HOLY ROSARY CHURCH, KUNDAPUR – 450 th JUBILEE SOUVENIR 2021

ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ವಿಧಾನ ಪರಿಷತ್‌ ಸದಸ್ಯ ತೂಪಲ್ಲಿ ಆರ್‌.ಚೌಡರೆಡ್ಡಿ ಉದ್ಘಾಟಿಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ವಿಧಾನ ಪರಿಷತ್‌ ಸದಸ್ಯ ತೂಪಲ್ಲಿ ಆರ್‌.ಚೌಡರೆಡ್ಡಿ ಉದ್ಘಾಟಿಸಿದರು.

ಶ್ರೀನಿವಾಸಪುರ: ಸರ್ಕಾರಿ ಶಾಲಾ ಶಿಕ್ಷಕರು ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.
  ಕನಕ ಸಮುದಾಯ ಭವನದಲ್ಲಿ  ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಹೃದಯದಲ್ಲಿ ಉಳಿಯುತ್ತಾರೆ. ಅಂಥ ಶಿಕ್ಷಕರಾಗಲು ಡಾ. ಎಸ್‌.ರಾಧಾಕೃಷ್ಣನ್‌, ಡಾ. ಅಬು್ದುಲ್‌ ಕಲಾಂ ಅವರಂಥ ಶಿಕ್ಷಕರ ಆದರ್ಶ ಪಾಲಿಸಬೇಕು. ಶಾಲಾ ಶಿಕ್ಷಕ ಸಮುದಾಯದ ನಡುವೆ ಶಕ್ತಿಯಾಗಿ ಬೆಳೆಯಬೇಕು ಎಂದು ಹೇಳಿದರು.
  ಜಾತಿ, ಮತ ಹಾಗೂ ಪಕ್ಷದ ಹೆಸರಲ್ಲಿ ಶಿಕ್ಷಣ ಸಮುದಾಯವನ್ನು ಒಡೆಯಲಾಗುತ್ತಿದೆ. ಶಿಕ್ಷಕರಲ್ಲಿ ಸಮಾಜ ಕಟ್ಟುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಶಿಕ್ಷಕ ವಿದ್ಯಾರ್ಥಿ ಆಗಬೇಕು. ಅಕ್ಷರ ಭಂಡಾರವಾಗದೆ, ಜ್ಞಾನ ಭಂಡಾರವಾಗಬೇಕು. ಭ್ರಷ್ಟ ವ್ಯವಸ್ಥೆಯ ವಿರುದ್ಧ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಭ್ರಷ್ಟಾಚಾರದ ವಿರುದ್ಧ ಮಕ್ಕಳನ್ನು ತಯಾರು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
    ವಿಧಾನ ಪರಿಷತ್‌ ಸದಸ್ಯ ತೂಪಲ್ಲಿ ಆರ್‌ ಚೌಡರೆಡ್ಡಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಸಾಣೆ ಹಿಡಿಯುವ ಕೆಲಸ ಶಿಕ್ಷಕರಿಂದ ನಡೆಯಬೇಕು  ಎಂದು ಹೇಳಿದರು.
  ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಜೀವನ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸರ್ಕಾರ ಶಿಕ್ಷಕರಿಗೆ ಉತ್ತಮ ಸೌಲಭ್ಯ ನೀಡುತ್ತಿದೆ. ಅದನ್ನು ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸ್ಫೂರ್ತಿಯಾಗಬೇಕು ಎಂದು ಹೇಳಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ, ಡಯಟ್ ಹಿರಿಯ ಉಪನ್ಯಾಸಕ ರಾಘವೇಂದ್ರ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ ಸಮಾರಂಭದಲ್ಲಿ ಶಿಕ್ಷಕರ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು.
  ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.
  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್‌, ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌, ಎಪಿಎಂಸಿ ಅಧ್ಯಕ್ಷ ಎನ್‌.ರಾಜೇಂದ್ರ ಪ್ರಸಾದ್‌, ಮುಖಂಡ ಕೆ.ಕೆ.ಮಂಜುನಾಥರೆಡ್ಡಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ಎಚ್‌.ಸಂಪತ್‌ ಕುಮಾರ್‌, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್‌.ಗೋವಿಂದರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್‌, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಸುಲೋಚನ, ಬಿಆರ್‌ಸಿ ಸಂಯೋಜಕಿ ವಸಂತ, ಮುಖಂಡರಾದ ಕಲಾ ಶಂಕರ್‌, ಬೈರೇಗೌಡ, ಎನ್.ದೇವರೆಡ್ಡಿ, ರಾಮಚಂದ್ರ, ಜಿ.ವಿ.ಚಂದ್ರಪ್ಪ, ಪದ್ಮನಾಭ ಮತ್ತಿತರರು ಇದ್ದರು.

ಕುಂದಾಪುರ್ ರೊಜಾರ್ ಮಾ0iÉುಚ್ಯಾ ಇಗರ್ಜೆ ಸಂಭ್ರಮಾಚೆ ಮೊಂತಿ ಫೆಸ್ತ್

JANANUDI.COM NETWORK

ಕುಂದಾಪುರ್ ರೊಜಾರ್ ಮಾ0iÉುಚ್ಯಾ ಇಗರ್ಜೆ ಸಂಭ್ರಮಾಚೆ ಮೊಂತಿ ಫೆಸ್ತ್


ಕುಂದಾಪುರ್,ಸೆ.8: ಕುಂದಾಪುರ್ ಪವಿತ್ರ್ ರೊಜಾರ್ ಮಾ0iÉುಚ್ಯಾ ಇಗರ್ಜೆ ಸಂಭ್ರಮಾನ್ ಮೊಂತಿ ಫೆಸ್ತಾಚೆ ಆಚರಣ್ ಕೆಲೆಂ. ಸುರ್ವೆರ್ ಇಗರ್ಜೆ ಮೈದಾನಾರ್ ಮರಿ0iÉುಚ್ಯಾ ಗ್ರೊಟ್ಟೊ ಮುಖಾರ್ ನವೆ ಬೆಳೆ ಭಾತಾಚ್ಯೊ ಕಣ್ಸ್ಯೊ ಆನಿ ಬಾಳೊಕ್ ಮರಿ0iÉುಚಿ ಸುಂಗಾರಾಯ್ಲಿ ಚೆರೆಲ್ ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಬೆಂಜಾರ್ ಕೆಲ್ಯಾ ಉಪ್ರಾಂತ್ ಬಾಳೊಕ್ ಮರಿ0iÉುಚೆ ಚೆರೆಲ್ ಕಣ್ಸ್ಯೊ ಘೆಂವ್ನ್ ಇಗರ್ಜೆ ಬಾಯ್ಲ್ಯಾ ರಸ್ತ್ಯಾರ್ ಥಾವ್ನ್ ಇಗರ್ಜೆಕ್ ವಠಾರಾಚ್ಯಾ ರಸ್ತ್ಯಾನ್ ಇಗರ್ಜ್ ಮ್ಹಣಾಸರ್ ಭುರ್ಗ್ಯಾಂನಿ ಪುಲಾಂ ಅರ್ಪುನ್, ವ್ಹಡಾನಿಂ ಗಾಯಾನ್ ಗಾಯ್ತ್ ಭಕ್ತಿನ್ ಬ್ಯಾಂಡಾ ದ್ವಾರಿ ಪುರ್ಶಾಂವ್ ಕಾಡ್ಲೊ.
ವಿಗಾರ್ ಭೊ|ಮಾ| ಬಾಪ್ ಸ್ಟ್ಯಾನಿ ತಾವ್ರೊ ಸಂಭ್ರಮಿಕ್ ಪವಿತ್ರ್ ಬಲಿದಾನ್ ಭೆಟಯ್ಲೆಂ. ಸಹಾಯಕ್ ವಿಗಾರ್ ಮಾ|ಬಾ| ವಿ ಡಿಸೋಜಾನ್ ‘ಆಜ್ ಆಮಿ ಮರಿಯೆ ಮಾಯೆಚ್ಯಾ ಜಲ್ಮಾ ದಿಸಾ ಆಮಿ ಚಾರ್ ಸಂಭ್ರಮ್ ಚಲವ್ನ್ ಆಸಾಂವ್, ಜೆಚುಚಿ ಆವಯ್ ಮರಿಯೆಚೆ ಫೆಸ್ತ್, ಫಳ್ ಮೆಳಾಜೆ ತರ್ ರೂಕಾಲಾಗಿಂ ವಚಾಜೆ, ತಶೆಂ ಜೆಜು ಆಮ್ಕಾಂ ಜಾಯ್ ತರ್, ಮರಿಯೆಲಾಗಿಂ ವಚಾಜೆ. ಮರಿ ಆಮ್ಚಿ ಮಾಯ್ ದಯಾಳ್, ಆಜ್ ತಿಚ್ಯಾ ಜಲ್ಮಾ ದಿಸಾ ತಿ ಆಮ್ಚ್ಯಾಲಾಗಿಂ ಕಾಣಿಕ್ ವಿಚಾರ್ತಾ, ದೆಕುನ್ ಆಮಿ ಬೊರಿ ಕಾಮಾ ಕರ್ನ್ ತಿಕಾ ಕಾಣಿಕ್ ದಿಂವ್ಯಾ ಆಜ್ ಆಮಿ ಕುಟ್ಮಾಚೆ ಫೆಸ್ತ್ ಆಸಾ ಕರ್ತಾಂವ್, ಆಮ್ಚ್ಯಾ ಕುಟ್ಮಾ ಮಧೆಂ ಮೋಗ್ ಚಡೊಂ. ತಶೆಂಚ್ ಬೆಳ್ಯಾಚೆ ಫೆಸ್ತ್ ಆಸಾ ಕರ್ತಾಂವ್, ದೆವಾನ್ ಆಮ್ಕಾಂ ಫಳ್ ದಿಲ್ಯಾ ಖಾತಿರ್ ಧಿನ್ವಾಸುಂಕ್ ಹೊ ವರ್ತೊ ಅವ್ಕಾಸ್, ತಶೆಂಚ್ ಭಾರಾತೀಯ ಪವಿತ್ರ್ ಸಭಾ ಚಲಿಯಾಂ ಭುಗ್ರ್ಯಾಂಚೆ ಫೆಸ್ತ್ ಆಚರಣ್ ಕರ್ತಾಂವ್, ಚಲಿಯಾಂಕ್ ಆಮಿ ವರ್ತೊ ಮಾನ್ ಗೌರವ್ ದಿಂವ್ಯಾ, ಹ್ಯಾ ದಿಸಾ ಆಮ್ಚ್ಯಾ ಕುಟ್ಮಾ ಮಧೆಂ ಮೋಗ್ ಚಡೊಂ’ ಮ್ಹಣನ್ ತಾಣಿ ಸಂದೇಶ್ ದಿಲೊ.
ವಿಗಾರ್ ಭೊ|ಮಾ|ಬಾ| ಸ್ಯಾನಿ ತಾವ್ರೊನ್ ಉಪ್ಕಾರ್ ಆತಂವ್ನ್ ‘ಮೊತಿ ಫೆಸ್ತ್ ಕುಟ್ಮಾಚೆ ಫೆಸ್ತ್, ಸಂಗಾತಾ ಮಾಗ್ತಾಂ, ಸಂಗಾತಾ ಜಿಯೆತಾ, ಮರಿಯೆಚ್ಯಾ ನಾಂವಾನ್ ಎಕ್ವಟಾನ್ ಮಾಯೆ ಮೊಗಾನ್ ಹೆಂ ಮೊಂತಿ ಫೆಸ್ತ್ ಆಚರ್ಸಿಯಾ ಮ್ಹಣ್ತಾ, ಶುಭಾಷಯ್ ಪಾಟಯ್ಲೆಪವಿತ್ರ್ ಬಲಿದಾನ ಉಪ್ರಾಂತ್ ಭುರ್ಗ್ಯಾಂಕ್ ಕೊಬು ವಾಂಟ್ಲೊ ತರ್, ಯಾಜಾಕಾನಿಂ ಫಿರ್ಗಜ್ ಗಾರಾಂಚಿ ವಾಹನಾಂ ಬೆಂಜಾರ್ ಕೆಲಿ. ಹ್ಯಾ ಬಲಿದಾನ ವೇಳಾರ್ ಗೊವ್ಳಿಕ್ ಮಂಡಳೆಚೊ ಉಪಾಧ್ಯಕ್ಷ್ ಕಾರ್ಯದರ್ಶಿ ಗುರ್ಕಾರ್, ವಾಡ್ಯಾಚೆಂ ಪ್ರತಿನಿಧಿ ಅನೇಕ್ ಧರ್ಮ್ ಭಯ್ಣ್ಯೊ, ತಶೆಂ ಬೋವ್ ವ್ಹಡ್ ಸಂಖ್ಯಾನ್ ಭಕ್ತಿಕ್ ಲೋಕ್ ಹಾಜರ್ ಆಸ್ಲೊ

ಶ್ರೀನಿವಾಸಪುರ ನೇತ್ರ ದೀಪ ಕಣ್ಣಿನ ಆಸ್ಪತ್ರೆ ಹಾಗೂ ರೋಟರಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ ನೇತ್ರ ದೀಪ ಕಣ್ಣಿನ ಆಸ್ಪತ್ರೆ ಹಾಗೂ ರೋಟರಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ಶ್ರೀನಿವಾಸಪುರ: ಪಟ್ಟಣದ ಗಣೇಶ ದೇವಾಲಯದ ಎದುರು ಎಲ್‌ಐಸಿ ಉಪಗ್ರಹ ಶಾಖೆ ಸಭಾಂಗಣದಲ್ಲಿ ಸೆ.6 ರಂದು ಬೆಳಿಗ್ಗೆ 10 ಗಂಟೆಯಿಂದ ಕೋಲಾರದ ಜಿಇಎಫ್ ನೇತ್ರ ದೀಪ ಕಣ್ಣಿನ ಆಸ್ಪತ್ರೆ ಹಾಗೂ ರೋಟರಿ ಶ್ರೀನಿವಾಸಪುರ ಸೆಂಟ್ರಲ್‌ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ ತಿಳಿಸಿದ್ದಾರೆ.
  ಕಣ್ಣಿನ ಸಮಸ್ಯೆ ಇರುವ ವ್ಯಕ್ತಿಗಳು ಸಮಯಕ್ಕೆ ಸರಿಯಾಗಿ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಶ್ರೀನಿವಾಸಪುರದಲ್ಲಿ ಬುಧವಾರ ಎಪಿಎಂಸಿ ಟೊಮೆಟೊ ವರ್ತಕರ ಸಂಘದಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ವಿಸರ್ಜನೆಗೆ ಮೊದಲು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಬುಧವಾರ ಎಪಿಎಂಸಿ ಟೊಮೆಟೊ ವರ್ತಕರ ಸಂಘದಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ವಿಸರ್ಜನೆಗೆ ಮೊದಲು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.

ಶ್ರೀನಿವಾಸಪುರ: ಹಬ್ಬದ ಪ್ರಯುಕ್ತ ಪೂಜಿಸಲಾಗಿದ್ದ ಗಣಪತಿ ವಿಗ್ರಹಗಳನ್ನು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಲಾಯಿತು.
  ಪಟ್ಟಣದ ಎಪಿಎಂಸಿ ಮಾರುಟ್ಟೆ ಪ್ರಾಂಗಣದಲ್ಲಿ ಟೊಮೆಟೊ ವರ್ತಕರ ಸಂಘದ ವತಿಯಿಂದ ಪೂಜಿಸಲಾಗಿದ್ದ ಬೃಹತ್ ಗಣಪತಿ ವಿಗ್ರಹವನ್ನು ಬೆಳ್ಳಿ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. 
  ಟೊಮೆಟೊ ನೌಕರರ ಸಂಘದ ಅಧ್ಯಕ್ಷ ಎಚ್‌.ರವೀಂದ್ರರೆಡ್ಡಿ, ಮುಖಂಡರಅದ ಚಂದ್ರು, ಶಿವಾರೆಡ್ಡಿ, ವೆಂಕಟರಾಮರೆಡ್ಡಿ, ಆರ್‌.ಕೆ.ಶ್ರೀನಿವಾಸರೆಡ್ಡಿ, ದಿವಾಕರ್‌, ಎಂ.ಕೆ.ಆಂಜನೇಯರೆಡ್ಡಿ, ರಾಮಾಂಜಲರೆಡ್ಡಿ ಮೆರವಣಿಗೆ ನೇತೃತ್ವ ವಹಿಸಿದ್ದರು.
  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘದ ವತಿಯಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ಪಟ್ಟಣದ ಎಂಜಿ ರಸ್ತೆಯಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.
  ಪಟ್ಟಣದ ಹೊರ ವಲಯದಲ್ಲಿ ಗದ್ದೆ ಬಯಲು ಗಣಪತಿ ಸಂಘದ ವತಿಯಿಂದ ಪೂಜಿಸಲಾಗಿದ್ದ ಗಣಪತಿ ವಿಗ್ರಹವನ್ನು ವಿಶೇಷವಾಗಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು. 
  

ಶ್ರೀನಿವಾಸಪುರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶಾಸಕ ಡಿ.ಕೆ.ಶಿವಕುಮಾರ್‌ ಬಂಧನ ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶಾಸಕ ಡಿ.ಕೆ.ಶಿವಕುಮಾರ್‌ ಬಂಧನ ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ಶ್ರೀನಿವಾಸಪುರ: ಕಾಂಗ್ರೆಸ್‌ ಕಾರ್ಯಕರ್ತರು ಶಾಸಕ ಡಿ.ಕೆ.ಶಿವಕುಮಾರ್‌ ಅವರ ಬಂಧನ ವಿರೋಧಿಸಿ  ಪ್ರತಿಭಟನೆ ನಡೆಸಿದರು. 
  ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಪ್ರತಿಭಟನೆ ನಿರತ ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ರಾಜಕೀಯ ಪ್ರೇರಿತವಾಗಿ ಜೈಲಿಗೆ ಕಳುಹಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಿಲುವು ಪ್ರದರ್ಶಿಸುತ್ತಿದೆ ಎಂದು ಆಪಾದಿಸಿದರು.
  ಡಿ.ಕೆ.ಶಿವಕುಮಾರ್‌ ಇಡಿ ವಿಚಾರಣೆಗೆ ಹಾಜರಾಗಿದ್ದರು. ಎಷ್ಟೇದಿನಗಳಾದರು ಅದು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ತಿಳಿಸಿದ್ದರು. ಆದರೂ ಅವರನ್ನು ವಿನಾಕಾರಣ ಬಂಧಿಸಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ದೇಶದ ಪ್ರಧಾನಿ ಹಾಗೂ ಗೃಹ ಸಚಿವರು ರಾಜಕೀಯ ದ್ವೇಷಕ್ಕೆ  ಮುಖಂಡರನ್ನು ತನಿಖಾ ಸಂಸ್ಥೆಗಳ ಮೂಲಕ ಮಣಿಸಲು ಪ್ರಯತ್ನಿಸುವುದು ಸರಿಯಲ್ಲ ಎಂದು ಹೇಳಿದರು. 
  ಡಿ.ಕೆ.ಶಿವಕುಮಾರ್‌ ಅವರನ್ನುಹಬ್ಬದ ದಿನ ತಮ್ಮ ತಂದೆ ಹಾಗೂ ಹಿರಿಯರಿಗೆ ಪೂಜೆ ಮಾಡಲು ಅವಕಾಶ ನೀಡದಿರುವುದು ಅಮಾನವೀಯ. ಇದನ್ನು ದೇಶದ ಜನರು ಪಕ್ಷಾತೀತವಾಗಿ ಖಂಡಿಸಬೇಕು. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರ.
  ಮುಖಂಡ ನವೀನ್‌ ಕುಮಾರ್‌ ಮಾತನಾಡಿ, ಡಿ.ಕೆ.ಶಿಕುಮಾರ್‌ ಅವರನ್ನು ಬಂಧಿಸುವುದರ ಮೂಲಕ ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಬಂಧನದ ಮೂಲಕ ವಿರೋಧ ಪಕ್ಷಗಳನ್ನು ಮಣಿಸಲು ಸಾಧ್ಯವಿಲ್ಲ. ರಾಜಕೀಯ ಲಾಭಕ್ಕಾಗಿ ಮುಖಂಡರ ಬಂಧನ ಮಾಡುವುದು ಖಂಡನೀಯ ಎಂದು ಹೇಳಿದರು.
  ಮುಖಂಡರಾದ ರೋಣೂರು ಚಂದ್ರಶೇಖರ್‌, ಕೆ.ಕೆ.ಮಂಜುನಾಥರೆಡ್ಡಿ, ಗುರ್ರಪ್ಪ, ಅಯ್ಯಪ್ಪ, ವಾಸು, ವೆಂಕಟರೆಡ್ಡಿ, ವೆಂಕಟೇಶ್‌, ಶ್ರೀನಿವಾಸ್, ಹರೀಶ್‌, ವೇಣು ಮತ್ತಿತರರು ಇದ್ದರು.

ಇಂಟಕ್ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ರೋಶನ್ ಶೆಟ್ಟಿ ನೇಮಕ

JANANUDI.COM NETWORK 

ಇಂಟಕ್ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ರೋಶನ್ ಶೆಟ್ಟಿ ನೇಮಕ

ಬಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ ಇಂಟಕ್ ಇದರ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕುಂದಾಪುರ ತಾಲೂಕು ಆರ್ಡಿ ಗ್ರಾಮದ ರೋಶನ್ ಶೆಟ್ಟಿ ಇವರನ್ನು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಎನ್. ಕೋಟ್ಯಾನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ

JANANUDI.COM NETWORK

ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ 

ಕುಂದಾಪುರ ಸೆ. ೪:ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಇವರ ನೇತ್ರದ್ವದಲ್ಲಿ  ಪ್ರತಿಭಟನೆ ನಡೆಯಿತು. ಪ್ರತಿಭಟನೇಯ ಪ್ರಯುಕ್ತ ಪಂಜಿನ ಮೂಲಕ ದಿಕ್ಕಾರ ಕೂಗುತ್ತಾ ಬಿ.ಜೆ.ಪಿ ನಾಯಕನ ಚಿತ್ರಪಟವನ್ನು ದಹಿಸಿ ರಸ್ತೆಯ ಮೇಲೆ ಕುಳಿತು  ಕಾರ್ಯಕರ್ತರು ಧರಣಿ ಮಾಡಿದರು

  ಈ ಸಂಧರ್ಭದಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಲ್ಯಾಡಿ ಶಿವರಾಮ ಶೆಟ್ಟಿ, ಬಿ ಹಿರಿಯಣ್ಣ, ವಿಕಾಸ್ ಹೆಗ್ಡೆ, ಇಚ್ಚಿತ್ ಶೆಟ್ಟಿ, ಶ್ರೀದರ್ ಪಿ.ಎಸ್ ಕೇಂದ್ರ ಸರ್ಕಾರದ ಸರ್ವಾಧಿಕಾರಿ ನೀತಿಯನ್ನು ವಿರೋದಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ ಶೆಟ್ಟಿ, ನಾರಾಯಣ ಆಚಾರ್, ಶಿವಾನಂದ ಕೆ., ಗಣೇಶ್ ಶೇರೆಗಾರ್, ರೋಷನಿ ಒಲಿವೇರಾ, ಡೆರಿಕ್ ಕ್ರಾಸ್ತಾ, ವೈ.ಬಿ ರಾಘವೇಂದ್ರ, ಮೋಸೆಸ್ ರಾಡ್ರಿಗಸ್, ಕೋಡಿ ಶಂಕರ್ ಪೂಜಾರಿ, ಬೀಜಾಡಿ ಅಶೋಕ್ ಪೂಜಾರಿ, ಚಂದ್ರಶೇಖರ ಖಾರ್ವಿ, ಶ್ರೀದರ್ ಶೇರೆಗಾರ, ದೇವಕಿ ಸಣ್ಣಯ್ಯ, ಚಂದ್ರಕಾಂತ ಖಾರ್ವಿ, ಚಂದ್ರ ಅಮೀನ್, ರೋಷನ್ ಶೆಟ್ಟಿ, ಹಾರೂನ್ ಸಾಹೇಬ್, ಜ್ಯೋತಿ ಪುತ್ರನ್, ಗುಲಾಬಿಯಮ್ಮ, ರೇವತಿ ಶೆಟ್ಟಿ, ಕೆ.ಎನ್ ನಾಗರಾಜ್, ಹೇರಿಕುದ್ರು ಗಂಗಾಧರ ಶೆಟ್ಟಿ , ದಿನೇಶ್ ಖಾರ್ವಿ, ಸುದಾಕರ ಹಂಗ್ಲೂರು, ಸ್ಟೀವನ್, ರೋಶನ್, ವಿಠ್ಠಲ ಕಾಂಚನ್, ಕೋಡಿ ಪ್ರಭಾಕರ, ಅಬ್ದುಲ್ಲಾ ಕೋಡಿ, ಪ್ರಭಾವತಿ ಶೆಟ್ಟಿ, ಹೇಮಾ, ಜ್ಯೋತಿ ನಾಯ್ಕ, ಜ್ಯೋತಿ ಮೊಗವೀರ, ಕೇಶವ ಭಟ್, ಶಿವಕುಮಾರ್, ಸುನಿಲ್ ಪೂಜಾರಿ, ಗಣೇಶ್ ಶೆಟ್ಟಿ, ವಿಲ್ಸನ್, ಅಣ್ಣಯ್ಯ ಪುತ್ರನ್, ಕುಮಾರ ಖಾರ್ವಿ, ಅಶ್ವಥ್ ಕುಮಾರ್, ಶ್ರೀನಿವಾಸ ಶೆಟ್ಟಿ. ಅರುಣ ಪಟೆಲ್,ನಾಗರಾಜ್ ನಾಯ್ಕಮುಂತಾದವರು ಉಪಸ್ಥಿತರಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ ನಿರೂಪಿಸಿದರು. ರಮೇಶ್ ಶೆಟ್ಟಿ ವಕ್ವಾಡಿ ವಂದಿಸಿದರು.

 

 

ಕುಂದಾಪುರದಲ್ಲಿ ಸೆಪ್ಟೆಂಬರ್ 5 ರಂದು ಗೌರಿ ಬಳಗ  ಮತ್ತು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ  ‘ಗೌರಿ ನೆನಪು  

JANANUDI.COM NETWORK

ಕುಂದಾಪುರದಲ್ಲಿ ಸೆಪ್ಟೆಂಬರ್ 5 ರಂದು ಗೌರಿ ಬಳಗ  ಮತ್ತು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ  ‘ಗೌರಿ ನೆನಪು  


ಕುಂದಾಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಎರಡು ವರ್ಷ ತುಂಬುವ ಹಿನ್ನೆಲೆಯಲ್ಲಿ ನಾಳೆ ಸೆಪ್ಟೆಂಬರ್ 5 ಗುರುವಾರ ಸಂಜೆ ಕುಂದಾಪುರದ ಗೌರಿ ಬಳಗ ಮತ್ತು ಇತರ ಸಮಾನ ಮಮಸ್ಕ ಸಂಘಟನೆಗಳು ‘ಗೌರಿ ನೆನಪು’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಮೊಂಬತ್ತಿಗಳ ಬೆಳಕಿನಲ್ಲಿ ಗುರುವಾರ ಸಂಜೆ 6.30ಕ್ಕೆ ಶಾಸ್ತ್ರಿ ಸರ್ಕಲ್‌ನಲ್ಲಿ ನಡೆಯಲಿದೆ. ಖ್ಯಾತ ಚಿಂತಕ ಮತ್ತು ಲೇಖಕ ಕೆ. ಫಣಿರಾಜ್ ಪ್ರಧಾನ ಭಾಷಣ ಮಾಡಲಿದ್ದಾರೆ.
ಗೌರಿ ಲಂಕೇಶ್ ಅಭಿಮಾನಿಗಳು ಮತ್ತು ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.

ಕೋಲಾರ – ಬ್ಯಾಂಕ್‍ನ ಹಿಂದಿನ ದುಸ್ಥಿತಿ ನೆನಪಿಸಿಕೊಳ್ಳಿ, ಅದೇ ಸ್ಥಿತಿಗೆ ಮತ್ತೆ ಹೋದರೆ ಅದಕ್ಕೆ ಅಧಿಕಾರಿ,ಸಿಬ್ಬಂದಿಯೇ ಜವಾಬ್ದಾರರಾಗುತ್ತೀರಿ, ಅನ್ನ ನೀಡುವ ಸಂಸ್ಥೆಯ ಋಣ ತೀರಿಸಲು ಬದ್ದತೆಯಿಂದ ಕೆಲಸ ಮಾಡಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಕೋಲಾರ – ಬ್ಯಾಂಕ್‍ನ ಹಿಂದಿನ ದುಸ್ಥಿತಿ ನೆನಪಿಸಿಕೊಳ್ಳಿ, ಅದೇ ಸ್ಥಿತಿಗೆ ಮತ್ತೆ ಹೋದರೆ ಅದಕ್ಕೆ ಅಧಿಕಾರಿ,ಸಿಬ್ಬಂದಿಯೇ ಜವಾಬ್ದಾರರಾಗುತ್ತೀರಿ, ಅನ್ನ ನೀಡುವ ಸಂಸ್ಥೆಯ ಋಣ ತೀರಿಸಲು ಬದ್ದತೆಯಿಂದ ಕೆಲಸ ಮಾಡಿ

ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಧಿಕಾರಿ,ಸಿಬ್ಬಂದಿಗೆ ತಾಕೀತು ಮಾಡಿದರು. ಭಾನುವಾರ ನಗರದ ಡಿಸಿಸಿ ಸಭಾಗಂಣದಲ್ಲಿ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎರಡೂ ಜಿಲ್ಲೆಯ ಬ್ಯಾಂಕ್‍ನ ಶಾಖೆಗಳ ವ್ಯವಸ್ಥಾಪಕರು, ಸಾಲವಸೂಲಾತಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಹಿಂದೆ ಬ್ಯಾಂಕ್ ಯಾವ ಪರಿಸ್ಥಿತಿಯಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಬ್ಯಾಂಕ್ ಋಣದಲ್ಲಿ ಬದುಕುತ್ತಿದ್ದೀರಾ, ಅನ್ನ ನೀಡುವ ಸಂಸ್ಥೆಗೆ ಮೋಸ ಮಾಡಲಿಕ್ಕೆ ಹೋಗಬೇಡಿ ದೇವರು ಒಳ್ಳೆಯದನ್ನು ಮಾಡೋದಿಲ್ಲ ಎಂದು ಎಚ್ಚರಿಸಿದರು.
ಬ್ಯಾಂಕ್ ಎಂದರೆ ರೈತರು, ಮಹಿಳೆಯರು ಡಿಸಿಸಿ ಬ್ಯಾಂಕ್ ಕಡೆ ಮುಖ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಸಾಲ ವಿತರಿಸಲಾಗಿದ್ದು, ಅಷ್ಟೇ ಪ್ರಾಮಾಣಿಕವಾಗಿ ಮರುಪಾವತಿಯಾಗುತ್ತಿದೆ. ಕೆಲ ಮುಖಂಡರು ಮಹಿಳಾ ಸ್ವಸಹಾಯ ಸಂಘಗಳಿಂದ ಹಣ ಪಡೆದು ಬ್ಯಾಂಕಿಗೆ ಕಟ್ಟಿಲ್ಲ, ಅಂತಹವರ ವಿರುದ್ಧ ದೂರು ದಾಖಲು ಮಾಡಿ ಎಂದು ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 108 ಕೋಟಿ ಬೆಳೆ ಸಾಲ ಹಾಗೂ 170 ಕೋಟಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ, ಫಲಾನುಭವಿಗಳಿಗೆ ಸಾಲ ನೀಡಲು ಶಿಫಾರಸ್ಸು ಮಾಡಿರುವುದು ನೀವೆ, ವಸೂಲಿ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಬದ್ಧತೆಯಿಂದ ಕೆಲಸ ಮಾಡಿದರೆ ಗುರಿ ಸಾಧನೆ ಮಾಡುವುದು ಸುಲಭ ಎಂದು ಹೇಳಿದರು.
ರೈತರಿಗೆ, ಮಹಿಳೆಯರಿಗೆ ನೀಡಿರುವ ಸಾಲದ ಮರುಪಾವತಿ ಬಗ್ಗೆ ಶಾಖಾವಾರು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದಾಗ, ಸಮಗ್ರವಾಗಿ ಮಾಹಿತಿ ನೀಡಲು ವಿವಿಧ ಶಾಖೆಯ ವ್ಯವಸ್ಥಾಪಕರು ತಡಬಡಿಸಿದರು.
ಇದಕ್ಕೆ ಗರಂ ಅದ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ನಿಮಗೆಲ್ಲಾ ಇಚ್ಛಾಶಕ್ತಿ ಕೊರತೆ ಇದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ, ಒಬ್ಬರ ಒತ್ತಾಯದ ಮೇರೆ ಕೆಲಸ ಮಾಡುವುದನ್ನು ಬಿಡಿ, ಇಲ್ಲಿ ನಾವೇನು ಸ್ವಾರ್ಥಕ್ಕೆ ಕೆಲಸ ಮಾಡುತ್ತಿಲ್ಲ. ನನ್ನಿಂದ ಹಿಂಸೆ ಆದರೆ ಹೇಳಿ ಈಗಲೇ ಬ್ಯಾಂಕ್ ಬಿಟ್ಟು ಹೋಗುತ್ತೇನೆ ಎಂದು ಆಕ್ರೋಶವ್ಯಕ್ತಪಡಿಸಿದರು.
ನಿಮ್ಮನ್ನು ಗಮನಿಸುತ್ತಿದ್ದರೆ ಇಲ್ಲಿ ಯಾರು ಬದಲಾಗಿರುವ ಲಕ್ಷಣಗಳು ಕಾಣುತ್ತಿಲ್ಲ, ಶೇ.3ರಲ್ಲಿ ಇದ್ದ ಎನ್‍ಪಿಎ ಪ್ರಮಾಣ ಈಗ ಶೇ.8ಕ್ಕೆ ಏರಿಕೆಯಾಗಿದ್ದು, ಇವರು ಎಷ್ಟು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು, ಮಹಿಳೆರು ಠೇವಣಿ ಇಟ್ಟಿರುವ ಹಣದಲ್ಲಿ ನಿವೆಲ್ಲಾ ಸಂಬಂಳ ತೆಗೆದುಕೊಳ್ಳುತ್ತಿದ್ದೀರಿ, ಬದ್ಧತೆಯಿಂದ ಕೆಲಸ ಮಾಡಿದ್ದರೆ ಈಗ ಸಮಸ್ಯೆ ಎದುರಾಗುತ್ತಿರಲಿಲ್ಲ. ರಜೆ ಯಾವಾಗ ಬರುತ್ತದೆ ಎಂದು ಕಾದು ನೋಡುವ ನಿಮಗೆ ಬಡವರ ಪರ ಕೆಲಸ ಮಾಡಲು ಮನಸ್ಸಿಲ್ಲವೆ ಎಂದು ಪ್ರಶ್ನಿಸಿದರು.
ಸೋಸೈಟಿವಾರು ಬಾಕಿ ಇರುವ ಮಹಿಳಾ ಸಂಘಗಳ ಮತ್ತು ರೈತರ ಸಾಲ ವಸೂಲಿ ಮಾಡಲು ಆಯಾ ತಾಲ್ಲೂಕಿನ ವ್ಯವಸ್ಥಾಪಕರು ಜವಬ್ದಾರಿ ವಹಿಸಿಕೊಳ್ಳಬೇಕು, ಸೆ.14ರೊಳಗೆ ಸಂಪೂರ್ಣ ಸಾಲ ವಸೂಲಿ ಆಗಬೇಕು ಎಂದು ತಾಕೀತು ಮಾಡಿದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ ಮಾತನಾಡಿ, ಸಹಕಾರಿ ಬ್ಯಾಂಕ್ ಅಧಿಕಾರಿಗಳು ಸರ್ಕಾರಿ ನೌಕರರಲ್ಲ, ಬ್ಯಾಂಕ್ ಅಭಿವೃದ್ಧಿಯಾದಾಗ ಮಾತ್ರ ವೇತನ ಬರುತ್ತದೆ, ಸಾಲ ನೀಡುವ ಮತ್ತು ವಸೂಲಿ ಮಾಡುವಲ್ಲಿ ಸಿಬ್ಬಂದಿ ಪಾತ್ರ ಬಹಳ ಮುಖ್ಯವಾಗಿದ್ದು, ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಹಾಯಕ ಮಹಾ ಪ್ರಬಂಧಕರಾದ ಬೈರೇಗೌಡ, ಶಿವಕುಮಾರ್, ಖಲೀಮುಲ್ಲಾ, ಚೌಡಪ್ಪ, ನಾಗೇಶ್, ಹುಸೇನ್ ದೊಡ್ಡಮುನಿ ಸೇರಿದಂತೆ ಎರಡೂ ಜಿಲ್ಲೆಯ ಬ್ಯಾಂಕ್ ಶಾಖೆ ವ್ಯವಸ್ಥಾಪಕರು,ಸಿಬ್ಬಂದಿ ಹಾಜರಿದ್ದರು.