೋರಿ ಅತಿ ಚಿಕ್ಕ ಮಗುವಿನ ಕೈಯಿಂದ ಬೇಲುನುಗಳನ್ನು ಒಡೆಯುವ ಮೂಲಕ ಉದ್ಘಾಟಿಸಿದರು. ಕ್ರಿಡೋತ್ಚವವು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೂ ಒಳಾಂಗಣ ಆಟವನ್ನು ಎರ್ಪಡಿಸಿತ್ತು. ಜೊತೆಗೆ ಮಡಿಕೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಚರ್ಚಿನ ನಾಗರಿಕರು ಉತ್ಸಾಹದಿಂದ ಕ್ರಿಡೋತ್ಸವದಲ್ಲಿ ಭಾಗವಹಿಸಿದರು.

    ಸಂಚಾಲನೇಯ ನಿರ್ದೇಶಕ ಧರ್ಮಗುರು ವಂ|ವಿಜಯ್ ಡಿಸೋಜಾ, ಸಚೇತಕಿ ರೇಶ್ಮಾ ಫೆರ್ನಾಂಡಿಸಾನ್, ಅಧ್ಯಕ ಆಲೆನ್ ತಾವ್ರೊ, ಕ್ರೀಡಾ ಕಾರ್ಯದರ್ಶಿ ಜೊಸ್ವಿನ್ ಕ್ರಾಸ್ತಾ, 18 ಆಯೋಗಗಳ ಅಯೋಗಾಚಿಂ ಸಂಚಾಲಕಿ ಪ್ರೇಮಾ ಡಿಕುನ್ಹಾ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಸ್ಮಿತಾ ಕೊರೆಯಾ ಆಟಗಳನ್ನು ನಡೆಸಿಕೊಟ್ಟರು. ಸ್ಯಾಮುವೇಲ್ ಲುವಿಸ್ ಕಾರ್ಯಕ್ರಮ ನಿರೂಪಿಸಿದರು.

 

The SHAINE JC Saptha Ratna 2019

Photos by WALTER MONTEIRO

The SHAINE JC Saptha Ratna 2019


The closing ceremony was held at the Belman Shri Krishna Sabha, presided by JC Shweta Subhash, President of JCI Belman. The Chief  guest of the event was Mr. Suresh Shetty Gurme, A leading poetic Business personality of our state, Ln Gregory Menezes , The proprietor of Jesus Wood Industries, JCI Pramod Kumar of the JCI Senator, Zonal Charitable Trust Chairman, Mr. Muniyalu Udayakumar Shetty, President of Muniyalu Charitable Trust and other dignitary, Lions Club Belman, Rotery club belman members were present the occasion. A leading Businessman , agricultherest  Mr. S. K Salyan Awarded UDYOGA Ratna award,
Mr. Walter Nandalinde, Managing Director of Daijiworld, awarded prestige’s  TOBIP Award,
The award was given to Shri Dinesh Kamath of Kanjarakatte
TOYI, The award was honored in the presence of guest dignitaries. Jc Rajendra Bhat past zone president compare the programme, JC Shweta Subhas, welcome the gathering and awarded the sponsors and guest, Jecee week Direction Jc Sudeer Kamath render the vote of thanks
Director of JC Sudheer Kamath, JC Sarita Dinesh, Past Presidents, JJC Dikshit, were present the dias,

Last Jc/Ln Suhas Hegde directed Awesome  superb drama Aa Dina May 22 tulu drama performed by Nandalike kavi muddana mitra mandaliy members


ಸೂಪರ್‍ಸ್ಟಾರ್ ರಜಿನಿಕಾಂತ್ ಸಹೋದರನಿಗೆ ಬೆಂಗಳೂರಿನ ಅಪೊಲೊ ಹಾಸ್ಪಿಟಲ್‍ನಲ್ಲಿ ಯಶಸ್ವಿ ಜೋಡಿ ಕೀಲು ಜೋಡಣೆ ಕಸಿ ಶಸ್ತ್ರಚಿಕಿತ್ಸೆ- ಚಿಕಿತ್ಸೆಗೆ ಒಳಗಾದ ದಿನ ಸಂಜೆ ವೇಳೆಗೆ ನಡೆಯಲು ಸಾಧ್ಯವಾಗಿದೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಸೂಪರ್‍ಸ್ಟಾರ್ ರಜಿನಿಕಾಂತ್ ಸಹೋದರನಿಗೆ ಬೆಂಗಳೂರಿನ ಅಪೊಲೊ ಹಾಸ್ಪಿಟಲ್‍ನಲ್ಲಿ ಯಶಸ್ವಿ ಜೋಡಿ ಕೀಲು ಜೋಡಣೆ ಕಸಿ ಶಸ್ತ್ರಚಿಕಿತ್ಸೆ – ಚಿಕಿತ್ಸೆಗೆ ಒಳಗಾದ ದಿನ ಸಂಜೆ ವೇಳೆಗೆ ನಡೆಯಲು ಸಾಧ್ಯವಾಗಿದೆ

ಕೋಲಾರ:- ಬೆಂಗಳೂರಿನ ಶೇಷಾದ್ರಿಪುರಂನ ಅಪೊಲೊ
ಹಾಸ್ಪಿಟಲ್‍ನಲ್ಲಿ ಬೈಲೇಟರಲ್ ನೀ ರೀಪ್ಲೇಸ್‍ಮೆಂಟ್ ಶಸ್ತ್ರಚಿಕಿತ್ಸೆಗೆ
ಒಳಗಾಗಿರುವ ತಮ್ಮ ಸಹೋದರ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರನ್ನು ಸೂಪರ್‍ಸ್ಟಾರ್ ರಜಿನಿಕಾಂತ್ ಬುಧವಾರ ಭೇಟಿ ಮಾಡಿದರು.
77 ವರ್ಷದ ಸತ್ಯನಾರಾಯಣರಾವ್ ಗಾಯ್ಕವಾಡ್ ಅವರು ತಮ್ಮ ಮಂಡಿಯಲ್ಲಿ ಗಂಭೀರವಾದ ಅಸ್ಥಿ ಸಂಧಿವಾತ (ಓಸ್ಟಿಯೊಆರ್ಥರೈಟೀಸ್-ಓಎಸ್) ಸಮಸ್ಯೆಯಿಂದ ಬಳಲುತ್ತಿದ್ದು, ಬಹಳ ಕಾಲದಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಸತ್ಯನಾರಾಯಣ ಅವರು ಈಗ ಆರಾಮವಾಗಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದ ದಿನವೇ ನಡೆಯಲು ಅವರಿಗೆಸಾಧ್ಯವಾಗಿದೆ.

ಮಂಡಿ ಮರು ಜೋಡಣೆ ಶಸ್ತ್ರ್ರಚಿಕಿತ್ಸೆಗೆ ಒಳಗಾದ ನನ್ನ ಎಲ್ಲ ರೋಗಿಗಳು ಚಿಕಿತ್ಸೆಗೆ ಒಳಗಾದ ದಿನ ಸಂಜೆ ವೇಳೆಗೆ ನಡೆಯಲು ಸಾಧ್ಯವಾಗಿದೆ, 14 ದಿನಗಳ ನಂತರ ಹೊಲಿಗೆಗಳನ್ನು ತೆಗೆಯಲಾಗುತ್ತದೆ, ಮೂರುವಾರಗಳ ಬಳಿಕ ರೋಗಿಯು ಸ್ವಯಂ ಆಗಿ ಒಂದು ಕಿ.ಮೀ.ವರೆಗೆ ನಡೆಯಲು ಶಕ್ತರಾಗಿರುತ್ತಾರೆ. ಜತೆಜತೆಗೆ ನಿರಂತರವಾದ ದೈಹಿಕ ವ್ಯಾಯಾಮದ ಅಗತ್ಯವಿರುತ್ತದೆ. ನನ್ನ ರೋಗಿಗಳು ಪ್ರತಿದಿನ 3ರಿಂದ 5ಕೀ.ಮೀ.ಗಳವರೆಗೆ ನಡೆಯಬಲ್ಲರು ಹಾಗೂ ಅವರು ಗುಣಮಟ್ಟದ ಜೀವನ ನಡೆಸುತ್ತಿದ್ದು, ನೋವುರಹಿತ ಮತ್ತು ಸಂಸತಸಕರ ಜೀವನ
ನಡೆಸುತ್ತಿದ್ದಾರೆ ಎಂದು ಬೆಂಗಳೂರಿನ ಶೇಷಾದ್ರಿಪುರಂ ಅಪೊಲೊ ಹಾಸ್ಪಿಟಲ್‍ನ
ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ.ಕಿರಣ್ ಚೌಕ ತಿಳಿಸಿದರು.

ಭಾರತವು ಪ್ರಸ್ತುತ ಸಾಂಕ್ರಾಮಿಕವಾಗಿ ಮಂಡಿ ಕಾಯಿಲೆಗಳನ್ನು ಎದುರಿಸುತ್ತಿದೆ.
ಇತ್ತೀಚಿನ ಅಧ್ಯಯನದ ಪ್ರಕಾರ 10 ಕೋಟಿಗೂ ಅಧಿಕ ಭಾರತೀಯರು ಮಂಡಿಗೆ
ಸಂಬಂಧಿಸಿದ ಸಮಸ್ಯೆಗಳಾದ ಮೃದ್ವಸ್ಥಿ (ಕಾರ್ಟಿಲೇಜ್), ಎಸಿಎಲ್ ಟಿಯರ್
(ಅಸ್ಥಿರಜ್ಜಿನ ಹಾನಿ ಅಥವಾ ಉಳುಕು), ಪ್ರಮುಖ ಮಂಡಿ ಉಳುಕು ಹಾಗೂ
ವಯೋಸಹಜವಾದ ಇತರೆ ಸಮಸ್ಯೆಗಳಾದ ಕ್ಷೀಣಗೊಳ್ಳುವ ಸಂಧಿವಾತ,
ರುಮಾಟಾಯ್ಡ್ ಸಂಧಿವಾತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಥರದ
ಸಮಸ್ಯೆಗಳಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಐದು ವರ್ಷಗಳಿಂದ
ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆಗಳ ಸಂಖ್ಯೆಯು ಹೆಚ್ಚಳವಾಗಿದೆ.
ಅಸ್ಥಿಸಂಧಿವಾತ (ಓಎಸ್) ಸಮಸ್ಯೆಯು ವಯಸ್ಸಾದವರಲ್ಲಿ ಹೆಚ್ಚು
ಕಂಡುಬರಲಿದ್ದು, 75 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಶೇ.70ರಿಂದ ಶೇ.
90ರಷ್ಟು ಮಂದಿಗೆ ಈ ಸಮಸ್ಯೆ ಕಂಡುಬರುತ್ತದೆ. ಸಾಮಾನ್ಯವಾಗಿ ಕಂಡು
ಬರುವ ಸಂಧಿವಾತ ಸಮಸ್ಯೆಗಳಲ್ಲಿ ಅಸ್ಥಿಸಂಧಿವಾತ (ಓಎಸ್)ವು
ದುರ್ಬಲಗೊಳಿಸುವ, ಗಂಭೀರವಾದ ಕಾಯಿಲೆಯಾಗಿದ್ದು, ಹಾನಿಗೊಳಗಾದ ಅಸ್ಥಿರಜ್ಜು ಮತ್ತು ಸೈನೋವಿಯಲ್ ದ್ರವ ಕ್ಷೀಣಿಸುತ್ತಿರುತ್ತದೆ” ಎಂದು ಡಾ. ಕಿರಣ್ ಚೌಕ ತಿಳಿಸಿದರು. ಭಿನ್ನ ಸ್ವರೂಪದ ಕೀಲು ಸಮಸ್ಯೆಯಿಂದ ಬಳಲುತ್ತಿರುವ ನನ್ನ ಹೆಚ್ಚಿನ ರೋಗಿಗಳು ಕೋಲಾರ ಭಾಗದಿಂದ ಬರುತ್ತಾರೆ ಎಂದು ತಿಳಿಸಿದರು.

 

ಶ್ರೀನಿವಾಸಪುರದ ರಸ್ತೆಯಲ್ಲಿ ಪುರಸಭೆ ವತಿಯಿಂದ ಶನಿವಾರ ಪಾದಚಾರಿ ರಸ್ತೆ ತೆರವುಗೊಳಿಸಲಾಯಿತು

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದ ರಸ್ತೆಯಲ್ಲಿ ಪುರಸಭೆ ವತಿಯಿಂದ ಶನಿವಾರ ಪಾದಚಾರಿ ರಸ್ತೆ ತೆರವುಗೊಳಿಸಲಾಯಿತು




ಶ್ರೀನಿವಾಸಪುರ:  ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದ ಪಾದಚಾರಿ ರಸ್ತೆ ಹಾಗೂ ಅಂಗಡಿಗಳ ಮುಂದೆ ಚಾಚಿದ್ದ ತಗಡಿನ ಚಪ್ಪರಗಳನ್ನು ಪುರಸಭೆ ವತಿಯಿಂದ  ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.


  ಪಟ್ಟಣದ ಎಂಜಿ ರಸ್ತೆ ಹಾಗೂ ಪೋಸ್ಪ್‌ ಆಫೀಸ್‌ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುವಾಗ ಅಂಗಡಿ ಮಾಲೀಕರು ತಾವೇ ತೆರವುಗೊಳಿಸುವುದಾಗಿ ತಿಳಿಸಿದರು. ಸೆ.3 ರೊಳಗೆ ತೆರವುಗೊಳಿಸುವಂತೆ ಅಧಿಕಾರಿಗಳು ತಾಕೀತು ಮಾಡಿದರು.

  ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್‌, ಪೃಥ್ವಿರಾಜ್‌, ಪರಿಸರ ಅಧಿಕಾರಿ ಡಿ.ಶೇಖರರೆಡ್ಡಿ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಎನ್‌.ಕೆ.ರಾಘವೇಂದ್ರ ಪ್ರಕಾಶ್‌ ಇದ್ದರು.

ಭಾರತ ದೇಶವನ್ನು 2025 ರೊಳಗಾಗಿ ಕುಷ್ಠರೋಗ ಮುಕ್ತವಾಗಲು ಪಣ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಭಾರತ ದೇಶವನ್ನು 2025 ರೊಳಗಾಗಿ ಕುಷ್ಠರೋಗ ಮುಕ್ತವಾಗಲು ಪಣ
ಜಿಲ್ಲೆಯಲ್ಲಿ ಸೆ.5 ರಿಂದ 23 ರವರೆಗೆ ಕುಷ್ಠರೋಗ ಪತ್ತೆ ಆಂದೋಲನ : ಡಾ.ವಿಜಯ ಕುಮಾರ್ 
ಕೋಲಾರ: ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರವು 2025 ರೊಳಗಾಗಿ ಭಾರತವನ್ನು ಕುಷ್ಠ ರೋಗ ಮುಕ್ತ ದೇಶವಾಗಿಸಲು ಪಣತೊಟ್ಟಿದ್ದು, ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚುವ ಅಭಿಯಾನವನ್ನು ಸೆ.5 ರಿಂದ 23 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ. ವಿಜಯಕುಮಾರ್ ಅವರು ತಿಳಿಸಿದರು. 
 ನಗರ ಹೊರವಲಯದಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಷ್ಠ ರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲು ಈ ಅಭಿಯಾನವನ್ನು ನಡೆಸುತ್ತಿದ್ದು ಪ್ರತಿಯೊಂದು ಮನೆಗೂ ಭೇಟಿ ನೀಡಿ ಕುಷ್ಠ ರೋಗ ಪ್ರಕರಣಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು. 
 ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಆಂದೋಲನದ ಅವಧಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಪರೀಕ್ಷಿಸಲಿದ್ದು ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕುಷ್ಠ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದರು. 
  ಜಿಲ್ಲೆಯಲ್ಲಿ 54 ಕುಷ್ಠ ರೋಗ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ 46 ಪ್ರಕರಣಗಳಲ್ಲಿ ಹೆಚ್ಚು ಮಚ್ಚೆಗಳು ಕಾಣಿಸಿಕೊಂಡಿದ್ದರೆ 8 ಪ್ರಕರಣಗಳು ಪ್ರಾರಂಭದ ಹಂತದಲ್ಲಿಯೇ ಕಂಡು ಬಂದಿದೆ. ಇವರುಗಳಿಗೆ ಈಗಾಗಲೇ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅದರಲ್ಲೂ ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕುಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಗಡಿ ಭಾಗಗಳಲ್ಲಿಯೂ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು. 
 ಕುಷ್ಠ ರೋಗವು ಮೈಕೋ ಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದೊಂದು ಗುಣವಾಗುವ ಕಾಯಿಲೆಯಾಗಿದ್ದು ಇದಕ್ಕೆ ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಈ ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮಾರಕವಾಗದಿದ್ದರೂ ರೋಗಿಯು ಅಂಗಾಂಗಗಳನ್ನು ಕಳೆದುಕೊಳ್ಳುವ ಸಾಧÀ್ಯತೆ ಇರುತ್ತದೆ ಎಂದು ವಿವರಿಸಿದರು. 
 ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿಯಾದ ನಾರಾಯಣಸ್ವಾಮಿ ಅವರು ಮಾತನಾಡಿ, ಕುಷ್ಠ ರೋಗವು ಕೇವಲ ಮನುಷ್ಯನಿಗೆ ಬರುವ ಕಾಯಿಲೆಯಾಗಿದೆ. ಚರ್ಮದ ಮೇಲೆ ತಿಳಿ ಬಿಳಿ, ತಾಮ್ರ ಬಣ್ಣದ ಮಚ್ಚೆಗಳು, ಸ್ಪರ್ಶ ಜ್ಞಾನ ಇಲ್ಲದಿರುವುದು, ನರಗಳ ಊತ, ಮಚ್ಚೆಗಳ ಮೇಲೆ ಕೂದಲು ಬೆಳೆಯದಿರುವುದು, ಮಾಂಸ ಖಂಡಗಳ ನಿಷ್ಕ್ರಿಯತೆ, ಮೂಗು ಚಪ್ಪಟೆಯಾಗುವುದು, ಕಣ್ಣು ಮುಚ್ಚಲು ಆಗದಿರುವುದು, ಮಚ್ಚೆಗಳಲ್ಲಿ ನವೆ ಇಲ್ಲದಿರುವುದು ಮತ್ತು ಬೆವರು ಬರದಿರುವುದು ಈ ರೋಗದ ಲಕ್ಷಣಗಳಾಗಿವೆ ಎಂದರು. 
 ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಉಚಿತವಾಗಿ ಚಿಕಿತ್ಸೆ ನೀಡುವ ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿ ಜಿಲ್ಲೆಯಾಧ್ಯಂತ 1230 ತಂಡಗಳನ್ನು ಮಾಡಲಾಗಿದೆ. ಪ್ರತಿಯೊಂದು ತಂಡದಲ್ಲಿ ಒಬ್ಬ ಪುರುಷ ಮತ್ತು ಮಹಿಳಾ ಸಿಬ್ಬಂದಿ ಇರುತ್ತಾರೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಇಲಾಖೆಯವರನ್ನು ತೊಡಗಿಸಿಕೊಳ್ಳಲಾಗಿದೆ. ಇವರುಗಳ ಕಾರ್ಯವೈಖರಿಯನ್ನು ಗಮನಿಸಲು 240 ಮೇಲ್ವಿಚಾರಕರ ತಂಡವನ್ನು ರಚಿಸಲಾಗಿದೆ. ಈ ಎಲ್ಲರಿಗೂ ಸಹ ಈಗಾಗಲೇ ತರಬೇತಿಯನ್ನೂ ಸಹ ನೀಡಲಾಗಿದೆ ಎಂದು ವಿವರಿಸಿದರು. 
  ಇದೇ ಸಂದರ್ಭದಲ್ಲಿ ಕುಷ್ಠರೋಗ ಪತ್ತೆ ಅಭಿಯಾನದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. 
 ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಚಂದನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಪ್ರಸನ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಕಥೊಲಿಕ್ ವೈ,ಸಿ.ಎಸ್. ಸಂಚಾಲನೆಯಿಂದ ಶಿಕ್ಷಕರ ದಿನಾಚರಣೆ

JANANUDI.COM NETWORK

 

ಕುಂದಾಪುರ ಕಥೊಲಿಕ್ ವೈ,ಸಿ.ಎಸ್. ಸಂಚಾಲನೆಯಿಂದ ಶಿಕ್ಷಕರ ದಿನಾಚರಣೆ

ಕುಂದಾಪುರ, ಸೆ.2: ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಘಟನೆಯಿಂದ ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸೇರಿದ ಎಲ್ಲಾ ಶಾಲೆಯ ಶಿಕ್ಷಕರಿಗೆ, ಪ್ರಾದ್ಯಾಪಕರನ್ನು ಸೇರಿಸಿ ಶಿಕ್ಷರ ದಿನಾಚರಣೆಯನ್ನು ಸೆಪ್ಟಂಬರ್ 3 ರಂದುï್ಲ ಆಚರಿಸಲಾಯಿತು. ಮೊದಲಿಗೆ ಶಿಕ್ಷಕರ ಜೊತೆ ಪ್ರಾಂಶುಪಾಲ ಧರ್ಮಗುರು ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ನೇತ್ರದ್ಚಲ್ಲಿ, ಇಗರ್ಜಿಯ ಪ್ರಧಾನ ಧರ್ಮಗುರು ಫಾ|ಸ್ಟ್ಯಾನಿ ತಾವ್ರೊ ಇವರ ಸಹ ಯಾಜಕತ್ವದಲ್ಲಿ ಬಲಿಪೂಜೆಯನ್ನು ನೇರವೆರಿಸಿತು.
ನಂತರ ನೆಡೆದ ಸಮಾರಂಭದಲ್ಲಿ ಶಿಕ್ಷಕರಿಗಾಗಿ ತನ್ನ ತಮ್ಮ ಜನ್ಮ ದಿನಚರಣೆಯನ್ನು ಸಮರ್ಪಿಸಿಕೊಂಡ ಮಾಜಿ ರಾಷ್ಟ್ರಪತಿ ಚಿ.ರಾಧಕ್ರಷ್ಣರನ್ನು ನೆನೆದು. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲಾ ಅವರು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರು ಮಕ್ಕಳ ಭವಿಸ್ಯವನ್ನು ರೂಪಿಸುವ ಮಹತ್ತರವಾದ ಹೊಣೆ ಇದೆ, ಹೆಚ್ಚಿನವರು ಶಿಕ್ಷಕರ ಮಾರ್ಗದರ್ಶನದಿಂದ ಬಹು ಪ್ರಸಿದ್ದ ದೊಡ್ಡ ವ್ಯಕ್ತಿಗಳಾಗಿ ಹೊಮ್ಮಿದ್ದಾರೆ’ ಎಂದು ಅವರು ಶುಭಾಷಯ ಕೋರಿದರು, ಸಹಾಯಕ ಧರ್ಮಗುರು ಫಾ|ವಿಜಯ್ ಡಿಸೋಜಾ, ಪಾಲನ ಮಂಡಳಿ ಕಾರ್ಯದರ್ಶಿ ಶಿಕ್ಷಕಿ ಫೆಲ್ಸಿಯಾನ್ ಡಿಸೋಜಾ, ವೈ,ಸಿ.ಎಸ್. ಸಚೇತಕಿ ಉಪನ್ಯಾಸಕಿ ಲೋನಾ ಲುವಿಸ್, ಅಧ್ಯಕ್ಷೆ ರೀಯಾ ಬರೆಟ್ಟೊ ಕಾರ್ಯದರ್ಶಿ ಆಲಿಶಾ ಡಿಸೋಜಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು

ಕಥೊಲಿಕ್ ಸಭಾ- ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್‍ಶಿಪ್ ವಿತರಣೆ- ಆರೋಗ್ಯ ಕಾರ್ಡ್ ವಿತರಣೆ

ಕಥೊಲಿಕ್ ಸಭಾ- ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್‍ಶಿಪ್ ವಿತರಣೆ- ಆರೋಗ್ಯ ಕಾರ್ಡ್ ವಿತರಣೆ

ಕಥೊಲಿಕ್ ಸಭಾ – ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್‍ಶಿಪ್ ವಿತರಣೆ – ಆರೋಗ್ಯ ಕಾರ್ಡ್ ವಿತರಣೆ
ಕುಂದಾಪುರ,ಸೆ.1: ’ನಾವು ಎನೆಂದು ಅರ್ಥೈಸಿಕೊಳ್ಳಬೇಕು, ಆವಾಗ ನಮ್ಮ ಸಾಮಥ್ರ್ಯ ಅರಿವಾಗುವುದು, ಯೋಚಿಸು ಆಗುತ್ತದೊ ಇಲ್ಲವೊ, ಯೋಚಿಸು ಆಗುವುದಿಲ್ಲವೋ ಎಂದು ನಾವು ನಿರ್ಧಾರ ಮಾಡಬೇಕು, ಪ್ರಯತ್ನ ಪಟ್ಟರೆ ಆಸಾಧ್ಯ ಎಂಬುದು ಎನೂ ಇಲ್ಲಾ. ನಾವೂ ಆಗುತ್ತೇನೆ ಎಂಬುದು ಗಟ್ಟಿ ನಿರ್ಧಾರ ಮಾಡಿದರೆ, ಅದು ನಮ್ಮ ಜಿವಿತದಲ್ಲಿ ಎನಾಗಬೇಕೆಂಬುದು ಅದು ಆಗಿಯೆ ಆಗುತ್ತದೆ, ಹಾಗಾಗಿ ನಾವು ಒಳ್ಳೆದು ಮಾಡಿ ಕಲಿತು, ಸರ್ಕಾದಿ ಹುದ್ದೆಗಳನ್ನು ಗಳಿಸಿಕೊಂಡು ಸಮಾಜ ಸೇವೆ ಮಾಡಬೇಕು’ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಪಿಂಟೊ ದೀಪ ಬೆಳಗಿಸಿ ಅವರು ಮಾತಾನಾಡಿದರು.
ಅವರು ಜಾನ್ ಡಿಸಿಲ್ವಾ ಫೌಂಡೆಶನ್ ಮುಂಬಯಿ ಮತ್ತು ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಇವರ ಸಹಯೋಗದಲ್ಲಿ ಕುಂದಾಪುರ ಕಲಾಮಂದಿರದಲ್ಲಿ ನಡೆದ ಬ್ರಹತ್ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸ್ಕಾಲರ್‍ಶಿಪ್ ವಿತರಣೆ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡುತಿದ್ದರು. ‘ಕಥೊಲಿಕ್ ಸಭಾ ಸಂಘಟನೇಯು ಸಮಾಜಕ್ಕೆ ಒಳಿತಾಗುಗುವ ಹಲವು ಕೆಲಸಗಳನ್ನು ಮಾಡುತಿದ್ದೆ ಅದರಲ್ಲಿ ಒಂದು ಆರೋಗ್ಯ ಕಾರ್ಡ್ ಮಾಡಿ ಕೊಡುವುದು. ಈ ಅತ್ಯುತ್ತಮ ಸೇವೆ ಅರಿತು, ನಮ್ಮ ರಾಜ್ಯ ಮಾತ್ರವಲ್ಲಾ ದೇಶದ ಧರ್ಮಪ್ರಾಂತ್ಯಗಳು ಈ ಯೋಜನೆಯನ್ನು ತಮ್ಮ ಧರ್ಮಪ್ರಾಂತ್ಯದಲ್ಲಿಯೂ ಹಮ್ಮಿಕೊಳ್ಳಲು ನಮ್ಮ ನೆರವು ಕೋರಿದೆ’ ಎಂದು ತಿಳಿಸಿದರು.
ಮುಖ್ಯ ದಿಕ್ಸೂಚಿ ಭಾಷಣಕಾರದ ಡೆಪ್ಯೂಟಿ ರೇಂಜ್ ಫಾರೆಸ್ಟ್ ಅಧಿಕಾರಿ ಶಾಮಾನ್ ಕ್ಯಾಸ್ಟೆಲೀನೊ ‘ನಾನು ಸ್ನಾನಕೋತ್ತರ ಪದವಿ ಪಡೆದರೂ, ತಣ್ಣಗೆ ಕುಳಿಯದೆ, ಉನ್ನತ ಮಟ್ಟದ ವ್ಯಾಸಂಗ ಮಾಡಬೇಕೆಂದು ನಿರ್ಧಾರದಂತೆ, ಸರ್ಕಾರಿ ಉನ್ನತ ವ್ಯಾಸಂಗ ಮಾಡಿ ಪರೀಕ್ಷೆಗಳನ್ನು ಕಟ್ಟಿ ಉತೀರ್ಣಳಾಗಿ ಈ ಹುದ್ದೆಯನ್ನು ಪಡೆದಿದ್ದೆನೆ. ಅನೇಕ ರೀತಿಯ ಸರ್ಕಾರಿ ಹುದ್ದೆಗಳು ಇವೆ, ಅದನ್ನು ನಾವು ತಿಳಿದವರ ಜೊತೆ ತಿಳಿದುಕೊಂಡು ವ್ಯಾಸಂಗ ಮಾಡಿ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಬೇಕು’ ಎಂದು ವಿವರಿಸಿದರು.
ಒಂದು ಸಾವಿರ ರೂಪಾಯಿ ಲೆಕ್ಕದಲ್ಲಿ 69 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದ ದಾನಿ ಜಾನ್ ಜಾನ್ ಡಿಸಿಲ್ವಾ ಫೌಂಡೆಶನ್ ಮುಂಬಯ್ ಇದರ ಅಧ್ಯಕ್ಷ ಜಾನ್ ಡಿಸಿಲ್ವಾ ಮಾತಾಡಿ ‘ಶಿಕ್ಷಣ, ಉದ್ಯೋಗ, ಸರ್ಕಾರಿ ಸೇವೆಯಲ್ಲಿ ನಾವು ಮುಂದಿರಬೇಕು, ಸ್ವದ್ಯೋಗ ಮಾಡಿ ಧನಿಗಳಾಗಿ ಇತರರಿಗೆ ಉದ್ಯೋಗ ನೀಡಿ ಎಂದರು. ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ದಾನಿಗಳಿ ಸಹಕಾರದೊಂದಿಗೆ 5 ಸಾವಿರ ರೂಪಾಯಿ ಲೆಕ್ಕದಲ್ಲಿ 40 ವಿದ್ಯಾರ್ಥಿಗಳಿಗೆ ಸ್ಕೊಲರ್‍ಶಿಪ್ ವಿತರಿಸಲಾಯಿತು.ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಾತ್ಮಿಕ ನಿರ್ದೇಶಕ ವಂ|ಫಾ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ವಂ|ಫಾ| ಸ್ಟ್ಯಾನಿ ತಾವ್ರೊ ಪ್ರೇರಣೆಯ ಮಾತುಗಳನ್ನಾಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾರ್ಡರ್ಸ್ ‘ಕೇವಲ ಡಿಗ್ರಿಗಳಲ್ಲಿ ಯಶಸ್ಸು ಗಳಿಸಿದರೆ ಸಾಲದು, ಅದನ್ನು ನಿರಂತರ ಮುಂದುವರೆಸಿ, ಉನ್ನತ ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯ ಬೇಕು ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಡಗಳನ್ನು ವಿತರಿಸಲಾಯಿತು ಸಂಚಾಲಕ ವಿವಿಯನ್ ಮತ್ತು ವೆರೋನಿಕಾ ಕರ್ನೇಲಿಯೊ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ಗ್ಲ್ಯಾಡಿಸ್ ಡಿಸಿಲ್ವಾ, ಕಾರ್ಯಕ್ರಮದ ಸಂಚಾಲಕ ಡಾ|ಜೆರಾಲ್ಡ್ ಪಿಂಟೊ, ಮಾಜಿ ಕಥೊಲಿಕ್ ಸಭಾ ಅಧ್ಯಕ್ಷ ಬಾಲೇರಿಯನ್ ಫೆರ್ನಾಂಡಿಸ್, ಖಜಾಂಚಿ ಜೆರಾಲ್ಡ್ ರೊಡ್ರಿಗಸ್, ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ವಾಲ್ಟರ್ ಡಿ ಸೋಜಾ ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ವಂದಿಸಿದರು. ಉಪಾಧ್ಯಕ್ಷ ಫ್ಲಾಯ್ವನ್ ಡಿಸೋಜಾ ಮತ್ತು ಪ್ರಮೀಳಾ ಡೆಸಾ ಕಾರ್ಯಕ್ರಮವನ್ನು ನಿರೂಪಿಸಿದರು.